Indian Oil HDFC Bank Credit Card

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

IndianOil ಪ್ರಯೋಜನಗಳು

  • Indian Oil ಔಟ್‌ಲೆಟ್‌ಗಳಲ್ಲಿ ನಿಮ್ಮ 5% ಖರ್ಚುಗಳನ್ನು ಫ್ಯೂಯಲ್ ಪಾಯಿಂಟ್‌ಗಳಾಗಿ ಗಳಿಸಿ*

ವೆಲ್ಕಮ್ ಪ್ರಯೋಜನಗಳು

  • ಕಾಂಪ್ಲಿಮೆಂಟರಿ IndianOil XTRAREWARDSTM ಪ್ರೋಗ್ರಾಮ್ (IXRP) ಮೆಂಬರ್‌ಶಿಪ್

ವಿಶೇಷ ಸೌಲಭ್ಯಗಳು

  • Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ರಿಟೇಲ್ ಖರ್ಚುಗಳಿಗೆ ಫ್ಯೂಯಲ್ ಪಾಯಿಂಟ್‌ಗಳನ್ನು ಗಳಿಸಿ*

ಆ್ಯಕ್ಟಿವೇಶನ್ ಪ್ರಯೋಜನಗಳು

  • ಕಾರ್ಡ್ ಆ್ಯಕ್ಟಿವೇಶನ್ ನಂತರ ₹ 250 ಮೌಲ್ಯದ ವೌಚರ್ ಮತ್ತು ಕಾರ್ಡ್ ನೀಡಿದ ದಿನಾಂಕದಿಂದ 37 ದಿನಗಳ ಒಳಗೆ ಕನಿಷ್ಠ ಒಂದು ಟ್ರಾನ್ಸಾಕ್ಷನ್ ಪೂರ್ಣಗೊಳಿಸಿದ ನಂತರ

Print
ads-block-img

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: ಕನಿಷ್ಠ 21 ವರ್ಷಗಳು, ಗರಿಷ್ಠ 60 ವರ್ಷಗಳು
  • ನಿವ್ವಳ ಮಾಸಿಕ ಆದಾಯ: >₹ 12,000

ಸ್ವಯಂ ಉದ್ಯೋಗಿ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: ಕನಿಷ್ಠ 21 ವರ್ಷಗಳು, ಗರಿಷ್ಠ 65 ವರ್ಷಗಳು
  • ವಾರ್ಷಿಕ ಆದಾಯ: ITR > ವರ್ಷಕ್ಕೆ ₹6 ಲಕ್ಷ
Print

22 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳಂತೆ ವಾರ್ಷಿಕವಾಗಿ ₹ 10,000* ವರೆಗೆ ಉಳಿತಾಯ ಮಾಡಿ

Millennia Credit Card

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಡ್ರೈವಿಂಗ್ ಲೈಸೆನ್ಸ್
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್)
  • ಬಾಡಿಗೆ ಅಗ್ರೀಮೆಂಟ್
  • ಬ್ಯಾಂಕ್ ಸ್ಟೇಟ್ಮೆಂಟ್

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಇತ್ತೀಚಿನ)
  • ಫಾರ್ಮ್ 16
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

3 ಸುಲಭ ಹಂತಗಳಲ್ಲಿ ಈಗಲೇ ಅಪ್ಲೈ ಮಾಡಿ:

ಹಂತಗಳು:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

IndianOil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ಇನ್ನಷ್ಟು

MyCards ಮೂಲಕ ಕಾರ್ಡ್ ಕಂಟ್ರೋಲ್

MyCards, ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆಗಿದ್ದು, Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.

  • ಕ್ರೆಡಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ 
  • ಆನ್ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ/ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ
  • ಕಾರ್ಡ್ ಬ್ಲಾಕ್ ಮಾಡಿ/ಮರು-ವಿತರಣೆ ಪಡೆಯಿರಿ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಬಿಸಿನೆಸ್ ಲೋನ್‌ಗಳನ್ನು ನಿರ್ವಹಿಸಲು ಒಂದು ಏಕೀಕೃತ ಪ್ಲಾಟ್‌ಫಾರ್ಮ್. 
  • ಖರ್ಚಿನ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಬಿಸಿನೆಸ್ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸರಳ, ಅರ್ಥಪೂರ್ಣ ಇಂಟರ್ಫೇಸ್. 
  • ರಿವಾರ್ಡ್ ಪಾಯಿಂಟ್‌ಗಳು
    ಕೇವಲ ಒಂದು ಕ್ಲಿಕ್‌ನೊಂದಿಗೆ ಸುಲಭವಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ನೋಡಿ ಮತ್ತು ರಿಡೀಮ್ ಮಾಡಿ. 
Card Management and Control

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹500/- ಜೊತೆಗೆ ಅನ್ವಯವಾಗುವ ತೆರಿಗೆಗಳು
  • ನಿಮ್ಮ Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

01-11- 2020 ರಿಂದ ಜಾರಿಗೆ ಬರುವಂತೆ, ಕೆಳಗಿನ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ  

1. ಒಂದು ವೇಳೆ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತು ಬ್ಯಾಂಕ್‌ನ ದಾಖಲೆಗಳಲ್ಲಿ ನೋಂದಾಯಿಸಲಾದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ನಂಬರ್ ಮತ್ತು/ಅಥವಾ ಸಂವಹನ ವಿಳಾಸಕ್ಕೆ ಮುಂಚಿತವಾಗಿ ಲಿಖಿತ ಸೂಚನೆ ಕಳುಹಿಸಿದ ನಂತರವೂ 6 (ಆರು) ತಿಂಗಳ ನಿರಂತರ ಅವಧಿಗೆ ಯಾವುದೇ ಟ್ರಾನ್ಸಾಕ್ಷನ್ ಮಾಡಲು ಬಳಸದಿದ್ದರೆ ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ. 

ಯಾವುದೇ ಅನ್ವಯವಾಗುವ ಮರ್ಚೆಂಟ್‌ಗೆ ಮಾಡಿದ ತಿಂಗಳ ಬಾಡಿಗೆ ಟ್ರಾನ್ಸಾಕ್ಷನ್‌ಗಳ ಮೇಲೆ ಟ್ರಾನ್ಸಾಕ್ಷನ್ ಮೊತ್ತದ 1% ಫೀಸ್ ವಿಧಿಸಲಾಗುತ್ತದೆ. ಪ್ರತಿ ಟ್ರಾನ್ಸಾಕ್ಷನ್‌ಗೆ ₹3,000 ಫೀಸ್ ಮಿತಿಗೊಳಿಸಲಾಗಿದ್ದು, ಇದು 1ನೇ ಆಗಸ್ಟ್ 2024 ರಿಂದ ಅನ್ವಯವಾಗುತ್ತದೆ.

​​​​​​​ಎಲ್ಲಾ ಇಂಟರ್ನ್ಯಾಷನಲ್ / ಕ್ರಾಸ್ ಕರೆನ್ಸಿ ಟ್ರಾನ್ಸಾಕ್ಷನ್‌ಗೆ 3.5% ಮಾರ್ಕ್-ಅಪ್ ಫೀಸ್ ಅನ್ವಯವಾಗುತ್ತದೆ

Fees & Charges

ಹೆಚ್ಚುವರಿ ಫೀಚರ್‌ಗಳು

  • ಶೂನ್ಯ ವೆಚ್ಚದ ಕಾರ್ಡ್ ಹೊಣೆಗಾರಿಕೆ: ಎಚ್ ಡಿ ಎಫ್ ಸಿ ಬ್ಯಾಂಕ್‌ನ 24-ಗಂಟೆಯ ಕಾಲ್ ಸೆಂಟರ್‌ಗೆ ತಕ್ಷಣ ವರದಿ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳ ಮೇಲೆ ಲಭ್ಯವಿದೆ.
  • ರಿವಾಲ್ವಿಂಗ್ ಕ್ರೆಡಿಟ್: ನಾಮಮಾತ್ರದ ಬಡ್ಡಿ ದರದಲ್ಲಿ ಲಭ್ಯವಿದೆ. (ಹೆಚ್ಚಿನ ವಿವರಗಳಿಗಾಗಿ ಫೀಸ್ ಮತ್ತು ಶುಲ್ಕಗಳ ಸೆಕ್ಷನ್ ಪರೀಕ್ಷಿಸಿ)
  • ಬಡ್ಡಿ-ರಹಿತ ಕ್ರೆಡಿಟ್ ಅವಧಿ: ಖರೀದಿಯ ದಿನಾಂಕದಿಂದ 50 ದಿನಗಳವರೆಗಿನ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ. (ಮರ್ಚೆಂಟ್‌ನಿಂದ ಫೀಸ್ ಸಲ್ಲಿಸಲು ಒಳಪಟ್ಟಿರುತ್ತದೆ) 
  • SmartEMI: Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಖರೀದಿಯ ನಂತರ ದೊಡ್ಡ ಖರ್ಚುಗಳನ್ನು EMI ಆಗಿ ಪರಿವರ್ತಿಸುವ ಆಯ್ಕೆ. (ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ)    
Additional Features

ಕಾಂಟಾಕ್ಟ್‌ಲೆಸ್ ಪಾವತಿ

  • ಕಾಂಟಾಕ್ಟ್‌ಲೆಸ್ ಪಾವತಿ: ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ IndianOil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.  

(ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹ 5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹ 5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Contactless Payment

ಕಾರ್ಡ್ ರಿವಾರ್ಡ್ ಮತ್ತು ರಿಡೆಂಪ್ಶನ್ ಪ್ರೋಗ್ರಾಮ್

  • ಫ್ಯೂಯಲ್ ಪಾಯಿಂಟ್ ಎಂಬುದು Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ರಚಿಸಲಾದ ವಿಶೇಷ ರಿವಾರ್ಡ್ಸ್ ಮೆಟ್ರಿಕ್ ಸಿಸ್ಟಮ್ ಆಗಿದೆ. Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ರಿಟೇಲ್ ಖರ್ಚುಗಳಿಗೆ ಕೂಡ ಫ್ಯೂಯಲ್ ಪಾಯಿಂಟ್‌ಗಳನ್ನು ಗಳಿಸಬಹುದು.
  • Indian Oil ಔಟ್‌ಲೆಟ್‌ಗಳು, ದಿನಸಿ ಮತ್ತು ಬಿಲ್ ಪಾವತಿಗಳಲ್ಲಿ ಖರ್ಚುಗಳಿಗೆ ಎಕ್ಸಲರೇಟೆಡ್ 5% ಫ್ಯೂಯಲ್ ಪಾಯಿಂಟ್‌ಗಳು. (Indian Oil ರಿಟೇಲ್ ಔಟ್ಲೆಟ್‌ಗಳಲ್ಲಿ ಫ್ಯೂಯಲ್ ಟ್ರಾನ್ಸಾಕ್ಷನ್‌ಗಳಿಗೆ ಮಾತ್ರ ಎಕ್ಸಲರೇಟೆಡ್ 5% ಫ್ಯೂಯಲ್ ಪಾಯಿಂಟ್‌ಗಳ ಪ್ರಯೋಜನವನ್ನು ನೀಡಲಾಗುತ್ತದೆ.) 
  • ಕಾಂಪ್ಲಿಮೆಂಟರಿ Indian Oil XTRAREWARDSTM ಪ್ರೋಗ್ರಾಮ್ (IXRP) ಮೆಂಬರ್‌ಶಿಪ್ ಅನ್ನು ಬಳಸಿಕೊಂಡು ಉಚಿತ ಫ್ಯೂಯಲ್‌ಗಾಗಿ ಫ್ಯೂಯಲ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ. ಫ್ಯೂಯಲ್ ಪಾಯಿಂಟ್‌ಗಳನ್ನು XRP ಆಗಿ ಪರಿವರ್ತಿಸುವ ಮೂಲಕ Indian Oil ಪೆಟ್ರೋಲ್ ಔಟ್‌ಲೆಟ್‌ನಲ್ಲಿ ಭಾಗವಹಿಸಿ ರಿಡೆಂಪ್ಶನ್ ಮಾಡಿ (1 ಫ್ಯೂಯಲ್ ಪಾಯಿಂಟ್ = 3XP = 96ಪೈಸಾ). 
  • ಕೆಟಲಾಗ್ ಪ್ರಾಡಕ್ಟ್‌ಗಳಿಗಾಗಿ ನೆಟ್‌ಬ್ಯಾಂಕಿಂಗ್ ಮೂಲಕ ಫ್ಯೂಯಲ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ (1 FP = 20 ಪೈಸೆ ವರೆಗೆ) 
  • ನಿಮ್ಮ Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್ ಆಗಿ ಫ್ಯೂಯಲ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ. (1 FP = 20 ಪೈಸೆಯಲ್ಲಿ ಸ್ಟೇಟ್ಮೆಂಟ್ ಬ್ಯಾಲೆನ್ಸ್ ಮೇಲೆ ಕ್ಯಾಶ್‌ಬ್ಯಾಕ್ ರಿಡೆಂಪ್ಶನ್)
ಪ್ರತಿ ಯೂನಿಟ್‌ಗೆ ವೆಚ್ಚ ₹   IOCL ಫ್ಯೂಯಲ್ ಪಾಯಿಂಟ್‌ಗಳು ₹
ಪ್ರಾಡಕ್ಟ್ ಕೆಟಲಾಗ್ ಕ್ಯಾಶ್‌ಬ್ಯಾಕ್  
0.20 ರ ವರೆಗೆ 0.2 1 ಫ್ಯೂಯಲ್ ಪಾಯಿಂಟ್ = 3 ಹೆಚ್ಚುವರಿ ರಿವಾರ್ಡ್ ಪಾಯಿಂಟ್ (XRP)
1 XRP = 0.32
1 ಫ್ಯೂಯಲ್ ಪಾಯಿಂಟ್ = 0.96
  • ಫ್ಯೂಯಲ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
  • ನಿಮ್ಮ ಹತ್ತಿರದ Indian Oil ಪೆಟ್ರೋಲ್ ಔಟ್‌ಲೆಟ್ ಹುಡುಕಲು, ಇಲ್ಲಿ ಕ್ಲಿಕ್ ಮಾಡಿ
Card Reward and Redemption Program

ಫ್ಯೂಯಲ್ ಪಾಯಿಂಟ್‌ಗಳ ಮಾನ್ಯತೆ ಮತ್ತು ರಿಡೆಂಪ್ಶನ್ ಮಿತಿ

ಫ್ಯೂಯಲ್ ಪಾಯಿಂಟ್‌ಗಳು 2 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತವೆ.

  • ಕ್ಯಾಶ್‌ಬ್ಯಾಕ್ ಮತ್ತು ಟ್ರಾವೆಲ್ ಕೆಟಗರಿಗಳಿಗೆ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಅನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 50,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ 
  • ದಿನಸಿ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 1000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ
  • ಬಾಡಿಗೆ ಮತ್ತು ಸರ್ಕಾರಿ ಕೆಟಗರಿ ಪಾವತಿಗಳಿಗಾಗಿ ಮಾಡಿದ ವೆಚ್ಚಗಳಿಗೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹಣೆ ಇರುವುದಿಲ್ಲ
  • ಪಾಯಿಂಟ್‌ಗಳು ಮತ್ತು ಪಾವತಿ - ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಗರಿಷ್ಠ 70% ಪಾವತಿಸಬಹುದು ಮತ್ತು ಇತರ 30% ಪಾವತಿ ವಿಧಾನಗಳ (ನಗದು/ಕಾರ್ಡ್‌ಗಳು/UPI ಇತ್ಯಾದಿ) ಮೂಲಕ ಪಾವತಿಸಬಹುದು
Fuel Points Validity & Redemption Limit

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
  • ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಲಿಂಕ್‌ಗಳನ್ನು ಅಕ್ಸೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
  • ಉತ್ಪನ್ನದ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ
Most Important Terms and Conditions 

ಗ್ರಾಹಕರಿಗೆ ಮೌಲ್ಯದ ಚಾರ್ಟ್

ಖರ್ಚುಗಳು ವರ್ಗ ಸಾಮಾನ್ಯ ಮಾಸಿಕ ಖರ್ಚುಗಳು (₹ ಗಳಲ್ಲಿ) % ಫ್ಯೂಯಲ್ ಪಾಯಿಂಟ್‌ಗಳು ಫ್ಯೂಯಲ್ ಪಾಯಿಂಟ್‌ಗಳು ಬಾಕಿ ಮಾಸಿಕ ಗರಿಷ್ಠ ಕ್ಯಾಪಿಂಗ್* ಗಳಿಸಿದ ಫ್ಯೂಯಲ್ ಪಾಯಿಂಟ್‌ಗಳು
A ಪೆಟ್ರೋಲ್ (IOCL ಪಂಪ್‌ಗಳು) 5000 5% 250 150 150
B ದಿನಸಿಗಳು 3000 5% 150 100 100
C ಯುಟಿಲಿಟಿಗಳು 3000 5% 150 100 100
D ಉಳಿದ 12000 0.7% 80 na 80
E ಒಟ್ಟು (A+B+C+D) 23000   630 na 430
ಗಳಿಸಿದ ವಾರ್ಷಿಕ ಫ್ಯೂಯಲ್ ಪಾಯಿಂಟ್‌ಗಳು (E x 12): 5160
ರಿಡೆಂಪ್ಶನ್ ಮೇಲೆ ಪಾಯಿಂಟ್‌ಗಳ ನಗದು ಮೌಲ್ಯ (1 FP = 3 XRP = ₹ 0.96):  4954
ಉಚಿತ ಫ್ಯೂಯಲ್ ಲೀಟರ್‌ಗಳು @ ₹ . ಪ್ರತಿ ಲೀಟರ್‌ಗೆ 100 50

ಕಾರ್ಡ್ ನೀಡಿದ ಮೊದಲ 6 ತಿಂಗಳವರೆಗೆ ಇಂಡಿಯನ್‌ಆಯಿಲ್ ಔಟ್ಲೆಟ್‌ಗಳಲ್ಲಿ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳಿಗೆ ಮಾಸಿಕ ಗರಿಷ್ಠ ಕ್ಯಾಪ್: 250 FP

6 ತಿಂಗಳ ನಂತರ ಇಂಡಿಯನ್‌ಆಯಿಲ್ ಔಟ್ಲೆಟ್‌ಗಳಲ್ಲಿ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳಿಗೆ ಮಾಸಿಕ ಗರಿಷ್ಠ ಕ್ಯಾಪ್: 150 FP

*IOCL ಫ್ಯೂಯಲ್ ಪಂಪ್‌ಗಳಲ್ಲಿ ಫ್ಯೂಯಲ್ ಟ್ರಾನ್ಸಾಕ್ಷನ್‌ಗಳಿಗೆ 1 FP = ₹0.96

Most Important Terms and Conditions 

ಅಪ್ಲಿಕೇಶನ್ ಚಾನೆಲ್‌ಗಳು

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನೀವು ಈ ಕೆಳಗಿನ ಯಾವುದೇ ಸುಲಭ ಆಯ್ಕೆಗಳನ್ನು ಆಯ್ಕೆ ಮಾಡಬಹುದು:

  • 1. ವೆಬ್‌ಸೈಟ್
    ಕ್ಲಿಕ್ ಮಾಡುವ ಮೂಲಕ ನೀವು ತ್ವರಿತವಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು ಇಲ್ಲಿ ಕ್ಲಿಕ್ ಮಾಡಿ,.
  • 2. ನೆಟ್‌ಬ್ಯಾಂಕಿಂಗ್
    ನೀವು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಸರಳವಾಗಿ ಲಾಗಿನ್ ಮಾಡಿ ನೆಟ್‌ಬ್ಯಾಂಕಿಂಗ್‌ಗೆ ಮತ್ತು 'ಕಾರ್ಡ್‌ಗಳು' ಸೆಕ್ಷನ್ ಅಪ್ಲೈ ಮಾಡಿ.
  • 3. ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್
    ಫೇಸ್-ಟು-ಫೇಸ್ ಸಂವಹನಕ್ಕೆ ಆದ್ಯತೆ ನೀಡುವುದೇ? ನಿಮ್ಮ ಹತ್ತಿರದ ಬ್ರಾಂಚ್ ಮತ್ತು ನಮ್ಮ ಸಿಬ್ಬಂದಿ ಅಪ್ಲಿಕೇಶನ್‌ನಲ್ಲಿ ನಿಮಗೆ ಸಹಾಯ ಮಾಡುತ್ತಾರೆ.
Most Important Terms and Conditions 

ಆಗಾಗ್ಗೆ ಕೇಳುವ ಪ್ರಶ್ನೆಗಳು

ಫ್ಯೂಯಲ್ ಪಾಯಿಂಟ್‌ಗಳು Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳಿಗೆ ಮಾತ್ರ ರಚಿಸಲಾದ ವಿಶೇಷ ರಿವಾರ್ಡ್‌ಗಳ ಮೆಟ್ರಿಕ್ ವ್ಯವಸ್ಥೆ ಆಗಿದೆ. ನಿಮ್ಮ IndianOil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನೀವು ಮಾಡುವ ರಿಟೇಲ್ ಖರ್ಚುಗಳ ಮೇಲೆ ಫ್ಯೂಯಲ್ ಪಾಯಿಂಟ್‌ಗಳನ್ನು ಗಳಿಸುತ್ತೀರಿ ಹಾಗೂ ನಿಮ್ಮ ಫ್ಯೂಯಲ್ ಖರ್ಚುಗಳು (IndianOil ರಿಟೇಲ್ ಔಟ್ಲೆಟ್‌ಗಳಲ್ಲಿ ಮಾತ್ರ*), ಪ್ರಾಡಕ್ಟ್ ಫೀಚರ್‌ಗಳು ಮತ್ತು ಪ್ರಯೋಜನಗಳಲ್ಲಿ ನಮೂದಿಸಿದಂತೆ ದಿನಸಿಗಳು ಮತ್ತು ಯುಟಿಲಿಟಿಗಳಂತಹ ಪ್ರಮುಖ ಕೆಟಗರಿಗಳಲ್ಲಿ ವೇಗವರ್ಧಿತ ಫ್ಯೂಯಲ್ ಪಾಯಿಂಟ್ ಸಂಗ್ರಹಿಸುತ್ತೀರಿ

*IndianOil ರಿಟೇಲ್ ಔಟ್ಲೆಟ್‌ಗಳಲ್ಲಿ ಮಾಡಲಾದ UPI ಅಲ್ಲದ ಟ್ರಾನ್ಸಾಕ್ಷನ್‌ಗಳಿಗೆ ಮಾತ್ರ ವೇಗವರ್ಧಿತ 5% ಫ್ಯೂಯಲ್ ಪಾಯಿಂಟ್‌ಗಳ ಪ್ರಯೋಜನವನ್ನು ನೀಡಲಾಗುತ್ತದೆ. IOCL ಕಾರ್ಡ್‌ನಲ್ಲಿ UPI ಟ್ರಾನ್ಸಾಕ್ಷನ್‌ಗಳಿಗೆ ಫ್ಯೂಯಲ್ ಪಾಯಿಂಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ನಿಯಮಿತ ಚಾಲಕರಿಗೆ Indian Oil ಕ್ರೆಡಿಟ್ ಕಾರ್ಡ್ ಸೂಕ್ತವಾಗಿದೆ. ಈ ಫ್ಯೂಯಲ್ ಕ್ರೆಡಿಟ್ ಕಾರ್ಡ್ ಫ್ಯೂಯಲ್ ಖರೀದಿಗಳ ಮೇಲೆ ಗಮನಾರ್ಹ ಉಳಿತಾಯವನ್ನು ಖಚಿತಪಡಿಸುತ್ತದೆ, ನಿಮ್ಮ ವಾಹನದ ಅಗತ್ಯಗಳನ್ನು ಮೀರಿ ಪ್ರಾಯೋಗಿಕ ಪ್ರಯೋಜನಗಳನ್ನು ಒದಗಿಸುತ್ತದೆ. ಯಾವುದೇ ಜಾಯ್ನಿಂಗ್ ಶುಲ್ಕವಿಲ್ಲದೆ ಫ್ಯೂಯಲ್ ಮತ್ತು ಯುಟಿಲಿಟಿ ಬಿಲ್‌ಗಳ ಮೇಲೆ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಇಂದೇ ಆನ್ಲೈನಿನಲ್ಲಿ ಅಪ್ಲೈ ಮಾಡಿ.

IndianOil XTRAREWARDSTM ಪ್ರೋಗ್ರಾಮ್, Indian Oil Corporation Ltd. ಒಡೆತನದಲ್ಲಿರುವ ಮತ್ತು ನಡೆಸುತ್ತಿರುವ ಒಂದು ವಿಶೇಷ ಲಾಯಲ್ಟಿ ರಿವಾರ್ಡ್ಸ್ ಪ್ರೋಗ್ರಾಮ್ ಆಗಿದೆ. ಈ ಲಾಯಲ್ಟಿ ಪ್ರೋಗ್ರಾಮ್ ಯಾವುದೇ IndianOil ರಿಟೇಲ್ ಔಟ್‌ಲೆಟ್‌ನಲ್ಲಿ ಪ್ರತಿ ಟ್ರಾನ್ಸಾಕ್ಷನ್ ಮೇಲೆ XTRAREWARDTM ಪಾಯಿಂಟ್‌ಗಳನ್ನು (XRP) ನೀಡುವ ಮೂಲಕ ನೋಂದಾಯಿಸಲಾದ ಗ್ರಾಹಕರಿಗೆ ರಿವಾರ್ಡ್‌ಗಳನ್ನು ನೀಡುತ್ತದೆ ಮತ್ತು ಉಚಿತ ಫ್ಯೂಯಲ್‌ಗಾಗಿ ಭಾಗವಹಿಸುವ IndianOil ರಿಟೇಲ್ ಔಟ್‍ಲೆಟ್‍‌ಗಳಲ್ಲಿ ಈ ಸಂಗ್ರಹಿಸಿದ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಗ್ರಾಹಕರಿಗೆ ಅನುಮತಿಸುತ್ತದೆ.

ಈ ಪ್ರೋಗ್ರಾಮ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ, https://www.xtrarewards.com

ಇಂಡಿಯನ್‌ಆಯಿಲ್ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳು ಈ ಮೆಂಬರ್‌ಶಿಪ್ ಅನ್ನು ಆಟೋಮ್ಯಾಟಿಕ್ ಮತ್ತು ತಮ್ಮ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಉಚಿತವಾಗಿ ಪಡೆಯುತ್ತಾರೆ. ಈ ಕಾರ್ಡ್ ಮುಚ್ಚಿದ ನಂತರವೂ ಅಥವಾ ಇನ್ನೊಂದು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಗ್ರೇಡ್/ಮೈಗ್ರೇಶನ್ ಮಾಡಿದ ನಂತರವೂ ನಿಮ್ಮ ಮೆಂಬರ್‌ಶಿಪ್ ಮಾನ್ಯವಾಗಿರುತ್ತದೆ. ಆದಾಗ್ಯೂ, ಇಂಧನ ರಿಡೆಂಪ್ಶನ್‌ಗಾಗಿ ನೀವು ಫ್ಯೂಯಲ್ ಪಾಯಿಂಟ್‌ಗಳನ್ನು ಎಕ್ಸ್‌ಟ್ರಾರಿವಾರ್ಡ್ ಪಾಯಿಂಟ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ.

ಸಂಬಳ ಪಡೆವ ವ್ಯಕ್ತಿಗಳಿಗೆ:

  • ರಾಷ್ಟ್ರೀಯತೆ: ಭಾರತೀಯ ರಾಷ್ಟ್ರೀಯ
  • ವಯಸ್ಸು: ಕನಿಷ್ಠ 21 ವರ್ಷಗಳಿಂದ ಗರಿಷ್ಠ 60 ವರ್ಷಗಳವರೆಗೆ,
  • ನಿವ್ವಳ ಮಾಸಿಕ ಆದಾಯ> ₹ 10,000

ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ:

  • ರಾಷ್ಟ್ರೀಯತೆ: ಭಾರತೀಯ ರಾಷ್ಟ್ರೀಯ
  • ವಯಸ್ಸು: ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 65 ವರ್ಷಗಳು
  • ವಾರ್ಷಿಕ ಆದಾಯ: ITR > ವರ್ಷಕ್ಕೆ ₹6 ಲಕ್ಷ

 

ಉಚಿತ ಫ್ಯೂಯಲ್‌ಗಾಗಿ ಫ್ಯೂಯಲ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು,

 

  • ನಿಮ್ಮ ಸಂಗ್ರಹಿಸಿದ ಫ್ಯೂಯಲ್ ಪಾಯಿಂಟ್‌ಗಳನ್ನು ಎಕ್ಸ್‌ಟ್ರಾರಿವಾರ್ಡ್‌TM ಪಾಯಿಂಟ್‌ಗಳಾಗಿ (XRP) ಪರಿವರ್ತಿಸಿ

  • ಉಚಿತ ಫ್ಯೂಯಲ್‌ಗಾಗಿ ಭಾಗವಹಿಸುವ ಇಂಡಿಯನ್‌ಆಯಿಲ್ ಔಟ್ಲೆಟ್‌ಗಳಲ್ಲಿ XRP ಬಳಸಿ

ನಿಮ್ಮ ಹತ್ತಿರದ Indian Oil ಪೆಟ್ರೋಲ್ ಔಟ್‌ಲೆಟ್ ಹುಡುಕಲು, ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Indian Oil ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು, ಗುರುತಿನ ಪುರಾವೆ, ವಿಳಾಸದ ಪುರಾವೆ, ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮುಂತಾದ ಡಾಕ್ಯುಮೆಂಟ್‌ಗಳು ಬೇಕಾಗಬಹುದು. 

ಇನ್ನಷ್ಟು FAQ ಓದಲು ಇಲ್ಲಿ ಕ್ಲಿಕ್ ಮಾಡಿ

ಎಚ್ ಡಿ ಎಫ್ ಸಿ ಬ್ಯಾಂಕ್ ಇಂಡಿಯನ್ ಆಯಿಲ್ ಕ್ರೆಡಿಟ್ ಕಾರ್ಡ್ ವಾರ್ಷಿಕ ಫೀಸ್ ₹500 ಜೊತೆಗೆ ₹500 ಜಾಯ್ನಿಂಗ್ ಫೀಸ್ ಹೊಂದಿದೆ. ವಾರ್ಷಿಕ ಫೀಸ್ ಮತ್ತು ಜಾಯ್ನಿಂಗ್ ಶುಲ್ಕಗಳನ್ನು ಇಲ್ಲಿ ಹುಡುಕಿ. ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಮನ್ನಾಗಳೊಂದಿಗೆ ಕೆಲವು ಕಾರ್ಡ್‌ಗಳು ಯಾವುದೇ ಜಾಯ್ನಿಂಗ್ ಶುಲ್ಕಗಳನ್ನು ಹೊಂದಿರಬಹುದು. 

ದಯವಿಟ್ಟು ನಿಮ್ಮ ಇತ್ತೀಚಿನ ಮೊಬೈಲ್ ನಂಬರನ್ನು ಇಂಡಿಯನ್‌ಆಯಿಲ್ ಎಕ್ಸ್‌ಟ್ರಾರಿವಾರ್ಡ್‌ಎಸ್‌ಟಿಎಂ ಸದಸ್ಯತ್ವದಲ್ಲಿ ಅಪ್ಡೇಟ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ರಿಡೆಂಪ್ಶನ್ ಅನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಲಾಗುವುದಿಲ್ಲ.

ಯಾವುದೇ ಪ್ರಶ್ನೆಗಳು ಅಥವಾ ಸಹಾಯದ ಸಂದರ್ಭದಲ್ಲಿ, ನೀವು ಸಹಾಯವನ್ನು ಪಡೆಯಬಹುದು:

1800 1600 / 1800 2600 ಗೆ ಕರೆ ಮಾಡಿ (ಭಾರತದಾದ್ಯಂತ ಅಕ್ಸೆಸ್ ಮಾಡಬಹುದು) ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರು ನಮ್ಮನ್ನು 022-61606160 ನಲ್ಲಿ ಸಂಪರ್ಕಿಸಬಹುದು

ಸಾಮಾನ್ಯ ಪ್ರಶ್ನೆಗಳಿಗೆ ತ್ವರಿತ ಪರಿಹಾರಗಳಿಗಾಗಿ Eva ಜೊತೆಗೆ ಸಂಪರ್ಕಿಸಿ

ಹತ್ತಿರದ ಬ್ರಾಂಚ್ ಅನ್ನು ಸಂಪರ್ಕಿಸಿ

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಎಚ್ ಡಿ ಎಫ್ ಸಿ ಬ್ಯಾಂಕ್ ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ.

ಫ್ಯೂಯಲ್ ಪಾಯಿಂಟ್‌ಗಳಿಗೆ ಸಂಬಂಧಿಸಿದಂತೆ, ನಿಮ್ಮ ಎಕ್ಸ್‌ಟ್ರಾರಿವಾರ್ಡ್‌ಎಸ್‌ಟಿಎಂ ಪಾಯಿಂಟ್‌ಗಳನ್ನು 72 ಗಂಟೆಗಳ ಒಳಗೆ ನಿಮ್ಮ ಎಕ್ಸ್‌ಟ್ರಾರಿವಾರ್ಡ್‌ಎಸ್‌ಟಿಎಂ ಪ್ರೋಗ್ರಾಮ್ ಅಕೌಂಟಿಗೆ ಕ್ರೆಡಿಟ್ ಮಾಡದಿದ್ದರೆ, ನಿಮ್ಮ ಫ್ಯೂಯಲ್ ಪಾಯಿಂಟ್‌ಗಳನ್ನು 7-10 ಕೆಲಸದ ದಿನಗಳ ಒಳಗೆ ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಮರಳಿ ಕ್ರೆಡಿಟ್ ಮಾಡಲಾಗುತ್ತದೆ

ಭಾಗವಹಿಸುವ IndianOil ರಿಟೇಲ್ ಔಟ್‌ಲೆಟ್‌ನಲ್ಲಿ XRP ಯನ್ನು https://www.xtrarewards.com ಅಥವಾ POS ಟರ್ಮಿನಲ್‌ನಿಂದ ಟ್ರ್ಯಾಕ್ ಮಾಡಬಹುದು. ನೀವು XRP ಕುರಿತ ವಿಚಾರಣೆಯನ್ನು SMS ಮೂಲಕವೂ ಕಳುಹಿಸಬಹುದು <IOCL XRP Card No> 9223177998 ಗೆ SMS ಮಾಡಿ. ಪರ್ಯಾಯವಾಗಿ, ನೀವು ಇಂಡಿಯನ್‌ಆಯಿಲ್ ಒನ್ ಆ್ಯಪ್‌ನಿಂದ ಕೂಡ ನಿಮ್ಮ ಎಕ್ಸ್‌ಆರ್‌ಪಿ ಬ್ಯಾಲೆನ್ಸ್ ಪರಿಶೀಲಿಸಬಹುದು

 

ಹೌದು. ನೀವು ಇನ್ನೂ ಇಂಡಿಯನ್‌ಆಯಿಲ್ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. ಈ ಸಂದರ್ಭದಲ್ಲಿ, ಹೊಸ XR CID ರಚಿಸುವ ಬದಲು, ನಿಮ್ಮ ಅಸ್ತಿತ್ವದಲ್ಲಿರುವ XR CID ಅನ್ನು ಈ ಪ್ರೋಗ್ರಾಮ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ ಮತ್ತು ನೀವು ಫ್ಯೂಯಲ್ ಪಾಯಿಂಟ್‌ಗಳನ್ನು XRP ಆಗಿ ಪರಿವರ್ತಿಸಲು ಆರಂಭಿಸಬಹುದು ಮತ್ತು ಭಾಗವಹಿಸುವ ಇಂಡಿಯನ್‌ಆಯಿಲ್ ಫ್ಯೂಯಲ್ ಔಟ್ಲೆಟ್‌ಗಳಲ್ಲಿ ಉಚಿತ ಫ್ಯೂಯಲ್ ಅನ್ನು ರಿಡೀಮ್ ಮಾಡಲು XRP ಬಳಸಬಹುದು.

ಗಮನಿಸಿ:

  • ಬ್ಯಾಂಕ್‌ನೊಂದಿಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ನಂಬರ್ ಇಂಡಿಯನ್‌ಆಯಿಲ್ ಎಕ್ಸ್‌ಟ್ರಾರಿವಾರ್ಡ್‌ಎಸ್‌ಟಿಎಂ ಪ್ರೋಗ್ರಾಮ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ನಂಬರ್‌ನಂತೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
  • ಒಂದು ವೇಳೆ ಬ್ಯಾಂಕ್‌ನೊಂದಿಗೆ ನೋಂದಾಯಿಸಿದ ಮೊಬೈಲ್ ನಂಬರ್ IndianOil XTRAREWARDSTM ಪ್ರೋಗ್ರಾಮ್‌ನೊಂದಿಗೆ ನೋಂದಣಿಯಾದ ನಂಬರ್‌ಗಿಂತ ಭಿನ್ನವಾಗಿದ್ದರೆ, ಅಥವಾ ಯಾವುದೇ ಪ್ರಶ್ನೆ ಅಥವಾ ಸಹಾಯಕ್ಕಾಗಿ, ನೀವು ಈ ಮೂಲಕ ಸಹಾಯವನ್ನು ಪಡೆಯಬಹುದು:

1800 1600 / 1800 2600 ಗೆ ಕರೆ ಮಾಡಿ (ಭಾರತದಾದ್ಯಂತ ಅಕ್ಸೆಸ್ ಮಾಡಬಹುದು) ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರು ನಮ್ಮನ್ನು 022-61606160 ನಲ್ಲಿ ಸಂಪರ್ಕಿಸಬಹುದು

ಸಾಮಾನ್ಯ ಪ್ರಶ್ನೆಗಳಿಗೆ ತ್ವರಿತ ಪರಿಹಾರಗಳಿಗಾಗಿ Eva ಜೊತೆಗೆ ಸಂಪರ್ಕಿಸಿ

ಹತ್ತಿರದ ಬ್ರಾಂಚ್ ಅನ್ನು ಸಂಪರ್ಕಿಸಿ

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಎಚ್ ಡಿ ಎಫ್ ಸಿ ಬ್ಯಾಂಕ್ ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ.

ಟ್ರಾನ್ಸಾಕ್ಷನ್‌ಗೆ ಫ್ಯೂಯಲ್ ಪಾಯಿಂಟ್‌ ಅರ್ಹತೆಯು, ಟ್ರಾನ್ಸಾಕ್ಷನ್‌ಗಾಗಿ ಕ್ಯಾಪ್ಚರ್ ಮಾಡಲಾದ ಮರ್ಚೆಂಟ್ ಕೆಟಗರಿ ಕೋಡ್ (MCC) ಅನ್ನು ಆಧರಿಸಿರುತ್ತದೆ. ಮೇಲೆ ತಿಳಿಸಿದ ಕೆಟಗರಿಗಳಿಗೆ ಪಾಲುದಾರ ನೆಟ್ವರ್ಕ್‌ಗಳು (Visa/ RuPay) ಗುರುತಿಸಿದ ಮತ್ತು ಪರಿಗಣಿಸುವ MCC ಗಳು ಮಾತ್ರ 5% ಫ್ಯೂಯಲ್ ಪಾಯಿಂಟ್‌ಗಳನ್ನು (FP) ಪಡೆಯುತ್ತವೆ. ನಿಮ್ಮ ಟ್ರಾನ್ಸಾಕ್ಷನ್ ಯಾವುದೇ FP ಅನ್ನು ಸಂಗ್ರಹಿಸದಿದ್ದರೆ, ಇದು ಸ್ಟ್ಯಾಂಡರ್ಡ್ ಮರ್ಚೆಂಟ್ ಕೆಟಗರಿ ಕೋಡ್ ಪ್ರಕಾರ ಫ್ಯೂಯಲ್/ದಿನಸಿ/ಯುಟಿಲಿಟಿಗಳು/ಬಿಲ್ ಪಾವತಿ ಎಂದು ಗುರುತಿಸಲ್ಪಡದ ಕಾರಣವಾಗಿದೆ

  • ಇಂಡಿಯನ್‌ಆಯಿಲ್ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಕ್ರೆಡಿಟ್ ಕಾರ್ಡ್ ನೀಡುವ ಸಮಯದಲ್ಲಿ ಇಂಡಿಯನ್‌ಆಯಿಲ್ ಎಕ್ಸ್‌ಟ್ರಾರಿವಾರ್ಡ್‌ಎಸ್‌ಟಿಎಂ ಪ್ರೋಗ್ರಾಮ್‌ನೊಂದಿಗೆ ಆಟೋಮ್ಯಾಟಿಕ್ ಮತ್ತು ಕಡ್ಡಾಯವಾಗಿ ನೋಂದಣಿಯಾಗಿದ್ದಾರೆ.
  • ಒಮ್ಮೆ ಗ್ರಾಹಕರು ಆಟೋಮ್ಯಾಟಿಕ್ ಆಗಿ ನೋಂದಣಿಯಾದ ನಂತರ, IndianOil ನಿಂದ ನಿಮ್ಮ XTRAREWARDSTM ಪ್ರೋಗ್ರಾಮ್ ಅಕೌಂಟ್‌ ಅನ್ನು ಯಶಸ್ವಿಯಾಗಿ ರಚಿಸಲಾಗಿದೆ ಎಂಬ ದೃಢೀಕರಣದೊಂದಿಗೆ XTRAREWARDSTM ಗ್ರಾಹಕ ID (XR CID) ಹೊಂದಿದ SMS ಅನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ನೀವು ಸ್ವೀಕರಿಸುತ್ತೀರಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ಪಡೆದ 5 ಕೆಲಸದ ದಿನಗಳ ಒಳಗೆ ನೀವು ದೃಢೀಕರಣದ SMS ಪಡೆದಿಲ್ಲದಿದ್ದರೆ, ಪರಿಹಾರಕ್ಕಾಗಿ ದಯವಿಟ್ಟು ಬ್ಯಾಂಕ್ ಅನ್ನು ಸಂಪರ್ಕಿಸಿ.

ನಿಮ್ಮ XR CID ರಚಿಸಿದ ನಂತರ, ನಿಮ್ಮ XRP ಬ್ಯಾಲೆನ್ಸ್ ಮತ್ತು ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲು ನೀವು ಆಂಡ್ರಾಯ್ಡ್ ಪ್ಲೇ ಸ್ಟೋರ್ ಅಥವಾ IOS ಆ್ಯಪ್ ಸ್ಟೋರ್‌ನಿಂದ "IndianOil ONE" ಆ್ಯಪ್ ಅನ್ನು ಕೂಡ ಇನ್‌ಸ್ಟಾಲ್ ಮಾಡಬಹುದು(ಕಡ್ಡಾಯವಲ್ಲ)

ಗಮನಿಸಿ: ಉಚಿತ ಫ್ಯೂಯಲ್ ಮೇಲೆ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಉದ್ದೇಶಕ್ಕಾಗಿ ಇಂಡಿಯನ್ ಆಯಿಲ್‌ನಿಂದ XR CID ರಚಿಸಲಾಗಿದೆ. ಇದು ಬ್ಯಾಂಕ್‌ನೊಂದಿಗೆ ನಿರ್ವಹಿಸಲಾದ ಗ್ರಾಹಕ ಐಡಿಗಿಂತ ಭಿನ್ನವಾಗಿದೆ.

ಹೌದು, IndianOil ರಿಟೇಲ್ ಔಟ್ಲೆಟ್ ಭಾಗವಹಿಸುವ ಔಟ್ಲೆಟ್ ಆಗಿದೆ ಎಂದು ಪರಿಶೀಲಿಸಿದ ನಂತರ, XTRAREWARDTM ಪಾಯಿಂಟ್ ಬಳಸಿ ಪಾವತಿ ಆಯ್ಕೆಯ ಬಗ್ಗೆ ಮರ್ಚೆಂಟ್‌ನೊಂದಿಗೆ ಪರಿಶೀಲಿಸಿ. ರಿಡೆಂಪ್ಶನ್ ಪ್ರಕ್ರಿಯೆಯ ಹರಿವನ್ನು Q2 ನಲ್ಲಿ ನಮೂದಿಸಲಾಗಿದೆ. XTRAREWARDTM ಪಾಯಿಂಟ್‌ಗಳ (XRP) ಮೂಲಕ ನಿಮ್ಮ ಫ್ಯೂಯಲ್ ಬಿಲ್ ಅನ್ನು ಸಂಪೂರ್ಣವಾಗಿ ಪಾವತಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಭಾಗಶಃ XRP ಮತ್ತು ಉಳಿದದ್ದನ್ನು ನಿಮ್ಮ IndianOil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.

XTRAREWARDTM ಪ್ರೋಗ್ರಾಮ್‌ನೊಂದಿಗೆ ಕಸ್ಟಮರ್ ID ಹೊಂದಿರುವುದು ಅಗತ್ಯವಾಗಿದೆ ಈ ಸದಸ್ಯತ್ವವಿಲ್ಲದೆ, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳನ್ನು XTRAREWARDTM ಪಾಯಿಂಟ್‌ಗಳಾಗಿ ಪರಿವರ್ತಿಸಲು ಮತ್ತು ಉಚಿತ ಫ್ಯೂಯಲ್ ರಿಡೆಂಪ್ಶನ್‌ಗಾಗಿ IndianOil ಫ್ಯೂಯಲ್ ಔಟ್‌ಲೆಟ್‌ಗಳಲ್ಲಿ ಅವುಗಳನ್ನು ಬಳಸಲು ಸಾಧ್ಯವಿಲ್ಲ. ಅಲ್ಲದೆ, IndianOil ನೊಂದಿಗೆ ನಿಮ್ಮ XTRAREWARDTM ಪ್ರೋಗ್ರಾಮ್ ಅಕೌಂಟ್‌ನಲ್ಲಿ ಮಾಹಿತಿ ಅಥವಾ ಯಾವುದೇ ಸ್ಟೇಟಸ್ ಅಪ್ಡೇಟ್ ಪಡೆಯಲು ಈ XR CID ಹೊಂದಿರುವುದು ಮುಖ್ಯವಾಗಿದೆ.

ಆನ್ಲೈನ್ ಮತ್ತು ಮಾರಾಟ ಕೇಂದ್ರ (PoS) ಟ್ರಾನ್ಸಾಕ್ಷನ್‌ಗಳನ್ನು ಒಳಗೊಂಡಿರುವ ಎಲ್ಲಾ ರೀತಿಯ ರಿಟೇಲ್ ಖರ್ಚುಗಳ ಮೇಲೆ ಫ್ಯೂಯಲ್ ಪಾಯಿಂಟ್‌ಗಳನ್ನು ಸಂಗ್ರಹಿಸಬಹುದು. ಆದಾಗ್ಯೂ, ನೀವು ಫ್ಯೂಯಲ್ ಪಾಯಿಂಟ್‌ಗಳನ್ನು ಪಡೆಯದ ಕೆಲವು ರೀತಿಯ ಟ್ರಾನ್ಸಾಕ್ಷನ್‌ಗಳಿವೆ. ಅವುಗಳು:

  • ಇತರ ಪೆಟ್ರೋಲ್ ಪಂಪ್‌ಗಳಲ್ಲಿ ಫ್ಯೂಯಲ್ ಟ್ರಾನ್ಸಾಕ್ಷನ್‌ಗಳು
  • ಯಾವುದೇ ರೀತಿಯ ವಾಲೆಟ್-ಲೋಡಿಂಗ್
  • ಹಿಂದಿರುಗಿಸಲಾದ ಖರೀದಿಗಳು, ವಿವಾದಿತ ಅಥವಾ ಅನಧಿಕೃತ/ಮೋಸದ ಟ್ರಾನ್ಸಾಕ್ಷನ್‌ಗಳ ಮೇಲೆ
  • EMI ಟ್ರಾನ್ಸಾಕ್ಷನ್‌ಗಳು
  • ಅಕೌಂಟ್ ಫೀಸ್ ಮತ್ತು ಪಾವತಿ
  • ಆಭರಣ/ಚಿನ್ನದ ನಾಣ್ಯಗಳ ಖರೀದಿ ಅಥವಾ ಅದರ ಸಮಾನ

ಈ ಕೆಳಗೆ ನಮೂದಿಸಿದ ಖರ್ಚುಗಳ ಮೇಲೆ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳ ಮೇಲೆ ಮಾಸಿಕ ಕ್ಯಾಪಿಂಗ್ ಇದೆ ಎಂಬುದನ್ನು ದಯವಿಟ್ಟು ಗಮನಿಸಿ.

  • ಇಂಡಿಯನ್‌ಆಯಿಲ್ ಔಟ್ಲೆಟ್‌ಗಳಲ್ಲಿ ಖರ್ಚುಗಳು –
    - ಕಾರ್ಡ್ ನೀಡಿದ ಮೊದಲ 6 ತಿಂಗಳಿಗೆ ಮಾಸಿಕ ಗರಿಷ್ಠ ಕ್ಯಾಪ್: 250 FP

    - 6 ತಿಂಗಳ ನಂತರ ಮಾಸಿಕ ಗರಿಷ್ಠ ಕ್ಯಾಪ್: 150 FP
  • ದಿನಸಿಗಳ ಮೇಲೆ ಖರ್ಚುಗಳು - ಮಾಸಿಕ ಗರಿಷ್ಠ ಕ್ಯಾಪ್: 100 FP

  • ಯುಟಿಲಿಟಿಗಳು ಮತ್ತು ಬಿಲ್ ಪಾವತಿಗಳ ಮೇಲೆ ಖರ್ಚುಗಳು - ಮಾಸಿಕ ಗರಿಷ್ಠ ಕ್ಯಾಪ್: 100 FP

 

Indian Oil ಕ್ರೆಡಿಟ್ ಕಾರ್ಡ್‌ನಂತಹ ಫ್ಯೂಯಲ್ ಕ್ರೆಡಿಟ್ ಕಾರ್ಡ್‌ಗಳು, ಫ್ಯೂಯಲ್ ಮೇಲ್ತೆರಿಗೆ ಮನ್ನಾ, ಫ್ಯೂಯಲ್ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್ ಮತ್ತು ಫ್ಯೂಯಲ್ ಮತ್ತು ಯುಟಿಲಿಟಿ ಬಿಲ್‌ಗಳ ಮೇಲೆ ಉಳಿತಾಯಕ್ಕಾಗಿ ಉಚಿತ ಫ್ಯೂಯಲ್ ಸಂಗ್ರಹವನ್ನು ಒದಗಿಸುತ್ತವೆ.

Indian Oil ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ರೂಪದಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಒದಗಿಸುತ್ತದೆ, ಉಚಿತ ಫ್ಯೂಯಲ್ ಅಥವಾ ಇತರ ಆಯ್ಕೆಗಳಿಗೆ ರಿಡೀಮ್ ಮಾಡಬಹುದು. ವಿವರಗಳನ್ನು ಕಾರ್ಡ್‌ನ ನಿಯಮಗಳಲ್ಲಿ ನೀಡಲಾಗಿದೆ.

ಕ್ಯಾಲೆಂಡರ್ ತಿಂಗಳೊಳಗೆ ಪೋಸ್ಟ್ ಮಾಡಲಾದ ಎಲ್ಲಾ ಅರ್ಹ ಟ್ರಾನ್ಸಾಕ್ಷನ್‌ಗಳ ಮೇಲೆ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳನ್ನು ಸೇರಿಸಲಾಗುತ್ತದೆ ಮತ್ತು ಮುಂದಿನ ಕ್ಯಾಲೆಂಡರ್ ತಿಂಗಳ 1 ರಂದು ಕ್ರೆಡಿಟ್ ಮಾಡಲಾಗುತ್ತದೆ. ಅವುಗಳನ್ನು ಕ್ರೆಡಿಟ್ ಮಾಡುವ ಮೊದಲು ಗರಿಷ್ಠ ಕ್ಯಾಪಿಂಗ್ ಅನ್ವಯಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

A. ನಿಮ್ಮೊಂದಿಗೆ ಹಂಚಿಕೊಳ್ಳಲಾದ ಪ್ರಸ್ತುತ ತಿಂಗಳ ಸ್ಟೇಟ್ಮೆಂಟ್‌ನಲ್ಲಿ ಪೋಸ್ಟ್ ಮಾಡಲಾದ ಹಿಂದಿನ ಕ್ಯಾಲೆಂಡರ್ ತಿಂಗಳ ಟ್ರಾನ್ಸಾಕ್ಷನ್‌ಗಳಿಗೆ ಸಂಗ್ರಹಿಸಲಾದ ಫ್ಯೂಯಲ್ ಪಾಯಿಂಟ್‌ಗಳನ್ನು ನೀವು ಪರಿಶೀಲಿಸಬಹುದು (ಭೌತಿಕ ಅಥವಾ ಇ-ಸ್ಟೇಟ್ಮೆಂಟ್)

ಖ. ಲಾಗಿನ್ ಮಾಡುವ ಮೂಲಕವೂ ನೀವು ಪರಿಶೀಲಿಸಬಹುದು:
ನೆಟ್‌ಬ್ಯಾಂಕಿಂಗ್ -> ಕಾರ್ಡ್‌ಗಳ ಟ್ಯಾಬ್ -> "ವಿಚಾರಣೆ" ಮೇಲೆ ಕ್ಲಿಕ್ ಮಾಡಿ -> ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ -> ನಿಮ್ಮ ಇಂಡಿಯನ್‌ಆಯಿಲ್ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಂಬರ್ ಆಯ್ಕೆಮಾಡಿ -> ಒಟ್ಟು ಫ್ಯೂಯಲ್ ಪಾಯಿಂಟ್‌ಗಳನ್ನು ನೋಡಿ

ಹೌದು, ನೀವು ಇದನ್ನು ಶಾಪಿಂಗ್‌ಗಾಗಿ ಬಳಸಬಹುದು, ಫ್ಯೂಯಲ್ ಮೇಲೆ ಮಾತ್ರವಲ್ಲದೆ ಇತರ ಟ್ರಾನ್ಸಾಕ್ಷನ್‌ಗಳ ಮೇಲೆ ರಿವಾರ್ಡ್‌ಗಳು ಅಥವಾ ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಕೂಡ ಪಡೆಯಬಹುದು.

ದೈನಂದಿನ ಚಾಲಕರಿಗೆ

  • ಇಂಡಿಯನ್‌ಆಯಿಲ್ ಫ್ಯೂಯಲ್ ಮೇಲೆ 5%
  • ಯುಟಿಲಿಟಿ ಮತ್ತು ದಿನಸಿ ಖರ್ಚುಗಳ ಮೇಲೆ 5%
  • 1% ಫ್ಯೂಯಲ್ ಮೇಲ್ತೆರಿಗೆ ರಿಯಾಯಿತಿ
  • ₹500 ವೆಲ್ಕಮ್ ಬೋನಸ್
Millennia Credit Card