Rural Housing Loan

ರೂರಲ್ ಹೌಸಿಂಗ್ ಲೋನ್ ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ಸ್ಟ್ಯಾಂಡರ್ಡ್ ಬಡ್ಡಿ ದರಗಳು

ಪಾಲಿಸಿ ರೆಪೋ ದರ + 2.90% ರಿಂದ 4.25%

9.40 % - 10.75 %

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತವೆ ಮತ್ತು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆಯನ್ನು ಅನ್ಲಾಕ್ ಮಾಡಿ

ನಿಮ್ಮ ಸೂಕ್ತ ಲೋನ್ ಇಂದೇ ಪಡೆಯಿರಿ!

Indian oil card1

ಪ್ರಮುಖ ಫೀಚರ್‌ಗಳು

ಗುಣಧರ್ಮಗಳು

  • ಮರುಪಾವತಿ: ಮಾಸಿಕ ಕಂತುಗಳ ಮೂಲಕ ಮರುಪಾವತಿಗಳು  
  • ಡಾಕ್ಯುಮೆಂಟೇಶನ್: ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಅಪ್ಲೈ ಮಾಡಿ, ಪ್ರಕ್ರಿಯೆಯುದ್ದಕ್ಕೂ ನಿಮಗೆ ಮೌಲ್ಯಯುತ ಸಮಯ ಮತ್ತು ಪ್ರಯತ್ನವನ್ನು ಉಳಿಸುತ್ತದೆ.
  • 24x7 ಸಹಾಯ: ನೀವು ಎಲ್ಲಿದ್ದರೂ, ತ್ವರಿತ ಸಹಾಯಕ್ಕಾಗಿ ಚಾಟ್ ಅಥವಾ WhatsApp ಮೂಲಕ ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಿ.
  • ಡಿಜಿಟಲ್: ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.
bg-sticker

ಫ್ಲೆಕ್ಸಿಬಲ್ ಹೋಮ್ ಫೈನಾನ್ಸಿಂಗ್

  • ಯಾವುದೇ ಗುಪ್ತ ಶುಲ್ಕಗಳಿಲ್ಲ.
  • ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರ್ಮಾಣದಲ್ಲಿರುವ, ಹೊಸ ಅಥವಾ ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ಖರೀದಿಸಲು ಕೃಷಿಗಾರರು, ತೋಟಗಾರರು, ತೋಟಗಾರಿಕೆದಾರರು, ಡೈರಿ ರೈತರು ಮತ್ತು ಮೀನು ರೈತರಿಗೆ ಅನುಗುಣವಾಗಿ ರೂಪಿಸಲಾದ ಲೋನ್‌ಗಳು.
  • ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಫ್ರೀಹೋಲ್ಡ್ ಅಥವಾ ಲೀಸ್‌ಹೋಲ್ಡ್ ವಸತಿ ಪ್ಲಾಟ್‌ಗಳಲ್ಲಿ ನಿಮ್ಮ ಮನೆಯನ್ನು ನಿರ್ಮಿಸಿ.
  • ಟೈಲಿಂಗ್, ಫ್ಲೋರಿಂಗ್, ಪ್ಲಾಸ್ಟರಿಂಗ್ ಮತ್ತು ಪೇಂಟಿಂಗ್‌ನಂತಹ ಸುಧಾರಣೆಗಳೊಂದಿಗೆ ನಿಮ್ಮ ಮನೆಯನ್ನು ಅಪ್‌ಗ್ರೇಡ್ ಮಾಡಿ.
  • ಹೊಸ ಕೊಠಡಿಗಳಂತಹ ನಿಮ್ಮ ಮನೆಗೆ ಲೊಕೇಶನ್ ಸೇರಿಸಿ.
  • ಹೋಮ್ ಲೋನ್‌ಗಳನ್ನು ಪಡೆಯಲು ಕೃಷಿಕರಿಗೆ ಕೃಷಿ ಭೂಮಿಯ ಅಡಮಾನದ ಅಗತ್ಯವಿಲ್ಲ.
  • ಕೃಷಿಕರಿಗೆ 20 ವರ್ಷಗಳವರೆಗಿನ ಲೋನ್ ಅವಧಿ.
  • ಹಳ್ಳಿಗಳಲ್ಲಿ ವಸತಿ ಆಸ್ತಿಯನ್ನು ಖರೀದಿಸಲು ಸ್ಯಾಲರಿ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಲಭ್ಯವಿರುವ ಲೋನ್‌ಗಳು.
  • ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವ ಕೃಷಿದಾರರಿಗೆ ಯಾವುದೇ ಕಡ್ಡಾಯ ಆದಾಯ ತೆರಿಗೆ ರಿಟರ್ನ್‌ಗಳ ಅಗತ್ಯವಿಲ್ಲ.
  • ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು ಮತ್ತು ಆಕರ್ಷಕ ಬಡ್ಡಿ ದರಗಳು.
Key Image

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ನಿವಾಸಿ ಭಾರತೀಯ
  • ವಯಸ್ಸು: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 70 ವರ್ಷಗಳು

ಸ್ವಯಂ ಉದ್ಯೋಗಿ

  • ರಾಷ್ಟ್ರೀಯತೆ: ನಿವಾಸಿ ಭಾರತೀಯ
  • ವಯಸ್ಸು: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 70 ವರ್ಷಗಳು
  • ವೃತ್ತಿಪರರು: ಡಾಕ್ಟರ್, ಚಾರ್ಟರ್ಡ್ ಅಕೌಂಟೆಂಟ್, ವಕೀಲ, ಸಲಹೆಗಾರ, ಆರ್ಕಿಟೆಕ್ಟ್, ಕಂಪನಿ ಸೆಕ್ರೆಟರಿ, ಎಂಜಿನಿಯರ್ ಇತ್ಯಾದಿ.
  • ವೃತ್ತಿಪರರಲ್ಲದವರು: ಗುತ್ತಿಗೆದಾರ, ಮರ್ಚೆಂಟ್, ಕಮಿಷನ್ ಏಜೆಂಟ್ ಇತ್ಯಾದಿ.
  • ಕಾಲಾವಧಿ: 30 ವರ್ಷಗಳವರೆಗೆ

ಬೇಕಾಗುವ ಡಾಕ್ಯುಮೆಂಟ್‌ಗಳು

KYC ಡಾಕ್ಯುಮೆಂಟ್‌ಗಳು 

  • ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 (ಪ್ಯಾನ್ ಕಾರ್ಡ್ ಇಲ್ಲದಿದ್ದರೆ)
  • ಪಾಸ್‌ಪೋರ್ಟ್ (ಮಾನ್ಯತಾ ಅವಧಿ ಮುಗಿದಿರಬಾರದು)
  • ಡ್ರೈವಿಂಗ್ ಲೈಸೆನ್ಸ್ (ಮಾನ್ಯತಾ ಅವಧಿ ಮುಗಿದಿರಬಾರದು)
  • ಚುನಾವಣೆ/ವೋಟರ್ ID
  • ಜಾಬ್ ಕಾರ್ಡ್ (NREGA)
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ಪತ್ರ
  • ಆಧಾರ್ ನಂಬರ್ (ಸ್ವಯಂಪ್ರೇರಿತ)

ಆದಾಯದ ಪುರಾವೆ

  • ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್ಸ್
  • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸ್ಯಾಲರಿ ಕ್ರೆಡಿಟ್‌ಗಳು)
  • ಇತ್ತೀಚಿನ ಫಾರ್ಮ್ -16 ಮತ್ತು IT ರಿಟರ್ನ್ಸ್
  • ಆದಾಯ ತೆರಿಗೆ ದಾಖಲೆ (ಕಳೆದ 2 ಮೌಲ್ಯಮಾಪನ ವರ್ಷಗಳು, CA ದೃಢೀಕರಿಸಿದ)
  • ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಅಕೌಂಟ್ ಸ್ಟೇಟ್ಮೆಂಟ್‌ಗಳು (CA ದೃಢೀಕರಿಸಿದ)
  • ಇತ್ತೀಚಿನ ಫಾರ್ಮ್ 26 AS

ಆಸ್ತಿ ಮತ್ತು ಇತರ ಡಾಕ್ಯುಮೆಂಟ್‌ಗಳು

  • ಕೃಷಿ ಭೂಮಿಯ ಟೈಟಲ್ ಡಾಕ್ಯುಮೆಂಟ್‌ಗಳ ಪ್ರತಿಗಳು (ಭೂ ಹಿಡುವಳಿ ಮತ್ತು ಬೆಳೆಗಳು)
  • ಟೈಟಲ್ ಡೀಡ್‌ಗಳು (ಮರುಮಾರಾಟದ ಸಂದರ್ಭಗಳಲ್ಲಿ ಹಿಂದಿನ ಚೈನ್ ಸೇರಿದಂತೆ)

ಆಗಾಗ್ಗೆ ಕೇಳುವ ಪ್ರಶ್ನೆಗಳು

ಗ್ರಾಮೀಣ ಹೌಸಿಂಗ್ ಫೈನಾನ್ಸ್ ಗ್ರಾಮೀಣ ಪ್ರದೇಶಗಳಲ್ಲಿನ ವ್ಯಕ್ತಿಗಳಿಗೆ ಲೋನ್‌ಗಳು ಮತ್ತು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ, ಮನೆಗಳನ್ನು ಖರೀದಿಸಲು, ನಿರ್ಮಿಸಲು ಅಥವಾ ಸುಧಾರಿಸಲು, ಉತ್ತಮ ಜೀವನ ಪರಿಸ್ಥಿತಿಗಳು ಮತ್ತು ಸಮುದಾಯ ಅಭಿವೃದ್ಧಿಯನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಗ್ರಾಮೀಣ ಹೋಮ್ ಲೋನ್‌ಗಾಗಿ, ನೀವು ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60, ಗುರುತಿನ ಮತ್ತು ನಿವಾಸದ ಪುರಾವೆ, ಆದಾಯ ಡಾಕ್ಯುಮೆಂಟ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮತ್ತು ಆಸ್ತಿ ಡಾಕ್ಯುಮೆಂಟ್‌ಗಳಂತಹ ಇತರ ಅವಶ್ಯಕತೆಗಳಂತಹ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

ಹೌದು, ರೈತರು ಹೌಸಿಂಗ್ ಲೋನ್‌ಗಳಿಗೆ ಅರ್ಹರಾಗಿರುತ್ತಾರೆ. ಅರ್ಹತೆಯು ಮಾಸಿಕ ಆದಾಯ, ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಇತರ ಹಣಕಾಸಿನ ಜವಾಬ್ದಾರಿಗಳಂತಹ ಅಂಶಗಳ ಆಧಾರದ ಮೇಲೆ ಇರುತ್ತದೆ.

ಗ್ರಾಮೀಣ ಹೌಸಿಂಗ್ ಸರ್ವೀಸ್ ಲೋನ್‌ಗಳು ಕಡಿಮೆ ಬಡ್ಡಿ ದರಗಳು, ದೀರ್ಘ ಮರುಪಾವತಿ ನಿಯಮಗಳು ಮತ್ತು ಕಡಿಮೆ ಡೌನ್ ಪೇಮೆಂಟ್‌ಗಳನ್ನು ಒದಗಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮಾಲೀಕತ್ವವನ್ನು ಹೆಚ್ಚು ಅಕ್ಸೆಸ್ ಮಾಡಬಹುದಾದ ಮತ್ತು ಕೈಗೆಟಕುವಂತೆ ಮಾಡುವ ಮೂಲಕ ಅವುಗಳು ಸಮುದಾಯ ಅಭಿವೃದ್ಧಿಯನ್ನು ಕೂಡ ಬೆಂಬಲಿಸುತ್ತವೆ.

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಗ್ರಾಮೀಣ ಹೌಸಿಂಗ್ ಲೋನ್‌ಗಳ ಕೆಲವು ಗಮನಾರ್ಹ ಫೀಚರ್‌ಗಳು ಇಲ್ಲಿವೆ:

  • ನಿಮ್ಮ ಮನೆಗೆ ಜಾಗ ವಿಸ್ತರಿಸಲು ಅಥವಾ ಸೇರಿಸಲು ನೀವು ಹಣವನ್ನು ಬಳಸಬಹುದು
  • ಕೃಷಿಕರಿಗೆ, ಹೋಮ್ ಲೋನ್ ಪಡೆಯಲು ಕೃಷಿ ಭೂಮಿಯ ಅಡಮಾನದ ಅಗತ್ಯವಿಲ್ಲ
  • ಕೃಷಿಕರು 20 ವರ್ಷಗಳ ದೀರ್ಘ ಅವಧಿಯನ್ನು ಪಡೆಯುತ್ತಾರೆ
  • ಕೃಷಿಕರು ಕಡ್ಡಾಯ ಆದಾಯ ತೆರಿಗೆ ರಿಟರ್ನ್‌ಗಳ ಅವಶ್ಯಕತೆಯನ್ನು ಹೊಂದಿಲ್ಲ
  • ನೀವು ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳನ್ನು ಪಡೆಯುತ್ತೀರಿ

ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಮೀಣ ಹೌಸಿಂಗ್ ಲೋನಿಗೆ ಅಪ್ಲೈ ಮಾಡಲು, ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'ಹೋಮ್ ಲೋನ್‌ಗಳು' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ, 'ಗ್ರಾಮೀಣ ಹೌಸಿಂಗ್ ಲೋನ್' ಆಯ್ಕೆಮಾಡಿ ಮತ್ತು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ'.

ಟಾಪ್-ಅಪ್ ಲೋನ್‌ಗಳ ಬಗ್ಗೆ ಇನ್ನಷ್ಟು

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಗ್ರಾಮೀಣ ಹೌಸಿಂಗ್ ಲೋನ್‌ಗಳ ಕೆಲವು ಗಮನಾರ್ಹ ಫೀಚರ್‌ಗಳು ಇಲ್ಲಿವೆ:

  • ನಿಮ್ಮ ಮನೆಗೆ ಜಾಗ ವಿಸ್ತರಿಸಲು ಅಥವಾ ಸೇರಿಸಲು ನೀವು ಹಣವನ್ನು ಬಳಸಬಹುದು

  • ಕೃಷಿಕರಿಗೆ, ಹೋಮ್ ಲೋನ್ ಪಡೆಯಲು ಕೃಷಿ ಭೂಮಿಯ ಅಡಮಾನದ ಅಗತ್ಯವಿಲ್ಲ

  • ಕೃಷಿಕರು 20 ವರ್ಷಗಳ ದೀರ್ಘ ಅವಧಿಯನ್ನು ಪಡೆಯುತ್ತಾರೆ

  • ಕೃಷಿಕರು ಕಡ್ಡಾಯ ಆದಾಯ ತೆರಿಗೆ ರಿಟರ್ನ್‌ಗಳ ಅವಶ್ಯಕತೆಯನ್ನು ಹೊಂದಿಲ್ಲ

  • ನೀವು ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳನ್ನು ಪಡೆಯುತ್ತೀರಿ

ಗ್ರಾಮೀಣ ಹೌಸಿಂಗ್ ಸರ್ವೀಸ್ ಲೋನ್‌ಗಳು ಕಡಿಮೆ ಬಡ್ಡಿ ದರಗಳು, ದೀರ್ಘ ಮರುಪಾವತಿ ನಿಯಮಗಳು ಮತ್ತು ಕಡಿಮೆ ಡೌನ್ ಪೇಮೆಂಟ್‌ಗಳನ್ನು ಒದಗಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮಾಲೀಕತ್ವವನ್ನು ಹೆಚ್ಚು ಅಕ್ಸೆಸ್ ಮಾಡಬಹುದಾದ ಮತ್ತು ಕೈಗೆಟಕುವಂತೆ ಮಾಡುವ ಮೂಲಕ ಅವುಗಳು ಸಮುದಾಯ ಅಭಿವೃದ್ಧಿಯನ್ನು ಕೂಡ ಬೆಂಬಲಿಸುತ್ತವೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಮೀಣ ಹೌಸಿಂಗ್ ಲೋನಿಗೆ ಅಪ್ಲೈ ಮಾಡಲು, ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'ಹೋಮ್ ಲೋನ್‌ಗಳು' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ, 'ಗ್ರಾಮೀಣ ಹೌಸಿಂಗ್ ಲೋನ್' ಆಯ್ಕೆಮಾಡಿ ಮತ್ತು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ'.

ಸುರಕ್ಷತೆ

ಲೋನ್ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿ ಮತ್ತು/ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಅಗತ್ಯವಿರುವ ಯಾವುದೇ ಇತರ ಅಡಮಾನ/ ಮಧ್ಯಂತರ ಭದ್ರತೆಯ ಮೇಲಿನ ಹಿತಾಸಕ್ತಿಯಾಗಿರುತ್ತದೆ.

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್‌ ಡಿ ಎಫ್‌ ಸಿ ಬ್ಯಾಂಕ್‌ನ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ.

ನಿಮ್ಮ ಲೋನ್‌ಗೆ ಸಂಬಂಧಿಸಿದ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಗ್ರಾಮೀಣ ಸಮುದಾಯಗಳಿಗೆ ಅಕ್ಸೆಸ್ ಮಾಡಬಹುದಾದ ಹೌಸಿಂಗ್ ಲೋನ್‌ಗಳು