HDFC ERGO Sachet Insurance

ನೀವು ತಿಳಿಯಬೇಕಾದ ಎಲ್ಲವೂ

ಎಚ್ ಡಿ ಎಫ್ ಸಿ ಎರ್ಗೋದ ಸೈಬರ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ಫಂಡ್‌ಗಳ ಕಳ್ಳತನ ಆನ್ಲೈನ್ ವಂಚನೆಗಳಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತದೆ.
ಶೂನ್ಯ ಕಡಿತಗಳು ಕವರ್ ಮಾಡಲಾದ ಕ್ಲೈಮ್‌ಗೆ ಮುಂಚಿತವಾಗಿ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.
ಕವರ್ ಆದ ಡಿವೈಸ್‌ಗಳು ಅನೇಕ ಡಿವೈಸ್‌ಗಳಿಗೆ ಅಪಾಯವನ್ನು ಕವರ್ ಮಾಡುವ ಸೌಲಭ್ಯ.
ಕೈಗೆಟುಕುವ ಪ್ರೀಮಿಯಂ ಪ್ಲಾನ್ ದಿನಕ್ಕೆ ₹ 2 ರಿಂದ ಆರಂಭ*.
ಗುರುತಿನ ಕಳ್ಳತನ ಇಂಟರ್ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದಾಗಿ ಹಣಕಾಸಿನ ನಷ್ಟಕ್ಕೆ ಕವರೇಜ್.
ಪಾಲಿಸಿ ಅವಧಿ 1 ವರ್ಷ
ಒಟ್ಟು ವಿಮಾ ಮೊತ್ತ ₹10,000 ರಿಂದ ₹5 ಕೋಟಿ

ಹಕ್ಕುತ್ಯಾಗ - ಮೇಲೆ ತಿಳಿಸಿದ ಫೀಚರ್‌ಗಳು ನಮ್ಮ ಕೆಲವು ಸೈಬರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಲಭ್ಯವಿಲ್ಲದಿರಬಹುದು. ನಮ್ಮ ಸೈಬರ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಬ್ರೋಶರ್ ಮತ್ತು ಪ್ರಾಸ್ಪೆಕ್ಟಸ್ ಓದಿ.

Features

ಯಾವುದು ಕವರ್ ಆಗುತ್ತದೆ?

  • ಫಂಡ್‌ಗಳ ಕಳ್ಳತನ - ಅನಧಿಕೃತ ಡಿಜಿಟಲ್ ಟ್ರಾನ್ಸಾಕ್ಷನ್‌ಗಳು
  • ಅನಧಿಕೃತ ಅಕ್ಸೆಸ್, ಫಿಶಿಂಗ್, ಸ್ಪೂಫಿಂಗ್‌ನಂತಹ ಆನ್‌ಲೈನ್ ವಂಚನೆಗಳಿಂದ ನಿಮ್ಮ ಬ್ಯಾಂಕ್ ಅಕೌಂಟ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಡಿಜಿಟಲ್ ವಾಲೆಟ್‌ಗಳಲ್ಲಿ ಉಂಟಾಗುವ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ.

  • ಗುರುತಿನ ಕಳ್ಳತನ
  • ಥರ್ಡ್ ಪಾರ್ಟಿಯಿಂದ ಇಂಟರ್ನೆಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದ ಉಂಟಾಗುವ ಹಣಕಾಸಿನ ನಷ್ಟಗಳು, ಕ್ರೆಡಿಟ್ ಮೇಲ್ವಿಚಾರಣೆ ವೆಚ್ಚಗಳು, ಕಾನೂನು ಪ್ರಾಸಿಕ್ಯೂಶನ್ ವೆಚ್ಚಗಳನ್ನು ಹಾಗೂ ತೊಂದರೆಗೆ ಒಳಗಾದ ವ್ಯಕ್ತಿಯ ಮಾನಸಿಕ ಸಮಾಲೋಚನೆ ವೆಚ್ಚಗಳನ್ನು ಕೂಡಾ ನಾವು ಕವರ್ ಮಾಡುತ್ತೇವೆ.

  • ಡೇಟಾ ಮರುಸ್ಥಾಪನೆ/ ಮಾಲ್‌ವೇರ್ ಸ್ವಚ್ಛಗೊಳಿಸುವುದು
  • ನಿಮ್ಮ ಸೈಬರ್ ಲೊಕೇಶನ್ ಮಾಲ್‌ವೇರ್ ದಾಳಿಗಳಿಂದ ಉಂಟಾದ ನಿಮ್ಮ ಕಳೆದುಹೋದ ಅಥವಾ ದೋಷಪೂರಿತವಾದ ಡೇಟಾವನ್ನು ಸ್ವಸ್ಥಿತಿಗೆ ತರಲು ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ಹಾರ್ಡ್‌ವೇರ್ ಬದಲಾವಣೆ
  • ಮಾಲ್‌ವೇರ್ ದಾಳಿಯ ಪರಿಣಾಮಕ್ಕೆ ಒಳಗಾದ ನಿಮ್ಮ ವೈಯಕ್ತಿಕ ಡಿವೈಸ್ ಅಥವಾ ಅದರ ಭಾಗಗಳನ್ನು ಬದಲಾಯಿಸುವಲ್ಲಿ ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್ ಮತ್ತು ಗೌರವದ ನಷ್ಟ
  • ನಾವು ಕಾನೂನು ವೆಚ್ಚಗಳು, ಸೈಬರ್ ಉಪಟಳ ಕೊಡುವವರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ವೆಚ್ಚ ಮತ್ತು ತೊಂದರೆಗೆ ಒಳಗಾದ ವ್ಯಕ್ತಿಯ ಮಾನಸಿಕ ಸಮಾಲೋಚನೆ ವೆಚ್ಚಗಳನ್ನು ಕವರ್ ಮಾಡುತ್ತೇವೆ.

  • ಆನ್‌ಲೈನ್ ಶಾಪಿಂಗ್
  • ವಂಚನಾತ್ಮಕ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಶಾಪಿಂಗ್ ಕಾರಣದಿಂದಾಗಿ, ನೀವು ಆನ್‌ಲೈನ್‌ನಲ್ಲಿ ಪೂರ್ಣ ಪಾವತಿ ಮಾಡಿದ ನಂತರವೂ ಪ್ರಾಡಕ್ಟ್ ಪಡೆಯದೇ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ.

  • ಆನ್‌ಲೈನ್ ಸೇಲ್ಸ್
  • ಹಣ ಪಾವತಿ ಮಾಡದಿರುವ ಮತ್ತು ಪ್ರಾಡಕ್ಟ್ ಅನ್ನು ಹಿಂದಿರುಗಿಸಲು ನಿರಾಕರಿಸುವ ಮೋಸದ ಖರೀದಿದಾರರಿಗೆ ಆನ್‌ಲೈನ್‌ನಲ್ಲಿ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವುದರಿಂದ ಉಂಟಾದ ಹಣಕಾಸಿನ ನಷ್ಟವನ್ನು ನಾವು ಕವರ್ ಮಾಡುತ್ತೇವೆ.

  • ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಹೊಣೆಗಾರಿಕೆ
  • ಒಂದು ವೇಳೆ ನೀವು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗೌಪ್ಯತಾ ಉಲ್ಲಂಘನೆ ಅಥವಾ ಕೃತಿಸ್ವಾಮ್ಯ ಉಲ್ಲಂಘನೆ ಮಾಡಿದರೆ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ನೆಟ್ವರ್ಕ್ ಸೆಕ್ಯೂರಿಟಿ ಹೊಣೆಗಾರಿಕೆ
  • ನಿಮ್ಮ ಡಿವೈಸ್‌ನಿಂದ ಹುಟ್ಟಿಕೊಂಡ ಮಾಲ್‌ವೇರ್‌ನಿಂದಾಗಿ, ನಿಮ್ಮದೇ ನೆಟ್‌ವರ್ಕ್‌ನಲ್ಲಿ ಕನೆಕ್ಟ್ ಆಗಿರುವ ಥರ್ಡ್ ಪಾರ್ಟಿ ಡಿವೈಸ್‌ಗಳು ವೈರಸ್‌ಗೆ ತುತ್ತಾದರೆ, ಅವರ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಭರಿಸುತ್ತೇವೆ.

  • ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಉಲ್ಲಂಘನೆ ಹೊಣೆಗಾರಿಕೆ
  • ನಿಮ್ಮ ಡಿವೈಸ್‌ಗಳು/ಅಕೌಂಟ್‌ಗಳಿಂದ ಗೌಪ್ಯ ಡೇಟಾದ ಅನಿರೀಕ್ಷಿತ ಸೋರಿಕೆಯಿಂದಾಗಿ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ಥರ್ಡ್ ಪಾರ್ಟಿಯಿಂದ ಗೌಪ್ಯತಾ ಉಲ್ಲಂಘನೆ
  • ನಿಮ್ಮ ಗೌಪ್ಯ ಮಾಹಿತಿ ಅಥವಾ ಡೇಟಾ ಸೋರಿಕೆ ಮಾಡಿದ್ದಕ್ಕಾಗಿ ಥರ್ಡ್ ಪಾರ್ಟಿಯ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ಸ್ಮಾರ್ಟ್ ಹೋಮ್ ಕವರ್
  • ಮಾಲ್‌ವೇರ್ ದಾಳಿಯಿಂದಾಗಿ ಪರಿಣಾಮಕ್ಕೆ ಒಳಗಾದ ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ರಿಸ್ಟೋರ್ ಮಾಡುವ ಅಥವಾ ಸ್ವಚ್ಛಗೊಳಿಸುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

  • ಅವಲಂಬಿತ ಮಕ್ಕಳಿಂದಾಗಿ ಉಂಟಾಗುವ ಹೊಣೆಗಾರಿಕೆ
  • ಅಪ್ರಾಪ್ತ ವಯಸ್ಸಿನ ಮಕ್ಕಳ ಸೈಬರ್ ಚಟುವಟಿಕೆಗಳಿಂದ ಎದುರಾದ ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ

  • ಫಂಡ್‌ಗಳ ಕಳ್ಳತನ - ಅನಧಿಕೃತ ಭೌತಿಕ ಟ್ರಾನ್ಸಾಕ್ಷನ್‌ಗಳು
  • ನಿಮ್ಮ ಕ್ರೆಡಿಟ್/ಡೆಬಿಟ್/ಪ್ರಿಪೆಯ್ಡ್ ಕಾರ್ಡ್‌ಗಳನ್ನು ಬಳಸಿ ಮಾಡಿದ ಮೋಸದ ATM ವಿತ್‌ಡ್ರಾವಲ್‌ಗಳು, PO ಗಳು ವಂಚನೆಗಳು ಮುಂತಾದ ಭೌತಿಕ ವಂಚನೆಗಳಿಂದ ಉಂಟಾಗುವ ಯಾವುದೇ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

  • ಸೈಬರ್ ಸುಲಿಗೆ
  • ಸೈಬರ್ ಸುಲಿಗೆಯಿಂದ ಹೊರಬರಲು ಪಾವತಿಸಿದ ಸುಲಿಗೆ ಅಥವಾ ಪರಿಹಾರ ಹಣದಿಂದ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ.

Features

ಯಾವುದು ಕವರ್ ಆಗುವುದಿಲ್ಲ?

  • ಕೆಲಸದ ಲೊಕೇಶನ್ ಕವರೇಜ್
  • ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿ ಮತ್ತು ವೃತ್ತಿಪರ ಅಥವಾ ಬಿಸಿನೆಸ್ ಚಟುವಟಿಕೆಯಲ್ಲಿ ನಿಮ್ಮಿಂದ ನಡೆದ ಯಾವುದೇ ಚಟುವಟಿಕೆ ಅಥವಾ ಲೋಪದಿಂದಾಗಿ ಉಂಟಾಗುವ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ.

  • ಹೂಡಿಕೆ ಚಟುವಟಿಕೆಗಳ ಕವರೇಜ್
  • ಸೆಕ್ಯೂರಿಟಿಗಳ ಮಾರಾಟ, ಟ್ರಾನ್ಸ್‌ಫರ್ ಅಥವಾ ವಿಲೇವಾರಿ ಮಾಡುವ ಮಿತಿ ಅಥವಾ ಅಸಾಮರ್ಥ್ಯ ಸೇರಿದಂತೆ ಹೂಡಿಕೆ ಅಥವಾ ಟ್ರೇಡಿಂಗ್ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

  • ಕುಟುಂಬದ ಸದಸ್ಯರು ಹಾಕಿದ ಕಾನೂನು ಮೊಕದ್ದಮೆಗಳಿಂದ ರಕ್ಷಣೆ
  • ನಿಮ್ಮ ಕುಟುಂಬ ಸದಸ್ಯರು, ನಿಮ್ಮೊಂದಿಗೆ ವಾಸಿಸುವ ಯಾವುದೇ ವ್ಯಕ್ತಿಯು ನಿಮ್ಮ ಮೇಲೆ ಹಾಕಿದ ಕಾನೂನು ಮೊಕದ್ದಮೆಗಳ ವಿರುದ್ಧ ರಕ್ಷಿಸಿಕೊಳ್ಳಲು ಮಾಡುವ ಯಾವುದೇ ಖರ್ಚಿಗೆ ಕವರೇಜ್ ಸಿಗುವುದಿಲ್ಲ.

  • ಡಿವೈಸ್‌ಗಳನ್ನು ಅಪ್‌ಗ್ರೇಡ್ ಮಾಡುವ ವೆಚ್ಚ
  • ಇನ್ಶೂರ್ಡ್ ಘಟನೆ ನಡೆಯುವ ಮೊದಲು ಅಸ್ತಿತ್ವದಲ್ಲಿದ್ದ ಸ್ಟೇಟಸ್ ಮೀರಿ, ನಿಮ್ಮ ವೈಯಕ್ತಿಕ ಡಿವೈಸ್‌ ಅನ್ನು ಅಪ್‌ಗ್ರೇಡ್ ಮಾಡುವ ಯಾವುದೇ ವೆಚ್ಚಗಳನ್ನು, ಅದು ಅನಿವಾರ್ಯವೆಂದು ಪರಿಗಣಿಸಲಾಗದ ಹೊರತು, ಆ ಖರ್ಚುಗಳನ್ನು ಕವರ್ ಮಾಡಲಾಗುವುದಿಲ್ಲ.

  • ಕ್ರಿಪ್ಟೋ-ಕರೆನ್ಸಿಯಲ್ಲಿ ಉಂಟಾದ ನಷ್ಟಗಳು
  • ಮೇಲೆ ತಿಳಿಸಿದ ಸಂಯೋಜನೆಯಲ್ಲಿ ಬಳಸಲಾಗುತ್ತಿರುವ ಕಾಯಿನ್‌ಗಳು, ಟೋಕನ್‌ಗಳು ಅಥವಾ ಪಬ್ಲಿಕ್/ ಪ್ರೈವೇಟ್ ಕೀಗಳನ್ನು ಒಳಗೊಂಡಿರುವ ಕ್ರಿಪ್ಟೋಕರೆನ್ಸಿಗಳೊಂದಿಗೆ ಟ್ರೇಡಿಂಗ್‌ನಲ್ಲಿ ಉಂಟಾಗುವ ಯಾವುದೇ ನಷ್ಟ / ಕಳೆದುಕೊಳ್ಳುವಿಕೆ / ವಿನಾಶ / ಮಾರ್ಪಾಡು / ಲಭ್ಯತೆ / ಅಕ್ಸೆಸ್ ಮಾಡದಿರುವುದು ಮತ್ತು / ಅಥವಾ ವಿಳಂಬ ಕವರ್ ಆಗುವುದಿಲ್ಲ.

  • ನಿರ್ಬಂಧಿತ ವೆಬ್‌ಸೈಟ್‌ಗಳ ಬಳಕೆ
  • ಸಂಬಂಧಿತ ಪ್ರಾಧಿಕಾರವು ಇಂಟರ್ನೆಟ್‌ನಲ್ಲಿ ನಿಷೇಧಿಸಿದ ಯಾವುದೇ ನಿರ್ಬಂಧಿತ ಅಥವಾ ವೆಬ್‌ಸೈಟ್‌ಗಳನ್ನು ಅಕ್ಸೆಸ್ ಮಾಡುವ ಮೂಲಕ ಉಂಟಾದ ಯಾವುದೇ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ.

  • ಜೂಜು
  • ಆನ್‌ಲೈನ್‌ನಲ್ಲಿ ಮತ್ತು ಅಥವಾ ಇನ್ಯಾವುದೇ ರೀತಿಯಲ್ಲಿ ಜೂಜಾಟ ಕವರ್ ಆಗುವುದಿಲ್ಲ.

ಹಕ್ಕು ನಿರಾಕರಣೆ: "ಯಾವುದು ಕವರ್ ಆಗಿದೆ/ಕವರ್ ಆಗಿಲ್ಲ" ಎಂದು ನಮೂದಿಸಿದ ವಿವರಣೆಗಳು ವಿವರಣಾತ್ಮಕವಾಗಿವೆ ಮತ್ತು ಪಾಲಿಸಿಯ ನಿಯಮಗಳು, ಷರತ್ತುಗಳು ಮತ್ತು ಹೊರಗಿಡುವಿಕೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್ ಓದಿರಿ

Card Management & Control

ಕ್ಲೈಮ್ ಪ್ರಕ್ರಿಯೆ

ಕ್ಲೈಮ್ ಆರಂಭಿಸಿ ಅಥವಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಸ್ವಯಂ ಸಹಾಯ ಗೆ ಭೇಟಿ ನೀಡಿ/ಕ್ಲೈಮ್ ಆರಂಭಿಸಲು/ಟ್ರ್ಯಾಕ್ ಮಾಡಿ.

ಅಥವಾ

ಎಚ್ ಡಿ ಎಫ್ ಸಿ ಎರ್ಗೋದ WhatsApp ನಂಬರ್ 8169500500 ಗೆ ಸಂಪರ್ಕಿಸಿ

ಅಥವಾ

ಎಚ್ ಡಿ ಎಫ್ ಸಿ ಎರ್ಗೋದ ಟೋಲ್ ಫ್ರೀ ಸಹಾಯವಾಣಿ ನಂಬರ್ 022 6234 6234 / 0120 6234 6234 ಗೆ ಕರೆ ಮಾಡಿ ಮತ್ತು ನಿಮ್ಮ ಕ್ಲೈಮ್ ನೋಂದಣಿ ಮಾಡಿ.

*ಇವುಗಳು ವಿವರಣಾತ್ಮಕ ಹೊರಗಿಡುವಿಕೆಗಳಾಗಿವೆ ಎಂಬುದನ್ನು ದಯವಿಟ್ಟು ಗಮನಿಸಿ. ವಿವರವಾದ ಪಟ್ಟಿಗಾಗಿ, ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ.

*ಈ ವಿಷಯವು ವಿವರಣೆಯ ಉದ್ದೇಶಕ್ಕಷ್ಟೇ ಆಗಿದೆ. ನಿಜವಾದ ಕವರೇಜ್ ನೀಡಲಾದ ಭಾಷಾ ಪಾಲಿಸಿಗೆ ಒಳಪಟ್ಟಿರುತ್ತದೆ.

ಹಕ್ಕುತ್ಯಾಗ:
ಎಚ್ ಡಿ ಎಫ್ ಸಿ ಬ್ಯಾಂಕ್ ಎಚ್‌ಡಿಎಫ್‌ಸಿ ಎರ್ಗೋದ ಕಾರ್ಪೊರೇಟ್ ಏಜೆಂಟ್ ಆಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇನ್ಶೂರೆನ್ಸ್ ಒಪ್ಪಂದವು ಎಚ್‌ಡಿಎಫ್‌ಸಿ ಎರ್ಗೋ ಮತ್ತು ಇನ್ಶೂರೆನ್ಸ್ ಮಾಡಿಸಿದವರ ನಡುವೆ ಮಾತ್ರ ಇರುತ್ತದೆ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಹೇಳಲಾದ ಅಗ್ರೀಮೆಂಟ್ ಪಾರ್ಟಿ ಆಗಿರುವುದಿಲ್ಲ. ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಗ್ರಾಹಕರ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಇನ್ಶೂರೆನ್ಸ್ ವಿಜ್ಞಾಪನೆಯ ವಿಷಯವಾಗಿದೆ. ಕವರೇಜ್, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ನಡೆಸುವ ಮೊದಲು ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.

ಜನರಲ್ ಇನ್ಶೂರೆನ್ಸ್ ಕಮಿಷನ್

Redemption Limit

ಆಗಾಗ್ಗೆ ಕೇಳುವ ಪ್ರಶ್ನೆಗಳು

ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಶ್ರೇಣಿಯು ₹ 10,000 ರಿಂದ ₹ 5 ಕೋಟಿಯವರೆಗೆ ಇರುತ್ತದೆ. ಆದಾಗ್ಯೂ, ಇದು ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ನೀವು ಈ ಪಾಲಿಸಿಯನ್ನು ನಮ್ಮ ಕಂಪನಿಯ ವೆಬ್‌ಸೈಟ್‌ನಿಂದ ಖರೀದಿಸಬಹುದು. ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಮತ್ತು ಈ ಪಾಲಿಸಿಯನ್ನು ಖರೀದಿಸಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ.

ಕವರ್ ಆಗುವ ಡಿವೈಸ್‌ಗಳ ನಂಬರ್ ಮೇಲೆ ಯಾವುದೇ ನಿರ್ಬಂಧವಿಲ್ಲ.

ನೀವು ಆಯ್ಕೆ ಮಾಡಿದ ವಿಮಾ ಮೊತ್ತಕ್ಕೆ ಒಳಪಟ್ಟು, ನೀವು ಸಂಬಂಧಿತ ಕವರ್‌ಗಳು/ವಿಭಾಗಗಳನ್ನು ಆಯ್ಕೆ ಮಾಡಿದ್ದರೆ, ನೀವು ಪೀಡಿತರಾಗಿರುವ ಎಲ್ಲಾ ಸೈಬರ್ ಅಪರಾಧಗಳಿಗೆ ಕ್ಲೈಮ್ ಪಡೆಯಲು ನೀವು ಅರ್ಹರಾಗಿರುತ್ತೀರಿ

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಈ ಪಾಲಿಸಿಯನ್ನು ಖರೀದಿಸಬಹುದು. ಫ್ಯಾಮಿಲಿ ಕವರ್‌ನ ಭಾಗವಾಗಿ ನಿಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೂಡ ನೀವು ಸೇರಿಸಬಹುದು.

ಡಿಜಿಟಲ್ ಜಗತ್ತಿನಲ್ಲಿ ನೀವು ಎದುರಿಸಬಹುದಾದ ಎಲ್ಲಾ ರೀತಿಯ ಸೈಬರ್ ಅಪಾಯಗಳನ್ನು ನಿರ್ವಹಿಸಲು ಪಾಲಿಸಿಯು ವಿಶಾಲ ಶ್ರೇಣಿಯ ವಿಭಾಗಗಳನ್ನು ಒದಗಿಸುತ್ತದೆ. ವಿಭಾಗಗಳನ್ನು ಕೆಳಗೆ ನಮೂದಿಸಲಾಗಿದೆ:

  1. ಫಂಡ್‌ಗಳ ಕಳ್ಳತನ (ಅನಧಿಕೃತ ಡಿಜಿಟಲ್ ಟ್ರಾನ್ಸಾಕ್ಷನ್‌ಗಳು ಮತ್ತು ಅನಧಿಕೃತ ಭೌತಿಕ ಟ್ರಾನ್ಸಾಕ್ಷನ್‌ಗಳು)
  2. ಗುರುತಿನ ಕಳ್ಳತನ
  3. ಡೇಟಾ ಮರುಸ್ಥಾಪನೆ / ಮಾಲ್‌ವೇರ್ ನಿರ್ನಾಮ
  4. ಹಾರ್ಡ್‌ವೇರ್ ಬದಲಾವಣೆ
  5. ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್ ಮತ್ತು ಗೌರವದ ನಷ್ಟ
  6. ಸೈಬರ್ ಸುಲಿಗೆ
  7. ಆನ್‌ಲೈನ್ ಶಾಪಿಂಗ್
  8. ಆನ್‌ಲೈನ್ ಸೇಲ್ಸ್
  9. ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಹೊಣೆಗಾರಿಕೆ
  10. ನೆಟ್ವರ್ಕ್ ಸೆಕ್ಯೂರಿಟಿ ಹೊಣೆಗಾರಿಕೆ
  11. ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಉಲ್ಲಂಘನೆ ಹೊಣೆಗಾರಿಕೆ
  12. ಗೌಪ್ಯತೆ ಉಲ್ಲಂಘನೆ ಮತ್ತು ಥರ್ಡ್ ಪಾರ್ಟಿಯಿಂದ ಡೇಟಾ ಉಲ್ಲಂಘನೆ
  13. ಸ್ಮಾರ್ಟ್ ಹೋಮ್ ಕವರ್
  14. ಅವಲಂಬಿತ ಮಕ್ಕಳಿಂದಾಗಿ ಉಂಟಾಗುವ ಹೊಣೆಗಾರಿಕೆ

ನಿಮ್ಮ ಸೈಬರ್ ಇನ್ಶೂರೆನ್ಸ್ ಅಗತ್ಯಗಳಿಗೆ ಅನುಗುಣವಾಗಿ ಲಭ್ಯವಿರುವ ಕವರ್‌ಗಳ ಯಾವುದೇ ಸಂಯೋಜನೆಯನ್ನು ನೀವು ಆಯ್ಕೆ ಮಾಡಬಹುದು.

ಹೌದು. ನೀವು ಗರಿಷ್ಠ 4 ಕುಟುಂಬ ಸದಸ್ಯರಿಗೆ (ಪ್ರಸ್ತಾಪಕರನ್ನು ಒಳಗೊಂಡಂತೆ) ಕವರ್ ಅನ್ನು ವಿಸ್ತರಿಸಬಹುದು. ಫ್ಯಾಮಿಲಿ ಕವರ್ ಅನ್ನು ನಿಮಗೆ, ನಿಮ್ಮ ಸಂಗಾತಿಗೆ, ನಿಮ್ಮ ಮಕ್ಕಳಿಗೆ, ಒಡಹುಟ್ಟಿದವರಿಗೆ, ಪೋಷಕರಿಗೆ ಅಥವಾ ಸಂಗಾತಿಯ ಪೋಷಕರಿಗೆ, ಒಂದೇ ಮನೆಯಲ್ಲಿ ವಾಸಿಸುತ್ತಿರುವ ಗರಿಷ್ಠ 4 ಜನರಿಗೆ ವಿಸ್ತರಿಸಬಹುದು.

ಇಲ್ಲ. ಪಾಲಿಸಿ ಅಡಿಯಲ್ಲಿ ಯಾವುದೇ ಕಡಿತಗಳಿಲ್ಲ

ಈ ಕೆಳಗಿನ ಹಂತಗಳಲ್ಲಿ ನೀವು ನಿಮ್ಮದೇ ಆದ ಪ್ಲಾನ್ ರಚಿಸಬಹುದು:

  • ನೀವು ಬಯಸುವ ಕವರ್‌ಗಳನ್ನು ಆಯ್ಕೆಮಾಡಿ
  • ನೀವು ಬಯಸುವ ವಿಮಾ ಮೊತ್ತವನ್ನು ಆಯ್ಕೆಮಾಡಿ
  • ಅಗತ್ಯವಿದ್ದರೆ ಕವರ್ ಅನ್ನು ನಿಮ್ಮ ಕುಟುಂಬಕ್ಕೆ ವಿಸ್ತರಿಸಿ
  • ನಿಮ್ಮ ಕಸ್ಟಮೈಜ್ ಮಾಡಿದ ಸೈಬರ್ ಪ್ಲಾನ್ ಸಿದ್ಧವಾಗಿದೆ

ಹೌದು. ನಮ್ಮೊಂದಿಗೆ ಸಮಾಲೋಚನೆಯ ನಂತರ, ಕಾನೂನು ಕಾರ್ಯವಿಧಾನಗಳಿಗಾಗಿ ನೀವು ನಿಮ್ಮ ಸ್ವಂತ ವಕೀಲರನ್ನು ನೇಮಿಸಬಹುದು.

ಈ 5 ತ್ವರಿತ, ಸುಲಭ ಹಂತಗಳನ್ನು ನೆನಪಿಡುವ ಮೂಲಕ ನೀವು ಸೈಬರ್ ದಾಳಿಗಳನ್ನು ತಡೆಯಬಹುದು:

  • ಯಾವಾಗಲೂ ಬಲವಾದ ಪಾಸ್ವರ್ಡ್‌ಗಳನ್ನು ಬಳಸಿ ಮತ್ತು ನಿಯಮಿತವಾಗಿ ಪಾಸ್ವರ್ಡ್‌ಗಳನ್ನು ಅಪ್ಡೇಟ್ ಮಾಡಿ.
  • ನೀವು ಬಳಸುತ್ತಿರುವ ಸಾಫ್ಟ್‌ವೇರ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿ.
  • ನಿಮ್ಮ ಸೋಶಿಯಲ್ ಮೀಡಿಯಾ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ.
  • ನಿಮ್ಮ ಹೋಮ್ ನೆಟ್ವರ್ಕ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಪ್ರಮುಖ ಭದ್ರತಾ ಉಲ್ಲಂಘನೆಗಳ ಕುರಿತು ಅಪ್ ಟು ಡೇಟ್ ಆಗಿರಿ.

ಈ ಕೆಳಗಿನ ಆಧಾರದ ಮೇಲೆ ನೀವು ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು:

  • ಪರ್ ಸೆಕ್ಷನ್: ಪ್ರತಿ ಆಯ್ದ ವಿಭಾಗಕ್ಕೆ ಪ್ರತ್ಯೇಕ ವಿಮಾ ಮೊತ್ತವನ್ನು ಒದಗಿಸಿ ಅಥವಾ
  • ಫ್ಲೋಟರ್: ಆಯ್ದ ವಿಭಾಗಗಳಲ್ಲಿ ಫ್ಲೋಟ್ ಆಗುವ ಫಿಕ್ಸೆಡ್ ವಿಮಾ ಮೊತ್ತವನ್ನು ಒದಗಿಸಿ

ಇಲ್ಲ. ಯಾವುದೇ ಕಾಯುವ ಅವಧಿ ಅನ್ವಯವಾಗುವುದಿಲ್ಲ

ಪಾಲಿಸಿ ಅವಧಿ 1 ವರ್ಷ (ವಾರ್ಷಿಕ ಪಾಲಿಸಿ).

ಹೌದು. ಅದನ್ನು ತೆಗೆದುಕೊಂಡ ನಂತರ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು. ಕೆಳಗಿನ ಟೇಬಲ್ ಪ್ರಕಾರ ನೀವು ಪ್ರೀಮಿಯಂ ರಿಫಂಡ್‌ಗೆ ಅರ್ಹರಾಗಿರುತ್ತೀರಿ

ಹೌದು. ನಮ್ಮ ವೆಬ್‌ಸೈಟ್‌ನಿಂದ ನೇರವಾಗಿ ಖರೀದಿಸಿದ ಪಾಲಿಸಿಗಳಿಗೆ ನೀವು 5% ರಿಯಾಯಿತಿಯನ್ನು ಪಡೆಯುತ್ತೀರಿ.

ಇಲ್ಲ. ಪಾಲಿಸಿಯ ಯಾವುದೇ ಸೆಕ್ಷನ್ ಅಡಿಯಲ್ಲಿ ಯಾವುದೇ ಉಪ-ಮಿತಿಗಳು ಅನ್ವಯವಾಗುವುದಿಲ್ಲ

ಹಕ್ಕುತ್ಯಾಗ: ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ. *ತೆರಿಗೆಗಳನ್ನು ಹೊರತುಪಡಿಸಿ ₹ 50,000 ವಿಮಾ ಮೊತ್ತಕ್ಕೆ ಸ್ಟೂಡೆಂಟ್ ಪ್ಲಾನ್ ಬೆಲೆ. ಎಚ್‌ಡಿ‌ಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. IRDAI ನೋಂದಣಿ ನಂಬರ್ 146. CIN: U66030MH2007PLC177117. ನೋಂದಾಯಿತ ಮತ್ತು ಕಾರ್ಪೊರೇಟ್ ಕಚೇರಿ: 1 ನೇ ಮಹಡಿ, ಎಚ್‍ಡಿ‍ಎಫ್‌ಸಿ ಹೌಸ್, 165-166 ಬ್ಯಾಕ್‌ಬೇ ರಿಕ್ಲೇಮೇಶನ್, H. T. ಪರೇಖ್ ಮಾರ್ಗ್, ಚರ್ಚ್‌ಗೇಟ್, ಮುಂಬೈ – 400 020. ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟದ ನಿರ್ಧಾರಕ್ಕೆ ಬರುವ ಮೊದಲು ದಯವಿಟ್ಟು ಮಾರಾಟ ಕರಪತ್ರ / ಪ್ರಾಸ್ಪೆಕ್ಟಸ್ ಓದಿ. ಮೇಲೆ ತೋರಿಸಿರುವ ಟ್ರೇಡ್ ಲೋಗೋ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಎರ್ಗೋ ಇಂಟರ್ನ್ಯಾಷನಲ್ AG ಗೆ ಸೇರಿದೆ ಮತ್ತು ಲೈಸೆನ್ಸ್ ಅಡಿಯಲ್ಲಿ ಕಂಪನಿಯಿಂದ ಬಳಸಲಾಗುತ್ತದೆ. UIN: ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಚೆಟ್ ಇನ್ಶೂರೆನ್ಸ್ - IRDAN125RP0026V01202122.