ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?
ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ ಎಲೆಕ್ಟ್ರಿಕ್ ಕಾರ್ ಲೋನಿಗೆ ಅಪ್ಲೈ ಮಾಡಬಹುದು:
ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ ಎಲೆಕ್ಟ್ರಿಕ್ ಕಾರ್ ಲೋನಿಗೆ ಅಪ್ಲೈ ಮಾಡಬಹುದು:
ಎಲೆಕ್ಟ್ರಿಕ್ ವೆಹಿಕಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಉದ್ಯೋಗದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತವೆ.
ಸ್ಯಾಲರಿ ಪಡೆಯುವ ಅರ್ಜಿದಾರರು
ವಿಳಾಸ ಮತ್ತು ಗುರುತಿನ ಪ್ರೂಫ್:
ಆದಾಯದ ಪುರಾವೆ:
ಏಕಮಾತ್ರ ಮಾಲೀಕರ ಅರ್ಜಿದಾರರು
ಪಾಲುದಾರಿಕೆ ಸಂಸ್ಥೆ ಪಾಲುದಾರ ಅರ್ಜಿದಾರರು
ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕತ್ವದ ಅರ್ಜಿದಾರರು
ಪಬ್ಲಿಕ್ ಲಿಮಿಟೆಡ್ ಕಂಪನಿ ಡೈರೆಕ್ಟರ್ ಅರ್ಜಿದಾರರು
ಎಲೆಕ್ಟ್ರಿಕ್ ಕಾರ್ ಲೋನ್ ಕಡಿಮೆ ಬಡ್ಡಿ ದರಗಳು, ಸಂಭಾವ್ಯ ತೆರಿಗೆ ಇನ್ಸೆಂಟಿವ್ಸ್ ಮತ್ತು ಪರಿಸರ ಸ್ನೇಹಿ ಸಾರಿಗೆಗೆ ಬೆಂಬಲದಂತಹ ಪ್ರಯೋಜನಗಳನ್ನು ಒದಗಿಸುತ್ತದೆ, ಇದು ಎಲೆಕ್ಟ್ರಿಕ್ ವಾಹನ ಮಾಲೀಕತ್ವವನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ ಮತ್ತು ಪರಿಸರದ ಜವಾಬ್ದಾರಿಯನ್ನು ಕೂಡಾ ನಿಭಾಯಿಸಲು ಸಾಧ್ಯವಾಗಿಸುತ್ತದೆ.
ನೀವು ಐಷಾರಾಮಿ ಎಲೆಕ್ಟ್ರಿಕ್ ಕಾರ್ ಅಥವಾ ಮಲ್ಟಿ-ಯುಟಿಲಿಟಿ ಬಯಸಿದರೆ, ₹ 10 ಕೋಟಿಯವರೆಗಿನ ಫಂಡಿಂಗ್‌ನೊಂದಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರತಿ ಬಜೆಟ್‌ಗೆ ಲೋನ್‌ಗಳನ್ನು ಒದಗಿಸುತ್ತದೆ. EV ಖರೀದಿಗಾಗಿ ನಿಮ್ಮ ಅಸ್ತಿತ್ವದಲ್ಲಿರುವ ವಾಹನ ಲೋನ್ ಮೇಲೆ ಹೆಚ್ಚುವರಿ ಫಂಡಿಂಗ್‌ಗಾಗಿ ಡಾಕ್ಯುಮೆಂಟೇಶನ್ ಇಲ್ಲದೆ ನೀವು ಸುಲಭ ಟಾಪ್-ಅಪ್ ಲೋನ್‌ಗಳನ್ನು ಕೂಡ ಆನಂದಿಸಬಹುದು. ಇದಲ್ಲದೆ, ನಿಮ್ಮ ಬಜೆಟ್‌ಗೆ ಸರಿಹೊಂದುವಂತೆ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೊಂದಿಕೊಳ್ಳುವ ಮರುಪಾವತಿ ನಿಯಮಗಳು 12 ರಿಂದ 96 ತಿಂಗಳವರೆಗೆ ಇರುತ್ತವೆ. ಅದರ ಜೊತೆಗೆ, ಮುಂಚಿತ-ಅನುಮೋದಿತ ಗ್ರಾಹಕರಿಗೆ 10 ಸೆಕೆಂಡುಗಳಲ್ಲಿ ತ್ವರಿತ ಅನುಮೋದನೆಯೊಂದಿಗೆ ಡಿಜಿಟಲ್ ಪ್ರಕ್ರಿಯೆಯು ಸುಮಾರು 30 ನಿಮಿಷಗಳಲ್ಲಿ ಲೋನ್ ಅನುಮೋದನೆಗಳನ್ನು ಪೂರ್ಣಗೊಳಿಸುತ್ತದೆ.
ನೀವು EV ಕಾರ್ ಲೋನಿಗೆ ಈ ಮೂಲಕ ಅಪ್ಲೈ ಮಾಡಬಹುದು:
2. PayZapp
4. ಶಾಖೆಗಳು
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:
ಹಂತ 1: ನಿಮ್ಮ ಲೋನ್ ಅರ್ಹತೆ ಪರೀಕ್ಷಿಸಿ
ಹಂತ 2: ನಮ್ಮ ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ಆಯ್ಕೆಮಾಡಿ
ಹಂತ 3: ನಿಮ್ಮ ವೈಯಕ್ತಿಕ ಮತ್ತು ಉದ್ಯೋಗ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
ಹಂತ 4: ಅಗತ್ಯವಿರುವ ಗುರುತು, ವಿಳಾಸ ಮತ್ತು ಆದಾಯ ಪುರಾವೆ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ*
ಹಂತ 5: ನಿಖರತೆಗಾಗಿ ನಿಮ್ಮ ಅಪ್ಲಿಕೇಶನ್ ರಿವ್ಯೂ ಮಾಡಿ ಮತ್ತು ಪ್ರಕ್ರಿಯೆಗಾಗಿ ಅದನ್ನು ಸಲ್ಲಿಸಿ
*ಕೆಲವು ಸಂದರ್ಭಗಳಲ್ಲಿ, ವಿಡಿಯೋ KYC ಪೂರ್ಣಗೊಳಿಸುವುದು ಅಗತ್ಯವಿರಬಹುದು.
ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಆಫರ್‌ಗಳು:
ಅಸ್ತಿತ್ವದಲ್ಲಿರುವ ಮುಂಚಿತ-ಅನುಮೋದಿತ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ 10 ಸೆಕೆಂಡುಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಲೋನ್
ಲಭ್ಯತೆ:
ಈ ಲೋನ್ ಎಲ್ಲಾ ಎಲೆಕ್ಟ್ರಿಕ್ ಫೋರ್-ವೀಲರ್‌ಗಳ ಮೇಲೆ ಲಭ್ಯವಿದೆ.
ಎಲೆಕ್ಟ್ರಿಕ್ ಕಾರ್ ಲೋನ್ ಎಂಬುದು ನಿಮ್ಮ ಆಯ್ಕೆಯ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಮತ್ತು ಪೂರ್ವ-ನಿರ್ಧರಿತ ಅವಧಿಯಲ್ಲಿ ಸಮನಾದ ಮಾಸಿಕ ಕಂತುಗಳಲ್ಲಿ (EMI ಗಳು) ಲೋನ್ ಮೊತ್ತವನ್ನು ಪಾವತಿಸಲು ನಿಮಗೆ ಅನುಮತಿ ನೀಡುವ ಲೋನ್ ಆಗಿದೆ.
EV ಲೋನ್‌ನ ಕಾಲಾವಧಿ ತುಂಬಾ ಫ್ಲೆಕ್ಸಿಬಲ್ ಆಗಿದೆ, ಇದು ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಅವಧಿಯನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಕಾರ್ ಲೋನಿಗೆ ಅಪ್ಲೈ ಮಾಡುವಾಗ, ಕಾಲಾವಧಿ 12 ರಿಂದ 96 ತಿಂಗಳವರೆಗೆ ಇರಬಹುದು.
ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೊಸ ಎಲೆಕ್ಟ್ರಿಕ್ ಕಾರ್ ಲೋನನ್ನು ಈ ಕೆಳಗಿನವುಗಳ ಮೂಲಕ ಪಡೆಯಬಹುದು:
1. 21 ರಿಂದ 60 ವರ್ಷಗಳ ವಯಸ್ಸಿನ ಸ್ಯಾಲರಿ ವ್ಯಕ್ತಿಗಳು (ಕಾಲಾವಧಿಯ ಕೊನೆಯಲ್ಲಿ)
2. 21 ರಿಂದ 65 ವರ್ಷಗಳ ವಯಸ್ಸಿನ ಸ್ವಯಂ ಉದ್ಯೋಗಿ ವ್ಯಕ್ತಿಗಳು (ಕಾಲಾವಧಿಯ ಕೊನೆಯಲ್ಲಿ)
3. ಪಾಲುದಾರಿಕೆ ಸಂಸ್ಥೆಗಳು
4. ಪಬ್ಲಿಕ್ ಮತ್ತು ಪ್ರೈವೇಟ್ ಲಿಮಿಟೆಡ್. ಕಂಪನಿಗಳು
5. HUF ಗಳು ಮತ್ತು ಟ್ರಸ್ಟ್‌ಗಳು
EV ಲೋನಿಗೆ ಅಪ್ಲೈ ಮಾಡಲು ಮೂಲಭೂತ ಡಾಕ್ಯುಮೆಂಟೇಶನ್ ಗುರುತಿನ ಮತ್ತು ವಿಳಾಸದ ಪುರಾವೆಯಂತಹ KYC ಯನ್ನು ಒಳಗೊಂಡಿದೆ. ಅರ್ಜಿದಾರರ ಪ್ರೊಫೈಲ್ ಆಧಾರದ ಮೇಲೆ ಎಲೆಕ್ಟ್ರಿಕ್ ಕಾರ್ ಲೋನ್ ಪಡೆಯುವಾಗ ಬ್ಯಾಂಕಿಂಗ್ ಮತ್ತು ಸ್ಯಾಲರಿ ಅಥವಾ ಆದಾಯ ಪೇಪರ್‌ಗಳಂತಹ ಇತರ ಡಾಕ್ಯುಮೆಂಟ್‌ಗಳು ಕೂಡ ಅಗತ್ಯವಿವೆ.
ಎಲೆಕ್ಟ್ರಿಕ್ ವಾಹನ ಫೈನಾನ್ಸ್ ಆಯ್ಕೆಗಳ ವಿಷಯಕ್ಕೆ ಬಂದಾಗ, ಸ್ಯಾಲರಿ ಪಡೆಯುವ ವ್ಯಕ್ತಿಗಳು ತಮ್ಮ ವಾರ್ಷಿಕ ಸ್ಯಾಲರಿಯ ಮೂರು ಪಟ್ಟು ಲೋನ್ ಮೊತ್ತವನ್ನು ಪಡೆಯಬಹುದು, ಆದರೆ ಸ್ವಯಂ ಉದ್ಯೋಗಿ ವೃತ್ತಿಪರರು ತಮ್ಮ ವಾರ್ಷಿಕ ಆದಾಯದ ಆರು ಪಟ್ಟು ಲೋನ್ ಪಡೆಯಬಹುದು**.
**ನಿರ್ದಿಷ್ಟ ಮಾದರಿಗಳ ಮೇಲಿನ ಆಫರ್‌ಗಳು. ನಿಯಮ ಮತ್ತು ಷರತ್ತುಗಳು ಅನ್ವಯ.
ಎಚ್ ಡಿ ಎಫ್ ಸಿ ಬ್ಯಾಂಕ್ EV ಕಾರ್ ಲೋನ್ ಪಡೆಯಲು, ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಮಾತ್ರ ಭರ್ತಿ ಮಾಡಬೇಕು ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಪರ್ಯಾಯವಾಗಿ, ನಿಮ್ಮ ಹತ್ತಿರದ ಯಾವುದೇ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬಹುದು.
ಹೌದು, ನಿಮ್ಮ ಇವಿ ಕಾರ್ ಲೋನಿಗೆ ನೀವು ತಪ್ಪಿದ EMI ಅನ್ನು ಆನ್ಲೈನಿನಲ್ಲಿ ಪಾವತಿಸಬಹುದು. ನೀವು ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಲೋನ್ ವಿವರಗಳನ್ನು ಒದಗಿಸಬೇಕು ಮತ್ತು ಲೋನ್ ಅಕೌಂಟ್‌ಗೆ ಪಾವತಿಯನ್ನು ಖಚಿತಪಡಿಸಬೇಕು. ಒಮ್ಮೆ ಇದು ಮುಗಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಆನ್ಲೈನ್ ಟ್ರಾನ್ಸಾಕ್ಷನ್ ದೃಢೀಕರಣ ಮತ್ತು ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರನ್ನು ಪಡೆಯುತ್ತೀರಿ.
ಎಲೆಕ್ಟ್ರಿಕ್ ಕಾರ್ ಲೋನ್ ರದ್ದತಿಯ ಸಂದರ್ಭದಲ್ಲಿ, ವಿತರಣೆಯ ದಿನಾಂಕದಿಂದ ಲೋನ್ ರದ್ದತಿಯವರೆಗೆ ಗ್ರಾಹಕರು ಬಡ್ಡಿ ಶುಲ್ಕಗಳನ್ನು ಭರಿಸಬೇಕು. ಸ್ಟ್ಯಾಂಪ್ ಡ್ಯೂಟಿ, ಡಾಕ್ಯುಮೆಂಟೇಶನ್ ಶುಲ್ಕಗಳು, ಪ್ರಕ್ರಿಯಾ ಶುಲ್ಕಗಳು, ಮೌಲ್ಯಮಾಪನ ಮತ್ತು ಆರ್‌ಟಿಒ ಶುಲ್ಕಗಳನ್ನು ರಿಫಂಡ್ ಮಾಡಲಾಗುವುದಿಲ್ಲ ಎಂಬುದನ್ನು ನೆನಪಿಡುವುದು ಕೂಡ ಮುಖ್ಯವಾಗಿದೆ. ಲೋನ್ ರದ್ದತಿಯ ಸಂದರ್ಭದಲ್ಲಿ ಈ ಶುಲ್ಕಗಳನ್ನು ಮನ್ನಾ ಮಾಡಲಾಗುವುದಿಲ್ಲ ಅಥವಾ ರಿಫಂಡ್ ಮಾಡಲಾಗುವುದಿಲ್ಲ.
ಕಾರ್ ಲೋನ್‌ನೊಂದಿಗೆ ಇಂದೇ ನಿಮ್ಮ ಕನಸಿನ EV ಕಾರನ್ನು ಚಾಲನೆ ಮಾಡಿ!