ಎಚ್ ಡಿ ಎಫ್ ಸಿ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ.
ಖಾಸಗಿ ವಲಯದಲ್ಲಿ ಬ್ಯಾಂಕ್ ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ "ತಾತ್ವಿಕವಾಗಿ" ಅನುಮೋದನೆಯನ್ನು ಪಡೆದ ಭಾರತದ ಮೊದಲ ಹಣಕಾಸು ಸಂಸ್ಥೆಗಳಲ್ಲಿ ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ ಅಥವಾ ಎಚ್‌ಡಿಎಫ್‌ಸಿ ಲಿಮಿಟೆಡ್ ಒಂದಾಗಿತ್ತು. 1994 ರಲ್ಲಿ ಭಾರತೀಯ ಬ್ಯಾಂಕಿಂಗ್ ಉದ್ಯಮದ ಉದಾರೀಕರಣಕ್ಕಾಗಿ RBI ನೀತಿಯ ಭಾಗವಾಗಿ ಇದನ್ನು ಮಾಡಲಾಯಿತು.
ಆಗಸ್ಟ್ 1994 ರಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು, ಎಚ್‍ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಹೆಸರಿನಲ್ಲಿ ಸಂಯೋಜಿಸಲಾಗಿದ್ದು, ಅದರ ನೋಂದಾಯಿತ ಕಚೇರಿ ಭಾರತದ ಮುಂಬೈನಲ್ಲಿದೆ. ಬ್ಯಾಂಕ್ ಜನವರಿ 1995 ರಲ್ಲಿ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು.
ಏಪ್ರಿಲ್ 4, 2022 ರಂದು ಭಾರತದ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ, ಎಚ್ ಡಿ ಎಫ್ ಸಿ ಲಿಮಿಟೆಡ್ ಮತ್ತು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ವಿಲೀನವನ್ನು ಘೋಷಿಸಲಾಯಿತು. ಕಳೆದ 45 ವರ್ಷಗಳಲ್ಲಿ ಎಚ್ ಡಿ ಎಫ್ ಸಿ ಲಿಮಿಟೆಡ್ ಅತ್ಯುತ್ತಮ ಪ್ರಾಡಕ್ಟ್ ಕೊಡುಗೆಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸಿದ್ದು, ಹೌಸಿಂಗ್ ಫೈನಾನ್ಸ್ ಬಿಸಿನೆಸ್‌ನಲ್ಲಿ ಇದು ಮುಂಚೂಣಿಯಲ್ಲಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ನಗರ, ಅರೆ ನಗರ ಮತ್ತು ಗ್ರಾಮೀಣ ಭಾರತಕ್ಕೆ ತನ್ನ ವ್ಯಾಪಕ ಪ್ರಾಡಕ್ಟ್ ಶ್ರೇಣಿಯ ಭಾಗವಾದ ಹೋಮ್ ಲೋನ್‌ಗಳನ್ನು ತಡೆರಹಿತವಾಗಿ ತಲುಪಿಸುತ್ತದೆ. ವಿಲೀನದ ನಂತರ, ಎಚ್ ಡಿ ಎಫ್ ಸಿ ಬ್ಯಾಂಕ್ ವೃತ್ತಿಪರವಾಗಿ ನಿರ್ವಹಿಸಲಾಗುವ ಸಂಸ್ಥೆಯಾಗಿದ್ದು, ಅನುಭವಿ ನಿರ್ದೇಶಕರ ಮಂಡಳಿಯಿಂದ ಮೇಲ್ವಿಚಾರಣೆ ನಡೆಸಲಾಗುತ್ತದೆ ಮತ್ತು ಗುರುತಿಸಲಾದ ಪ್ರಮೋಟರ್ ಹೊಂದಿಲ್ಲ. ವಿಲೀನವು ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ತನ್ನ ಅಂಗಸಂಸ್ಥೆಗಳ ಮೂಲಕ ಬ್ಯಾಂಕಿಂಗ್‌ನಿಂದ ಇನ್ಶೂರೆನ್ಸ್ ಮತ್ತು ಮ್ಯೂಚುಯಲ್ ಫಂಡ್‌ಗಳಿಗೆ ಸಂಪೂರ್ಣ ಹಣಕಾಸು ಸೇವೆಗಳನ್ನು ಒದಗಿಸುವ ಹಣಕಾಸು ಸೇವೆಗಳ ಸಮೂಹವಾಗಿ ಪರಿವರ್ತಿಸುವುದನ್ನು ಕೂಡ ಗುರುತಿಸುತ್ತದೆ.
ಸೆಪ್ಟೆಂಬರ್ 30, 2025 ರ ಪ್ರಕಾರ ಬ್ಯಾಂಕ್‌ನ ವಿತರಣಾ ನೆಟ್ವರ್ಕ್ 4,156 ನಗರಗಳು/ಪಟ್ಟಣಗಳಲ್ಲಿ 9,545 ಬ್ರಾಂಚ್‌ಗಳು ಮತ್ತು 21,417 ATM ಗಳನ್ನು ಹೊಂದಿದೆ. ಸೆಪ್ಟೆಂಬರ್ 30, 2024 ರಲ್ಲಿ ಬ್ಯಾಂಕ್ 4,088 ನಗರಗಳು/ಪಟ್ಟಣಗಳಲ್ಲಿ 9,092 ಬ್ರಾಂಚ್‌ಗಳು ಮತ್ತು 20,993 ATM ಗಳನ್ನು ಹೊಂದಿತ್ತು. ನಮ್ಮ 51% ಬ್ರಾಂಚ್‌ಗಳು ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿವೆ.
ಬ್ಯಾಂಕ್‌ನ ಇಂಟರ್ನ್ಯಾಷನಲ್ ಕಾರ್ಯಾಚರಣೆಗಳು ಹಾಂಗ್ ಕಾಂಗ್, ಬಹ್ರೈನ್, ದುಬೈ ಮತ್ತು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಯಲ್ಲಿ IFSC ಬ್ಯಾಂಕಿಂಗ್ ಘಟಕ (IBU) ನಲ್ಲಿ ನಾಲ್ಕು ಬ್ರಾಂಚ್‌ಗಳನ್ನು ಒಳಗೊಂಡಿದೆ. ಇದು ಕೀನ್ಯಾ, ಅಬುಧಾಬಿ, ದುಬೈ, ಲಂಡನ್ ಮತ್ತು ಸಿಂಗಾಪುರದಲ್ಲಿ ಐದು ಪ್ರಾತಿನಿಧಿಕ ಕಚೇರಿಗಳನ್ನು ಹೊಂದಿದೆ. ಸಿಂಗಾಪುರ ಮತ್ತು ಲಂಡನ್ ಕಚೇರಿಗಳು ಹಿಂದಿನ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಪ್ರಾತಿನಿಧಿಕ ಕಚೇರಿಗಳಾಗಿದ್ದವು ಮತ್ತು ವಿಲೀನದ ನಂತರ ಬ್ಯಾಂಕ್‌ನ ಪ್ರಾತಿನಿಧಿಕ ಕಚೇರಿಗಳಾದವು. ಇವುಗಳು ಭಾರತದಲ್ಲಿ ಹೌಸಿಂಗ್ ಲೋನ್‌ಗಳನ್ನು ಪಡೆಯಲು ಮತ್ತು ಭಾರತದಲ್ಲಿ ಆಸ್ತಿಗಳನ್ನು ಖರೀದಿಸಲು ಲೋನ್‌ಗಳ ಸಂಬಂಧಿತ ಸರ್ವಿಸ್‌ಗಳನ್ನು ಒದಗಿಸುತ್ತವೆ
ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.