banner-logo

ನಾವು ಯಾರು

ಎಚ್‌ ಡಿ ಎಫ್‌ ಸಿ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿದೆ ಮತ್ತು 1994 ರಲ್ಲಿ ಖಾಸಗಿ ವಲಯದ ಬ್ಯಾಂಕ್ ಅನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಅನುಮೋದನೆಯನ್ನು ಪಡೆಯುವ ಮೊದಲ ಸ್ಥಾನದಲ್ಲಿ ಒಂದಾಗಿದೆ.

About us

ನಾವು ಯಾರು

ಎಚ್ ಡಿ ಎಫ್ ಸಿ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ ಮತ್ತು 1994 ರಲ್ಲಿ ಖಾಸಗಿ ಬ್ಯಾಂಕ್ ಸ್ಥಾಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದಿಂದ ಅನುಮೋದನೆಯನ್ನು ಪಡೆದ ಮೊದಲ ಬ್ಯಾಂಕ್ ಆಗಿದೆ.

ನಮ್ಮ ಮೌಲ್ಯಗಳು

 

ಗ್ರಾಹಕ ಕೇಂದ್ರಿತ

ಬ್ಯಾಂಕ್‌ನ ಎಲ್ಲಾ ಕೆಲಸಗಳ ಕೇಂದ್ರಬಿಂದು ಗ್ರಾಹಕರಾಗಿದ್ದಾರೆ. ನಮ್ಮ ಗ್ರಾಹಕರನ್ನು ನಾವು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ನಾವು ಅವರಿಗೆ ಎಷ್ಟು ಚೆನ್ನಾಗಿ ಸರ್ವೀಸ್ ನೀಡುತ್ತೇವೆ ಎಂಬುದರ ಮೇಲೆ ಬ್ಯಾಂಕ್ ಗಮನ ಹರಿಸುತ್ತದೆ. ಗ್ರಾಹಕ ಕೇಂದ್ರಿತತೆಯು ನಮಗೆ ಮುಖ್ಯವಾಗಿದೆ.

 

ಕಾರ್ಯಾಚರಣೆಯ ಶ್ರೇಷ್ಠತೆ

ಬ್ಯಾಂಕ್ ತನ್ನ ಗ್ರಾಹಕರಿಗೆ ಉನ್ನತ ಮಟ್ಟದ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ನಿರಂತರವಾಗಿ ಒದಗಿಸುವುದನ್ನು ಖಚಿತಪಡಿಸುತ್ತದೆ. ಬ್ಯಾಂಕ್ ನಿರ್ದಿಷ್ಟ ಗಡುವುಗಳು ಮತ್ತು TAT (ಸಮಸ್ಯೆಗೆ ಪರಿಹಾರ ನಿರೀಕ್ಷಿಸಬಹುದಾದ ಸಮಯ) ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ಕ್ರಮಗಳನ್ನು ಹೊಂದಿದ್ದು, ಇದರಿಂದ ಗ್ರಾಹಕರು ನಿರಂತರವಾಗಿ ಉತ್ತಮ ಸರ್ವಿಸ್‌ಗಳನ್ನು ನಿರೀಕ್ಷಿಸಬಹುದು.

 

ಪ್ರಾಡಕ್ಟ್ ನಾಯಕತ್ವ

ನಾವು ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರಿಸುವ ಜೊತೆಗೆ, ಬ್ಯಾಂಕಿಂಗ್ ಸರ್ವಿಸ್‌ಗಳಾದ್ಯಂತ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಹೊಸ ಪ್ರಾಡಕ್ಟ್‌ಗಳ ರಚನೆ, ನಾವೀನ್ಯತೆ ಮತ್ತು ಪ್ರಾಡಕ್ಟ್‌ಗಳ ಗುಂಪನ್ನು ಹೊಂದುವ ಮೂಲಕ ಪ್ರಾಡಕ್ಟ್ ನಾಯಕತ್ವವನ್ನು ಬಯಸುತ್ತೇವೆ.

 

ಸಿಬ್ಬಂದಿ

ಬ್ಯಾಂಕ್‌ನ ರಚನೆ ಮತ್ತು ನಿರ್ಮಾಣದ ಕೇಂದ್ರಬಿಂದು ಸಿಬ್ಬಂದಿಯಾಗಿದ್ದಾರೆ. ಬ್ಯಾಂಕ್ ತನ್ನ ಸಿಬ್ಬಂದಿ ಸಹೋದ್ಯೋಗಿಗಳೊಂದಿಗೆ ಪ್ರಾಮಾಣಿಕರಾಗಿ, ಗ್ರಾಹಕರೊಂದಿಗೆ ಪಾರದರ್ಶಕವಾಗಿ ಇರಬೇಕೆಂದು ಬಯಸುತ್ತದೆ ಮತ್ತು ಅವರು ಎಲ್ಲಾ ನಿಯಮಾವಳಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಇದು, ನಂಬಿಕೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

 

ಸುಸ್ಥಿರತೆ

ಗ್ರಾಹಕರಿಗೆ ಇಂದು ಮತ್ತು ಭವಿಷ್ಯದಲ್ಲಿ ಉತ್ತಮ ಹಣದ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವ ಹಲವಾರು ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳನ್ನು ಒದಗಿಸುವುದಷ್ಟೇ ಅಲ್ಲದೆ, ನಮ್ಮ ಸುತ್ತಮುತ್ತಲಿನ ಸಮಾಜ ಮತ್ತು ಸಮುದಾಯಕ್ಕೆ ಕೊಡುಗೆ ನೀಡುವಲ್ಲಿ ಬ್ಯಾಂಕ್ ನಂಬಿಕೆ ಹೊಂದಿದೆ.

ನಮ್ಮ ಬಿಸಿನೆಸ್‌ಗಳು

ನಮ್ಮ ಬಿಸಿನೆಸ್ ವಿಭಾಗಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ಹೋಲ್‌ಸೇಲ್ ಕ್ಷೇತ್ರದಲ್ಲಿ ವಾಣಿಜ್ಯ ಮತ್ತು ಹೂಡಿಕೆ ಬ್ಯಾಂಕಿಂಗ್ ಮತ್ತು ರಿಟೇಲ್ ಕ್ಷೇತ್ರದಲ್ಲಿ ಟ್ರಾನ್ಸಾಕ್ಷನಲ್/ಬ್ರಾಂಚ್ ಬ್ಯಾಂಕಿಂಗ್‌ ಸರ್ವಿಸ್‌ಗಳನ್ನು ಒಳಗೊಳ್ಳುವ ಮೂಲಕ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಸರ್ವಿಸ್‌ಗಳನ್ನು ಒದಗಿಸುತ್ತದೆ.

About us

ರಿಟೇಲ್ ಬ್ಯಾಂಕಿಂಗ್

ಎಚ್ ಡಿ ಎಫ್ ಸಿ ಬ್ಯಾಂಕ್‌ನ ರಿಟೇಲ್ ಬಿಸಿನೆಸ್ ವ್ಯಕ್ತಿಗಳು, ಸ್ಯಾಲರಿ ಪಡೆಯುವ ವೃತ್ತಿಪರರು, ಕಿರಾಣಿ ಅಂಗಡಿಗಳು, ಸ್ವಯಂ ಸಹಾಯ ಗುಂಪುಗಳು (SHG) ಮತ್ತು ಅನಿವಾಸಿ ಭಾರತೀಯರು (NRI) ಮುಂತಾದ ಕಿರು ಮತ್ತು ಸಣ್ಣ ಬಿಸಿನೆಸ್‌ಗಳಿಗೆ ಸರ್ವಿಸ್ ನೀಡುವುದನ್ನು ಗುರಿಯಾಗಿಸಿದೆ. ಬ್ಯಾಂಕ್ ತನ್ನ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳನ್ನು ಕಸ್ಟಮೈಸ್ ಮಾಡುವ ಮೂಲಕ ಈ ಕ್ಷೇತ್ರಕ್ಕೆ ಪ್ರಯೋಜನ ನೀಡುತ್ತದೆ. ಇದು ಆಟೋ ಲೋನ್ ಮತ್ತು ಪರ್ಸನಲ್ ಲೋನ್ ಬಿಸಿನೆಸ್‌ಗಳಲ್ಲಿ ಬಲವಾದ ಸ್ಥಾನವನ್ನು ಮತ್ತು ಪಾವತಿ ಬಿಸಿನೆಸ್‌ನಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ. ಬ್ಯಾಂಕ್ ಹೆಚ್ಚಿನ ನೆಟ್‌ವರ್ತ್ ಹೊಂದಿರುವ ವ್ಯಕ್ತಿಗಳಿಗೆ (HNI) ಸಂಪತ್ತು ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ.

ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳು

  • ಆಟೋ ಲೋನ್‌ಗಳು
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು
  • ಪರ್ಸನಲ್ ಲೋನ್‌ಗಳು
  • ಹೋಮ್ ಲೋನ್‌ಗಳು
  • ಗೋಲ್ಡ್ ಲೋನ್‌ಗಳು
  • ಆಸ್ತಿ ಮೇಲಿನ ಲೋನ್
  • ಕ್ರೆಡಿಟ್ ಕಾರ್ಡ್‌ ಮೇಲೆ ಲೋನ್
  • ಕಮರ್ಷಿಯಲ್ ವೆಹಿಕಲ್ ಫೈನಾನ್ಸ್
  • ರಿಟೇಲ್ ಬಿಸಿನೆಸ್ ಬ್ಯಾಂಕಿಂಗ್
  • ಸೇವಿಂಗ್ಸ್ ಅಕೌಂಟ್
  • ಕರೆಂಟ್ ಅಕೌಂಟ್
  • ಫಿಕ್ಸೆಡ್ ಮತ್ತು ರಿಕರಿಂಗ್ ಅಕೌಂಟ್
  • ಕಾರ್ಪೊರೇಟ್ ಸ್ಯಾಲರಿ ಅಕೌಂಟ್‌ಗಳು
  • ಕನ್‌ಸ್ಟ್ರಕ್ಷನ್ ಇಕ್ವಿಪ್‌ಮೆಂಟ್ ಫೈನಾನ್ಸ್
  • ಕೃಷಿ ಮತ್ತು ಟ್ರ್ಯಾಕ್ಟರ್ ಲೋನ್‌ಗಳು
  • SHG ಲೋನ್‌ಗಳು
  • Kisan Gold ಕಾರ್ಡ್
  • ಮ್ಯೂಚುಯಲ್ ಫಂಡ್, ಲೈಫ್, ಜನರಲ್ ಮತ್ತು ಹೆಲ್ತ್ ಇನ್ಶೂರೆನ್ಸ್ ವಿತರಣೆ
  • ಹೆಲ್ತ್‌ಕೇರ್ ಫೈನಾನ್ಸ್
  • NRI ಗಳಿಗೆ ಕಡಲಾಚೆಯ ಲೋನ್‌ಗಳು
  • NRI ಡೆಪಾಸಿಟ್‌ಗಳು
  • ಸ್ಮಾಲ್ ಟಿಕೆಟ್ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು
  • ಬಿಸಿನೆಸ್ ಲೋನ್‌‌ಗಳು
  • ಟೂ ವೀಲರ್ ಲೋನ್‌ಗಳು
  • ಸೆಕ್ಯೂರಿಟಿಗಳ ಮೇಲಿನ ಲೋನ್
Retail Banking

ಹೋಮ್ ಲೋನ್/ಅಡಮಾನ ಬಿಸಿನೆಸ್

ಎಚ್ ಡಿ ಎಫ್ ಸಿ ಲಿಮಿಟೆಡ್‌ನೊಂದಿಗೆ ವಿಲೀನದ ನಂತರ, ಎಚ್ ಡಿ ಎಫ್ ಸಿ ಬ್ಯಾಂಕ್ ಬಲವಾದ ಹೋಮ್ ಫೈನಾನ್ಸ್ ಬ್ರ್ಯಾಂಡ್ ಆಗಿ ಬೆಳೆದಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಭಾರತದಲ್ಲಿ ಹೌಸಿಂಗ್ ಲೋನ್ ಫೈನಾನ್ಸ್ ಮಾರುಕಟ್ಟೆಯಲ್ಲಿ ಪ್ರವರ್ತಕರಾಗಿದ್ದು, ವರ್ಷಗಳಲ್ಲಿ ಸದೃಢ ಬ್ರ್ಯಾಂಡ್ ಇಕ್ವಿಟಿಯನ್ನು ನಿರ್ಮಿಸಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಪರವಾಗಿ ಬ್ಯಾಂಕ್ ಲೋನ್‌ಗಳನ್ನು ಪಡೆಯುತ್ತಿದ್ದರೂ, ಬೇರೆ ಬೇರೆ ಆದಾಯ ಗುಂಪಿನ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ಇದು ಈಗ ವಿಶಾಲ ಶ್ರೇಣಿಯ ಹೌಸಿಂಗ್ ಲೋನ್‌ಗಳನ್ನು ಒದಗಿಸುತ್ತದೆ. ಇವುಗಳು ವೈಯಕ್ತಿಕ ಸಾಲಗಾರರು, ಸ್ಯಾಲರಿ ಪಡೆಯುವ ವ್ಯಕ್ತಿಗಳು, ಕೆಲಸ ಮಾಡುವ ವೃತ್ತಿಪರರು ಮತ್ತು ಸ್ವಯಂ ಉದ್ಯೋಗಿಗಳಿಗೆ ನೀಡುವ ಲೋನ್‌ಗಳನ್ನು ಒಳಗೊಂಡಿವೆ.

ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳು

ಹೌಸಿಂಗ್ ಲೋನ್‌ಗಳು

  • ಹೋಮ್ ಲೋನ್‌ಗಳು: ಡೆವಲಪರ್ ಅಥವಾ ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಅಪಾರ್ಟ್ಮೆಂಟ್ ಖರೀದಿ ಅಥವಾ ಮರುಮಾರಾಟದ ಆಸ್ತಿಗಳ ಖರೀದಿ
  • ರೂರಲ್ ಹೌಸಿಂಗ್ ಲೋನ್‌ಗಳು
  • ಕೈಗೆಟುಕುವ ಹೌಸಿಂಗ್ - ಎಚ್ ಡಿ ಎಫ್ ಸಿ ರೀಚ್ ಲೋನ್‌ಗಳು
  • ರಿಫೈನಾನ್ಸ್ - ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್
  • ಅನಿವಾಸಿ ಭಾರತೀಯರಿಗೆ (NRI ಗಳು) ಹೌಸಿಂಗ್ ಲೋನ್‌ಗಳು

ಇತರ ಹೋಮ್ ಲೋನ್ ಪ್ರಾಡಕ್ಟ್‌ಗಳು

  • ಹೌಸ್ ರಿನೋವೇಶನ್ ಲೋನ್‌ಗಳು
  • ಹೋಮ್ ಎಕ್ಸ್‌ಟೆನ್ಶನ್ ಲೋನ್‌ಗಳು
  • ಟಾಪ್ ಅಪ್ ಲೋನ್‌ಗಳು

ಇತರೆ ಲೋನ್‌ಗಳು

  • ಆಸ್ತಿ ಮೇಲಿನ ಲೋನ್
About us

ಹೋಲ್‌ಸೇಲ್/ಕಾರ್ಪೊರೇಟ್ ಬ್ಯಾಂಕಿಂಗ್

ಈ ಬಿಸಿನೆಸ್‌ಗಾಗಿ ಉದ್ದೇಶಿತ ವಿಭಾಗವು ಲಾರ್ಜ್ ಕಾರ್ಪೊರೇಟ್‌ಗಳು, PSU ಗಳು, ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳಾಗಿವೆ. ಈ ಗ್ರಾಹಕರಿಗೆ ಬ್ಯಾಂಕ್ ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್, ಟ್ರೇಡ್ ಸರ್ವಿಸ್‌ಗಳು, ಟ್ರಾನ್ಸಾಕ್ಷನಲ್ ಸರ್ವಿಸ್‌ಗಳು ಮತ್ತು ನಗದು ನಿರ್ವಹಣೆಯನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವಾಣಿಜ್ಯ ಮತ್ತು ಟ್ರಾನ್ಸಾಕ್ಷನಲ್ ಬ್ಯಾಂಕಿಂಗ್ ಸರ್ವಿಸ್‌ಗಳನ್ನು ಒದಗಿಸುತ್ತದೆ. ಬ್ಯಾಂಕ್ ಕೂಡ ರಚನಾತ್ಮಕ ಪರಿಹಾರಗಳ ಪ್ರಮುಖ ಪೂರೈಕೆದಾರರಾಗಿದ್ದು, ತನ್ನ ಕಾರ್ಪೊರೇಟ್ ಗ್ರಾಹಕರಿಗೆ ಉತ್ತಮ ಸಪ್ಲೈ ಚೈನ್ ನಿರ್ವಹಣೆಯನ್ನು ಸುಲಭಗೊಳಿಸಲು ಮಾರಾಟಗಾರರು ಮತ್ತು ವಿತರಕರ ಹಣಕಾಸಿನೊಂದಿಗೆ ನಗದು ನಿರ್ವಹಣಾ ಸರ್ವಿಸ್‌ಗಳನ್ನು ಸಂಯೋಜಿಸುತ್ತದೆ. ಬ್ಯಾಂಕ್ ತನ್ನ ಅತ್ಯುತ್ತಮ ಪ್ರಾಡಕ್ಟ್ ವಿತರಣೆ, ಸರ್ವಿಸ್ ಮಟ್ಟಗಳು ಮತ್ತು ಬಲವಾದ ಗ್ರಾಹಕ ದೃಷ್ಟಿಕೋನದ ಆಧಾರದಲ್ಲಿ ಹಲವಾರು ಪ್ರಮುಖ ಕಾರ್ಪೊರೇಟ್‌ಗಳ ಬ್ಯಾಂಕಿಂಗ್ ಒಕ್ಕೂಟದೊಳಗೆ ಪ್ರವೇಶಿಸಿದೆ ಮತ್ತು ಬಲವಾದ ಸ್ಥಾನವನ್ನು ಗಳಿಸಿದೆ. ಕಾರ್ಪೊರೇಟ್ ಗ್ರಾಹಕರು, ಮ್ಯೂಚುಯಲ್ ಫಂಡ್‌ಗಳು, ಸ್ಟಾಕ್ ಎಕ್ಸ್‌ಚೇಂಜ್ ಸದಸ್ಯರು ಮತ್ತು ಬ್ಯಾಂಕ್‌ಗಳಿಗೆ ನಗದು ನಿರ್ವಹಣೆ ಮತ್ತು ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಪರಿಹಾರಗಳ ಪ್ರಮುಖ ಪೂರೈಕೆದಾರರಾಗಿ ಇದನ್ನು ಗುರುತಿಸಲಾಗಿದೆ ​​

ಹೂಡಿಕೆ ಬ್ಯಾಂಕಿಂಗ್ ವ್ಯವಹಾರವು ಲೋನ್ ಬಂಡವಾಳ ಮಾರುಕಟ್ಟೆಗಳು ಮತ್ತು ಇಕ್ವಿಟಿ ಬಂಡವಾಳ ಮಾರುಕಟ್ಟೆಗಳ ಮೂಲಕ ಬಂಡವಾಳವನ್ನು ಸಂಗ್ರಹಿಸಲು ಮತ್ತು ರೂಪಾಯಿ ಲೋನ್ ಸಿಂಡಿಕೇಶನ್ ಸರ್ವಿಸ್‌ಗಳನ್ನು ಒದಗಿಸಲು ಕಂಪನಿಗಳಿಗೆ ಸಹಾಯ ಮಾಡುತ್ತದೆ. ಇದು ತನ್ನ ಗ್ರಾಹಕರಿಗೆ ಸಲಹಾ ಸರ್ವಿಸ್‌ಗಳನ್ನು ಕೂಡ ಒದಗಿಸುತ್ತದೆ.

ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳು

  • ವರ್ಕಿಂಗ್ ಕ್ಯಾಪಿಟಲ್ ಸೌಲಭ್ಯಗಳು
  • ಟರ್ಮ್ ಲೋನ್ ನೀಡುವಿಕೆ
  • ಪ್ರಾಜೆಕ್ಟ್ ಫೈನಾನ್ಸ್
  • ಡೆಟ್ ಕ್ಯಾಪಿಟಲ್ ಮಾರುಕಟ್ಟೆಗಳು
  • ವಿಲೀನಗಳು ಮತ್ತು ಸ್ವಾಧೀನಗಳು
  • ಟ್ರೇಡ್ ಕ್ರೆಡಿಟ್
  • ಸಪ್ಲೈ ಚೈನ್ ಫೈನಾನ್ಸಿಂಗ್
  • ಫಾರೆಕ್ಸ್ ಮತ್ತು ಡಿರೈವೇಟಿವ್‌ಗಳು
  • ಕ್ಯಾಶ್ ಮ್ಯಾನೇಜ್‌ಮೆಂಟ್ ಸೇವೆಗಳು
  • ಹೋಲ್‌ಸೇಲ್ ಡೆಪಾಸಿಟ್‌ಗಳು
  • ಕ್ರೆಡಿಟ್ ಮತ್ತು ಖಾತರಿ ಪತ್ರಗಳು
  • ಕಸ್ಟೋಡಿಯಲ್ ಸೇವೆಗಳು
  • ಕರೆಸ್ಪಾಂಡೆಂಟ್ ಬ್ಯಾಂಕಿಂಗ್
  • ಕನ್‌ಸ್ಟ್ರಕ್ಷನ್ ಫೈನಾನ್ಸ್
Smart EMI

ಕಮರ್ಷಿಯಲ್ ಮತ್ತು ರೂರಲ್ ಬ್ಯಾಂಕಿಂಗ್ (CRB)

ಬ್ಯಾಂಕ್‌ನ ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ (CRB) ಗುಂಪನ್ನು ಹಣಕಾಸು ವರ್ಷ 20-21 ರಲ್ಲಿ ಸ್ಥಾಪಿಸಲಾಗಿದ್ದು, ಅದು ಬೆಳವಣಿಗೆಯ ಎಂಜಿನ್ ಆಗಿ ಗುರುತಿಸಲ್ಪಟ್ಟಿದೆ. ಅದರ ಉದ್ದೇಶಿತ ಗ್ರಾಹಕ ವಿಭಾಗವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ಉದಯೋನ್ಮುಖ ಕಾರ್ಪೊರೇಟ್‌ಗಳು, ವಾಣಿಜ್ಯ ಕೃಷಿ, ಸಣ್ಣ ಮತ್ತು ಅತಿ ಸಣ್ಣ ರೈತರು, ಹೆಲ್ತ್‌ಕೇರ್ ಫೈನಾನ್ಸ್, ಸಲಕರಣೆ ಫೈನಾನ್ಸ್ ಮತ್ತು ವಾಣಿಜ್ಯ ಸಾರಿಗೆ ಕಂಪನಿಗಳಾಗಿವೆ. ಈ ಎಲ್ಲಾ ಬಿಸಿನೆಸ್‌ಗಳು ಅರೆ ನಗರ ಮತ್ತು ಗ್ರಾಮೀಣ (SURU) ಸ್ಥಳಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದ್ದು, ಅಲ್ಲಿ ಬ್ಯಾಂಕ್ ತನ್ನ ಅರ್ಧದಷ್ಟು ಬ್ರಾಂಚ್‌ಗಳನ್ನು ಹೊಂದಿದೆ. ಈ ವಿಭಾಗವು ಕೂಡ ಮುಖ್ಯವಾಗಿದೆ, ಏಕೆಂದರೆ ಈ ಲೋನ್‌ಗಳ ವಿತರಣೆಗಳು ಆದ್ಯತೆಯ ವಲಯದ ಲೋನ್ ಅವಶ್ಯಕತೆಗಳ ದೊಡ್ಡ ಭಾಗವನ್ನು ಪೂರೈಸಲು ಬ್ಯಾಂಕ್‌ಗೆ ಸಹಾಯ ಮಾಡುತ್ತವೆ.

ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳು

  • ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು
  • ಟರ್ಮ್ ಲೋನ್‌ಗಳು
  • ಸಪ್ಲೈ ಚೈನ್ ಮ್ಯಾನೇಜ್ಮೆಂಟ್
  • ಪ್ರಾಜೆಕ್ಟ್ ಫೈನಾನ್ಸ್
  • ಎಕ್ಸ್‌ಪೋರ್ಟ್ ಫೈನಾನ್ಸ್
  • ಟ್ರ್ಯಾಕ್ಟರ್ ಫೈನಾನ್ಸ್
  • ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್
  • ಬೆಳೆ ಲೋನ್/ರೈತರ ಫೈನಾನ್ಸ್
  • KCC
  • ಡೈರಿ/ಕ್ಯಾಟಲ್ ಫೈನಾನ್ಸ್
  • ಹೊಣೆಗಾರಿಕೆಗಳು
  • CASA ಅಕೌಂಟ್‌ಗಳು
  • ಫಿಕ್ಸೆಡ್ ಡೆಪಾಸಿಟ್‌ಗಳು
  • ಸ್ಯಾಲರಿ ಅಕೌಂಟ್
  • ಟ್ರೇಡ್ ಫೈನಾನ್ಸ್
  • ಬ್ಯಾಂಕ್ ಗ್ಯಾರಂಟಿ/LC ಗಳು
  • ಇಂಟರ್ನ್ಯಾಷನಲ್ ಟ್ರೇಡ್
  • FX ಅಡ್ವೈಸರಿ
  • ಟ್ರೇಡ್ ಫ್ಲೋಗಳು ಮತ್ತು ಡಿರೈವೇಟಿವ್‌ಗಳು

ಇನ್ನಷ್ಟು ಓದಿ

About us

ಟ್ರೆಜರಿ

ಟ್ರೆಜರಿಯು ಬ್ಯಾಂಕ್‌ನ ನಗದು/ಲಿಕ್ವಿಡ್ ಅಸೆಟ್‌ಗಳ ಸಂರಕ್ಷಕವಾಗಿದೆ ಹಾಗೂ ಸೆಕ್ಯೂರಿಟಿಗಳು ಮತ್ತು ಇತರ ಮಾರುಕಟ್ಟೆ ಸಾಧನಗಳಲ್ಲಿ ತನ್ನ ಹೂಡಿಕೆಗಳನ್ನು ನಿರ್ವಹಿಸುತ್ತದೆ. ಇದು ಬ್ಯಾಲೆನ್ಸ್ ಶೀಟ್‌ನಲ್ಲಿ ಲಿಕ್ವಿಡಿಟಿ ಮತ್ತು ಬಡ್ಡಿ ದರದ ಅಪಾಯಗಳನ್ನು ನಿರ್ವಹಿಸುತ್ತದೆ ಮತ್ತು ಶಾಸನಬದ್ಧ ರಿಸರ್ವ್ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಕೂಡಾ ಹೊಂದಿದೆ. ಟ್ರೆಜರಿ ಗ್ರಾಹಕರ ವಿದೇಶಿ ವಿನಿಮಯ ಮತ್ತು ಬಡ್ಡಿ ದರದ ಅಪಾಯಗಳನ್ನು ನಿರ್ವಹಿಸುತ್ತಾ ಅವರು ಬ್ಯಾಂಕ್‌ನೊಂದಿಗೆ ಕೈಗೊಳ್ಳುವ ಟ್ರಾನ್ಸಾಕ್ಷನ್‌ಗಳಿಂದ ಫೀಸ್ ಆದಾಯವನ್ನು ಗಳಿಸುತ್ತದೆ.

ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳು

  • ಫಾರಿನ್ ಎಕ್ಸ್‌ಚೇಂಜ್ ಮತ್ತು ಡಿರೈವೇಟಿವ್‌ಗಳು
  • ಹೆಡ್ಜಿಂಗ್ ಕಾರ್ಯತಂತ್ರಗಳ ಪರಿಹಾರಗಳು
  • ಟ್ರೇಡ್ ಪರಿಹಾರಗಳು - ದೇಶೀಯ ಮತ್ತು ಗಡಿಯಾಚೆಗಿನ
  • ಬುಲಿಯನ್
  • ಡೆಟ್ ಕ್ಯಾಪಿಟಲ್ ಮಾರುಕಟ್ಟೆಗಳು
  • ಇಕ್ವಿಟಿಗಳು
  • ಸಂಶೋಧನೆ - ಮಾರುಕಟ್ಟೆಗಳು ಮತ್ತು ಕರೆನ್ಸಿಗಳ ಬಗ್ಗೆ ವರದಿಗಳು ಮತ್ತು ಕಾಮೆಂಟರಿ
  • ಅಸೆಟ್ ಲಯಾಬಿಲಿಟಿ ಮ್ಯಾನೇಜ್‌ಮೆಂಟ್
  • ಶಾಸನಬದ್ಧ ರಿಸರ್ವ್
About us
Agri_banner

ಉನ್ನತ ಮಟ್ಟದ ನಾಯಕರು

ಪ್ರತಿ ಭಾರತೀಯರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸಲು ನಮ್ಮ ದೂರದೃಷ್ಟಿಯ ನಾಯಕರಿಂದ ನಾವು ಸ್ಫೂರ್ತಿ ಪಡೆದಿದ್ದೇವೆ.

helm-pic
9
K +

ಬ್ರಾಂಚ್‌ಗಳು

9
Cr+

ಗ್ರಾಹಕರು

21
K+

ATM

50
M+

ಆ್ಯಪ್‌ ಡೌನ್ಲೋಡ್‌ಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ನ್ಯೂಸ್ ರೂಮ್

ಎಚ್ ಡಿ ಎಫ್ ಸಿ ಬ್ಯಾಂಕ್ ಸುದ್ದಿಗಳು, ಪ್ರಾಡಕ್ಟ್‌ಗಳು, ಸರ್ವಿಸ್‌ಗಳು ಮತ್ತು ಮಾಧ್ಯಮ ಸಂಪನ್ಮೂಲಗಳ ಬಗ್ಗೆ ಅಪ್ಡೇಟ್ ಪಡೆಯಿರಿ. ವಿಚಾರಣೆಗಳಿಗಾಗಿ ನಮ್ಮ PR ತಂಡವನ್ನು ಸಂಪರ್ಕಿಸಿ.

pre-approved

ಪ್ರಶಸ್ತಿಗಳು

ಉತ್ಕೃಷ್ಠತೆಯ ನಮ್ಮ ಬದ್ಧತೆಗಾಗಿ ಸಿಕ್ಕ ಪ್ರಶಂಸೆಗಳ ಅನಾವರಣ.

ಐಸಿಸಿ ಎಮರ್ಜಿಂಗ್ ಏಷ್ಯಾ ಬ್ಯಾಂಕಿಂಗ್ ಕಾಂಕ್ಲೇವ್ ಮತ್ತು ಪ್ರಶಸ್ತಿಗಳು 2025

ಪ್ರಶಸ್ತಿ:
ICC Emerging Asia Banking Conclave & Awards 2025

ಡನ್ & ಬ್ರಾಡ್‌ಸ್ಟ್ರೀಟ್ ಬಿಎಫ್ಎಸ್ಐ ಮತ್ತು ಫಿನ್‌ಟೆಕ್ ಪ್ರಶಸ್ತಿಗಳು 2025

ಪ್ರಶಸ್ತಿ:
Dun & Bradstreet BFSI & Fintech Awards 2025

ಯೂರೋಮನಿ ಪ್ರೈವೇಟ್ ಬ್ಯಾಂಕಿಂಗ್ ಪ್ರಶಸ್ತಿಗಳು 2025

ಪ್ರಶಸ್ತಿ:
Euromoney Private Banking Awards 2025

The Global Private Banking Awards 2024

ಪ್ರಶಸ್ತಿ:
The Global Private Banking Awards 2024

The Asian Banker Leadership Achievement Awards 2024

ಪ್ರಶಸ್ತಿ:
The Asian Banker Leadership Achievement Awards 2024

ICC Emerging Asia Banking Conclave & Awards

ಪ್ರಶಸ್ತಿ:
ICC Emerging Asia Banking Conclave & Awards

Euromoney Awards for Excellence 2024

ಪ್ರಶಸ್ತಿ:
Euromoney Awards for Excellence 2024

Celent Model Bank Awards 2024

ಪ್ರಶಸ್ತಿ:
Celent Model Bank Awards 2024

ಕಾರ್ಪೋರೇಟ್ ಆಡಳಿತ

ಎಚ್ ಡಿ ಎಫ್ ಸಿ ಬ್ಯಾಂಕ್ ಉತ್ತಮ ಕಾರ್ಪೊರೇಟ್ ಆಡಳಿತದ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ

card-one

ನಿಯಂತ್ರಕ ಪ್ರಕಟಣೆಗಳು

ಡಿಸೆಂಬರ್ 2015 ರಿಂದ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಪ್ರಕಟಣೆಗಳ ಮಾಸಿಕ ಪಟ್ಟಿ

card-two

ಕ್ರೆಡಿಟ್ ರೇಟಿಂಗ್

GVC ರೇಟಿಂಗ್‌ಗೆ ಒಳಪಟ್ಟ ಮೊದಲ ನಾಲ್ಕು ಕಂಪನಿಗಳಲ್ಲಿ ಬ್ಯಾಂಕ್ ಕೂಡಾ ಒಂದಾಗಿದೆ

card-three

ಗೆಲ್ಲುವ ತಂಡಕ್ಕೆ ಸೇರಿಕೊಳ್ಳಿ

ಬ್ಯಾಂಕಿಂಗ್‌ನಲ್ಲಿ ನಿಮ್ಮ ಕನಸಿನ ವೃತ್ತಿಜೀವನಕ್ಕೆ ನಿಮಗೆ ಬೆಂಬಲ ನೀಡಲು ನಾವು ಇಲ್ಲಿದ್ದೇವೆ.

Winning Team

ಭಾರತದ ಬೆಳವಣಿಗೆಯಿಂದ ನಡೆಸಲ್ಪಟ್ಟ ಯಶಸ್ಸಿನ ಕಥೆ

ನಾವು ನಡೆದು ಬಂದ ಹಾದಿ ಮತ್ತು ನಮ್ಮ ಮೈಲಿಗಲ್ಲುಗಳ ಬಗ್ಗೆ ತಿಳಿಯಿರಿ.

>

MOGO - ನಮ್ಮ ಮ್ಯೂಸಿಕಲ್ ಲೋಗೋ 

ಎಚ್ ಡಿ ಎಫ್ ಸಿ ಬ್ಯಾಂಕ್‌ನ MOGO, ನಮ್ಮ ಮ್ಯೂಸಿಕಲ್ ಲೋಗೋ (ಸೋನಿಕ್ ಬ್ರ್ಯಾಂಡಿಂಗ್), ನಮ್ಮನ್ನು ಭಾರತದ ಟಾಪ್ ಡಿಜಿಟಲ್ ಬ್ಯಾಂಕ್ ಆಗಿ ಮಾಡಿದ ಮೌಲ್ಯಗಳನ್ನು ಸೂಚಿಸುತ್ತದೆ.

card-three

NPS ಬಳಸಿ ಗ್ರಾಹಕ ಕೇಂದ್ರಿತ ವ್ಯವಸ್ಥೆಯ ನಿರ್ಮಾಣ

ನಾವು ಅನಿಸಿಕೆಯನ್ನು ಸಂಗ್ರಹಿಸುವ ಮೂಲಕ ಗ್ರಾಹಕ-ಕೇಂದ್ರಿತ ಸಂಸ್ಕೃತಿಯನ್ನು ನಿರ್ಮಿಸುತ್ತೇವೆ.

card-one

ಹಿಂದಿನ ಎಚ್ ಡಿ ಎಫ್ ಸಿ ಲಿಮಿಟೆಡ್ ಮಾಹಿತಿಯನ್ನು ನೋಡಿ