ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಅರ್ಜಿದಾರರು ಮತ್ತು/ಅಥವಾ ಪಾಲಕರ ಮೂಲ ಮತ್ತು ಸ್ವಯಂ-ದೃಢೀಕೃತ ಪ್ರತಿಗಳು:
ISIC ForexPlus ಕಾರ್ಡ್ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗಳ ಕೌಂಟರ್‌ನಲ್ಲಿ ಲಭ್ಯವಿದೆ. ಅಗತ್ಯವಿರುವ ಡಾಕ್ಯುಮೆಂಟೇಶನ್‌ನೊಂದಿಗೆ ನೀವು ನಮ್ಮ ಬ್ರಾಂಚ್‌ಗೆ ಹೋದರೆ ಸಾಕು, ನಿಮಗೆ ISIC ForexPlus ಕಾರ್ಡ್ ಸಿಗುತ್ತದೆ. ಫಂಡ್‌ಗಳನ್ನು ಪಡೆದ 4 ಗಂಟೆಗಳ ಒಳಗೆ ಕಾರ್ಡ್ ಆ್ಯಕ್ಟಿವೇಟ್ ಆಗುತ್ತದೆ.
ನೀವು www.hdfcbank.com ಗೆ ಭೇಟಿ ನೀಡುವ ಮೂಲಕವೂ ಕೂಡಾ ಅಪ್ಲೈ ಮಾಡಬಹುದು -> ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ವಿಭಾಗ ಅಥವಾ www.hdfcbank.com/personal/products/cards/prepaid-cards -> ISIC ವಿದ್ಯಾರ್ಥಿ ID ForexPlus ಕಾರ್ಡ್ -> ಫಾರೆಕ್ಸ್ ಕಾರ್ಡ್ ಖರೀದಿಸಿ
ನೆಟ್‌ಬ್ಯಾಂಕಿಂಗ್ ಸೌಲಭ್ಯದ ಸಹಾಯದಿಂದ ನೀವು ISIC ಫಾರೆಕ್ಸ್‌ಪ್ಲಸ್ ಚಿಪ್ ಕಾರ್ಡ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಬಹುದು. ನೆಟ್‌ಬ್ಯಾಂಕಿಂಗ್ ಸೌಲಭ್ಯಕ್ಕೆ ಲಾಗಿನ್ ಮಾಡಲು ಕಾರ್ಡ್ ಕಿಟ್‌ನ ಭಾಗವಾಗಿ ನಿಮಗೆ ನೀಡಲಾದ ಯೂಸರ್ ID ಮತ್ತು IPIN ಆಗಿ ನೀವು ಕಾರ್ಡ್ ನಂಬರ್ ಅನ್ನು ಬಳಸಬೇಕು. ಪರ್ಯಾಯವಾಗಿ, ನಿಮ್ಮ ISIC ಫಾರೆಕ್ಸ್‌ಪ್ಲಸ್ ಕಾರ್ಡ್‌ನಲ್ಲಿ ಬ್ಯಾಲೆನ್ಸ್ ವೆರಿಫೈ ಮಾಡಲು ನೀವು ನಮ್ಮ ಫೋನ್‌ಬ್ಯಾಂಕಿಂಗ್ ಸರ್ವಿಸ್‌ಗಳನ್ನು ಕೂಡ ಸಂಪರ್ಕಿಸಬಹುದು.
ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ, ನೀವು ಹಿಂದಿರುಗಿದ 180 ದಿನಗಳ ಒಳಗೆ ನಿಮ್ಮ ಬಳಿ ಇರುವ ಖರ್ಚು ಮಾಡದ ವಿದೇಶಿ ವಿನಿಮಯವನ್ನು ನೀವು ಒಪ್ಪಿಸಬೇಕಾಗುತ್ತದೆ. ಭಾರತಕ್ಕೆ ಹಿಂತಿರುಗಿದ ನಂತರ ಭವಿಷ್ಯದ ಬಳಕೆಗಾಗಿ ನೀವು US$ 2,000 (ಅಥವಾ ಸಮಾನ) ವರೆಗೆ ವಿದೇಶಿ ವಿನಿಮಯವನ್ನು ಉಳಿಸಿಕೊಳ್ಳಬಹುದು.
ISIC ForexPlus ಕಾರ್ಡ್ ಅನ್ನು ನೀವು ಅಧಿಕೃತಗೊಳಿಸಿದ ಯಾರಾದರೂ ನಿಮ್ಮ ಪರವಾಗಿ ಲೋಡ್ ಮಾಡಬಹುದು. ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ಫಂಡ್‌ಗಳೊಂದಿಗೆ ಅಧಿಕೃತ ವ್ಯಕ್ತಿಯು ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬೇಕು. ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ.
ಕಾರ್ಡ್ ಅವಧಿ ಮುಗಿಯುವವರೆಗೆ ನೀವು ಭವಿಷ್ಯದಲ್ಲಿ ಅನೇಕ ಬಾರಿ ನಿಮ್ಮ ISIC ಫಾರೆಕ್ಸ್‌ಪ್ಲಸ್ ಕಾರ್ಡ್ ಅನ್ನು ರಿಲೋಡ್ ಮಾಡಬಹುದು:
ಈ ISIC ವಿದ್ಯಾರ್ಥಿ ಫಾರೆಕ್ಸ್‌ಪ್ಲಸ್ ಚಿಪ್ ಕಾರ್ಡ್ ಜಾಗತಿಕವಾಗಿ ಗುರುತಿಸಲ್ಪಟ್ಟ ಮಲ್ಟಿಕರೆನ್ಸಿ ಕಾರ್ಡ್ ಇದು 1968 ರಿಂದ ಯುನೆಸ್ಕೋ ಅನುಮೋದಿಸಿದ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ವಿದ್ಯಾರ್ಥಿ ಗುರುತಿನ ಕಾರ್ಡ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ.
ಕಾರ್ಡ್ 130 ಕ್ಕಿಂತ ಹೆಚ್ಚಿನ ದೇಶಗಳಲ್ಲಿ 150,000 ಕ್ಕೂ ಹೆಚ್ಚು ಪ್ರಾಡಕ್ಟ್‌ಗಳು, ಸೇವೆಗಳು ಮತ್ತು ಅನುಭವಗಳಿಗೆ ವಿಶೇಷ ಅಕ್ಸೆಸ್ ಒದಗಿಸುತ್ತದೆ. ಇದು ಶೈಕ್ಷಣಿಕ ಕೋರ್ಸ್‌ಗಳು, ಸಾಫ್ಟ್‌ವೇರ್ ಲೈಸೆನ್ಸ್‌ಗಳು, ಸಾರಿಗೆ, ಮನರಂಜನೆ ಮತ್ತು ಇನ್ನೂ ಮುಂತಾದವುಗಳ ಮೇಲೆ ಆದ್ಯತೆ ಮತ್ತು ರಿಯಾಯಿತಿ ಆಫರ್‌ಗಳನ್ನು ಒದಗಿಸುತ್ತದೆ.
ಇಲ್ಲ, ಪ್ರತಿ ಕಾರ್ಡ್‌ಗೆ ₹300 ವಿತರಣೆ ಶುಲ್ಕವಿದೆ. ಕಾರ್ಡ್ ರಿಲೋಡ್ ಮಾಡುವುದರಿಂದ ₹75 + GST ಫೀಸ್ ವಿಧಿಸಲಾಗುತ್ತದೆ. ಕಾರ್ಡ್ ಮರುವಿತರಣೆ ಅಥವಾ ಬದಲಿಸುವಿಕೆಯು ₹100 + GST ಫೀಸ್ ಹೊಂದಿದೆ.
ISIC Student ForexPlus ಕಾರ್ಡ್ ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರಿಗೆ ನೀಡಬಹುದು.