SMS ಬ್ಯಾಂಕಿಂಗ್ ಎಂಬುದು SMS ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಬ್ಯಾಂಕಿಂಗ್ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮಗೆ ಅನುಮತಿ ನೀಡುವ ಸರ್ವಿಸ್ ಆಗಿದೆ. ನಿಮ್ಮ ವಿಚಾರಣೆಯನ್ನು ಟೈಪ್ ಮಾಡಿ ಮತ್ತು SMS ಬ್ಯಾಂಕಿಂಗ್ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಪಡೆಯಲು 7308080808 ಗೆ ಕಳುಹಿಸಿ .
SMS ಬ್ಯಾಂಕಿಂಗ್‌ಗಾಗಿ ನೋಂದಣಿ ಮಾಡಲು: REGISTER <space><Last 4 digits of Custid><space><Last 4 digits of A/C no.> ಎಂದು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 7308080808 ಗೆ SMS ಮಾಡಿ.
ಈ ಕೆಳಗಿನ ಹಂತಗಳೊಂದಿಗೆ ನೀವು ATM ಮೂಲಕ SMS ಬ್ಯಾಂಕಿಂಗ್‌ಗಾಗಿ ಸುಲಭವಾಗಿ ನೋಂದಣಿ ಮಾಡಬಹುದು:
ನಿಮ್ಮ ATM PIN ನಮೂದಿಸಿ
ಹೋಮ್ ಪೇಜಿನಲ್ಲಿ 'ಇನ್ನಷ್ಟು ಆಯ್ಕೆಗಳು' ಗೆ ಹೋಗಿ
SMS ಬ್ಯಾಂಕಿಂಗ್ ನೋಂದಣಿಗಾಗಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
ಮೆನುವಿನಲ್ಲಿ ದೃಢೀಕರಣವನ್ನು ಟ್ಯಾಪ್ ಮಾಡಿ.
ನೆಟ್‌ಬ್ಯಾಂಕಿಂಗ್‌ನಲ್ಲಿ ಹೊಸ SMS ಬ್ಯಾಂಕಿಂಗ್ ನೋಂದಣಿ ಲಭ್ಯವಿಲ್ಲ .
ಬ್ಯಾಂಕ್ ನೋಂದಾಯಿತ ಮೊಬೈಲ್ ನಂಬರಿನಿಂದ SMS ಕಳುಹಿಸುವ ಮೂಲಕ ನೀವು SMS ಬ್ಯಾಂಕಿಂಗ್‌ಗಾಗಿ ನೋಂದಣಿ ಮಾಡಬಹುದು.
ನಿಮ್ಮ ಮೊಬೈಲ್‌ನಲ್ಲಿ ನೀವು ರಾಷ್ಟ್ರೀಯ ಅಥವಾ ಇಂಟರ್ನ್ಯಾಷನಲ್ ರೋಮಿಂಗ್ ಆ್ಯಕ್ಟಿವೇಟ್ ಆಗಿದ್ದರೆ, ನೀವು ಭಾರತ ಅಥವಾ ವಿದೇಶದಲ್ಲಿ ಎಲ್ಲಿಂದಲಾದರೂ SMS ಬ್ಯಾಂಕಿಂಗ್ ಚಟುವಟಿಕೆಗಳನ್ನು ಮಾಡಬಹುದು.
ನೀವು 7308080808 ಗೆ SMS ಕಳುಹಿಸುವ ಮೂಲಕ ನೋಂದಣಿ ಮಾಡಿದರೆ, ನೀವು ತಕ್ಷಣವೇ SMS ಬ್ಯಾಂಕಿಂಗನ್ನು ಅಕ್ಸೆಸ್ ಮಾಡಲು ಸಾಧ್ಯವಾಗುತ್ತದೆ.
SMS ಬ್ಯಾಂಕಿಂಗ್‌ಗಾಗಿ ನೋಂದಣಿ ಮಾಡಲು ನೀವು ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿದರೆ, ನೀವು ನಿಮ್ಮ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿದ ಸಮಯದಿಂದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 4 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.
ಹೊಸ SMS ಬ್ಯಾಂಕಿಂಗ್ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ.
ನೋಂದಣಿ ಪೂರ್ಣಗೊಂಡ ನಂತರ, ನಿಮ್ಮ SMS ಬ್ಯಾಂಕಿಂಗ್ ನೋಂದಣಿಗಾಗಿ ನೀಡಲಾದ ಮೊಬೈಲ್ ನಂಬರ್‌ಗೆ ಬ್ಯಾಂಕ್‌ನಿಂದ ಈ ಕೆಳಗಿನ SMS ಅನ್ನು ನೀವು ಪಡೆಯುತ್ತೀರಿ.
ಯಶಸ್ವಿಯಾಗಿ ನೋಂದಣಿಯಾಗಿದೆ!~ಎಚ್ ಡಿ ಎಫ್ ಸಿ ಬ್ಯಾಂಕ್ SMS ಬ್ಯಾಂಕಿಂಗ್ ಸರ್ವಿಸ್‌ಗಳಿಗೆ 'xxxx' ನೊಂದಿಗೆ ಕೊನೆಗೊಳ್ಳುವ ನಿಮ್ಮ ಅಕೌಂಟ್ ನಂಬರ್ ಅನ್ನು ಡೀಫಾಲ್ಟ್ ಅಕೌಂಟ್ ಆಗಿ ಸೆಟ್ ಮಾಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ನಿಯಮ ಮತ್ತು ಷರತ್ತುಗಳನ್ನು ಪರೀಕ್ಷಿಸಿ - hdfcbk.io/k/duvoddfmotz.~ನಿಮ್ಮ ಅಕೌಂಟ್ ಬ್ಯಾಲೆನ್ಸ್ ಪಡೆಯಲು, ನಿಮ್ಮ ವಿಚಾರಣೆಯನ್ನು 7308080808 ಗೆ SMS ಮಾಡಿ.~ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು 1800-1600 / 1800-2600 ಗೆ ಕರೆ ಮಾಡಿ.
"SMS ಬ್ಯಾಂಕಿಂಗ್‌ನೊಂದಿಗೆ ನೀವು ಎಲ್ಲಿದ್ದರೂ ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಅಕೌಂಟ್ ಅನ್ನು ಅಕ್ಸೆಸ್ ಮಾಡಬಹುದು. ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಅಕ್ಸೆಸ್ ಮಾಡಿ, ಬ್ಯಾಂಕಿಂಗ್ ಟ್ರಾನ್ಸಾಕ್ಷನ್‌ಗಳನ್ನು ಮಾಡಿ ಮತ್ತು ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಅಕೌಂಟ್‌ಗಳು ಮತ್ತು ಫಿಕ್ಸೆಡ್ ಡೆಪಾಸಿಟ್‌ಗಳನ್ನು ಮೇಲ್ವಿಚಾರಣೆ ಮಾಡಿ. 22 ಟ್ರಾನ್ಸಾಕ್ಷನ್‌ಗಳಿಗೆ ವಿಚಾರಣೆ ಆಧಾರಿತ SMS ಬ್ಯಾಂಕಿಂಗ್ ಸರ್ವಿಸ್ ಒದಗಿಸುವ ಬ್ಯಾಂಕ್ ಮಾತ್ರ ನಾವು .
ಅಕೌಂಟ್ ಸರ್ವಿಸ್‌ಗಳಿಗಾಗಿ SMS ಬ್ಯಾಂಕಿಂಗ್ ನೋಂದಣಿ ಸಂದೇಶ
ಗಮನಿಸಿ!
ನೀವು ಎಚ್ ಡಿ ಎಫ್ ಸಿ ಬ್ಯಾಂಕ್ SMS ಬ್ಯಾಂಕಿಂಗ್‌ಗೆ ನೋಂದಣಿಯಾಗಿಲ್ಲ.
ನೋಂದಣಿ ಮಾಡಲು, ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 7308080808 ಗೆ 'REGISTER' ಎಂದು SMS ಮಾಡಿ .