banner-logo

ಹಿಂದೆಂದಿಗಿಂತಲೂ ಹೆಚ್ಚಿನ ರಿವಾರ್ಡ್‌ಗಳು 

ಗಿಫ್ಟಿಂಗ್ ಪ್ರಯೋಜನಗಳು

  • ಸಾಂಪ್ರದಾಯಿಕ ಉಡುಗೊರೆಗಳು ಮತ್ತು ವೌಚರ್‌ಗಳಿಗೆ ಅತ್ಯುತ್ತಮ ಪರ್ಯಾಯ

ಟ್ರಾನ್ಸಾಕ್ಷನ್ ಪ್ರಯೋಜನಗಳು

  • ಅನುಕೂಲಕ್ಕಾಗಿ ಎಲ್ಲಾ ಪ್ರಮುಖ ಮರ್ಚೆಂಟ್ ಮಳಿಗೆಗಳು ಮತ್ತು ಇ-ಕಾಮರ್ಸ್ ಸೈಟ್‌ಗಳಲ್ಲಿ ಅಂಗೀಕರಿಸಲಾಗುತ್ತದೆ

ವಿಶೇಷ ಸೌಲಭ್ಯಗಳು

  • ₹500 ರಿಂದ ₹10,000 ವರೆಗಿನ ಯಾವುದೇ ಮೊತ್ತವನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯೊಂದಿಗೆ ಒಂದು ಬಾರಿ ಲೋಡ್ ಮಾಡಬಹುದಾದ ಕಾರ್ಡ್

Print

ಹೆಚ್ಚುವರಿ ಪ್ರಯೋಜನಗಳು

ಸರಾಸರಿ ಗಿಫ್ಟ್ ಕಾರ್ಡ್ ಮೌಲ್ಯ ₹3000*

ಇದುವರೆಗೆ ನೀಡಲಾದ 22 ಲಕ್ಷಕ್ಕೂ ಹೆಚ್ಚು ಗಿಫ್ಟ್ ಕಾರ್ಡ್‌ಗಳಿಂದ ಸಂಗ್ರಹಿಸಲಾದ ಡೇಟಾದ ಪ್ರಕಾರ

Millennia Credit Card
no data

ಅಪ್ಲಿಕೇಶನ್ ಪ್ರಕ್ರಿಯೆ

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

  • ಹಂತ 1 - ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ
  • ಹಂತ 2- ಆ್ಯಪ್ ಫಾರ್ಮ್ ಭರ್ತಿ ಮಾಡಿ
  • ಹಂತ 3- ಆ್ಯಪ್ ಫಾರ್ಮ್ ಮತ್ತು ಚೆಕ್‌ನೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಲೋಡ್ ಮಾಡಬೇಕಾದ ಮೊತ್ತಕ್ಕಾಗಿ ಸಲ್ಲಿಸಿ.
  • ಹಂತ 4- ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್ ಆಗಿದ್ದರೆ, ನಿಮ್ಮ ಬ್ಯಾಂಕ್ ಅಕೌಂಟಿನಿಂದ ನೇರವಾಗಿ ಮೊತ್ತವನ್ನು ಡೆಬಿಟ್ ಮಾಡಲು ನೀವು ಆಯ್ಕೆ ಮಾಡಬಹುದು.
  • ಹಂತ 5 - ನೀವು ತ್ವರಿತ GiftPlus ಪ್ರಿಪೇಯ್ಡ್ ಕಾರ್ಡ್ ಪಡೆಯುತ್ತೀರಿ.

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ರಿನ್ಯೂವಲ್

  • ಜಾಯ್ನಿಂಗ್ ಮೆಂಬರ್‌ಶಿಪ್ ಫೀಸ್: ₹100 + ಅನ್ವಯವಾಗುವ ತೆರಿಗೆಗಳು

  • ಬ್ಯಾಲೆನ್ಸ್ ವಿಚಾರಣೆ ಫೀಸ್: (ಎಚ್ ಡಿ ಎಫ್ ಸಿ ಬ್ಯಾಂಕ್ ATM ಮತ್ತು ಇತರೆ) ₹10 + ಅನ್ವಯವಾಗುವ ತೆರಿಗೆಗಳು

Fees & Renewal

ಸೇರಿಸಲಾದ ಡಿಲೈಟ್‌ಗಳು ಮತ್ತು ಕಾರ್ಡ್ ಮಾನ್ಯತಾ ಅವಧಿ

  • ಭಾರತದಾದ್ಯಂತ ಯಾವುದೇ ಮರ್ಚೆಂಟ್ ಔಟ್ಲೆಟ್‌ನಲ್ಲಿ ಖರೀದಿಗಳಿಗೆ ಪ್ರಿಪೆಯ್ಡ್ ಗಿಫ್ಟ್ ಕಾರ್ಡ್ ಬಳಸಿ

  • ನಗದು ವಿತ್‌ಡ್ರಾವಲ್ ಅನ್ನು ನಿರ್ಬಂಧಿಸಲಾಗಿದೆ. ಆನ್ಲೈನ್ ಮತ್ತು ಇನ್-ಸ್ಟೋರ್ ಖರೀದಿಗಳಲ್ಲಿ ಬಳಕೆಗೆ ಲಭ್ಯವಿರುವ ಸಂಪೂರ್ಣ ಮೊತ್ತ.

  • ಕನಿಷ್ಠ ಮಿತಿ ₹500 ಮತ್ತು ಗರಿಷ್ಠ ಮಿತಿ ₹10,000 ಜೊತೆಗೆ ಒಂದು ಬಾರಿಯ ಲೋಡ್ ಮಾಡಬಹುದಾದ ಕಾರ್ಡ್

  • ಗ್ರಾಹಕ ಪೋರ್ಟಲ್‌ಗೆ ಅಕ್ಸೆಸ್

  • ಕಾರ್ಡ್ ಇಂಡೆಂಟ್ ದಿನಾಂಕದಿಂದ 3 ವರ್ಷಗಳು

  • ಭಾರತದ ATM ಗಳಲ್ಲಿ ತ್ವರಿತವಾಗಿ ಕಾರ್ಡ್ ಬ್ಯಾಲೆನ್ಸ್ ಪರೀಕ್ಷಿಸಿ

  • ಇನ್-ಸ್ಟೋರ್ ಟ್ರಾನ್ಸಾಕ್ಷನ್‌ಗಳಿಗೆ ಪಿನ್‌ನೊಂದಿಗೆ ಮತ್ತು ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ OTP ಯೊಂದಿಗೆ ಸುರಕ್ಷಿತವಾಗಿದೆ

Added Delights & Card Validity

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣ

ನಿಮ್ಮ ಅನುಕೂಲಕ್ಕಾಗಿ ಪ್ರಿಪೆಯ್ಡ್ ಕಾರ್ಡ್ ನೆಟ್‌ಬ್ಯಾಂಕಿಂಗ್‌ನಲ್ಲಿ ಗಿಫ್ಟ್ ಕಾರ್ಡ್‌ಗಳನ್ನು ನಿರ್ವಹಿಸಬಹುದು.

  • ಲಭ್ಯವಿರುವ ಬ್ಯಾಲೆನ್ಸ್ ಪರೀಕ್ಷಿಸಿ
  • ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಿ
  • ATM PIN ಸೆಟ್ ಮಾಡಿ, ಕಾರ್ಡ್ ಬ್ಲಾಕ್ ಮಾಡಿ, ನೋಂದಾಯಿತ ಮೊಬೈಲ್ ನಂಬರ್ ಬದಲಾಯಿಸಿ
  • ಕಾರ್ಡ್ ಸ್ಟೇಟ್ಮೆಂಟ್
  • ಕಾಂಟಾಕ್ಟ್‌ಲೆಸ್ ಮತ್ತು ಆನ್ಲೈನ್ ಪಾವತಿ ಸರ್ವಿಸ್‌ಗಳನ್ನು ಸಕ್ರಿಯಗೊಳಿಸಿ
  • ಟ್ರಾನ್ಸಾಕ್ಷನ್ ಮಿತಿಗಳನ್ನು ಸೆಟ್ ಮಾಡಿ

 

Card Management & Control

ಅರ್ಹತಾ ಮಾನದಂಡ

  • ಸರಿಯಾದ ಪ್ಯಾನ್ ಕಾರ್ಡ್ ಹೊಂದಿರುವ ಯಾರಾದರೂ ಎಚ್ ಡಿ ಎಫ್ ಸಿ ಬ್ಯಾಂಕ್ GiftPlus ಕಾರ್ಡ್‌ಗೆ ಅಪ್ಲೈ ಮಾಡಬಹುದು
Eligibility Criteria

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ಈ (ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು) ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳಿಗೆ ಸಂಬಂಧಿಸಿದ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿವೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟ್‌ಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Revolving Credit

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ GiftPlus ಕಾರ್ಡ್‌ಗಳು ಹುಟ್ಟಿದ ದಿನಗಳು, ಹಬ್ಬಗಳು, ಮದುವೆ ಮತ್ತು ವಾರ್ಷಿಕೋತ್ಸವಗಳು ಮುಂತಾದ ವಿವಿಧ ಸಂದರ್ಭಗಳಲ್ಲಿ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಲು ಬಳಸಲಾಗುವ ಬಹುಮುಖ ಪ್ರಿಪೇಯ್ಡ್ ಕಾರ್ಡ್‌ಗಳಾಗಿವೆ. ಇದನ್ನು ವಿವಿಧ ಮರ್ಚೆಂಟ್ ಸಂಸ್ಥೆಗಳು ಮತ್ತು ಆನ್ಲೈನ್ ಸೈಟ್‌ಗಳಲ್ಲಿ ವ್ಯಾಪಕವಾಗಿ ಅಂಗೀಕರಿಸಲಾಗುತ್ತದೆ. ಅವುಗಳು ಹಲವಾರು ಐಟಂಗಳು, ಫ್ಯಾನ್ಸಿ ಡೈನಿಂಗ್, ಟ್ರಾವೆಲ್ ಬುಕಿಂಗ್‌ಗಳು ಮತ್ತು ಇನ್ನೂ ಮುಂತಾದವುಗಳ ಶಾಪಿಂಗ್ ಮಾಡಲು ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತವೆ.

GiftPlus ಕಾರ್ಡ್‌ನ ವಿತರಣೆ ಫೀಸ್ ₹ 100 + GST.

ಇದು ಕನಿಷ್ಠ ₹500 ಮತ್ತು ಗರಿಷ್ಠ ₹10,000 ಮಿತಿಯೊಂದಿಗೆ ಒಂದು ಬಾರಿಯ ಲೋಡ್ ಮಾಡಬಹುದಾದ ಕಾರ್ಡ್ ಆಗಿದೆ.

GiftPlus ಕಾರ್ಡ್ ರಿಡೀಮ್ ಮಾಡುವುದು ಸುಲಭ. ಭಾರತದಾದ್ಯಂತ ಯಾವುದೇ ಮರ್ಚೆಂಟ್ ಔಟ್ಲೆಟ್ ಅಥವಾ ಆನ್ಲೈನ್ ಸೈಟ್‌ಗಳಲ್ಲಿ ಖರೀದಿಗಳಿಗಾಗಿ ಇದನ್ನು ಬಳಸಿ, ಶಾಪಿಂಗ್, ಡೈನಿಂಗ್, ಟ್ರಾವೆಲ್ ಬುಕಿಂಗ್‌ಗಳು, ಫುಡ್ ಆರ್ಡರ್, ಬಿಲ್ ಪಾವತಿಗಳು ಇತ್ಯಾದಿಗಳಿಗೆ ಅನುಕೂಲಕರ ಮಾರ್ಗವನ್ನು ಒದಗಿಸುತ್ತದೆ.

GiftPlus ಕಾರ್ಡ್ ಅನ್ನು ನೇರವಾಗಿ ಬ್ಯಾಂಕ್ ಅಕೌಂಟ್‌ಗೆ ಹಾಕಲಾಗುವುದಿಲ್ಲ. ಇದು ಪ್ರಿಪೆಯ್ಡ್ ಕಾರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ಆನ್ಲೈನ್ ಅಥವಾ ಬ್ರಾಂಚ್‌ನಲ್ಲಿ ಪ್ರತ್ಯೇಕವಾಗಿ ಅಪ್ಲೈ ಮಾಡಬಹುದು.

ನೀವು ನೇರವಾಗಿ Giftplus ಕಾರ್ಡ್ ಅನ್ನು ನಗದು ಆಗಿ ಪರಿವರ್ತಿಸಲು ಸಾಧ್ಯವಿಲ್ಲ. ಇದು ATM ಗಳಲ್ಲಿ ನಗದು ವಿತ್‌ಡ್ರಾವಲ್ ಆಫರ್ ಮಾಡುವುದಿಲ್ಲ.

ಬಹುಮುಖ ಬಳಕೆ: 
Giftplus ಕಾರ್ಡ್ ಬಹುಮುಖ ಬಳಕೆಯನ್ನು ಒದಗಿಸುತ್ತದೆ, ಸ್ವೀಕರಿಸುವವರಿಗೆ ಗ್ಯಾಜೆಟ್‌ಗಳು ಮತ್ತು ಉಡುಪುಗಳಿಂದ ಫ್ಯಾನ್ಸಿ ಮೀಲ್ಸ್‌ಗೆ ತಮ್ಮ ಅಪೇಕ್ಷಿತ ಉಡುಗೊರೆಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ

ಸುಲಭ ಬಳಕೆ:
ಯಾವುದೇ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ಅಪೇಕ್ಷಿತ ಮೊತ್ತದೊಂದಿಗೆ ಕಾರ್ಡ್ ಲೋಡ್ ಮಾಡಿ, ಇದು ಸರಳ ಉಡುಗೊರೆ ಅನುಭವವನ್ನು ಖಚಿತಪಡಿಸುತ್ತದೆ.

ವ್ಯಾಪಕವಾಗಿ ಅಂಗೀಕರಿಸಲಾಗುತ್ತದೆ:
ಮರ್ಚೆಂಟ್ ಔಟ್ಲೆಟ್‌ಗಳಲ್ಲಿ ವ್ಯಾಪಕವಾಗಿ ಅಂಗೀಕರಿಸಲಾಗುತ್ತದೆ, ಇದು ವಿವಿಧ ಸಂಸ್ಥೆಗಳಲ್ಲಿ ಶಾಪಿಂಗ್ ಮತ್ತು ಡೈನಿಂಗ್‌ಗೆ ಅನುಕೂಲಕರವಾಗಿದೆ.

  1. ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ.
  2. ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  3. ಯಾವುದೇ ಅಧಿಕೃತ ಮಾನ್ಯ ಡಾಕ್ಯುಮೆಂಟ್ (OVD) ಜೊತೆಗೆ ಫೋಟೋ ಒದಗಿಸಿ

ಗ್ರಾಹಕರು ಈ ಕೆಳಗೆ ಪಟ್ಟಿ ಮಾಡಲಾದ ಫೋಟೋ, ಚೆಕ್ ಮತ್ತು ಯಾವುದೇ OVD (ಅಧಿಕೃತ ಮಾನ್ಯ ಡಾಕ್ಯುಮೆಂಟ್‌ಗಳು) ಅನ್ನು ಕೊಂಡೊಯ್ಯಬೇಕು:

  •  ಪಾಸ್‌ಪೋರ್ಟ್

  •  ಡ್ರೈವಿಂಗ್ ಲೈಸೆನ್ಸ್ 

  •  ಭಾರತದ ಚುನಾವಣೆ ಆಯೋಗದಿಂದ ನೀಡಲಾದ ಮತದಾರರ ಗುರುತಿನ ಚೀಟಿ

  •  ರಾಜ್ಯ ಸರ್ಕಾರದ ಅಧಿಕಾರಿಯು ಸರಿಯಾಗಿ ಸಹಿ ಮಾಡಿದ NREGA ನೀಡಿದ ಜಾಬ್ ಕಾರ್ಡ್

  •  ಹೆಸರು ಮತ್ತು ವಿಳಾಸದ ವಿವರಗಳನ್ನು ಒಳಗೊಂಡಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ

  •  ಆಧಾರ್ ಕಾರ್ಡ್ (ಒಂದು ವೇಳೆ ಕಾರ್ಡ್ ಹೋಲ್ಡರ್ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ಒದಗಿಸಿದರೆ, ಆಧಾರ್ ಕಾರ್ಡ್ ಸಮ್ಮತಿ ಫಾರ್ಮ್ ಕಡ್ಡಾಯವಾಗಿದೆ)

ಸರಿಯಾದ ಪ್ಯಾನ್ ಕಾರ್ಡ್ ಹೊಂದಿರುವ ಯಾರಾದರೂ, GiftPlus ಪ್ರಿಪೇಯ್ಡ್ ಕಾರ್ಡ್‌ಗೆ ಅಪ್ಲೈ ಮಾಡಬಹುದು ಮತ್ತು ಅದನ್ನು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಬಹುದು.