HDFC ERGO Private car Insurance

ನೀವು ತಿಳಿಯಬೇಕಾದ ಎಲ್ಲವೂ

ಫೀಚರ್‌ಗಳು ಮತ್ತು ಲಾಭಗಳು

ಎಚ್‌ಡಿಎಫ್‌ಸಿ ಎರ್ಗೋ ಪ್ರೈವೇಟ್ ಕಾರ್ ಇನ್ಶೂರೆನ್ಸ್ ಪ್ಯಾಕೇಜ್ ಪಾಲಿಸಿಯೊಂದಿಗೆ ನಿಮ್ಮ ಅಮೂಲ್ಯ ವಾಹನಗಳನ್ನು ಸುರಕ್ಷಿತಗೊಳಿಸಿ. ನೀವು ಅನೇಕ ರಿಯಾಯಿತಿಗಳು ಮತ್ತು ನಗದುರಹಿತ ಕ್ಲೈಮ್‌ಗಳನ್ನು ಪಡೆಯಬಹುದು. ಪಾಲಿಸಿಯ ಕೆಲವು ಫೀಚರ್‌ಗಳು ಇಲ್ಲಿವೆ:

  • ನಗದುರಹಿತ ಕ್ಲೈಮ್ ಸರ್ವಿಸ್: ಭಾರತದಾದ್ಯಂತ 7,700+ ಗ್ಯಾರೇಜ್‌ಗಳ ಅಧಿಕೃತ ನೆಟ್ವರ್ಕ್‌ನಲ್ಲಿ ನಗದುರಹಿತ ಕ್ಲೈಮ್ ಸರ್ವಿಸ್.

  • ರಿಯಾಯಿತಿಗಳು: ಎಚ್‌ಡಿಎಫ್‌ಸಿ ಎರ್ಗೋ ಪ್ರೈವೇಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀಡಲಾಗುವ ರಿಯಾಯಿತಿಗಳ ಶ್ರೇಣಿಯಿಂದ, ಅಂದರೆ ಆಟೋಮೊಬೈಲ್ ಅಸೋಸಿಯೇಷನ್ ರಿಯಾಯಿತಿ ಮತ್ತು ವಯಸ್ಸು ಮತ್ತು ವೃತ್ತಿಯ ಆಧಾರದ ಮೇಲೆ ರಿಯಾಯಿತಿಗಳಿಂದ ಪ್ರಯೋಜನ ಪಡೆಯಿರಿ.

  • ಆನ್ಲೈನ್ ಅನುಕೂಲತೆ: ಆನ್ಲೈನಿನಲ್ಲಿ ಪಾಲಿಸಿಯನ್ನು ಖರೀದಿಸುವ ಮತ್ತು ನವೀಕರಿಸುವ ಗರಿಷ್ಠ ಪ್ರಯೋಜನವನ್ನು ಪಡೆಯಿರಿ.

ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ಥರ್ಡ್ ಪಾರ್ಟಿ ಹಾನಿಗಳು ವೈಯಕ್ತಿಕ ಅಪಘಾತಗಳು, ಥರ್ಡ್ ಪಾರ್ಟಿ ಗಾಯಗಳು ಮತ್ತು ಆಸ್ತಿ ಹಾನಿಗಳನ್ನು ಕವರ್ ಮಾಡುತ್ತದೆ
ಸ್ವಂತ ಹಾನಿಯ ಕವರ್ ಅಪಘಾತಗಳು, ಬೆಂಕಿ ಮತ್ತು ಸ್ಫೋಟ, ಕಳ್ಳತನ ಮತ್ತು ವಿಕೋಪಗಳನ್ನು ಕವರ್ ಮಾಡುತ್ತದೆ
ನೋ ಕ್ಲೈಮ್ ಬೋನಸ್ ಗರಿಷ್ಠ 50%
ಕಾರ್ ಇನ್ಶೂರೆನ್ಸ್ ಪ್ರೀಮಿಯಂ ₹2,094 ರಿಂದ ಆರಂಭ*
ವೈಯಕ್ತಿಕ ಅಪಘಾತ ಕವರ್ ₹15 ಲಕ್ಷಗಳವರೆಗೆ~*
ನಗದುರಹಿತ ಗ್ಯಾರೇಜ್‌ಗಳು ಭಾರತದಾದ್ಯಂತ 7700+ ˇ
ಆ್ಯಡ್-ಆನ್ ಕವರ್‌ಗಳು 8+ ಆ್ಯಡ್-ಆನ್ ಕವರ್‌ಗಳು

ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು

ಕವರೇಜ್ ಹೆಚ್ಚು ಸಮಗ್ರವಾದಷ್ಟು, ಹೆಚ್ಚು ಕ್ಲೈಮ್ ಅನ್ನು ನೀವು ಪಡೆಯಬಹುದು. ಎಚ್‌ಡಿಎಫ್‌ಸಿ ಎರ್ಗೋ ತನ್ನ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಆಯ್ದ ಶ್ರೇಣಿಯ ಅನೇಕ ಆ್ಯಡ್-ಆನ್‌ಗಳನ್ನು ಒದಗಿಸುತ್ತದೆ. ಅವುಗಳನ್ನು ಇಲ್ಲಿ ನೋಡಿ –

1.ಜೀರೋ ಡಿಪ್ರಿಸಿಯೇಷನ್ ಕವರ್

2.ನೋ ಕ್ಲೈಮ್ ಬೋನಸ್ ರಕ್ಷಣೆ

3.ತುರ್ತು ಸಹಾಯ ಕವರ್

4.ಉಪಭೋಗ್ಯ ವಸ್ತುಗಳ ವೆಚ್ಚ

5.ಟೈರ್ ಸೆಕ್ಯೂರ್ ಕವರ್

6.ರಿಟರ್ನ್ ಟು ಇನ್ವಾಯ್ಸ್‌

7.ಎಂಜಿನ್ ಮತ್ತು ಗೇರ್ ಬಾಕ್ಸ್ ರಕ್ಷಣೆ

8.ಡೌನ್‌ಟೈಮ್ ಪ್ರೊಟೆಕ್ಷನ್

9.ವೈಯಕ್ತಿಕ ವಸ್ತುಗಳ ನಷ್ಟ

10.ನೀವು ಡ್ರೈವ್ ಮಾಡಿದಂತೆ ಪಾವತಿ ಕವರ್

 

Card Reward and Redemption

ಪ್ರೈವೇಟ್ ಕಾರ್ ಇನ್ಶೂರೆನ್ಸ್ ಪಾಲಿಸಿ ಆಫರ್

ಪ್ಯಾಕೇಜ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ನೀಡುವ ಕವರೇಜ್‌ಗೆ ಸಂಬಂಧಿಸಿದ ವಿವರಗಳು ಇಲ್ಲಿವೆ:

ಈ ಕೆಳಗಿನ ಯಾವುದೇ ಘಟನೆಗಳಿಂದ ನಿಮ್ಮ ವಾಹನಕ್ಕೆ ಉಂಟಾದ ನಷ್ಟ ಅಥವಾ ಹಾನಿಯನ್ನು ಪಾಲಿಸಿ ಕವರ್ ಮಾಡುತ್ತದೆ:

  • ಬಾಹ್ಯ ಕಾರಣಗಳಿಂದ ಅಪಘಾತ

  • ದರೋಡೆ, ಮನೆಗೆ ಕನ್ನ ಅಥವಾ ಕಳ್ಳತನ

  • ಬೆಂಕಿ, ಸ್ಫೋಟ, ಸೆಲ್ಫ್ ಇಗ್ನಿಶನ್, ಮಿಂಚು

  • ಭಯೋತ್ಪಾದನೆ, ಗಲಭೆಗಳು, ಮುಷ್ಕರಗಳು, ದುರುದ್ದೇಶಪೂರಿತ ಕಾರ್ಯಗಳು

  • ರಸ್ತೆ, ರೈಲು, ಒಳನಾಡಿನ ಜಲಮಾರ್ಗಗಳು, ವಾಯು ಅಥವಾ ಲಿಫ್ಟ್ ಮೂಲಕ ಸಾಗಣೆ

  • ಭೂಕಂಪ, ಪ್ರವಾಹ, ಬಿರುಗಾಳಿ, ಭೂಕುಸಿತ ಅಥವಾ ಬಂಡೆ ಕುಸಿತ

ಥರ್ಡ್ ಪಾರ್ಟಿಗಳಿಗೆ ಹೊಣೆಗಾರಿಕೆ:

ನಿಮ್ಮ ವಾಹನವನ್ನು ಒಳಗೊಂಡಿರುವ ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿಗೆ ಉಂಟಾದ ಗಾಯ ಅಥವಾ ಮರಣ ಮತ್ತು ಥರ್ಡ್ ಪಾರ್ಟಿಯ ಆಸ್ತಿ ಹಾನಿಯಿಂದ ಉಂಟಾಗುವ ಯಾವುದೇ ಕಾನೂನು ಹೊಣೆಗಾರಿಕೆಯನ್ನು ಕೂಡ ಪಾಲಿಸಿ ಕವರ್ ಮಾಡುತ್ತದೆ.

ಮಾಲೀಕ-ಚಾಲಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್:

ಅಪಘಾತದಿಂದ ಮರಣ ಮತ್ತು ಶಾಶ್ವತ ಒಟ್ಟು ಅಂಗವೈಕಲ್ಯದ ಸಂದರ್ಭದಲ್ಲಿ, ಮಾಲೀಕ-ಚಾಲಕರಿಗೆ ₹ 2 ಲಕ್ಷದ ಮೊತ್ತಕ್ಕೆ ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಕೂಡ ಪಾಲಿಸಿ ಒದಗಿಸುತ್ತದೆ.

ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ:

ನಿಮ್ಮ ವಾಹನದ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವು, ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆಯಿಂದ ಪ್ರತಿ ವರ್ಷದ ಸವಕಳಿಯನ್ನು ಕಳೆದು ಸಿಗುವ ಮೊತ್ತವಾಗಿದ್ದು IDV ಒಟ್ಟು ನಷ್ಟ / ರಚನಾತ್ಮಕ ಒಟ್ಟು ನಷ್ಟದ ಕ್ಲೈಮ್ ಸಂದರ್ಭದಲ್ಲಿ ಪಾವತಿಸಬೇಕಾದ ಗರಿಷ್ಠ ಮೊತ್ತವಾಗಿರುತ್ತದೆ.

ಪ್ರೀಮಿಯಂ:

ಪ್ಯಾಕೇಜ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗೆ ಪ್ರೀಮಿಯಂ ಈ ಕೆಳಗಿನವುಗಳನ್ನು ಅವಲಂಬಿಸಿರುತ್ತದೆ.

  • ವಿಮಾ ಮೊತ್ತ/ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV)

  • ವಾಹನದ ವಯಸ್ಸು

  • ನೋಂದಣಿಯ ಲೊಕೇಶನ್

  • ಫ್ಯೂಯಲ್ ಪ್ರಕಾರ (ಪೆಟ್ರೋಲ್/ಡೀಸೆಲ್)

ಈ ಕೆಳಗೆ ಪಟ್ಟಿ ಮಾಡಲಾದಂತೆ ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ನೀವು ವಿವಿಧ ಕವರ್‌ಗಳನ್ನು ಆಯ್ಕೆ ಮಾಡಬಹುದು:

  • ಎಲೆಕ್ಟ್ರಿಕಲ್/ನಾನ್-ಎಲೆಕ್ಟ್ರಿಕಲ್ ಐಟಂಗಳನ್ನು ಪ್ರತ್ಯೇಕವಾಗಿ ಇನ್ಶೂರ್ ಮಾಡಬಹುದು

  • ಹೆಸರಿಸಲಾದ/ಹೆಸರಿಸದ ಪ್ರಯಾಣಿಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

  • ಪಾವತಿಸಿದ ಚಾಲಕರು/ಉದ್ಯೋಗಿಗಳಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

  • ಇನ್ಶೂರೆನ್ಸ್ ಮಾಡಿದ ವಾಹನದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾವತಿಸಿದ ಚಾಲಕರ ಕಾನೂನು ಹೊಣೆಗಾರಿಕೆ

    ಕವರೇಜ್ ವಿವರಗಳನ್ನು ನೋಡಿ

Card Reward and Redemption

ಹೊರಗಿಡುವಿಕೆಗಳು

ನೀವು ಗಮನಿಸಬೇಕಾದ ಪಾಲಿಸಿಯಲ್ಲಿನ ಹೊರಗಿಡುವಿಕೆಗಳು ಈ ಕೆಳಗಿನಂತಿವೆ**.

  • ಸಾಮಾನ್ಯ ವಯಸ್ಸು, ಸವೆತ ಮತ್ತು ದುರಸ್ತಿ

  • ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ವ್ಯಕ್ತಿಯಿಂದ ಆದ ಹಾನಿ

  • ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್, ವೈಫಲ್ಯ

  • ಸಾರಾಯಿ/ಮದ್ಯ/ಮಾದಕ ವಸ್ತುಗಳ ಪ್ರಭಾವದಲ್ಲಿ ವಾಹನ ಚಾಲನೆ ಮಾಡುವ ವ್ಯಕ್ತಿಯಿಂದ ಆದ ಹಾನಿ

  • ಸವಕಳಿ, ಯಾವುದೇ ಪರಿಣಾಮಕಾರಿ ನಷ್ಟ

  • ಯುದ್ಧ / ದಂಗೆ / ಪರಮಾಣು ಅಪಾಯಗಳಿಂದ ಉಂಟಾಗುವ ನಷ್ಟ / ಹಾನಿ

  • ಅಪಘಾತದಲ್ಲಿ ಹಾನಿಗೊಳಗಾದ ಹೊರತು ಟೈರ್‌ಗಳು/ಟ್ಯೂಬ್‌ಗಳಿಗೆ ಹಾನಿ

  • ಭಾರತದ ಹೊರಗೆ ನಷ್ಟ/ಹಾನಿ

ದಯವಿಟ್ಟು ಗಮನಿಸಿ: * ಈ ವಿಷಯವು ವಿವರಣೆಯ ಉದ್ದೇಶಕ್ಕಷ್ಟೇ ಆಗಿದೆ. ನಿಜವಾದ ಕವರೇಜ್ ನೀಡಲಾದ ಪಾಲಿಸಿಯ ಭಾಷೆಗೆ ಒಳಪಟ್ಟಿರುತ್ತದೆ.
** ಇವುಗಳು ವಿವರಣಾತ್ಮಕ ಹೊರಗಿಡುವಿಕೆಗಳು. ವಿವರವಾದ ಪಟ್ಟಿಗಾಗಿ, ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ.

ಹಕ್ಕು ನಿರಾಕರಣೆ: ಎಚ್ ಡಿ ಎಫ್ ಸಿ ಬ್ಯಾಂಕ್ ಎಚ್‌ಡಿಎಫ್‌ಸಿ ಎರ್ಗೋದ ಕಾರ್ಪೊರೇಟ್ ಏಜೆಂಟ್ ಆಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇನ್ಶೂರೆನ್ಸ್ ಒಪ್ಪಂದವು ಎಚ್‌ಡಿಎಫ್‌ಸಿ ಎರ್ಗೋ ಮತ್ತು ಇನ್ಶೂರೆನ್ಸ್ ಮಾಡಿಸಿದವರ ನಡುವೆ ಮಾತ್ರ ಇರುತ್ತದೆ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಹೇಳಲಾದ ಒಪ್ಪಂದದ ಪಾರ್ಟಿ ಆಗಿರುವುದಿಲ್ಲ. ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಗ್ರಾಹಕರ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಇನ್ಶೂರೆನ್ಸ್ ವಿಜ್ಞಾಪನೆಯ ವಿಷಯವಾಗಿದೆ. ಕವರೇಜ್, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ನಡೆಸುವ ಮೊದಲು ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.

ಪ್ರಮಾಣೀಕೃತ ಕಾರ್ಪೊರೇಟ್ ಏಜೆಂಟ್‌ಗಳ ಲೈಸೆನ್ಸ್ ನಂಬರ್ CA00100

Card Reward and Redemption

ಕ್ಲೈಮ್ ಪ್ರಕ್ರಿಯೆ

ಕ್ಲೈಮ್ ಆರಂಭಿಸಿ ಅಥವಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಕ್ಲೈಮ್ ಗೆ ಭೇಟಿ ನೀಡಿ ಕ್ಲೈಮ್ ಆರಂಭಿಸಲು/ಟ್ರ್ಯಾಕ್ ಮಾಡಲು.

ಅಥವಾ

ಎಚ್ ಡಿ ಎಫ್ ಸಿ ಎರ್ಗೋದ WhatsApp ನಂಬರ್ 8169500500 ಸಂಪರ್ಕಿಸಿ

ಅಥವಾ

ಎಚ್ ಡಿ ಎಫ್ ಸಿ ಎರ್ಗೋದ ಟೋಲ್ ಫ್ರೀ ಸಹಾಯವಾಣಿ ನಂಬರ್ 022 6234 6234 / 0120 6234 6234 ಗೆ ಕರೆ ಮಾಡಿ ಮತ್ತು ನಿಮ್ಮ ಕ್ಲೈಮ್ ನೋಂದಣಿ ಮಾಡಿ.

ಹಕ್ಕುತ್ಯಾಗ:
ಎಚ್ ಡಿ ಎಫ್ ಸಿ ಬ್ಯಾಂಕ್ ಎಚ್‌ಡಿಎಫ್‌ಸಿ ಎರ್ಗೋದ ಕಾರ್ಪೊರೇಟ್ ಏಜೆಂಟ್ ಆಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇನ್ಶೂರೆನ್ಸ್ ಒಪ್ಪಂದವು ಎಚ್‌ಡಿಎಫ್‌ಸಿ ಎರ್ಗೋ ಮತ್ತು ಇನ್ಶೂರೆನ್ಸ್ ಮಾಡಿಸಿದವರ ನಡುವೆ ಮಾತ್ರ ಇರುತ್ತದೆ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಹೇಳಲಾದ ಅಗ್ರೀಮೆಂಟ್ ಪಾರ್ಟಿ ಆಗಿರುವುದಿಲ್ಲ. ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಗ್ರಾಹಕರ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಇನ್ಶೂರೆನ್ಸ್ ವಿಜ್ಞಾಪನೆಯ ವಿಷಯವಾಗಿದೆ. ಕವರೇಜ್, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ನಡೆಸುವ ಮೊದಲು ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.

ಪ್ರಮಾಣೀಕೃತ ಕಾರ್ಪೊರೇಟ್ ಏಜೆಂಟ್‌ಗಳ ಲೈಸೆನ್ಸ್ ನಂಬರ್ CA0010

Card Reward and Redemption

ಈಗಾಗಲೇ ಪ್ರೈವೇಟ್ ಕಾರ್ ಇನ್ಶೂರೆನ್ಸ್ ಹೊಂದಿದ್ದೀರಾ?

  • ಭಾರತದಾದ್ಯಂತ 7,700+ ಕ್ಕೂ ಹೆಚ್ಚು ಅಧಿಕೃತ ಗ್ಯಾರೇಜ್‌ಗಳ ನೆಟ್ವರ್ಕ್‌ನಿಂದ ನೀವು ನಗದುರಹಿತ ಕ್ಲೈಮ್ ಸರ್ವಿಸ್ ಅನ್ನು ಪಡೆಯಬಹುದು.

  • ನೀವು ನೋ ಕ್ಲೈಮ್ ಬೋನಸ್, ಆಟೋಮೊಬೈಲ್ ಅಸೋಸಿಯೇಷನ್ ಸದಸ್ಯರಾಗಿ ರಿಯಾಯಿತಿ ಮತ್ತು ನಿಮ್ಮ ವಯಸ್ಸು ಮತ್ತು ವೃತ್ತಿಯ ಆಧಾರದ ಮೇಲೆ ರಿಯಾಯಿತಿಯನ್ನು ಪಡೆಯಬಹುದು.

  • ನಮ್ಮ ಮೀಸಲಾದ ಗ್ರಾಹಕ ಸಹಾಯ ತಂಡದಿಂದ ನೀವು ಸಮಗ್ರ ಬೆಂಬಲವನ್ನು ಪಡೆಯಬಹುದು.

ನೀವು ಇವುಗಳಿಂದ ಕೂಡ ಪ್ರಯೋಜನ ಪಡೆಯಬಹುದು:

Card Reward and Redemption

ಆಗಾಗ್ಗೆ ಕೇಳುವ ಪ್ರಶ್ನೆಗಳು

ವಾಹನದ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ಅನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್‌ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ.

ಇನ್ಶೂರೆನ್ಸ್/ರಿನ್ಯೂವಲ್‌ನ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ಬ್ರ್ಯಾಂಡ್ ಮತ್ತು ಮಾಡೆಲ್‌ನ ವಾಹನದ ತಯಾರಕರ ಪಟ್ಟಿ ಮಾಡಲಾದ ಮಾರಾಟ ಬೆಲೆಯ ಆಧಾರದಲ್ಲಿ ವಾಹನದ IDV ಯನ್ನು ನಿಗದಿಪಡಿಸಬೇಕು ಮತ್ತು ಸವಕಳಿಯನ್ನು ಸರಿ ಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್‌ನ ಪ್ರಕಾರ). ಸೈಡ್ ಕಾರ್ (ಗಳು) ಮತ್ತು/ಅಥವಾ ಅಕ್ಸೆಸರಿಗಳನ್ನು ವಾಹನಕ್ಕೆ ಫಿಟ್ ಮಾಡಲಾಗಿದ್ದರೆ ಮತ್ತು ವಾಹನದ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆಯಲ್ಲಿ ಸೇರಿಸಲಾಗಿಲ್ಲ ಎಂದಾದರೆ, ಅದನ್ನೂ ಸಹ ಇದೇ ರೀತಿಯಲ್ಲಿ ನಿಗದಿಪಡಿಸಬೇಕು.
ವಾಹನದ ವಯಸ್ಸು IDV ನಿಗದಿಪಡಿಸಲು ಸವಕಳಿಯ %
6 ತಿಂಗಳು 5% ಮೀರದ
6 ತಿಂಗಳನ್ನು ಮೀರಿದ ಆದರೆ 1 ವರ್ಷ ಮೀರದ 15%
1 ವರ್ಷವನ್ನು ಮೀರಿದ ಆದರೆ 2 ವರ್ಷಗಳನ್ನು ಮೀರದ 20%
2 ವರ್ಷಗಳನ್ನು ಮೀರಿದ ಆದರೆ 3 ವರ್ಷಗಳನ್ನು ಮೀರದ 30%
3 ವರ್ಷಗಳನ್ನು ಮೀರಿದ ಆದರೆ 4 ವರ್ಷಗಳನ್ನು ಮೀರದ 40%
4 ವರ್ಷಗಳನ್ನು ಮೀರಿದ ಆದರೆ 5 ವರ್ಷಗಳನ್ನು ಮೀರದ 50%

ನೀವು ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಸೆಲ್ಫ್ ಇನ್‌ಸ್ಪೆಕ್ಷನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬೇಕು. ಎಚ್‌ಡಿಎಫ್‌ಸಿ ಎರ್ಗೋ ಡಾಕ್ಯುಮೆಂಟ್‌ಗಳನ್ನು ಅನುಮೋದಿಸಿದ ನಂತರ, ನಿಮಗೆ ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಆ ಲಿಂಕ್‌ ಮೂಲಕ ಪಾವತಿ ಮಾಡಬಹುದು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಪಡೆಯುತ್ತೀರಿ.

ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಹೆಸರಿನಿಂದ ಹೊಸ ಮಾಲೀಕರಿಗೆ ವರ್ಗಾಯಿಸಬೇಕು. ಇದಕ್ಕಾಗಿ ಮಾರಾಟ ಪತ್ರ/ ಫಾರ್ಮ್‌ 29/30/ ಮಾರಾಟಗಾರರ NOC / NCB ಮರುಪಡೆಯುವಿಕೆ ಮೊತ್ತದಂತಹ ಇತರೆ ಡಾಕ್ಯುಮೆಂಟ್‌ಗಳ ಅಗತ್ಯವಿದೆ. ಆದಾಗ್ಯೂ, ನಿಮ್ಮ ಪಾಲಿಸಿಯಲ್ಲಿ ಬಾಕಿ ಉಳಿದ ನೋ ಕ್ಲೈಮ್ ಬೋನಸ್ ಅನ್ನು ನಿಮ್ಮ ಹೆಸರಿನಲ್ಲೇ ಉಳಿಸಿಕೊಂಡು, ಅದನ್ನು ನಿಮ್ಮ ಹೊಸ ವಾಹನಕ್ಕೆ ವರ್ಗಾಯಿಸಬಹುದು. ಮಾರಾಟದ ಸಮಯದಲ್ಲಿ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ರದ್ದುಗೊಳಿಸುವ ಆಯ್ಕೆಯೂ ನಿಮಗಿದೆ.

ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಪ್ರೀಮಿಯಂ ಅನ್ನು ಪಾವತಿಸಬಹುದು. ಪ್ರೀಮಿಯಂ ಅನ್ನು ಲಂಪ್‌ಸಮ್‌ನಲ್ಲಿ ಪಾವತಿಸಬೇಕು. ಕಂತು ಯೋಜನೆ ಲಭ್ಯವಿಲ್ಲ.

ಓವರ್‌ನೈಟ್ ರಿಪೇರಿ ಸೌಲಭ್ಯದೊಂದಿಗೆ, ಸಣ್ಣಪುಟ್ಟ ಹಾನಿಗಳನ್ನು ಒಂದೇ ರಾತ್ರಿಯಲ್ಲಿ ರಿಪೇರಿ ಮಾಡಲಾಗುತ್ತದೆ. ಈ ಸೌಲಭ್ಯವು ಖಾಸಗಿ ಕಾರ್‌ಗಳು ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಲಭ್ಯವಿದೆ. ಓವರ್‌ನೈಟ್ ರಿಪೇರಿ ಸೌಲಭ್ಯದ ಪ್ರಕ್ರಿಯೆಯನ್ನು ಕೆಳಗೆ ವಿವರಿಸಲಾಗಿದೆ

  1. ಕ್ಲೈಮ್ ಅನ್ನು ಕಾಲ್ ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋ ಮೊಬೈಲ್ ಅಪ್ಲಿಕೇಶನ್ (IPO) ಮೂಲಕ ತಿಳಿಸಬೇಕು.
  2. ನಮ್ಮ ತಂಡವು ಗ್ರಾಹಕರನ್ನು ಸಂಪರ್ಕಿಸಿ ಹಾನಿಗೊಳಗಾದ ವಾಹನದ ಫೋಟೋಗಳನ್ನು ಕಳಿಸುವಂತೆ ಕೇಳುತ್ತದೆ.
  3. ಈ ಸರ್ವಿಸ್‌ನ ಅಡಿಯಲ್ಲಿ 3 ಪ್ಯಾನೆಲ್‌‌ಗಳಿಗೆ ಸೀಮಿತವಾದ ಹಾನಿಗಳನ್ನು ಅಂಗೀಕರಿಸಲಾಗುವುದು.
  4. ವರ್ಕ್‌ಶಾಪ್‌ ಅಪಾಯಿಂಟ್ಮೆಂಟ್ ಮತ್ತು ಪಿಕಪ್‌ಗಳು ವಾಹನದ ಭಾಗ ಮತ್ತು ಸ್ಲಾಟ್ ಲಭ್ಯತೆಗೆ ಒಳಪಟ್ಟಿರುವುದರಿಂದ, ಮಾಹಿತಿ ನೀಡಿದ ತಕ್ಷಣವೇ ವಾಹನವನ್ನು ರಿಪೇರಿ ಮಾಡಲಾಗುವುದಿಲ್ಲ.
  5. ಗ್ರಾಹಕರು ಗ್ಯಾರೇಜ್‌ಗೆ ಬಂದು, ವಾಪಸ್ ಹೋಗಲು ಬೇಕಾಗುವ ಸಮಯ ಉಳಿಯುತ್ತದೆ.
  6. ಸದ್ಯಕ್ಕೆ ಈ ಸರ್ವಿಸ್ 13 ಆಯ್ದ ನಗರಗಳಲ್ಲಿ, ಅಂದರೆ ದೆಹಲಿ, ಮುಂಬೈ, ಪುಣೆ, ನಾಗ್ಪುರ, ಸೂರತ್, ವಡೋದರ, ಅಹಮದಾಬಾದ್, ಗುರ್ಗಾಂವ್, ಜೈಪುರ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ.

ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಅನುಮೋದನೆ ಪತ್ರ ಸಲ್ಲಿಸುವ ಮೂಲಕ ಖರೀದಿಸುವವರ ಹೆಸರಿಗೆ ವರ್ಗಾಯಿಸಬಹುದು. ಈಗಿನ ಪಾಲಿಸಿಯ ಅಡಿಯಲ್ಲಿ ಅನುಮೋದನೆ ರವಾನಿಸಲು ಮಾರಾಟ ಪತ್ರ/ಫಾರ್ಮ್ 29/30/ಮಾರಾಟಗಾರರ NOC/NCB ರಿಕವರಿ, ಮುಂತಾದ ಪೂರಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.

ಅಥವಾ

ನೀವು ನಿಮ್ಮ ಸದ್ಯದ ಪಾಲಿಸಿಯನ್ನು ರದ್ದುಗೊಳಿಸಬಹುದು. ಅದಕ್ಕಾಗಿ ಮಾರಾಟ ಪತ್ರ/ಫಾರ್ಮ್ 29/30 ನಂತಹ ಪೂರಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.

ಯಾವುದೇ ಪೇಪರ್‌ವರ್ಕ್ ಮತ್ತು ಭೌತಿಕ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ನೀವು ತಕ್ಷಣವೇ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.

ಹೌದು, ನಿಮ್ಮ ವಾಹನದ ನೋಂದಣಿಗಾಗಿ ನೀವು ಮಾನ್ಯ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. TP (ಥರ್ಡ್ ಪಾರ್ಟಿ) ಕಾರ್ ಇನ್ಶೂರೆನ್ಸ್ ಪಾಲಿಸಿಯೂ ಕೂಡ RTO ನಲ್ಲಿ ಸಹಾಯ ಮಾಡುತ್ತದೆ.

ಕ್ಲೈಮ್-ಮುಕ್ತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿಯ ಪ್ರೀಮಿಯಂನಲ್ಲಿ ಇದು ರಿಯಾಯಿತಿಯಾಗಿದೆ. ಇದು ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಪ್ರೋತ್ಸಾಹಕವಾಗಿದೆ.

ಎಲ್ಲಾ ರೀತಿಯ ವಾಹನಗಳು ಸ್ವಂತ ಹಾನಿ ಪ್ರೀಮಿಯಂ ಮೇಲೆ % ರಿಯಾಯಿತಿ
ಕಳೆದ ಪೂರ್ಣ ವರ್ಷ ಇನ್ಶೂರೆನ್ಸ್‌‌‌‌‌ನಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲ ಅಥವಾ ಬಾಕಿ ಇಲ್ಲ 20%
ಕಳೆದ 2 ಸತತ ವರ್ಷಗಳ ಇನ್ಶೂರೆನ್ಸ್‌ನಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲ ಅಥವಾ ಬಾಕಿ ಇಲ್ಲ 25%
ಕಳೆದ 3 ಸತತ ವರ್ಷಗಳ ಇನ್ಶೂರೆನ್ಸ್‌ನಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲ ಅಥವಾ ಬಾಕಿ ಇಲ್ಲ 35%
ಕಳೆದ 4 ಸತತ ವರ್ಷಗಳ ಇನ್ಶೂರೆನ್ಸ್‌ನಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲ ಅಥವಾ ಬಾಕಿ ಇಲ್ಲ 45%
ಕಳೆದ 5 ಸತತ ವರ್ಷಗಳ ಇನ್ಶೂರೆನ್ಸ್‌ನಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲ ಅಥವಾ ಬಾಕಿ ಇಲ್ಲ 50%

ತುರ್ತು ಸಹಾಯವು ಒಂದು ಆ್ಯಡ್-ಆನ್ ಕವರ್ ಆಗಿದ್ದು, ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಇದನ್ನು ಖರೀದಿಸಬೇಕು. ಇದು ಪಾಲಿಸಿ ಅವಧಿಯಲ್ಲಿ ಬಳಸಿಕೊಳ್ಳಬಹುದಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ: ವಾಹನ ರಿಪೇರಿ, ಟೈರ್ ಬದಲಾವಣೆ, ಟೋಯಿಂಗ್ ಅಥವಾ ಫ್ಯೂಯಲ್ ಬದಲಾವಣೆ ಮಾಡಬೇಕಾದಾಗ ಸಹಾಯ. ಈ ಪ್ರಯೋಜನಗಳನ್ನು ಪಡೆಯಲು ಗ್ರಾಹಕರು ಪಾಲಿಸಿಯಲ್ಲಿ ನಮೂದಿಸಿದ ಗ್ರಾಹಕ ಸಹಾಯವಾಣಿ ನಂಬರ್‌‌‌ಗೆ ಕರೆ ಮಾಡಬೇಕು.

ನೀವು ನಮ್ಮೊಂದಿಗೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ನಂಬರ್-18002700700 ಗೆ ಕರೆ ಮಾಡಬಹುದು. ನಮ್ಮ ಕಾಲ್ ಸೆಂಟರ್ ಪ್ರತಿನಿಧಿಗಳು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿ ವಿವರಗಳನ್ನು ಮಾರ್ಪಾಡು ಮಾಡಲು ಅಥವಾ ಅಪ್ಡೇಟ್ ಮಾಡಲು ನಿಮಗೆ ಸಹಾಯ ಮಾಡುತ್ತಾರೆ.

ಮ್ಯೂಸಿಕ್ ಸಿಸ್ಟಮ್, AC, ಲೈಟ್‌, ಇತ್ಯಾದಿಗಳು ಕಾರ್‌ನ ಎಲೆಕ್ಟ್ರಿಕಲ್ ಅಕ್ಸೆಸರಿಗಳಾಗಿವೆ. ಕಾರ್‌ನ ಆಂತರಿಕ ಭಾಗಗಳಾದ ಸೀಟ್ ಕವರ್‌ ಮತ್ತು ಅಲಾಯ್ ವೀಲ್‌ ಇತ್ಯಾದಿಗಳು ನಾನ್-ಎಲೆಕ್ಟ್ರಿಕ್ ಅಕ್ಸೆಸರಿಗಳಾಗಿವೆ. ಆರಂಭಿಕ ಮಾರುಕಟ್ಟೆ ಮೌಲ್ಯದ ಪ್ರಕಾರ ಅವುಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ ಮತ್ತು ಸವಕಳಿ ದರವನ್ನು ಅನ್ವಯಿಸಲಾಗುತ್ತದೆ.

ಹೌದು, ಮೋಟಾರ್ ವಾಹನ ಕಾಯ್ದೆಯು ರಸ್ತೆಯಲ್ಲಿ ಚಲಿಸುವ ಪ್ರತಿಯೊಂದು ವಾಹನವು ಕನಿಷ್ಠ ಹೊಣೆಗಾರಿಕೆ ಮಾತ್ರದ ಪಾಲಿಸಿಯೊಂದಿಗೆ ಇನ್ಶೂರ್ ಆಗಿರಬೇಕು ಎಂದು ಹೇಳುತ್ತದೆ.

2019 ರ ಮೋಟಾರ್‌ ವಾಹನಗಳ ಕಾಯ್ದೆಯ ಪ್ರಕಾರ, ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡಿದವರಿಗೆ ಮೊದಲನೆ ಅಪರಾಧಕ್ಕೆ ₹2,000 ದಂಡ ಮತ್ತು/ಅಥವಾ 3 ತಿಂಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ. ನಂತರದ ಅಪರಾಧಕ್ಕೆ ₹4,000 ದಂಡ ಮತ್ತು/ಅಥವಾ 3 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.

ಇನ್ಶೂರೆನ್ಸ್ ಟ್ರಾನ್ಸ್‌ಫರ್ ಮಾಡಲು ಪೂರಕ ಡಾಕ್ಯುಮೆಂಟ್‌ಗಳೊಂದಿಗೆ ವಿಮಾದಾತರನ್ನು ಸಂಪರ್ಕಿಸಬೇಕು. ಪೂರಕ ಡಾಕ್ಯುಮೆಂಟ್‌ಗಳೆಂದರೆ ಮಾರಾಟ ಪತ್ರ/ಮಾರಾಟಗಾರರ ಫಾರ್ಮ್ 29/30/NOC, ಹಳೆಯ RC ಕಾಪಿ, ವರ್ಗಾವಣೆಯಾದ RC ಕಾಪಿ ಮತ್ತು NCB ರಿಕವರಿ ಮೊತ್ತ, ಇತ್ಯಾದಿ.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, 1 ನೇ ಸೆಪ್ಟೆಂಬರ್, 2018 ರಿಂದ ಅನ್ವಯವಾಗುವಂತೆ, ಎಲ್ಲಾ ಹೊಸ ಕಾರು ಮಾಲೀಕರು ದೀರ್ಘಾವಧಿ ಪಾಲಿಸಿ ಖರೀದಿಸಬೇಕು. ನಿಮ್ಮ ಅಮೂಲ್ಯ ಸ್ವತ್ತಿಗೆ ಈ ಕೆಳಗಿನ ದೀರ್ಘಾವಧಿ ಪಾಲಿಸಿಗಳಿಂದ ಆಯ್ಕೆ ಮಾಡಬಹುದು:
1. 3 ವರ್ಷಗಳ ಅವಧಿಗೆ ಹೊಣೆಗಾರಿಕೆ ಮಾತ್ರದ ಪಾಲಿಸಿ
2. 3 ವರ್ಷಗಳ ಪಾಲಿಸಿ ಅವಧಿಗೆ ಪ್ಯಾಕೇಜ್ ಪಾಲಿಸಿ
3. 3 ವರ್ಷಗಳ ಹೊಣೆಗಾರಿಕೆ ಕವರ್ ಮತ್ತು ಸ್ವಂತ ಹಾನಿಗಾಗಿ 1 ವರ್ಷದ ಕವರ್‌ನೊಂದಿಗೆ ಬಂಡಲ್ಡ್ ಪಾಲಿಸಿ

ಹೌದು, ಎರಡೂ ಒಂದೇ ಆಗಿವೆ. ಏಕೈಕ ವ್ಯತ್ಯಾಸವೆಂದರೆ ಆನ್‌ಲೈನ್‌ನಲ್ಲಿ, ಒಮ್ಮೆ ಪಾವತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಮತ್ತು ವಸತಿ ವಿಳಾಸಕ್ಕೆ ನಾವು ನಿಮಗೆ ಪಾಲಿಸಿಯನ್ನು ಕಳುಹಿಸುತ್ತೇವೆ.

ಅಂದರೆ, ಕಾರು ಮಾಲೀಕರು ನೇಮಿಸಿರುವ ಚಾಲಕರಿಗೆ ಆ ಕಾರ್‌ ಓಡಿಸುವಾಗ ಅಪಘಾತವಾದರೆ, ಇನ್ಶೂರೆನ್ಸ್ ಕಂಪನಿಯು ಅವರ ದೈಹಿಕ ಹಾನಿ/ಮರಣಕ್ಕೆ ಪರಿಹಾರ ಒದಗಿಸುತ್ತದೆ.

ನೀವು ಎಚ್‌ಡಿಎಫ್‌ಸಿ ಎರ್ಗೋದ ವೆಬ್‌ಸೈಟ್‌, ಕಾಲ್ ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋದ ಮೊಬೈಲ್ ಆ್ಯಪ್‌ ಮೂಲಕ ಕ್ಲೈಮ್ ನೋಂದಾಯಿಸಬಹುದು

ಪಾಲಿಸಿ ಅವಧಿಯಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನೋ ಕ್ಲೈಮ್ ಬೋನಸ್ ಪಡೆಯುತ್ತೀರಿ. ಇದು ಪಾಲಿಸಿ ನವೀಕರಣದ ಸಂದರ್ಭದಲ್ಲಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ರಿಯಾಯಿತಿ ಒದಗಿಸುವುದರ ಜೊತೆಗೆ, ನಿಮ್ಮ ವಿಮಾದಾತರಿಂದ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಕಡಿತಗಳ ಮೊತ್ತದಲ್ಲಿ ಗಣನೀಯ ಇಳಿಕೆ ಅಥವಾ ಆಕ್ಸಿಡೆಂಟ್‌ ಮನ್ನಾ ಆಯ್ಕೆ, ಅಂದರೆ ಆಕ್ಸಿಡೆಂಟ್‌ ನಂತರವೂ ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳ ಇಲ್ಲದಿರುವುದು - ಮುಂತಾದ ರಿವಾರ್ಡ್‌ಗಳು ಸಿಗಬಹುದು.

ಕಾನೂನಿನ ಪ್ರಕಾರ ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿ ಅತ್ಯಗತ್ಯವಾಗಿದ್ದು, ಇದಿಲ್ಲದೆ ವಾಹನ ಚಲಾಯಿಸಲು ಸಾಧ್ಯವಿಲ್ಲ. ಆದರೆ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿಯ ಅಡಿಯಲ್ಲಿ ಬೆಂಕಿ, ಕಳ್ಳತನ, ಭೂಕಂಪ, ಭಯೋತ್ಪಾದನೆ ಇತ್ಯಾದಿಗಳಿಂದ ನಿಮ್ಮ ವಾಹನಕ್ಕೆ ಆಗುವ ಯಾವುದೇ ಹಾನಿ ಕವರ್ ಆಗುವುದಿಲ್ಲ ಹಾಗೂ ಈ ಅಪಾಯಗಳು ದೊಡ್ಡ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ರಕ್ಷಣೆ ಒದಗಿಸುವ ಜೊತೆಗೆ ಹಣಕಾಸಿನ ರಕ್ಷಣೆಯನ್ನೂ ನೀಡುವ ಸಮಗ್ರ ಕವರ್ ಖರೀದಿಸುವುದು ಉತ್ತಮ.

ಬಂಪರ್ ಟು ಬಂಪರ್ ಇನ್ಶೂರೆನ್ಸ್ ಎಂಬುದು ಕಾರ್ ಇನ್ಶೂರೆನ್ಸ್‌ನಲ್ಲಿ ವಾಹನದ ಸವಕಳಿ ಮೌಲ್ಯವನ್ನು ರಕ್ಷಿಸುವ ಆ್ಯಡ್ ಆನ್ ಕವರ್ ಆಗಿದೆ. ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಈ ಕವರ್ ಆಯ್ಕೆ ಮಾಡಬಹುದು. ಈ ಆ್ಯಡ್ ಆನ್ ಕವರ್‌ನ ಸಹಾಯದಿಂದ, ವಾಹನದ ಭಾಗಶಃ ಸವಕಳಿಯನ್ನು ಕಡಿತಗೊಳಿಸದೆ ನೀವು ವಿಮಾದಾತರಿಂದ ಸಂಪೂರ್ಣ ಕ್ಲೈಮ್ ಮೊತ್ತವನ್ನು ಪಡೆಯಬಹುದು.

ಕಾರ್ ಇನ್ಶೂರೆನ್ಸ್ ಖರೀದಿಸುವುದು ಕೆಲವೇ ನಿಮಿಷಗಳ ವಿಷಯವಾಗಿದೆ. ನೀವು ವಿವರಗಳನ್ನು ಭರ್ತಿ ಮಾಡಿ, ಪಾವತಿಯನ್ನು ಮುಂಚಿತವಾಗಿ ಮಾಡಿದರೆ ಸಾಕು. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ತಕ್ಷಣ ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಈ ಪಟ್ಟಿಯು ವಿಮಾದಾತರ ವೆಬ್‌ಸೈಟ್‌ನಲ್ಲಿ ಸಿಗುತ್ತದೆ. ನಿಮಗೆ ಅದನ್ನು ಹುಡುಕಲು ಸಾಧ್ಯವಾಗದಿದ್ದರೆ, ಇನ್ಶೂರೆನ್ಸ್ ಏಜೆಂಟ್‌ ಬಳಿ ಕೇಳಬಹುದು ಅಥವಾ ಗ್ರಾಹಕ ಸಹಾಯವಾಣಿಗೆ ಕರೆ ಮಾಡಬಹುದು.   

ಕ್ಲೈಮ್‌ ಫೈಲ್ ಮಾಡಿರುವುದರ ಬಗ್ಗೆ ಎಚ್ ಡಿ ಎಫ್ ಸಿ ಸಿಬ್ಬಂದಿಗೆ ತಿಳಿಸುವಾಗ, ನಿಮ್ಮ ಬಳಿ ಈ ಕೆಳಗಿನ 3 ಡಾಕ್ಯುಮೆಂಟ್‌ಗಳು ಇರಬೇಕು:

• RC ಬುಕ್

• ಡ್ರೈವಿಂಗ್ ಲೈಸೆನ್ಸ್

• ಪಾಲಿಸಿ ಕಾಪಿ ಮತ್ತು ಪಾಲಿಸಿ ನಂಬರ್

ಅಪಘಾತವಾದ ಸಮಯದಲ್ಲಿ, ಅದರಲ್ಲಿ ಭಾಗಿಯಾದ ಇನ್ನೊಂದು ಕಾರ್‌ನ ನಂಬರ್ ಬರೆದುಕೊಳ್ಳಿ ಹಾಗೂ ಅಪಘಾತದ ಲೊಕೇಶನ್, ವಾಹನ ಮತ್ತು ಅಲ್ಲಿನ ಇತರೆ ವಸ್ತುಗಳ ಫೋಟೋ, ವಿಡಿಯೋ ತೆಗೆದುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಿ. ಕ್ಲೈಮ್ ಮಾಡುವಾಗ ಘಟನೆಯನ್ನು ವಿವರಿಸಲು ಹಾಗೂ ಪೊಲೀಸ್ FIR ಫೈಲ್ ಮಾಡುವಾಗ ಪುರಾವೆ ಒದಗಿಸಲು, ಇದು ನಿಮಗೆ ಸಹಾಯ ಮಾಡುತ್ತದೆ.

ಒಮ್ಮೆ ನೀವು ಈ ಆರಂಭಿಕ ಹಂತಗಳನ್ನು ತೆಗೆದುಕೊಂಡ ನಂತರ, ಗಾಬರಿಯಾಗದೆ ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ನಂಬರ್-18002700700 ಗೆ ಕರೆ ಮಾಡಿ ಅಥವಾ ನಿಮ್ಮ ಕ್ಲೈಮ್ ನೋಂದಣಿ ಮಾಡಲು WWW.HDFCERGO.COM ಗೆ ಲಾಗಿನ್ ಮಾಡಿ. ಕ್ಲೈಮ್ ಕುರಿತು ಮಾಹಿತಿ ನೀಡಿದ ನಂತರ SMS ಮೂಲಕ ಕ್ಲೈಮ್ ನಂಬರ್ ಪಡೆಯುತ್ತೀರಿ. ಒಂದುವೇಳೆ ನೀವು ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರೆ, ನಮ್ಮ ಪ್ರತಿನಿಧಿಯು ನಿಮಗೆ ಕ್ಲೈಮ್ ರೆಫರೆನ್ಸ್ ನಂಬರ್ ಒದಗಿಸುತ್ತಾರೆ. ಇನ್ಶೂರ್ಡ್ ವಾಹನವು ಕಳ್ಳತನವಾದ ಸಂದರ್ಭದಲ್ಲಿ, ಅದನ್ನು ಟ್ರ್ಯಾಕ್ ಮಾಡಲು ಕಂಪನಿಯು ಖಾಸಗಿ ತನಿಖೆದಾರರನ್ನು ನೇಮಿಸುತ್ತದೆ ಹಾಗೂ ಈ ಕಾರಣಕ್ಕಾಗಿ ಪೊಲೀಸರಿಂದ ಸಂಬಂಧಪಟ್ಟ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ 60 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು.

ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನಕ್ಕೆ ಬೆಂಕಿ ತಗುಲುವುದು, ಕಳ್ಳತನ, ಭೂಕಂಪ ಇತ್ಯಾದಿಗಳಿಂದಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜೊತೆಗೆ, ಮರಣ, ದೈಹಿಕ ಗಾಯ ಹಾಗೂ ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಕವರ್ ಒದಗಿಸುತ್ತದೆ.

ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಸೆಲ್ಫ್ ಇನ್‌ಸ್ಪೆಕ್ಷನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬೇಕು. ಎಚ್‌ಡಿಎಫ್‌ಸಿ ಎರ್ಗೋ ಡಾಕ್ಯುಮೆಂಟ್‌ಗಳನ್ನು ಅನುಮೋದಿಸಿದ ನಂತರ, ನಿಮಗೆ ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಆ ಲಿಂಕ್‌ ಮೂಲಕ ಪಾವತಿ ಮಾಡಬಹುದು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಪಡೆಯುತ್ತೀರಿ.

ವಿವಿಧ ರೀತಿಯ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು:
ಹೊಣೆಗಾರಿಕೆ ಮಾತ್ರದ ಪಾಲಿಸಿ: ಭಾರತೀಯ ಮೋಟಾರ್ ವಾಹನಗಳ ಕಾಯ್ದೆ 1988, ಕಾರ್ ಮಾಲೀಕರಿಗೆ ಮಾನ್ಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಹೊಂದುವುದನ್ನು ಕಡ್ಡಾಯವಾಗಿಸಿದೆ ಮತ್ತು ನಿಯಮವನ್ನು ಅನುಸರಿಸದಿರುವುದು ಭಾರೀ ದಂಡಗಳಿಗೆ ಕಾರಣವಾಗಬಹುದು. ಈ ಪಾಲಿಸಿಯು, ಇನ್ಶೂರ್ಡ್‌ ವ್ಯಕ್ತಿ ಮಾಡಿದ ಅಪಘಾತದಿಂದ ಯಾವುದೇ ಥರ್ಡ್ ಪಾರ್ಟಿಗೆ ಆಗುವ ದೈಹಿಕ ಗಾಯ (ಅಥವಾ ಮರಣ) ಅಥವಾ ಆಸ್ತಿ ಹಾನಿಗಳನ್ನು ಕವರ್ ಮಾಡುತ್ತದೆ. ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಮಾದಕವಸ್ತು ಅಥವಾ ಮದ್ಯಪಾನದ ಪ್ರಭಾವದಿಂದ ಅಪಘಾತವಾಗಿದ್ದರೆ ಅದನ್ನು ಕವರ್‌ ಮಾಡಲಾಗುವುದಿಲ್ಲ.
ಸಮಗ್ರ ಪ್ಲಾನ್: ಈ ಪಾಲಿಸಿಯನ್ನು ಖರೀದಿಸುವುದು ಐಚ್ಛಿಕವಾಗಿದೆ. ಆದರೆ, ತಜ್ಞರು ಇದನ್ನೇ ಹೆಚ್ಚು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ಸ್ವಂತ ವಾಹನಕ್ಕೆ ಹಾಗೂ ಥರ್ಡ್ ಪಾರ್ಟಿಗೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. ಆಕ್ಸಿಡೆಂಟ್‌ ಮಾತ್ರವಲ್ಲದೆ, ಪ್ರಾಕೃತಿಕ ವಿಕೋಪಗಳಾದ ಪ್ರವಾಹ, ಸಿಡಿಲು, ಭೂಕಂಪ ಇತ್ಯಾದಿಗಳಿಂದ ಉಂಟಾದ ಹಾನಿಗಳು ಹಾಗೂ ಕಳ್ಳತನ, ಗಲಭೆ, ಮುಷ್ಕರ ಮತ್ತು ಭಯೋತ್ಪಾದಕ ಕೃತ್ಯದಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ಸಹ ಇದು ಕವರ್ ಮಾಡುತ್ತದೆ. ಒಂದು ವರ್ಷದ ಮಟ್ಟಿಗೆ ಅಥವಾ ದೀರ್ಘಾವಧಿಗೆ ಈ ಪ್ಲಾನ್‌ ಖರೀದಿಸಬಹುದು.
ಸ್ಟ್ಯಾಂಡ್ಅಲೋನ್ ಓನ್‌ ಡ್ಯಾಮೇಜ್‌ ಕಾರ್ ಇನ್ಶೂರೆನ್ಸ್: ನಿಮ್ಮ ಕಾರಿಗೆ ಆಕ್ಸಿಡೆಂಟ್‌, ವಿಕೋಪಗಳು, ಬೆಂಕಿ ಅಥವಾ ಕಳ್ಳತನದಿಂದಾಗುವ ಹಾನಿಗೆ ವಿಶೇಷ ರಕ್ಷಣೆ ಒದಗಿಸುತ್ತದೆ. ಇದು ಸಮಗ್ರ ಪ್ಲಾನ್‌ನಂತಲ್ಲದೆ, ಚಾಲಕರ ಗಾಯಗಳಿಗೆ ಅಥವಾ ಥರ್ಡ್ ಪಾರ್ಟಿಗೆ ಉಂಟಾದ ಯಾವುದೇ ಹಾನಿಗೆ ಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ.   
ಕಾರಿನ ವಿಧದ ಆಧಾರದ ಮೇಲೆ, ಪ್ರೈವೇಟ್ ಕಾರ್ ಇನ್ಶೂರೆನ್ಸ್ ಹಾಗೂ ಕಮರ್ಷಿಯಲ್ ವಾಹನ ಇನ್ಶೂರೆನ್ಸ್ ಎಂಬ ಇತರ ಪ್ಲಾನ್‌ಗಳು ಲಭ್ಯವಿವೆ.

ಜೀರೋ ಡಿಪ್ರಿಸಿಯೇಷನ್ ಒಂದು ಆ್ಯಡ್-ಆನ್ ಕವರ್ ಆಗಿದ್ದು ಇದನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಖರೀದಿಸಬೇಕಾಗುತ್ತದೆ. ಇದು ನಿಮ್ಮ ವಾಹನಕ್ಕೆ ಆದ ಸವಕಳಿಯನ್ನು ಲೆಕ್ಕಿಸದೆ, ಪೂರ್ಣ ಕವರೇಜ್ ಒದಗಿಸುತ್ತದೆ. ಉದಾಹರಣೆಗೆ, ವಾಹನವು ತೀರಾ ಹಾನಿಗೊಳಗಾಗಿದ್ದರೆ, ಯಾವುದೇ ಸವಕಳಿ ಶುಲ್ಕಗಳನ್ನು ಪಾವತಿಸದೇ, ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಕ್ಲೈಮ್ ಮೊತ್ತ ಪಡೆಯಲು ನೀವು ಅರ್ಹರಾಗುತ್ತೀರಿ.

ಹಿಂದಿನ ಪಾಲಿಸಿಯ ಗಡುವು ದಿನಾಂಕದಿಂದ 90 ದಿನಗಳವರೆಗೆ ನೋ ಕ್ಲೈಮ್ ಬೋನಸ್ ಮಾನ್ಯವಾಗಿರುತ್ತದೆ. ಪಾಲಿಸಿಯನ್ನು 90 ದಿನಗಳ ಒಳಗೆ ನವೀಕರಿಸದಿದ್ದರೆ, ನೋ ಕ್ಲೈಮ್ ಬೋನಸ್ 0% ಆಗುತ್ತದೆ ಮತ್ತು ತಡವಾಗಿ ನವೀಕರಿಸಿದ ಪಾಲಿಸಿಗೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ.

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಇದಲ್ಲದೆ, ಅಪಘಾತದಿಂದ ಆದ ಯಾವುದೇ ಹಣಕಾಸಿನ ನಷ್ಟ/ಹಾನಿಯನ್ನು ಕವರ್ ಮಾಡಲು ನಿಮಗೆ ರಕ್ಷಣಾ ಕವಚದ ಅಗತ್ಯವಿದೆ. ಅಂತಹ ಘಟನೆಯ ಸಂದರ್ಭದಲ್ಲಿ ನಿಮ್ಮ ಹಾನಿಯನ್ನು ಇನ್ಶೂರೆನ್ಸ್ ಕಂಪನಿಯು ನೋಡಿಕೊಳ್ಳುತ್ತದೆ.

ಹೈ-ಎಂಡ್ ಲಾಕ್‌, ಅಲಾರಾಂ, ಮುಂತಾದ ಆ್ಯಂಟಿ-ಥೆಫ್ಟ್ ಡಿವೈಸ್‌ಗಳು ನಿಮ್ಮ ಕಾರನ್ನು ರಕ್ಷಿಸುವ ಉಪಕರಣಗಳಾಗಿವೆ. ಕಾರ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಆ್ಯಂಟಿ-ಥೆಫ್ಟ್ ರಿಯಾಯಿತಿಯನ್ನು ಪಡೆಯಬೇಕಿದ್ದರೆ, ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ದಿಂದ ಪ್ರಮಾಣೀಕರಣ ಪಡೆಯಬೇಕು.

ಲೊಕೇಶನ್ ಬದಲಾವಣೆಯ ಸಂದರ್ಭದಲ್ಲಿ, ಪಾಲಿಸಿಯು ಹೆಚ್ಚು ಕಡಿಮೆ ಹಾಗೆಯೇ ಉಳಿದುಕೊಳ್ಳುತ್ತದೆ. ಆದಾಗ್ಯೂ, ನೀವು ಸ್ಥಳಾಂತರಗೊಂಡ ನಗರವನ್ನು ಅವಲಂಬಿಸಿ ಪ್ರೀಮಿಯಂ ಬದಲಾಗಬಹುದು. ಏಕೆಂದರೆ ಕಾರಿನ ನೋಂದಣಿ ವಲಯದ ಆಧಾರದ ಮೇಲೆ ಇನ್ಶೂರೆನ್ಸ್ ದರಗಳು ಭಿನ್ನವಾಗಿರುತ್ತವೆ. ಒಮ್ಮೆ ನೀವು ಹೊಸ ಲೊಕೇಶನ್ ಹೋದ ನಂತರ, ನೀವು ನಿಮ್ಮ ಹೊಸ ವಿಳಾಸವನ್ನು ಅಪ್ಡೇಟ್ ಮಾಡಬೇಕು, ಇದನ್ನು ವಿಮಾದಾತರ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಮಾಡಬಹುದು.

ಹೌದು. ನೀವು ಹೆಚ್ಚುವರಿ ರಕ್ಷಣೆ ಪಡೆದುಕೊಂಡರೆ, ವಾಹನ ಕಳುವಾದಾಗ, ವಿಮಾದಾತರಿಗೆ ಅಪಾಯ ಕಡಿಮೆ ಆಗುತ್ತದೆ. ಹಾಗಾಗಿ, ನಿಮಗೆ ರಿಯಾಯಿತಿ ಸೌಲಭ್ಯವು ಸಿಗುತ್ತದೆ.

ಅಸ್ತಿತ್ವದಲ್ಲಿರುವ ವಾಹನವನ್ನು ಮಾರಾಟ ಮಾಡಿದ ನಂತರ, ಅದರ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ವಿಮಾದಾತರು NCB ಕಾಯ್ದಿರಿಸುವಿಕೆ ಪತ್ರವನ್ನು ನೀಡುತ್ತಾರೆ. NCB ಕಾಯ್ದಿರಿಸುವಿಕೆ ಪತ್ರದ ಆಧಾರದಲ್ಲಿ, ಈ ಪ್ರಯೋಜನವನ್ನು ಹೊಸ ವಾಹನಕ್ಕೆ ವರ್ಗಾಯಿಸಬಹುದು

ಕಾರ್ ಇನ್ಶೂರೆನ್ಸ್ ಎಂಬುದು ಹಣಕಾಸು ನಷ್ಟಕ್ಕೆ ಕಾರಣವಾಗುವ ಯಾವುದೇ ಹಾನಿಯ ವಿರುದ್ಧ ನಿಮ್ಮ ವಾಹನಕ್ಕೆ ರಕ್ಷಣೆ ನೀಡಲು ಅಗತ್ಯವಿರುವ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಜೊತೆಗೆ, ನಿಮ್ಮ ವಾಹನದ ಬಳಕೆಯಿಂದ ಉದ್ಭವವಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯು ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತದೆ. ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಹೊಣೆಗಾರಿಕೆ ಮಾತ್ರದ ಪಾಲಿಸಿ ಖರೀದಿಸುವುದು ಕಡ್ಡಾಯವಾಗಿದ್ದು, ಇದರ ಹೊರತು ವಾಹನವನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ.

ನೀವು ಎಚ್‌ಡಿಎಫ್‌ಸಿ ಎರ್ಗೋದ ವೆಬ್‌ಸೈಟ್‌, ಕಾಲ್ ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋದ ಮೊಬೈಲ್ ಆ್ಯಪ್‌ ಮೂಲಕ ಕ್ಲೈಮ್ ನೋಂದಾಯಿಸಬಹುದು

​​​​​​​^ಹಣಕಾಸು ವರ್ಷ 22 ಗಾಗಿ NL ವರದಿಗಳ ಆಧಾರದಲ್ಲಿ - ಮೋಟಾರ್ OD ಕ್ಲೈಮ್‌ಗಳಿಗೆ ಹಣಕಾಸು ವರ್ಷ 22 ರಲ್ಲಿ ಸೆಟಲ್ಮೆಂಟ್ ಅನುಪಾತ - 100% , ಹಣಕಾಸು ವರ್ಷ 22 ರಲ್ಲಿ ಪಾವತಿಸಲಾದ OD ಕ್ಲೈಮ್‌ಗಳ ಸಂಖ್ಯೆ (ನಿರಾಕರಣೆ ಮತ್ತು ಶೂನ್ಯವನ್ನು ಹೊರತುಪಡಿಸಿ) - 4,35,626, ಹಣಕಾಸು ವರ್ಷ 22 ರಲ್ಲಿ ಪಾವತಿಸಲಾದ ಕ್ಲೈಮ್‌ಗಳ ಮೊತ್ತ - ₹ 1,12,044 (ಮೊತ್ತವು ಲಕ್ಷಗಳಲ್ಲಿದೆ) ಅಥವಾ ₹ 11,20,44,00,000, ಸೆಟಲ್ಮೆಂಟ್ ಅನುಪಾತಕ್ಕೆ ಬಳಸಲಾದ ಫಾರ್ಮುಲಾ - (ಸೆಟಲ್ ಮಾಡಲಾದ ಕ್ಲೈಮ್‌ಗಳು + ನಿರಾಕರಿಸಲಾದ ಕ್ಲೈಮ್‌ಗಳು + ಮುಚ್ಚಲಾದ ಕ್ಲೈಮ್‌ಗಳು) / (ಕ್ಲೈಮ್‌ಗಳ ವರದಿ) ̄ ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿದಾರರಿಗೆ ಸಣ್ಣ ಹಾನಿಗಳಿಗೆ ಓವರ್-ನೈಟ್ ಮೋಟಾರ್ ರಿಪೇರಿ ಸೇವೆಯು, ಹಾನಿಯ ವ್ಯಾಪ್ತಿ, ವಿಶೇಷವಾಗಿ ಆಯ್ದ 16 ನಗರಗಳಲ್ಲಿ ಸೇವೆಗಳಿಗಾಗಿ ಎಂಪನೆಲ್ ಮಾಡಲಾದ ಮೋಟಾರ್ ಗ್ಯಾರೇಜ್‌ಗಳ ಬ್ಯಾಂಡ್‌ವಿಡ್ತ್ ಮತ್ತು ಸರ್ವೇಯರ್ ಅನ್ನು ನೇಮಿಸುವ ಅವಶ್ಯಕತೆ ಇತ್ಯಾದಿಗಳಿಗೆ ಒಳಪಟ್ಟಿರುತ್ತದೆ. ಕಂಪನಿಯು ಸಂಬಂಧಪಟ್ಟ ವಾಹನದ ಪಾಲಿಸಿ ಡಾಕ್ಯುಮೆಂಟ್‌ನ ನಿಯಮಗಳು ಮತ್ತು ಷರತ್ತುಗಳನ್ನು ಆಧರಿಸಿ ಕ್ಲೈಮ್ ಸೆಟಲ್ ಮಾಡಲು ಜವಾಬ್ದಾರಿ ಹೊಂದಿರುತ್ತದೆ (ಗರಿಷ್ಠ 3 ಪ್ಯಾನೆಲ್‌ಗಳು ಅಥವಾ ₹ 20,000 - ಇವುಗಳಲ್ಲಿ ಯಾವುದು ಹೆಚ್ಚೋ ಅದು. ಮುಂಬೈ, ನಾಗ್ಪುರ, ಪುಣೆ, ಸೂರತ್, ವಡೋದರಾ, ಅಹಮದಾಬಾದ್, ದೆಹಲಿ, ಗುರುಗ್ರಾಮ್, ಜೈಪುರ, ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಕಾನ್ಪುರ, ಮಧುರೈ, ಕೊಯಂಬತ್ತೂರು ಹೀಗೆ 16 ನಗರಗಳಲ್ಲಿ ಲಭ್ಯವಿದೆ) ˇ1 ನೇ ಅಕ್ಟೋಬರ್ 2023 ರಂತೆ - 7721 ಸಕ್ರಿಯ ನಗದುರಹಿತ ಗ್ಯಾರೇಜ್‌ಗಳು. °°ಆ್ಯಡ್ ಆನ್ ಕವರ್‌ಗಳಿಗೆ ಹೆಚ್ಚುವರಿ ಪ್ರೀಮಿಯಂ ವಿಧಿಸಲಾಗುತ್ತದೆ. *1ನೇ ಜೂನ್ 2022 ರಂತೆ ಮೇಲೆ ತಿಳಿಸಿದ 1 ವರ್ಷದ ಥರ್ಡ್ ಪಾರ್ಟಿ ಪ್ರೀಮಿಯಂ ಕ್ಯೂಬಿಕ್ ಸಾಮರ್ಥ್ಯ < 1000 cc ಗಾಗಿ ಇದೆ ಮತ್ತು ವಾಹನದ ಕ್ಯೂಬಿಕ್ ಸಾಮರ್ಥ್ಯವನ್ನು ಅವಲಂಬಿಸಿ ಬದಲಾಗಬಹುದು ~*ವಾಹನ ಮಾಲೀಕ ಚಾಲಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್, ನವೆಂಬರ್ 2021 ರಂತೆ @1.55 ಕೋಟಿ+ ಸಕ್ರಿಯ ಗ್ರಾಹಕರು

ಈ ಕೆಳಗಿನ ಹಂತಗಳ ಮೂಲಕ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು:
ಹಂತ 1- ಎಚ್ ಡಿ ಎಫ್ ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪಾಲಿಸಿಯ ಇ-ಕಾಪಿಯನ್ನು ಡೌನ್ಲೋಡ್ ಮಾಡುವ ಆಯ್ಕೆಯನ್ನು ಆರಿಸಿ.
ಹಂತ 2 - ನಿಮ್ಮ ಪಾಲಿಸಿ ನಂಬರ್ ಮತ್ತು ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ. ವೆರಿಫಿಕೇಶನ್‌ಗಾಗಿ ಆ ನಂಬರ್‌ಗೆ OTP ಯನ್ನು ಕಳುಹಿಸಲಾಗುತ್ತದೆ.
ಹಂತ 3 - OTP ನಮೂದಿಸಿ ಮತ್ತು ನಿಮ್ಮ ನೋಂದಾಯಿತ ಇಮೇಲ್ ID ಯನ್ನು ಒದಗಿಸಿ.
ಹಂತ 4 - ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರತಿಯನ್ನು PDF ಫಾರ್ಮ್ಯಾಟ್‍‌ನಲ್ಲಿ ನಿಮ್ಮ ಮೇಲ್ ID ಗೆ ಕಳುಹಿಸಲಾಗುತ್ತದೆ. ನಂತರ ನೀವು ಪಾಲಿಸಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಪ್ರಿಂಟ್ ಮಾಡಬಹುದು.
ಸಾಫ್ಟ್ ಕಾಪಿಯ ಪ್ರಿಂಟ್ ಔಟ್ ಅನ್ನು ಮೂಲ ಡಾಕ್ಯುಮೆಂಟ್ ಆಗಿ ನೀವು ಬಳಸಬಹುದು. "

ಎರಡು ರೀತಿಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿವೆ - ಸಮಗ್ರ ಮತ್ತು ಹೊಣೆಗಾರಿಕೆ ಮಾತ್ರದ ಪಾಲಿಸಿ

ಇದು ವಿಮಾದಾತರನ್ನು ಅವಲಂಬಿಸಿದೆ. ನೀವು ಅದನ್ನು ಒಂದೆರಡು ದಿನಗಳಲ್ಲಿ ಪಡೆಯಬಹುದು, ಅಥವಾ ಪ್ರಕ್ರಿಯೆಗೆ ಒಂದು ವಾರವೇ ಬೇಕಾಗಬಹುದು.

ನಾನು ಆಟೋಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯನಾಗಿದ್ದರೆ ನನಗೆ ರಿಯಾಯಿತಿ ಸಿಗುತ್ತದೆಯೇ?
ಹೌದು. ಪಾಲಿಸಿದಾರರು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ (ARAI) ಸದಸ್ಯರಾಗಿದ್ದರೆ, ಭಾರತದಲ್ಲಿನ ಬಹುತೇಕ ಕಾರ್ ಇನ್ಶೂರೆನ್ಸ್ ಕಂಪನಿಗಳು ಪ್ರೀಮಿಯಂನಲ್ಲಿ ಒಳ್ಳೆಯ ರಿಯಾಯಿತಿಗಳನ್ನು ನೀಡುತ್ತವೆ.

ನಮ್ಮ ಕಾರುಗಳಂತಹ ಬಹುತೇಕ ಸ್ವತ್ತುಗಳು, ತುಂಬಾ ಸಮಯದ ಬಳಕೆಯ ನಂತರ ಸವೆತ ಮತ್ತು ದುರಸ್ತಿ ಕಾಣಿಸಿಕೊಳ್ಳುವುದರಿಂದ, ಸ್ವತ್ತಿನ ಒಟ್ಟು ಮೌಲ್ಯದಲ್ಲಿ ಇಳಿಕೆಗೆ ಕಾರಣವಾಗುತ್ತವೆ. ಇದನ್ನು ಸವಕಳಿ ಅಥವಾ ಇಳಿಕೆ ಎಂದು ಕರೆಯಲಾಗುತ್ತದೆ.. ವಾಹನದ ಹಾನಿಯ ವಿರುದ್ಧ ಕ್ಲೈಮ್ ಮಾಡುವಾಗ, ಅಂತಿಮ ಪಾವತಿ ಮಾಡುವಾಗ ವಿಮಾದಾತರು ಸವಕಳಿ ಮೌಲ್ಯವನ್ನು ಪರಿಗಣಿಸುತ್ತಾರೆ. ಆದ್ದರಿಂದ, ಶೂನ್ಯ ಸವಕಳಿ ಪಾಲಿಸಿಯನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ.

ಕಾಲ ಕಳೆದಂತೆ ನಿಮ್ಮ ಕಾರಿನ ಮೌಲ್ಯವು ಕಡಿಮೆಯಾಗುತ್ತಿದ್ದರೂ, ಹಾನಿಯ ಸಂದರ್ಭದಲ್ಲಿ ಉಂಟಾಗುವ ವೆಚ್ಚಗಳ ಮೇಲೆ ನಿಮಗೆ ಸಂಪೂರ್ಣ ಕವರೇಜ್ ನೀಡುವ ಇನ್ಶೂರೆನ್ಸ್‌ಗೆ ಶೂನ್ಯ ಸವಕಳಿ ಇನ್ಶೂರೆನ್ಸ್‌‌‌‌ ಎನ್ನುತ್ತಾರೆ. ಸೂಕ್ತವಾದ ಶೂನ್ಯ ಸವಕಳಿ ಕಾರ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ ಅಥವಾ ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗೆ ಬಂಪರ್-ಟು-ಬಂಪರ್ ಎಚ್ ಡಿ ಎಫ್ ಸಿ ಎರ್ಗೋ ಆ್ಯಡ್-ಆನ್ ಸೇರಿಸಿ!