Direct Pay Mode of Payment

ಡೈರೆಕ್ಟ್‌ಪೇ ಪ್ರಮುಖ ಪ್ರಯೋಜನಗಳು ಮತ್ತು ಫೀಚರ್‌ಗಳು

ಸುಲಭ ಪಾವತಿಗಳು

  • ಡೈರೆಕ್ಟ್‌ಪೇ ಮೂಲಕ, ಪಾವತಿಗಳನ್ನು ಮಾಡುವುದು ತಡೆರಹಿತ ಮತ್ತು ದಕ್ಷವಾಗಿದೆ. ಮರ್ಚೆಂಟ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ನೆಟ್‌ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ಪಾವತಿಗಳನ್ನು ಪಡೆಯಬಹುದು, ಎರಡೂ ಪಾರ್ಟಿಗಳಿಗೆ ಅನುಕೂಲವನ್ನು ಖಚಿತಪಡಿಸುತ್ತದೆ. ಇದು ಮಧ್ಯವರ್ತಿಗಳ ಅಗತ್ಯವನ್ನು ನಿವಾರಿಸುತ್ತದೆ, ಪಾವತಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಬಿಸಿನೆಸ್ ಟ್ರಾನ್ಸಾಕ್ಷನ್ ಆಗಿರಲಿ ಅಥವಾ ವೈಯಕ್ತಿಕ ಖರೀದಿ ಆಗಿರಲಿ, ಡೈರೆಕ್ಟ್‌ಪೇ ಪಾವತಿ ಪ್ರಯಾಣವನ್ನು ಸರಳಗೊಳಿಸುತ್ತದೆ.
Easy payments

ಸೆಕ್ಯೂರ್ಡ್ ಟ್ರಾನ್ಸಾಕ್ಷನ್‌ಗಳು

  • ಡೈರೆಕ್ಟ್‌ಪೇ ನಿಮ್ಮ ಟ್ರಾನ್ಸಾಕ್ಷನ್‌ಗಳು ಎಸ್‌ಎಸ್‌ಎಲ್ ಎನ್‌ಕ್ರಿಪ್ಶನ್ ಮೂಲಕ ಹೆಚ್ಚು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ, ಇದು ಟ್ರಾನ್ಸ್‌ಫರ್ ಸಮಯದಲ್ಲಿ ನಿಮ್ಮ ಡೇಟಾವನ್ನು ರಕ್ಷಿಸುತ್ತದೆ. ಈ ಭದ್ರತಾ ಕ್ರಮವು ಅನಧಿಕೃತ ಅಕ್ಸೆಸ್ ಅನ್ನು ತಡೆಯುತ್ತದೆ ಮತ್ತು ನಿಮ್ಮ ಸೂಕ್ಷ್ಮ ಮಾಹಿತಿಯು ಗೌಪ್ಯವಾಗಿರುವುದನ್ನು ಖಚಿತಪಡಿಸುತ್ತದೆ. ಇದಲ್ಲದೆ, ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಎಂದಿಗೂ ಮರ್ಚೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ, ಹೆಚ್ಚುವರಿ ಗೌಪ್ಯತೆಯ ಪದರವನ್ನು ಒದಗಿಸುತ್ತದೆ.
  • ಸುಲಭ ಹಂತಗಳಲ್ಲಿ ಪ್ರಾರಂಭಿಸಿ
    ಕ್ರೆಡಿಟ್ ಕಾರ್ಡ್ ನೆಟ್‌ಬ್ಯಾಂಕಿಂಗ್

    • ಹಂತ 1
      ನೆಟ್‌ಬ್ಯಾಂಕಿಂಗ್ ಮತ್ತು ಥರ್ಡ್ ಪಾರ್ಟಿ ಟ್ರಾನ್ಸ್‌ಫರ್ (ಟಿಪಿಟಿ) ಮತ್ತು ಸೆಕ್ಯೂರ್ಡ್ ಅಕ್ಸೆಸ್ ಸರ್ವಿಸ್‌ಗಳಿಗಾಗಿ ನೋಂದಣಿ ಮಾಡಿ
    • ಹಂತ 2
      ಮರ್ಚೆಂಟ್ ವೆಬ್‌ಸೈಟ್‌ನ ಪಾವತಿ ಪುಟದಲ್ಲಿ ಎಚ್ ಡಿ ಎಫ್ ಸಿ ನೆಟ್‌ಬ್ಯಾಂಕಿಂಗ್ ಆಯ್ಕೆಮಾಡಿ
    • ಹಂತ 3
      ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡುವ ಮೂಲಕ ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ​​​​​​​
Safe transactions

ವ್ಯಾಪಕ ಆಯ್ಕೆ

  • ಡೈರೆಕ್ಟ್‌ಪೇ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಸೆಟಲ್ ಮಾಡಲು ನಿಮಗೆ ಅನುಮತಿ ನೀಡುವ ಮೂಲಕ ಬಹುಮುಖತೆಯನ್ನು ಒದಗಿಸುತ್ತದೆ. ಅದರ ಹೊರತಾಗಿ, ನೀವು ರೈಲು ಮತ್ತು ವಿಮಾನದ ಟಿಕೆಟ್‌ಗಳನ್ನು ಕೂಡ ತಕ್ಷಣ ಬುಕ್ ಮಾಡಬಹುದು, ಇದು ವಿವಿಧ ಹಣಕಾಸಿನ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವಾಗಿದೆ. ಈ ಫ್ಲೆಕ್ಸಿಬಿಲಿಟಿಯು ದೈನಂದಿನ ಮತ್ತು ಸಾಂದರ್ಭಿಕ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ಅನುಕೂಲಕರ ಸಾಧನವಾಗಿದೆ.
Extensive choice

ಮಿತಿಗಳು ಮತ್ತು ನಿರ್ಬಂಧ

  • ಸುಗಮ ಮತ್ತು ಸೆಕ್ಯೂರ್ಡ್ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಡೈರೆಕ್ಟ್‌ಪೇ ಪ್ರತಿ ಗ್ರಾಹಕ ID ಗೆ ₹50 ಲಕ್ಷದ ದೈನಂದಿನ ಟ್ರಾನ್ಸಾಕ್ಷನ್ ಮಿತಿಯನ್ನು ಹೊಂದಿದೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗೆ, ಟ್ರಾನ್ಸಾಕ್ಷನ್ ಮಿತಿಗಳು ₹15,000 ರಿಂದ ₹50,000 ವರೆಗೆ ಇರುತ್ತವೆ. ಆದಾಗ್ಯೂ, ತೆರಿಗೆ ಪಾವತಿಗಳು ಅಥವಾ ಮ್ಯೂಚುಯಲ್ ಫಂಡ್ ಹೂಡಿಕೆಗಳಂತಹ ದೊಡ್ಡ ಟ್ರಾನ್ಸಾಕ್ಷನ್‌ಗಳಿಗೆ, ನೆಟ್‌ಬ್ಯಾಂಕಿಂಗ್ ಮೂಲಕ NEFT, IMPS ಮತ್ತು ಬಿಲ್‌ಪೇಯಂತಹ ಆಯ್ಕೆಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಬಳಸಬಹುದು. ಈ ಮಿತಿಗಳು ಫ್ಲೆಕ್ಸಿಬಿಲಿಟಿ ಮತ್ತು ಭದ್ರತೆಯ ನಡುವಿನ ಸಮತೋಲನವನ್ನು ಖಚಿತಪಡಿಸುತ್ತವೆ.
Limits and restriction

ವಿವಾದ ನಿರ್ವಹಣೆ

  • ವಿವಾದಗಳ ಸಂದರ್ಭದಲ್ಲಿ, ಡೈರೆಕ್ಟ್‌ಪೇ ಪರಿಹಾರಕ್ಕಾಗಿ ರಚನಾತ್ಮಕ ಕಾರ್ಯವಿಧಾನವನ್ನು ಒದಗಿಸುತ್ತದೆ. ಟ್ರಾನ್ಸಾಕ್ಷನ್‌ಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ತನಿಖೆಗಾಗಿ ಟ್ರಾನ್ಸಾಕ್ಷನ್ ದಿನಾಂಕದ 180 ದಿನಗಳ ಒಳಗೆ ವರದಿ ಮಾಡಬೇಕು. ಪರಿಹಾರಕ್ಕಾಗಿ ಸ್ಪಷ್ಟ ವಿಂಡೋವನ್ನು ನಿರ್ವಹಿಸುವುದರೊಂದಿಗೆ ದೂರುಗಳಿಗೆ ಸಮಯಕ್ಕೆ ಸರಿಯಾಗಿ ಗಮನ ನೀಡುತ್ತದೆ. ಬಳಕೆದಾರರಿಗೆ ಟ್ರಾನ್ಸಾಕ್ಷನ್ ಡಾಕ್ಯುಮೆಂಟ್‌ಗಳನ್ನು ಇರಿಸಿಕೊಳ್ಳಲು ಮತ್ತು ತ್ವರಿತ ಕ್ರಮಕ್ಕಾಗಿ ವ್ಯತ್ಯಾಸಗಳನ್ನು ತಕ್ಷಣ ವರದಿ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
Limits and restriction

ಡೈರೆಕ್ಟ್‌ಪೇ ಬಗ್ಗೆ ಇನ್ನಷ್ಟು

ಡೈರೆಕ್ಟ್‌ಪೇ ಅನುಕೂಲಕರ ಮತ್ತು ಸೆಕ್ಯೂರ್ಡ್ ಆನ್ಲೈನ್ ಪಾವತಿ ಪರಿಹಾರವಾಗಿದೆ. ನಗದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಅಗತ್ಯವಿಲ್ಲದೆ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಇದು ನಿಮಗೆ ಅನುಮತಿ ನೀಡುತ್ತದೆ. ಪ್ರಾಡಕ್ಟ್‌ಗಳಿಗೆ ಶಾಪಿಂಗ್ ಮಾಡಿ, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಿ ಅಥವಾ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ನೀವು ಸಂಪೂರ್ಣ ಭದ್ರತೆಯೊಂದಿಗೆ ಆನ್ಲೈನ್ ಟ್ರಾನ್ಸಾಕ್ಷನ್‌ಗಳನ್ನು ತಕ್ಷಣ ಮಾಡಬಹುದು. 

ಅನುಕೂಲಕರ ಪಾವತಿಗಳು:

ನೆಟ್‌ಬ್ಯಾಂಕಿಂಗ್ ಮೂಲಕ ಸುಲಭವಾಗಿ ಮರ್ಚೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

ಸೆಕ್ಯೂರ್ಡ್ ಟ್ರಾನ್ಸಾಕ್ಷನ್‌ಗಳು:

SSL ಎನ್‌ಕ್ರಿಪ್ಶನ್ ಜೊತೆಗೆ ಸಂಪೂರ್ಣ ಭದ್ರತೆಯನ್ನು ಆನಂದಿಸಿ.

ಗೌಪ್ಯತೆ ರಕ್ಷಣೆ:

ನಿಮ್ಮ ವಿವರಗಳು ಗೌಪ್ಯವಾಗಿರುತ್ತವೆ ಮತ್ತು ಮರ್ಚೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

ವ್ಯಾಪಕ ಬಳಕೆ:

ಆನ್ಲೈನಿನಲ್ಲಿ ಶಾಪಿಂಗ್ ಮಾಡಿ, ಬಿಲ್‌ಗಳನ್ನು ಪಾವತಿಸಿ, ರೈಲು ಮತ್ತು ವಿಮಾನದ ಟಿಕೆಟ್‌ಗಳನ್ನು ತಕ್ಷಣ ಬುಕ್ ಮಾಡಿ.

ಹೊಂದಿಕೊಳ್ಳುವ ಮಿತಿಗಳು:

ಕೆಲವು ಟ್ರಾನ್ಸಾಕ್ಷನ್‌ಗಳಿಗೆ ನಿರ್ದಿಷ್ಟ ವಿನಾಯಿತಿಗಳೊಂದಿಗೆ ಪ್ರತಿ ಗ್ರಾಹಕ ID ಗೆ ₹50 ಲಕ್ಷದ ದೈನಂದಿನ ಟ್ರಾನ್ಸಾಕ್ಷನ್ ಮಿತಿ.

*ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು. 

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಡೈರೆಕ್ಟ್‌ಪೇ ಪಾವತಿ ವಿಧಾನವು ನಗದುರಹಿತ ಮತ್ತು ಕಾರ್ಡ್‌ಲೆಸ್ ಆಗಲು SME ಗಳಿಗೆ ಸೆಕ್ಯೂರ್ಡ್ ಮತ್ತು ಅನುಕೂಲಕರ ಪರಿಹಾರವಾಗಿದೆ. ಇದು ನಗದು, ಕಾರ್ಡ್‌ಗಳು ಅಥವಾ ಚೆಕ್‌ಗಳಿಲ್ಲದೆ ಪಾವತಿಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ. 

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಡೈರೆಕ್ಟ್‌ಪೇ ಬಳಸಿ ಆನ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡಲು:

  1. ಈ ಸೌಲಭ್ಯವನ್ನು ನೀಡುವ ಯಾವುದೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಟ್ರಾನ್ಸಾಕ್ಷನ್ ಮಾಡಿ.
  2. ಚೆಕ್ಔಟ್ ಸಮಯದಲ್ಲಿ, ನಿಮ್ಮ ಪಾವತಿ ಆಯ್ಕೆಯಾಗಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನೆಟ್‌ಬ್ಯಾಂಕಿಂಗ್ ಆಯ್ಕೆಮಾಡಿ.
  3. ನಿಮ್ಮ ಗ್ರಾಹಕ ID ಮತ್ತು ನೆಟ್‌ಬ್ಯಾಂಕಿಂಗ್ ಪಾಸ್ವರ್ಡ್ ಬಳಸಿ ಟ್ರಾನ್ಸಾಕ್ಷನ್‌ಗೆ ಅಧಿಕಾರ ನೀಡಿ.

ಹೌದು, ಡೈರೆಕ್ಟ್‌ಪೇ ಪಾವತಿಯ ಸೆಕ್ಯೂರ್ಡ್ ವಿಧಾನವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ 128-ಬಿಟ್ SSL (ಸೆಕ್ಯೂರ್ಡ್ ಸಾಕೆಟ್ ಲೇಯರ್) ಎನ್‌ಕ್ರಿಪ್ಶನ್ ಜೊತೆಗೆ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಗ್ರಾಹಕರ ಅಕೌಂಟ್ ಅನ್ನು ಗೌಪ್ಯವಾಗಿರಿಸಲು ಇದು ಸೆಕ್ಯೂರ್ಡ್ ಎನ್‌ಕ್ರಿಪ್ಶನ್ ಅನ್ನು ಕೂಡ ಬಳಸುತ್ತದೆ.

ಹೌದು, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನೇರ ಪಾವತಿಯನ್ನು ಆನ್ಲೈನಿನಲ್ಲಿ ಬಳಸಲು ಟ್ರಾನ್ಸಾಕ್ಷನ್ ಮಿತಿಗಳಿವೆ. ಪ್ರತಿ ಗ್ರಾಹಕ ID ಗೆ ದೈನಂದಿನ ಟ್ರಾನ್ಸಾಕ್ಷನ್ ಮಿತಿಯನ್ನು ₹50 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಕೆಲವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗೆ, ಪ್ರತಿ ಟ್ರಾನ್ಸಾಕ್ಷನ್‌ಗೆ ಮಿತಿ ₹15,000 - 50,000 ವರೆಗೆ ಇರುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಆನ್ಲೈನ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಬಿಸಿನೆಸ್ ಟ್ರಾನ್ಸಾಕ್ಷನ್‌ಗಳಿಗಾಗಿ ನಿಮ್ಮ ಡೈರೆಕ್ಟ್‌ಪೇ ಅನ್ನು ನೀವು ಟ್ರ್ಯಾಕ್ ಮಾಡಬಹುದು.