ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?
ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ, ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು:
ನಿಮಗಾಗಿ ಏನೇನು ಲಭ್ಯವಿದೆ
ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ, ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು:
ಜೀವನವು ಸಾಮಾನ್ಯವಾಗಿ ಅನಿರೀಕ್ಷಿತ ವೆಚ್ಚಗಳನ್ನು ತರುತ್ತದೆ. ಅದು ಮದುವೆಯಾಗಿರಬಹುದು, ಕಾರು ಖರೀದಿ ಇರಬಹುದು ಅಥವಾ ವೈದ್ಯಕೀಯ ತುರ್ತುಸ್ಥಿತಿ ಇರಬಹುದು. ಪರ್ಸನಲ್ ಲೋನ್ ಈ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ, ಆದರೆ ಕೆಲವೊಮ್ಮೆ ಆ ಮೊತ್ತ ಕೂಡಾ ಕಡಿಮೆಯಾಗಬಹುದು. ಆಗಲೇ ಟಾಪ್ ಅಪ್ ಲೋನ್ ಅಗತ್ಯವಿರುವುದು. ನೀವು ಅಸ್ತಿತ್ವದಲ್ಲಿರುವ ಪರ್ಸನಲ್ ಲೋನ್‌ನೊಂದಿಗೆ ಮುಂಚಿತ-ಅನುಮೋದಿತ ಗ್ರಾಹಕರಾಗಿದ್ದರೆ, ಟಾಪ್ ಅಪ್ ಲೋನ್ ಪಡೆಯುವುದು ತ್ವರಿತ ಮತ್ತು ಅನುಕೂಲಕರವಾಗಿದೆ, ಇದು ನಿಮಗೆ ಅಗತ್ಯವಿದ್ದಾಗ ಹೆಚ್ಚುವರಿ ಹಣಕ್ಕೆ ಅಕ್ಸೆಸ್ ನೀಡುತ್ತದೆ.
ಟಾಪ್-ಅಪ್ ಲೋನ್‌ಗಳು ಹೆಚ್ಚುವರಿ ಹಣದ ಅಗತ್ಯವಿರುವ ಮತ್ತು ಈಗಾಗಲೇ ಸಾಲದಾತರೊಂದಿಗೆ ಅಸ್ತಿತ್ವದಲ್ಲಿರುವ ಲೋನ್ ಹೊಂದಿರುವ ಸಾಲಗಾರರಿಗೆ ಅನುಕೂಲಕರ ಮತ್ತು ತುಲನಾತ್ಮಕವಾಗಿ ಕೈಗೆಟಕುವ ಆಯ್ಕೆಯಾಗಿವೆ. ಪರ್ಸನಲ್ ಟಾಪ್-ಅಪ್ ಲೋನ್‌ಗಳು ತ್ವರಿತ ಅನುಮೋದನೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಬರುತ್ತವೆ.
ತ್ವರಿತ ಟರ್ನ್‌ಅರೌಂಡ್ ಸಮಯ, ದೀರ್ಘ ಮರುಪಾವತಿ ಅವಧಿಗಳು ಮತ್ತು ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅವಶ್ಯಕತೆ ಇಲ್ಲ ಮುಂತಾದ ಪ್ರಯೋಜನಗಳನ್ನು ಪರ್ಸನಲ್ ಲೋನ್ ಟಾಪ್-ಅಪ್ ಹೊಂದಿದೆ. ಟಾಪ್-ಅಪ್ ಲೋನ್‌ಗಳು ಹೆಚ್ಚುವರಿ ಹಣದ ಅಗತ್ಯವಿರುವ ಮತ್ತು ಈಗಾಗಲೇ ಸಾಲದಾತರೊಂದಿಗೆ ಅಸ್ತಿತ್ವದಲ್ಲಿರುವ ಲೋನ್ ಹೊಂದಿರುವ ಸಾಲಗಾರರಿಗೆ ಅನುಕೂಲಕರ ಮತ್ತು ತುಲನಾತ್ಮಕವಾಗಿ ಕೈಗೆಟಕುವ ಆಯ್ಕೆಯಾಗಿವೆ.
ನೀವು ಈ ಮೂಲಕ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು:
2. PayZapp
4. ಶಾಖೆಗಳು
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:
ಹಂತ 1 - ನಿಮ್ಮ ಉದ್ಯೋಗವನ್ನು ಆಯ್ಕೆಮಾಡಿ
ಹಂತ 2 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
ಹಂತ 3- ಲೋನ್ ಮೊತ್ತವನ್ನು ಆಯ್ಕೆ ಮಾಡಿ
ಹಂತ 4- ಸಲ್ಲಿಸಿ ಮತ್ತು ಹಣವನ್ನು ಪಡೆಯಿರಿ*
*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.
ಟಾಪ್ ಅಪ್ ಲೋನ್ ಎಂದರೆ ಪರ್ಸನಲ್ ಲೋನ್ ಮೂಲಕ ವಿತರಿಸಲಾದ ಪೂರಕ ಮೊತ್ತದ ಹೆಚ್ಚುವರಿ ಲೋನ್ ಪಡೆಯುವುದು. ಪರ್ಸನಲ್ ಲೋನ್ ಮೂಲಕ ಪಡೆದ ಮೊತ್ತವು ನಿಮ್ಮ ಅಗತ್ಯಗಳನ್ನು ಪೂರೈಸಲು ಸಾಕಾಗದಿದ್ದರೆ, ನೀವು ಸುಲಭ ಮತ್ತು ಅನುಕೂಲಕರವಾಗಿ ಟಾಪ್-ಅಪ್ ಲೋನ್‌ನ ಸಹಾಯವನ್ನು ತೆಗೆದುಕೊಳ್ಳಬಹುದು.
ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪರ್ಸನಲ್ ಲೋನ್ ಟಾಪ್ ಅಪ್ ಮತ್ತು ಫ್ಲೆಕ್ಸಿಬಲ್ ಕಾಲಾವಧಿಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಅಪ್ಲೈ ಮಾಡಲು, ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಬ್ಯಾಂಕ್‌ನಿಂದ ಲೋನ್ ಪಡೆದಿರುವುದರಿಂದ, ಪರ್ಸನಲ್ ಲೋನ್ ಟಾಪ್ ಅಪ್‌ಗೆ ಅನುಮೋದನೆ ಪ್ರಕ್ರಿಯೆಯು ತುಲನಾತ್ಮಕವಾಗಿ ತ್ವರಿತ ಮತ್ತು ತೊಂದರೆ ರಹಿತವಾಗಿದೆ.
ಟಾಪ್-ಅಪ್ ಲೋನಿಗೆ ಅರ್ಹರಾಗಲು, ಗ್ರಾಹಕರು ಅಸ್ತಿತ್ವದಲ್ಲಿರುವ ಪರ್ಸನಲ್ ಲೋನ್ ಮೇಲೆ ಕನಿಷ್ಠ 6 EMI ಪಾವತಿಗಳನ್ನು ಪೂರ್ಣಗೊಳಿಸಿರಬೇಕು. ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರಬೇಕು.
ತ್ವರಿತ ಅಪ್ಲಿಕೇಶನ್ ಮತ್ತು ಅನುಕೂಲವನ್ನು ಸುಲಭಗೊಳಿಸಲು, ಎಚ್ ಡಿ ಎಫ್ ಸಿ ಬ್ಯಾಂಕ್‌ನ ಟಾಪ್ ಅಪ್ ಲೋನಿಗೆ ಡಾಕ್ಯುಮೆಂಟರಿ ಅವಶ್ಯಕತೆ ಕನಿಷ್ಠವಾಗಿದೆ ಮತ್ತು ಇವುಗಳನ್ನು ಒಳಗೊಂಡಿದೆ:
ಹೌದು, ನೀವು ನಿಮ್ಮ ಅಸ್ತಿತ್ವದಲ್ಲಿರುವ ಪರ್ಸನಲ್ ಲೋನನ್ನು ಟಾಪ್-ಅಪ್ ಮಾಡಬಹುದು. ನೀವು ಟಾಪ್-ಅಪ್ ಸೌಲಭ್ಯವನ್ನು ಆಯ್ಕೆ ಮಾಡಿದರೆ, ಸಾಲದಾತರು ನಿಮ್ಮ ಕಾಲಾವಧಿಯನ್ನು ವಿಸ್ತರಿಸಬಹುದು.
ಪರ್ಸನಲ್ ಲೋನ್ ಟಾಪ್-ಅಪ್ ಒಂದು ಫೀಚರ್ ಆಗಿದ್ದು, ನೀವು ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಮರುಪಾವತಿಸುವುದನ್ನು ಮುಂದುವರೆಸುವಾಗ ನಿಮ್ಮ ಪ್ರಸ್ತುತ ಪರ್ಸನಲ್ ಲೋನ್ ಸಾಲದಾತರಿಂದ ಹೆಚ್ಚುವರಿ ಹಣವನ್ನು ಸಾಲ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಟಾಪ್-ಅಪ್ ಸ್ಟ್ಯಾಂಡರ್ಡ್ ಪರ್ಸನಲ್ ಲೋನ್‌ನಂತೆ ಕಾರ್ಯನಿರ್ವಹಿಸುತ್ತದೆ, ಅಡಮಾನವನ್ನು ಒದಗಿಸದೆ ವಿವಿಧ ವೆಚ್ಚಗಳಿಗೆ ಹಣವನ್ನು ಬಳಸಲು ನಿಮಗೆ ಅನುಮತಿ ನೀಡುತ್ತದೆ. ಹೆಚ್ಚುವರಿಯಾಗಿ, ನೀವು ಲೋನ್ ಫಂಡ್‌ಗಳನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ಯಾವುದೇ ನಿರ್ಬಂಧಗಳಿಲ್ಲ.
ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ನೇರವಾಗಿ ಸಾಲದಾತರ ವೆಬ್‌ಸೈಟ್ ಮೂಲಕ ಟಾಪ್-ಅಪ್ ಲೋನ್‌ಗಳಿಗೆ ಅಪ್ಲೈ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ಪ್ರಕ್ರಿಯೆಯು ಸ್ಥಿರವಾಗಿರುತ್ತದೆ: ನೀವು ಆನ್ಲೈನ್ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು, ಅಪೇಕ್ಷಿತ ಲೋನ್ ಮೊತ್ತವನ್ನು ನಿರ್ದಿಷ್ಟಪಡಿಸಬೇಕು ಮತ್ತು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ನಂತರ, ಸಾಲದಾತರು ನಿಮ್ಮ ಅಕೌಂಟಿಗೆ ಲೋನ್ ಮೊತ್ತವನ್ನು ವಿತರಿಸುವ ಮೊದಲು ಹೊಸ ಬಡ್ಡಿ ದರ ಮತ್ತು EMI ಮೊತ್ತಗಳನ್ನು (ನೀವು ಒಪ್ಪಿಗೆ ನೀಡಬೇಕು) ಮೌಲ್ಯಮಾಪನ ಮಾಡುತ್ತಾರೆ.
ಹೆಚ್ಚುವರಿ ಹಣವನ್ನು ಪಡೆಯಲು ಅನುಕೂಲಕರ, ಕೈಗೆಟಕುವ ಟಾಪ್-ಅಪ್ ಲೋನ್ ಆಯ್ಕೆ!