Pine Labs Pro Credit Card
ads-block-img

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್  

  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್ 

  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ

Card Management & Controls

ಹೆಚ್ಚುವರಿ ಖುಷಿ

  • ಲೌಂಜ್ ಅಕ್ಸೆಸ್: ಕ್ಯಾಲೆಂಡರ್ ವರ್ಷದಲ್ಲಿ ದೇಶಾದ್ಯಂತ ಏರ್‌ಪೋರ್ಟ್ ಲೌಂಜ್‍ಗಳಿಗೆ 8 ಕಾಂಪ್ಲಿಮೆಂಟರಿ ಅಕ್ಸೆಸ್ (ಪ್ರತಿ ತ್ರೈಮಾಸಿಕಕ್ಕೆ 2 ಭೇಟಿಗಳನ್ನು ಮಿತಿಗೊಳಿಸಲಾಗಿದೆ). 

  • Visa ಲೌಂಜ್ ಪ್ರೋಗ್ರಾಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ (ಲೌಂಜ್ ಅಕ್ಸೆಸ್‌ಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ₹2 ಟ್ರಾನ್ಸಾಕ್ಷನ್ ಫೀಸ್ ವಿಧಿಸಲಾಗುತ್ತದೆ).

  • ಮೈಲ್‌ಸ್ಟೋನ್ ಪ್ರಯೋಜನ: ₹5 ಲಕ್ಷದ ವಾರ್ಷಿಕ ಖರ್ಚುಗಳ ಮೇಲೆ 10,000 ಬೋನಸ್ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ (EMI ಅಲ್ಲದ ಖರ್ಚುಗಳು). ₹8 ಲಕ್ಷದ ವಾರ್ಷಿಕ ಖರ್ಚಿನ ಮೇಲೆ ಒಟ್ಟು 15,000 ಬೋನಸ್ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ (ಹೆಚ್ಚುವರಿ 5,000 ಬೋನಸ್ ರಿವಾರ್ಡ್ ಪಾಯಿಂಟ್‌ಗಳು) (EMI ಅಲ್ಲದ ಖರ್ಚುಗಳು)

  •  ಮಾರಾಟಗಾರರ ಪಾವತಿ ಆಫರ್
    Pine Labs ಔಟ್‌ವರ್ಡ್ ಪಾವತಿ ಪ್ಲಾಟ್‌ಫಾರ್ಮ್ ಮೂಲಕ ಮಾಡಲಾದ ಪೂರೈಕೆದಾರರ ಪಾವತಿಗಳ ಮೇಲೆ 1% ಫ್ಲಾಟ್ ಬಡ್ಡಿ. ಗ್ರಾಹಕರು ಸೆಪ್ಟೆಂಬರ್ 30, 2022 ವರೆಗೆ 1% ಕ್ಯಾಶ್‌ಬ್ಯಾಕ್ (ತಿಂಗಳಿಗೆ ₹500 ವರೆಗೆ) ಗಳಿಸುತ್ತಾರೆ. Pine Labs ಔಟ್‌ವರ್ಡ್ ಪೇ ಔಟ್ ಪ್ಲಾಟ್‌ಫಾರ್ಮ್ ಬಳಸಿ ವೌಚರ್‌ಗಳಿಗೆ ಕ್ಯಾಶ್‌ಬ್ಯಾಕನ್ನು ರಿಡೀಮ್ ಮಾಡಬಹುದು https://credit.pinelabs.com/ccc/login
  • ​​​ರಿನ್ಯೂವಲ್ ಆಫರ್
    12-ತಿಂಗಳ ಅವಧಿಯಲ್ಲಿ ₹1,00,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ಫೀಸ್ ಮನ್ನಾ ಮಾಡಲಾಗುತ್ತದೆ.
  • ಕಾಂಟಾಕ್ಟ್‌ಲೆಸ್ ಪಾವತಿ
    Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೊ ಕ್ರೆಡಿಟ್ ಕಾರ್ಡ್ ಸಂಪರ್ಕರಹಿತ ಪಾವತಿಗಳಿಗೆ ಸಕ್ರಿಯವಾಗಿದೆ, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸೆಕ್ಯೂರ್ಡ್ ಪಾವತಿಗಳನ್ನು ಸುಲಭಗೊಳಿಸುತ್ತದೆ.
    ಕಾಂಟಾಕ್ಟ್‌ಲೆಸ್ ಕಾರ್ಡ್‌ಗಳನ್ನು ಅಂಗೀಕರಿಸುವ ಮರ್ಚೆಂಟ್ ಲೊಕೇಶನ್‌ಗಳಲ್ಲಿ ತ್ವರಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನೀವು ನಿಮ್ಮ ಕಾರ್ಡ್ ಬಳಸಬಹುದು.
Added Delights

ಇನ್ಶೂರೆನ್ಸ್/ಸಮಗ್ರ ರಕ್ಷಣೆ ಮತ್ತು ಇನ್ಶೂರೆನ್ಸ್‌ಗಾಗಿ ನಾಮಿನಿ ವಿವರಗಳು

  • ₹ 30 ಲಕ್ಷದ ವೈಯಕ್ತಿಕ ಅಪಘಾತದ ಸಾವು ಮತ್ತು ಶಾಶ್ವತ ಅಂಗವೈಕಲ್ಯ ಕವರ್
ಕವರ್ ಪ್ರಕಾರ ಇನ್ಶೂರೆನ್ಸ್ ಕವರ್ ಪೂರೈಸಬೇಕಾದ ಷರತ್ತು
ಪರ್ಸನಲ್ ಆಕ್ಸಿಡೆಂಟಲ್ ಡೆತ್ ಕವರ್ (5+10+15) ಪರ್ಸನಲ್ ಆಕ್ಸಿಡೆಂಟಲ್ ಡೆತ್ ಕವರ್  
ಬೇಸ್ ಕವರ್ ₹5 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್
ಎಕ್ಸಲರೇಟೆಡ್ ಕವರ್ I ₹10 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್ + ₹25,000 ಕ್ಕಿಂತ ಹೆಚ್ಚಿನ ಖರ್ಚುಗಳು
ಎಕ್ಸಲರೇಟೆಡ್ ಕವರ್ II ₹15 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್ + ₹50,000 ಕ್ಕಿಂತ ಹೆಚ್ಚಿನ ಖರ್ಚುಗಳು
ಒಟ್ಟು ಕವರ್ ₹30 ಲಕ್ಷ  

ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

 

Comprehensive Protection

ರಿವಾರ್ಡ್ ಪಾಯಿಂಟ್/ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಮತ್ತು ಮಾನ್ಯತೆ

ರಿವಾರ್ಡ್ ರಿಡೆಂಪ್ಶನ್ ಕೆಟಗರಿಗಳು Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (₹ ನಲ್ಲಿ)
SmartBuy ಟ್ರಾವೆಲ್ 0.5
Airmiles 0.5
ಪ್ರಾಡಕ್ಟ್ ಕೆಟಲಾಗ್ ಗರಿಷ್ಠ 0.35
ಕ್ಯಾಶ್‌ಬ್ಯಾಕ್ 0.2
  • ಕ್ಯಾಶ್‌ಬ್ಯಾಕ್‌ಗೆ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಮತ್ತು ಪ್ರಯಾಣವನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 50,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ

  • ದಿನಸಿ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 1000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ

  • ಬಾಡಿಗೆ ಮತ್ತು ಶಿಕ್ಷಣ ವರ್ಗದ ಪಾವತಿಗಳ ಮೇಲೆ ಮಾಡಿದ ವೆಚ್ಚಗಳ ಮೇಲೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಸಂಗ್ರಹವಾಗುವುದಿಲ್ಲ

  • ಪಾಯಿಂಟ್‌ಗಳು + ಪಾವತಿ - ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ ಗರಿಷ್ಠ 70% ಪಾವತಿಸಬಹುದು ಮತ್ತು ಪಾವತಿ ವಿಧಾನಗಳು (ನಗದು/ಕಾರ್ಡ್‌ಗಳು/UPI ಇತ್ಯಾದಿ) ಮಾಡಬೇಕಾದ ಇತರ 30% ಪಾವತಿಸಬಹುದು

  • ಉಚಿತ ಕ್ರೆಡಿಟ್ ಅವಧಿ
    ನಿಮ್ಮ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೊ ಕ್ರೆಡಿಟ್ ಕಾರ್ಡ್ ಮೇಲೆ 50 ದಿನಗಳವರೆಗಿನ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ
  • ವಿಶೇಷ EasyEMI ಆಫರ್‌ಗಳು
    ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನೋ ಕಾಸ್ಟ್ ಮತ್ತು ಕಡಿಮೆ ವೆಚ್ಚದ EMI ಆಯ್ಕೆಗಳನ್ನು ಆನಂದಿಸಿ
  • ಪ್ರಮುಖ ಅಂಶಗಳ ಸ್ಟೇಟ್ಮೆಂಟ್
  • ದಯವಿಟ್ಟು ಪ್ರಮುಖ ಅಂಶದ ಸ್ಟೇಟ್ಮೆಂಟ್ ನೋಡಿ. 
Card Reward & Redemption Program

ಫೀಸ್ ಮತ್ತು ಶುಲ್ಕಗಳು

  • ಮೆಂಬರ್‌ಶಿಪ್ ಶುಲ್ಕಗಳು : ₹1,000 ಪ್ಲಸ್ GST.
  • ವಾರ್ಷಿಕ ಫೀಸ್: ಸೈನ್-ಅಪ್ ನಿಯಮಗಳ ಪ್ರಕಾರ ಆ್ಯಕ್ಟಿವೇಟ್ ಆಗದಿದ್ದರೆ ಮಾತ್ರ ವಿತರಣೆಯ 90 ದಿನಗಳ ನಂತರ ವಾರ್ಷಿಕ ಫೀಸ್ ವಿಧಿಸಲಾಗುತ್ತದೆ.
  • 90 ದಿನಗಳ ಒಳಗೆ ₹75,000 (EMI-ಅಲ್ಲದ) ಖರ್ಚು ಮಾಡಿದಾಗ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ.
  • 12 ತಿಂಗಳ ಒಳಗೆ ₹1 ಲಕ್ಷ (EMI-ಅಲ್ಲದ) ಖರ್ಚು ಮಾಡಿದಾಗ ರಿನ್ಯೂವಲ್ ಫೀಸ್ ಮನ್ನಾ ಮಾಡಲಾಗುತ್ತದೆ.

ಸರಕು ಮತ್ತು ಸೇವಾ ತೆರಿಗೆ (GST) 

  • 1ನೇ ಜುಲೈ 2017 ರಿಂದ ಅನ್ವಯವಾಗುವಂತೆ, ಎಲ್ಲಾ ಫೀಸ್, ಶುಲ್ಕಗಳು ಮತ್ತು ಬಡ್ಡಿ ಟ್ರಾನ್ಸಾಕ್ಷನ್‌ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅನ್ವಯವಾಗುತ್ತದೆ. ಅನ್ವಯವಾಗುವ GST ನಿಬಂಧನೆಯ ಸ್ಥಳ (POP) ಮತ್ತು ಪೂರೈಕೆ ಸ್ಥಳದ (POS) ಮೇಲೆ ಅವಲಂಬಿತವಾಗಿರುತ್ತದೆ. POP ಮತ್ತು POS ಒಂದೇ ರಾಜ್ಯದಲ್ಲಿದ್ದರೆ, ಅನ್ವಯವಾಗುವ GST ಯು CGST ಮತ್ತು SGST/UTGST ಆಗಿರುತ್ತದೆ ಇಲ್ಲದಿದ್ದರೆ, IGST ಆಗಿರುತ್ತದೆ. 
  • ಸ್ಟೇಟ್ಮೆಂಟ್ ದಿನಾಂಕದಂದು ಬಿಲ್ ಮಾಡಲಾದ ಫೀಸ್ ಮತ್ತು ಶುಲ್ಕಗಳು/ ಬಡ್ಡಿ ಟ್ರಾನ್ಸಾಕ್ಷನ್‌ಗಳಿಗೆ GST ಮುಂದಿನ ತಿಂಗಳ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. 
  • ಫೀಸ್ ಮತ್ತು ಶುಲ್ಕಗಳು / ಬಡ್ಡಿಯ ಮೇಲೆ ವಿಧಿಸಲಾದ GST ಅನ್ನು ಯಾವುದೇ ವಿವಾದದ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ 
  • ಬಾಡಿಗೆ ಟ್ರಾನ್ಸಾಕ್ಷನ್‌ಗಳ ಮೇಲೆ 1% ಫೀಸ್ - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಮಾಡಲಾದ 2ನೇ ಬಾಡಿಗೆ ಟ್ರಾನ್ಸಾಕ್ಷನ್‌ನಿಂದ ​
  • ​​ಎಲ್ಲಾ ಇಂಟರ್ನ್ಯಾಷನಲ್ DCC ಟ್ರಾನ್ಸಾಕ್ಷನ್‌ಗಳ ಮೇಲೆ 1% ಮಾರ್ಕ್-ಅಪ್ ಅನ್ವಯವಾಗುತ್ತದೆ
Revolving Credit

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Revolving Credit

ಆಗಾಗ್ಗೆ ಕೇಳುವ ಪ್ರಶ್ನೆಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

  • ಸರಿಯಾದ GST ನಂಬರ್‌ನೊಂದಿಗೆ ನೀವು ಯಾವುದೇ ನೋಂದಾಯಿತ ಪೂರೈಕೆದಾರರಿಗೆ ಪಾವತಿಸಬಹುದು.

  • ಅಪರೂಪದ ಸಂದರ್ಭಗಳಲ್ಲಿ, ತಾಂತ್ರಿಕ ಸಮಸ್ಯೆಗಳಿಂದಾಗಿ, ಪಾವತಿ ಹಣವನ್ನು ಸ್ವೀಕೃತಿದಾರರ ಅಕೌಂಟಿಗೆ ಡೆಪಾಸಿಟ್ ಮಾಡಲು ಬ್ಯಾಂಕ್‌ಗಳು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು.

ಹೌದು. ನೋ ಕಾಸ್ಟ್ EMI ಮತ್ತು ಕಡಿಮೆ ವೆಚ್ಚದ EMI ನ ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ಕ್ರೆಡಿಟ್ ಕಾರ್ಡ್‌ನಲ್ಲಿ ಕಾರ್ಡ್‌ಹೋಲ್ಡರ್ ಪಡೆಯಬಹುದು.

  • ಒಮ್ಮೆ ಬಿಲ್ ಜನರೇಟ್ ಆದ ನಂತರ, ಕ್ರೆಡಿಟ್ ಕಾರ್ಡ್ ಮಾಸಿಕ ಸ್ಟೇಟ್ಮೆಂಟನ್ನು ಕಾರ್ಡ್ ಹೋಲ್ಡರ್‌ನ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಕಾರ್ಡ್‌ಹೋಲ್ಡರ್ ಅದನ್ನು ವೀಕ್ಷಿಸಬಹುದು ಮತ್ತು
  • ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್‌ಗೆ ಲಾಗಿನ್ ಮಾಡುವ ಮೂಲಕ ಬಿಲ್ ಡೌನ್ಲೋಡ್ ಮಾಡಿ.

  • ವಂಚನೆಯ ವಿರುದ್ಧ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ರಕ್ಷಿಸಲು ಆರಂಭದಲ್ಲಿ ಆನ್ಲೈನ್, ಕಾಂಟಾಕ್ಟ್‌ಲೆಸ್ ಮತ್ತು/ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಕಾರ್ಡ್ ಹೋಲ್ಡರ್ ಎಚ್ ಡಿ ಎಫ್ ಸಿ ವೆಬ್‌ಸೈಟ್ ಮೂಲಕ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.
  • ಕಾರ್ಡ್ ಆ್ಯಕ್ಟಿವೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ವೆಲ್ಕಮ್ ಕಿಟ್‌ನಲ್ಲಿನ ಲೀಫ್‌ಲೆಟ್‌ಗಳನ್ನು ನೋಡಿ.

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್‌ಗೆ, 12 ತಿಂಗಳ ಅವಧಿಯಲ್ಲಿ ₹1,00,000 (EMI-ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ಫೀಸ್ ಮನ್ನಾ ಮಾಡಬಹುದು.

ನೀವು ಲಿಂಕ್‌ಗೆ ಲಾಗಿನ್ ಆದ ನಂತರ "ಸಪ್ಲೈಯರ್‌ಗೆ ಪಾವತಿಸಿ" ಅಥವಾ "ಫಲಾನುಭವಿಗಳನ್ನು ನಿರ್ವಹಿಸಿ" ವಿಭಾಗಗಳಲ್ಲಿ ಫಲಾನುಭವಿಯನ್ನು ಸೇರಿಸಬಹುದು (https://credit.pinelabs.com/ccc/login):

  • "ಸಪ್ಲೈಯರ್‌ಗೆ ಪಾವತಿಸಿ" ಅಥವಾ "ಫಲಾನುಭವಿಯನ್ನು ಮ್ಯಾನೇಜ್ ಮಾಡಿ" ಮೇಲೆ ಟ್ಯಾಪ್ ಮಾಡಿ
  • ನೀವು "ಫಲಾನುಭವಿ ಪುಟವನ್ನು ನಿರ್ವಹಿಸಿ" ಕ್ಲಿಕ್ ಮಾಡಿದ್ದರೆ, "ಹೊಸ ಫಲಾನುಭವಿಯನ್ನು ಸೇರಿಸಿ" ಮೇಲೆ ಟ್ಯಾಪ್ ಮಾಡಿ.
  • ಫಲಾನುಭವಿ ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSC ಕೋಡ್ ನಮೂದಿಸಿ.
  • "ಮುಂದುವರೆಯಲು ಸೇವ್ ಮಾಡಿ" ಮೇಲೆ ಟ್ಯಾಪ್ ಮಾಡಿ
  • GST ವಿವರಗಳನ್ನು ನಮೂದಿಸಿ ಮತ್ತು ಮುಂದುವರೆಯಲು "ಮುಂದುವರೆಯಿರಿ" ಮೇಲೆ ಕ್ಲಿಕ್ ಮಾಡಿ.
  • ಫಲಾನುಭವಿಯನ್ನು ಸೇರಿಸಲಾಗುತ್ತದೆ.

  • ಹೌದು, ಫಲಾನುಭವಿಯ GST ಕಡ್ಡಾಯವಾಗಿದೆ. ಎಲ್ಲಾ ಪೂರೈಕೆದಾರರ ಪಾವತಿಗಳನ್ನು ಮೌಲ್ಯೀಕರಿಸಲು ನಮಗೆ ಫಲಾನುಭವಿಯ GST ಅಗತ್ಯವಿದೆ

  • ವಿಫಲವಾದ ಪಾವತಿಗಾಗಿ ನಿಮ್ಮ ಹಣವನ್ನು ಕಡಿತಗೊಳಿಸಿದರೆ, ನಿಮ್ಮ ಹಣವು ನಿಮ್ಮ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ನೀವು ಪಾವತಿ ಮಾಡಿದ ದಿನಾಂಕದಿಂದ 8-10 ಕೆಲಸದ ದಿನಗಳ ಒಳಗೆ ಮೊತ್ತವನ್ನು ನಿಮ್ಮ ಅಕೌಂಟ್‌ಗೆ ರಿಫಂಡ್ ಮಾಡಲಾಗುತ್ತದೆ.

  • ಫ್ಯೂಯಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಫ್ಯೂಯಲ್ ಸರ್ಚಾರ್ಜ್ ಮನ್ನಾ (ಕನಿಷ್ಠ ಟ್ರಾನ್ಸಾಕ್ಷನ್ ₹400, ಗರಿಷ್ಠ ಟ್ರಾನ್ಸಾಕ್ಷನ್ ₹5,000 ಮತ್ತು ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ಗರಿಷ್ಠ ₹250 ಕ್ಯಾಶ್‌ಬ್ಯಾಕ್)

  • ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಆದಾಗ್ಯೂ, ಆನ್ಲೈನಿನಲ್ಲಿ KYC ಮಾಡಲು ಸಾಧ್ಯವಾಗದಿದ್ದರೆ, KYC ಪೂರ್ಣಗೊಳಿಸಲು ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರತಿನಿಧಿಗಳು ಕಾರ್ಡ್ ಹೋಲ್ಡರ್ ಅನ್ನು ಸಂಪರ್ಕಿಸುತ್ತಾರೆ.
  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಕಾರ್ಡ್ ಹೋಲ್ಡರ್ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ತೋರಿಸಬೇಕಾಗುತ್ತದೆ
    • ID ಪುರಾವೆ ಪ್ರತಿ
    • ವಿಳಾಸದ ಪುರಾವೆ ಪ್ರತಿ
    • ಪಾಸ್‌ಪೋರ್ಟ್ ಸೈಜ್ ಫೋಟೋ
  • ಯಾವುದೇ ವ್ಯತ್ಯಾಸದ ಸಂದರ್ಭದಲ್ಲಿ, ಕಾರ್ಡ್ ಹೋಲ್ಡರ್‌ಗೆ ಹೆಚ್ಚುವರಿ ಡಾಕ್ಯುಮೆಂಟ್ ಕೇಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಹೊಸ ಅಕೌಂಟ್‌ಗಳನ್ನು ತೆರೆಯಲು ಯಾವುದೇ ಅಧಿಕೃತವಾಗಿ ಮಾನ್ಯವಾದ ಡಾಕ್ಯುಮೆಂಟ್‌ಗಳ (OVD) ಪ್ರಮಾಣೀಕೃತ ಪ್ರತಿಯನ್ನು ಅಂಗೀಕರಿಸಬಹುದು (ಗುರುತಿನ ಪುರಾವೆ / ಮೇಲಿಂಗ್ ವಿಳಾಸದ ಪುರಾವೆಯಾಗಿ), 
    • ಆಧಾರ್‌ನ ಸ್ವಾಧೀನದ1 ಪ್ರತಿ/ ಇ-ಆಧಾರ್‌ನ ಪ್ರಿಂಟ್ ಔಟ್ (30 ದಿನಗಳಿಗಿಂತ ಹಳೆಯದಾಗಿರಬಾರದು) / e-KYC (ಬಯೋಮೆಟ್ರಿಕ್ / OTP ಆಧಾರಿತ) 
    • ಪಾಸ್‌ಪೋರ್ಟ್ [ಗಡುವು ಮುಗಿದಿರಬಾರದು] 
    • ಶಾಶ್ವತ ಡ್ರೈವಿಂಗ್ ಲೈಸೆನ್ಸ್ [ಗಡುವು ಮುಗಿದಿರಬಾರದು] 
    • ಭಾರತದ ಎಲೆಕ್ಷನ್ ಕಮಿಷನ್ ನೀಡಿದ ಎಲೆಕ್ಷನ್/ ವೋಟರ್ ಕಾರ್ಡ್ 
    • ರಾಜ್ಯ ಸರ್ಕಾರದ ಅಧಿಕಾರಿಯು ಸರಿಯಾಗಿ ಸಹಿ ಮಾಡಿದ NREGA ನೀಡಿದ ಜಾಬ್ ಕಾರ್ಡ್ 
    • ಹೆಸರು ಮತ್ತು ವಿಳಾಸದ ವಿವರಗಳನ್ನು ಒಳಗೊಂಡಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ

  • ಕಾರ್ಡ್‌ಹೋಲ್ಡರ್ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು, Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಭಾರತದೊಳಗಿನ ಏರ್‌ಪೋರ್ಟ್ ಲೌಂಜ್‍ಗಳ ಕಾಂಪ್ಲಿಮೆಂಟರಿ ಅಕ್ಸೆಸ್ ಒದಗಿಸುತ್ತದೆ. ಫ್ಲೈಟ್‌ಗಾಗಿ ಕಾಯುತ್ತಿರುವಾಗ ಕಾರ್ಡ್‌ಹೋಲ್ಡರ್ ಲೌಂಜ್‌ನಲ್ಲಿ ಆರಾಮದಿಂದ ವಿಶ್ರಾಂತಿ ಪಡೆಯಬಹುದು. Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳು ಕ್ಯಾಲೆಂಡರ್ ವರ್ಷದಲ್ಲಿ ಭಾರತದೊಳಗೆ 8 ವರೆಗೆ ಲೌಂಜ್ (ಪ್ರತಿ ತ್ರೈಮಾಸಿಕಕ್ಕೆ 2 ಭೇಟಿಗಳನ್ನು ಮಿತಿಗೊಳಿಸಲಾಗಿದೆ) ಅಕ್ಸೆಸ್ ಪಡೆಯಬಹುದು.

ಕ್ರೆಡಿಟ್ ಕಾರ್ಡ್ ಕಳೆದುಹೋದ/ಕಳ್ಳತನವಾದ ಸಂದರ್ಭದಲ್ಲಿ, ಕಾರ್ಡ್ ಹೋಲ್ಡರ್ ಒಂದೇ ಬಾರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಲಾಗಿನ್ ಮಾಡಬೇಕು ಮತ್ತು ಮೆನುವಿನಲ್ಲಿ ಸರ್ವಿಸ್ ಕೋರಿಕೆಗಳ ವಿಭಾಗದಲ್ಲಿ ಕಳೆದುಹೋದ ಅಥವಾ ಕಳ್ಳತನವಾದ ಕ್ರೆಡಿಟ್ ಕಾರ್ಡ್ ಅನ್ನು ವರದಿ ಮಾಡಬೇಕು.
https://www.hdfcbank.com/personal/pay/cards/credit-cards/block-loststolen-card

  • ಪೂರೈಕೆದಾರರ ಪಾವತಿಯನ್ನು ಬಳಸಿಕೊಂಡು ಟ್ರಾನ್ಸ್‌ಫರ್ ಮಾಡಬಹುದಾದ ಗರಿಷ್ಠ ಮೊತ್ತವು ಪಾವತಿ ಮಾಡುವ ಸಮಯದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಕ್ರೆಡಿಟ್ ಮಿತಿಯಾಗಿರುತ್ತದೆ.

ಕ್ರೆಡಿಟ್ ಕಾರ್ಡ್‌ನಲ್ಲಿ ಈ ಖರ್ಚುಗಳು/ಟ್ರಾನ್ಸಾಕ್ಷನ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅರ್ಹವಾಗಿರುವುದಿಲ್ಲ -

  • ಫ್ಯೂಯಲ್ ಖರ್ಚುಗಳು
  • ವಾಲೆಟ್ ಲೋಡ್ ಟ್ರಾನ್ಸಾಕ್ಷನ್‌ಗಳು
  • ನಗದು ಮುಂಗಡಗಳು
  • ಬಾಕಿಯಿರುವ ಬ್ಯಾಲೆನ್ಸ್ ಪಾವತಿ
  • ಕಾರ್ಡ್ ಫೀಸ್ ಮತ್ತು ಇತರ ಶುಲ್ಕಗಳ ಪಾವತಿ
  • SmartEMI / ಡಯಲ್ ಇನ್ EMI ಟ್ರಾನ್ಸಾಕ್ಷನ್‌ಗಳು

  • ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡಲು ಕಾರ್ಡ್ ಹೋಲ್ಡರ್ PIN ಜನರೇಟ್ ಮಾಡಬೇಕು. ಆ್ಯಕ್ಟಿವೇಶನ್‌ಗೆ ಈ ಕೆಳಗಿನ ವಿಧಾನಗಳನ್ನು ಬಳಸಬಹುದು
  • IVR ಬಳಸುವ ಮೂಲಕ - 1800 202 6161/1860 267 6161 ಗೆ ಕರೆ ಮಾಡಿ
  • ನೆಟ್ ಬ್ಯಾಂಕಿಂಗ್ ಬಳಸುವ ಮೂಲಕ
  • ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ ಬಳಸುವ ಮೂಲಕ
  • ATM ಬಳಸುವ ಮೂಲಕ
  • PIN ಜನರೇಟ್ ಮಾಡಲು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ನೋಡಿ: https://www.hdfcbank.com/personal/pay/cards/credit-cards/forgot-card-pin

₹1.8 ಲಕ್ಷದ ವಾರ್ಷಿಕ ಖರ್ಚುಗಳ ಮೇಲೆ 2500 ಬೋನಸ್ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ (ಫ್ಯೂಯಲ್, ವಾಲೆಟ್ ಲೋಡ್ ಟ್ರಾನ್ಸಾಕ್ಷನ್‌ಗಳು, EMI ಟ್ರಾನ್ಸಾಕ್ಷನ್‌ಗಳನ್ನು ಹೊರತುಪಡಿಸಿ) 

  • ಒಮ್ಮೆ ಪೂರೈಕೆದಾರರ ಪಾವತಿಯನ್ನು ಆರಂಭಿಸಿದ ನಂತರ, ಕೋರಿಕೆಯನ್ನು ಕ್ಯಾನ್ಸಲ್ ಮಾಡಲಾಗುವುದಿಲ್ಲ.

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ವಿಶೇಷವಾಗಿ Pine Labs ಮರ್ಚೆಂಟ್‌ಗಳಿಗೆ ನೀಡಲಾಗುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪಾಲುದಾರಿಕೆಯಲ್ಲಿ Pine Labs ಕಾರ್ಡ್ ನೀಡುತ್ತಿದೆ.

  • ಸಾಮಾನ್ಯವಾಗಿ, ಟ್ರಾನ್ಸಾಕ್ಷನ್ ಯಶಸ್ವಿಯಾಗುವ ಅಥವಾ ವಿಫಲವಾಗುವ ಮೊದಲು 1-3 ಕೆಲಸದ ದಿನಗಳ ಕಾಲ ಆರಂಭ ಸ್ಥಿತಿಯಲ್ಲಿರುತ್ತದೆ. ವಿಫಲವಾದ ಸ್ಟೇಟಸ್ ಸಂದರ್ಭದಲ್ಲಿ, ಕಡಿತಗೊಳಿಸಲಾದ ಹಣವನ್ನು ಕಳುಹಿಸುವವರ ಅಕೌಂಟ್‌ಗೆ ರಿಫಂಡ್ ಮಾಡಲಾಗುತ್ತದೆ.

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್‌ಗೆ, ಮೊದಲ 90 ದಿನಗಳ ಒಳಗೆ ₹75,000 (EMI-ಅಲ್ಲದ ಖರ್ಚುಗಳು) ಖರ್ಚು ಮಾಡುವ ಮೂಲಕ ಮೊದಲ ವರ್ಷದ ಮೆಂಬರ್‌ಶಿಪ್ ಫೀಸ್ ಮನ್ನಾ ಮಾಡಬಹುದು.

  • ಕಾಂಪ್ಲಿಮೆಂಟರಿ ಕೋಟಾವನ್ನು ಮೀರಿದ ಎಲ್ಲಾ ಭೇಟಿಗಳನ್ನು ಲೌಂಜ್ ವಿವೇಚನೆಗೆ ಬಿಡಲಾಗುತ್ತದೆ ಮತ್ತು ಲೌಂಜ್‌ನಿಂದ ಕೂಡ ಶುಲ್ಕ ವಿಧಿಸಲಾಗುತ್ತದೆ.

  • ಕಾರ್ಡ್‌ಹೋಲ್ಡರ್ ಎರಡೂ ರೂಪಾಂತರಗಳ ಕ್ರೆಡಿಟ್ ಕಾರ್ಡ್‌ನಲ್ಲಿ 30ನೇ ಸೆಪ್ಟೆಂಬರ್, 2022 ವರೆಗೆ ಎಲ್ಲಾ ಖರ್ಚುಗಳಿಗೆ (EMI-ಅಲ್ಲದ ವೆಚ್ಚಗಳು) 3% ಕ್ಯಾಶ್‌ಬ್ಯಾಕ್ ಪಡೆಯಬಹುದು. (ಪ್ರತಿ ತಿಂಗಳಿಗೆ ₹1500 ಮಿತಿಗೊಳಿಸಲಾಗಿದೆ)
  • ಖರ್ಚು ಒಟ್ಟುಗೂಡಿಸುವಿಕೆಯು ವಾಲೆಟ್ ಲೋಡ್, ಫ್ಯೂಯಲ್ ಖರ್ಚುಗಳು ಮತ್ತು Pine Labs ಮಾರಾಟಗಾರರ ಪಾವತಿ ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿಲ್ಲ. (ಕೆಳಗಿನ ಪೂರೈಕೆದಾರರ ಪಾವತಿಗಳ ಸೆಕ್ಷನ್ ರೆಫರ್ ಮಾಡಿ).
  • Pine Labs ಮಾರಾಟಗಾರರ ಪಾವತಿ ಪ್ಲಾಟ್‌ಫಾರ್ಮ್ ಮೂಲಕ ಪೂರೈಕೆದಾರರ ಪಾವತಿಗಳ ಮೇಲೆ ಕಾರ್ಡ್‌ಹೋಲ್ಡರ್‌ಗಳು 1% ಕ್ಯಾಶ್‌ಬ್ಯಾಕ್ ಗಳಿಸುತ್ತಾರೆ. ಈ ಆಫರ್ 30ನೇ ಸೆಪ್ಟೆಂಬರ್ 2022 ವರೆಗೆ ಮಾನ್ಯವಾಗಿರುತ್ತದೆ. ಲಿಂಕ್ ಬಳಸಿ ಕನಿಷ್ಠ ₹10 ಗೆ ವೌಚರ್‌ಗಳ ರೂಪದಲ್ಲಿ ಕ್ಯಾಶ್‌ಬ್ಯಾಕನ್ನು ರಿಡೀಮ್ ಮಾಡಬಹುದು: https://credit.pinelabs.com/ccc/login
  • ಕಾರ್ಡ್ ತೆರೆದ ದಿನಾಂಕದಿಂದ 30 ದಿನಗಳಲ್ಲಿ ₹100 ರ ಕನಿಷ್ಠ ಒಂದು ಟ್ರಾನ್ಸಾಕ್ಷನ್ ಮೇಲೆ ಕಾರ್ಡ್ ಹೋಲ್ಡರ್ ₹500 ಮೌಲ್ಯದ ಗಿಫ್ಟ್ ವೌಚರ್ ಕೂಡ ಪಡೆಯಬಹುದು. ತಿಳಿಸಲಾದ ಆಫರ್ 30ನೇ ಸೆಪ್ಟೆಂಬರ್, 2022 ವರೆಗೆ ಮಾನ್ಯವಾಗಿರುತ್ತದೆ.

  • ನಿಮ್ಮ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನಿಮ್ಮ ಪೂರೈಕೆದಾರರಿಗೆ ಕಚ್ಚಾ ವಸ್ತುಗಳು, ದಾಸ್ತಾನು ಖರೀದಿಗಳು ಮುಂತಾದ ಥರ್ಡ್ ಪಾರ್ಟಿ ಪಾವತಿಗಳನ್ನು ಮಾಡಲು ಪೂರೈಕೆದಾರರಿಗೆ ಅನುಮತಿ ನೀಡುತ್ತದೆ

  • ಫಲಾನುಭವಿ ಅಕೌಂಟ್‌ಗೆ ಹಣವು ಕ್ರೆಡಿಟ್ ಆದ ನಂತರ ನಿಮ್ಮ ಟ್ರಾನ್ಸಾಕ್ಷನ್ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಗುತ್ತದೆ. ಹಣವನ್ನು ಫಲಾನುಭವಿಯ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿದಾಗ ನೀವು SMS ಪಡೆಯುತ್ತೀರಿ

  • ಅಂತಹ ಅಪರೂಪದ ಸಂದರ್ಭಗಳಲ್ಲಿ, ಹಣವು ಆಟೋಮ್ಯಾಟಿಕ್ ಆಗಿ 7-10 ಕೆಲಸದ ದಿನಗಳಲ್ಲಿ ನಿಮಗೆ ಮರಳಿ ಕ್ರೆಡಿಟ್ ಆಗುತ್ತದೆ.

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಮೂಲಕ Pine Labs ಮಾರಾಟಗಾರರ ಪಾವತಿ ಪ್ಲಾಟ್‌ಫಾರ್ಮ್ ಮೂಲಕ 50 ದಿನಗಳ ಅವಧಿಯವರೆಗೆ ಮಾಡಲಾದ ಮಾರಾಟಗಾರರ ಪಾವತಿಯ ಮೇಲೆ ಕಾರ್ಡ್‌ಹೋಲ್ಡರ್‌ಗೆ 1% ಫ್ಲಾಟ್ ಬಡ್ಡಿಯನ್ನು ಒದಗಿಸಲಾಗುತ್ತದೆ.

  • ಪೈನ್ ಲ್ಯಾಬ್ಸ್ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ 30ನೇ ಸೆಪ್ಟೆಂಬರ್, 2022 ವರೆಗೆ ಪಡೆದ ಕಾರ್ಡ್‌ಗಳಿಗೆ ಲೈಫ್ ಟೈಮ್ ಫ್ರೀ ಆಗಿದೆ.
  • 30ನೇ ಸೆಪ್ಟೆಂಬರ್, 2022 ನಂತರ ಪಡೆದ ಎಲ್ಲಾ ಕಾರ್ಡ್‌ಗಳಿಗೆ, ಗ್ರಾಹಕರು ಆ್ಯಕ್ಟಿವೇಟ್ ಮಾಡದಿದ್ದರೆ ಮಾತ್ರ ವಿತರಣೆಯ 90 ದಿನಗಳ ನಂತರ ವಾರ್ಷಿಕ ಶುಲ್ಕವಾಗಿ ₹1000 ವಿಧಿಸಲಾಗುತ್ತದೆ.

  • ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಕ್ಲೈಮ್ ಮಾಡುವುದು ಸುಲಭ. ಒಮ್ಮೆ ಕಾರ್ಡ್ ಹೋಲ್ಡರ್ 500 ಪಾಯಿಂಟ್‌ಗಳನ್ನು ಸಂಗ್ರಹಿಸಿದ ನಂತರ ಅವರು ಅದನ್ನು ಪ್ರಾಡಕ್ಟ್‌ಗಳು, ಗಿಫ್ಟ್ ವೌಚರ್‌ಗಳು ಮತ್ತು ರಿಯಾಯಿತಿಗಳಿಗಾಗಿ ರಿಡೀಮ್ ಮಾಡಬಹುದು.
  • SmartBuy ಮೂಲಕ:
    ಎಚ್ ಡಿ ಎಫ್ ಸಿ ಬ್ಯಾಂಕ್ ಪ್ಲಾಟ್‌ಫಾರ್ಮ್ SmartBuy ನಲ್ಲಿ ಟ್ರಾವೆಲ್/ಹೋಟೆಲ್ ಬುಕಿಂಗ್‌ನ ವಿಶೇಷ ಆಫರ್‌ಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
    SmartBuy ಲಿಂಕ್: https://offers.smartbuy.hdfcbank.com/
  • ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ:
    ಇಂಟರ್ನೆಟ್ ಬ್ಯಾಂಕಿಂಗಿಗೆ ಲಾಗಿನ್ ಮಾಡಿ ಮತ್ತು ಕಾರ್ಡ್‌ಗಳು  ಕ್ರೆಡಿಟ್ ಕಾರ್ಡ್  ವಿಚಾರಣೆ  ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ ಅನ್ನು ಆಯ್ಕೆಮಾಡಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ನೋಡಿ:
    https://www.hdfcbank.com/personal/pay/cards/credit-cards/claim-rewards

  • ಎಲ್ಲಾ ಖರ್ಚುಗಳಿಗೆ ಪ್ರತಿ ₹150 ಖರ್ಚಿಗೆ 4 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ (ಫ್ಯೂಯಲ್, ವಾಲೆಟ್ ಲೋಡ್ ಟ್ರಾನ್ಸಾಕ್ಷನ್‌ಗಳು, EMI ಟ್ರಾನ್ಸಾಕ್ಷನ್‌ಗಳನ್ನು ಹೊರತುಪಡಿಸಿ)
  • ಯುಟಿಲಿಟಿ, ಟೆಲಿಕಾಂ, ಸರ್ಕಾರಿ ಮತ್ತು ತೆರಿಗೆ ಪಾವತಿಗಳಂತಹ ಬಿಸಿನೆಸ್ ಅಗತ್ಯತೆಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ (ತಿಂಗಳಿಗೆ ₹500 ಗೆ ಮಿತಿಗೊಳಿಸಲಾಗಿದೆ)
  • ಕ್ಯಾಲೆಂಡರ್ ವರ್ಷದಲ್ಲಿ 8 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್‌ಪೋರ್ಟ್ ಲೌಂಜ್ ಭೇಟಿಗಳು.

  • ನಿಮ್ಮ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಪೂರೈಕೆದಾರರ ಪಾವತಿಗಳನ್ನು ಮಾಡಬಹುದು.

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿಲ್ಲವೇ? ಈಗಲೇ ಅಪ್ಲೈ ಮಾಡಿ: https://credit.pinelabs.com/ccc/

  • ಮಾಸಿಕ ಸೈಕಲ್‌ನಲ್ಲಿ ಗಳಿಸಿದ ಒಟ್ಟು ರಿವಾರ್ಡ್ ಪಾಯಿಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಕಾರ್ಡ್‌ದಾರರ ನಂತರದ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
  • ಸಂಗ್ರಹಿಸಿದ ರಿವಾರ್ಡ್ ಪಾಯಿಂಟ್‌ಗಳನ್ನು @ 100 ರಿವಾರ್ಡ್ ಪಾಯಿಂಟ್‌ಗಳು = ₹ 50 ದರದಲ್ಲಿ ಕ್ಯಾಶ್‌ಬ್ಯಾಕ್‌ಗಾಗಿ ರಿಡೀಮ್ ಮಾಡಬಹುದು. ಕ್ಯಾಶ್‌ಬ್ಯಾಕ್ ರಿಡೆಂಪ್ಶನ್‌ಗೆ ಕನಿಷ್ಠ 2,500 ರಿವಾರ್ಡ್ ಪಾಯಿಂಟ್‌ಗಳು ಬೇಕಾಗುತ್ತವೆ.
  • ಅನ್ವಯವಾಗುವ ರಿಡೆಂಪ್ಶನ್ ದರದಲ್ಲಿ ವಿಶೇಷ ರಿವಾರ್ಡ್ ಕೆಟಲಾಗ್‌ನಿಂದ ಆಕರ್ಷಕ ಗಿಫ್ಟ್‌ಗಳು ಮತ್ತು Air Miles ಗೂ ಕೂಡ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು. ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ಪ್ರತಿ ಕೋರಿಕೆಗೆ ₹99 ರಿವಾರ್ಡ್ ರಿಡೆಂಪ್ಶನ್ ಫೀಸ್ ಅನ್ವಯವಾಗುತ್ತದೆ.
  • ದಯವಿಟ್ಟು ನೀಡಲಾದ ಲಿಂಕ್ ಅನ್ನು ಫಾಲೋ ಮಾಡಿ - https://www.hdfcbank.com/personal/pay/cards/credit-cards/claim-rewards

  • ಪೂರೈಕೆದಾರರ ಪಾವತಿಗಳನ್ನು ಮಾಡುವುದು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯಾಗಿದೆ. ಪಾವತಿಗಳನ್ನು ಮಾಡಲು ಪಾವತಿದಾರರ ಫಲಾನುಭವಿ ಮೊಬೈಲ್ ನಂಬರ್, ಫಲಾನುಭವಿ ಬ್ಯಾಂಕ್ ಅಕೌಂಟ್ ಮತ್ತು GST ವಿವರಗಳು ನಿಮಗೆ ಅಗತ್ಯವಿದೆ.

  • ಟ್ರಾನ್ಸ್‌ಫರ್‌ಗಳು ಫಲಾನುಭವಿಗೆ ಕ್ರೆಡಿಟ್ ಆಗಲು 24 ಗಂಟೆಗಳವರೆಗಿನ ಸಮಯವನ್ನು (ಬ್ಯಾಂಕ್ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ತೆಗೆದುಕೊಳ್ಳಬಹುದು.

  • ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಹಣವು ಡೆಬಿಟ್ ಆಗಿದ್ದರೂ ಕೂಡ ಟ್ರಾನ್ಸಾಕ್ಷನ್ ಪ್ರಕ್ರಿಯೆಯಾಗದಿದ್ದರೆ, ಆ ಮೊತ್ತವನ್ನು 7 -10 ಕೆಲಸದ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ರಿಫಂಡ್ ಮಾಡಲಾಗುತ್ತದೆ.

ಟ್ರಾನ್ಸಾಕ್ಷನ್‌ನ ಸ್ಟೇಟಸ್ ಅನ್ನು ಹೋಮ್ ಪೇಜಿನಲ್ಲಿನ ಇತ್ತೀಚಿನ ಟ್ರಾನ್ಸಾಕ್ಷನ್‌ಗಳ ವಿಭಾಗದಲ್ಲಿ ಅಥವಾ ಅದೇ ವಿಭಾಗದಲ್ಲಿನ ಎಲ್ಲವನ್ನೂ ನೋಡಿ ಮತ್ತು ನಂತರ ನಿರ್ದಿಷ್ಟ ಟ್ರಾನ್ಸಾಕ್ಷನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು.

  • ಕ್ರೆಡಿಟ್ ಕಾರ್ಡ್ ನಷ್ಟವನ್ನು ವರದಿ ಮಾಡಲು ಮತ್ತು ಅದನ್ನು ಬ್ಲಾಕ್ ಮಾಡಲು ಕಾರ್ಡ್ ಹೋಲ್ಡರ್ ಎಚ್ ಡಿ ಎಫ್ ಸಿ ಬ್ಯಾಂಕ್‌ನ 24 ಗಂಟೆಗಳ ಗ್ರಾಹಕ ಸಹಾಯವಾಣಿಗೆ ಕರೆ ಮಾಡಬೇಕು. ದಯವಿಟ್ಟು ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.hdfcbank.com/personal/need-help/report-unauthorized-transactions. ಹೇಳಲಾದ ಟ್ರಾನ್ಸಾಕ್ಷನ್ ಕಾಣಿಸಿಕೊಳ್ಳುವ ಸ್ಟೇಟ್ಮೆಂಟ್ ದಿನಾಂಕದಿಂದ 60 ದಿನಗಳ ಒಳಗೆ ಟ್ರಾನ್ಸಾಕ್ಷನ್ ವಿವಾದವನ್ನು ಲಿಖಿತವಾಗಿ ವರದಿ ಮಾಡಬೇಕು.

  • ಪಾವತಿ ಆರಂಭಿಸಲಾಗಿದೆ ಎಂದರೆ ಫಲಾನುಭವಿಗೆ ಹಣ ಟ್ರಾನ್ಸ್‌ಫರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದರ್ಥ. ಆದಾಗ್ಯೂ, ಪಾವತಿಯು ಫಲಾನುಭವಿ ಅಕೌಂಟ್‌ಗೆ ಕ್ರೆಡಿಟ್ ಆಗಲು 1-2 ಕೆಲಸದ ದಿನಗಳನ್ನು ತೆಗೆದುಕೊಳ್ಳಬಹುದು.

  • ಫಲಾನುಭವಿಯನ್ನು ಡಿಲೀಟ್ ಮಾಡಲು, "ಫಲಾನುಭವಿಯನ್ನು ನಿರ್ವಹಿಸಿ" ವಿಭಾಗಕ್ಕೆ ಹೋಗಿ.
  • ನಿರ್ದಿಷ್ಟ ಹೆಸರನ್ನು ಆಯ್ಕೆಮಾಡಿ ಮತ್ತು ಸ್ಕ್ರೀನಿನ ಮೇಲ್ಭಾಗದ ಬಲ ಮೂಲೆಯಲ್ಲಿರುವ ಡಿಲೀಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಅಕೌಂಟ್ ತೆಗೆಯಲು "ಹೌದು, ಡಿಲೀಟ್ ಮಾಡಿ" ಆಯ್ಕೆಮಾಡಿ.

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಟ್ರಾನ್ಸಾಕ್ಷನ್ ಮೊತ್ತದ ಮೇಲೆ 1% ಬಡ್ಡಿ ದರ ಅನ್ವಯವಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ನಾವು ಬೇರೆ ಯಾವುದೇ ಫೀಸ್ ಮತ್ತು ಶುಲ್ಕಗಳನ್ನು ವಿಧಿಸುವುದಿಲ್ಲ.

ಪೂರೈಕೆದಾರರ ಪಾವತಿಗಳ ಬಗ್ಗೆ ಯಾವುದೇ ಪ್ರಶ್ನೆಗಳು ಅಥವಾ ಬೆಂಬಲಕ್ಕಾಗಿ, ದಯವಿಟ್ಟು ನಮಗೆ ಇಲ್ಲಿ ಕರೆ ಮಾಡಿ: 0120-4033600 ಅಥವಾ plutus.support@pinelabs.com ಗೆ ಇಮೇಲ್ ಕಳುಹಿಸಿ.

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಾಗಿ ಹೊಸ ಅಪ್ಲಿಕೇಶನ್‌ಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಒಂದನ್ನು ಕಂಡುಹಿಡಿಯಲು ನೀವು ನಮ್ಮ ವ್ಯಾಪಕ ಶ್ರೇಣಿಯ ಕ್ರೆಡಿಟ್ ಕಾರ್ಡ್‌ಗಳನ್ನು ಅನ್ವೇಷಿಸಬಹುದು. ನಿಮಗಾಗಿ ಉತ್ತಮ ಆಯ್ಕೆಗಳನ್ನು ಕಂಡುಹಿಡಿಯಲು ಇಲ್ಲಿ ಕ್ಲಿಕ್ ಮಾಡಿ

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಅನ್ನು ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಸಕ್ರಿಯಗೊಳಿಸಬಹುದು, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸುರಕ್ಷಿತ ಪಾವತಿಗಳನ್ನು ಸುಲಭಗೊಳಿಸಬಹುದು (ಕಾರ್ಡ್ ಪ್ಲಾಸ್ಟಿಕ್‌ನಲ್ಲಿ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಸಿಂಬಲ್ ಅನ್ನು ಪರೀಕ್ಷಿಸಿ)
  • ಭಾರತದಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳದೆ ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟಾಕ್ಟ್‌ಲೆಸ್ ವಿಧಾನದ ಮೂಲಕ ₹5,000 ವರೆಗೆ ಪಾವತಿಯನ್ನು ಮಾಡಲು ಅನುಮತಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ಮೊತ್ತವು ₹5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಸಮಾನವಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕಾಗುತ್ತದೆ.

ಕಾರ್ಡ್ ಹೋಲ್ಡರ್ ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್ (https://www.hdfcbank.com/personal/pay/bill-payments/hdfc-bank-credit-card-bill-payment) ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್ MyCards ಆ್ಯಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್‌ನ ಬಾಕಿಗಳನ್ನು ಪಾವತಿಸಬಹುದು.

  • ಕ್ರೆಡಿಟ್ ಕಾರ್ಡ್ ಮೇಲಿನ ವಿವಿಧ ರೀತಿಯ ಫೀಸ್ ಮತ್ತು ಶುಲ್ಕಗಳನ್ನು ತಿಳಿದುಕೊಳ್ಳಲು, ದಯವಿಟ್ಟು ವಿವಿಧ ಭಾಷೆಗಳಲ್ಲಿ MITC ಲಿಂಕ್ ನೋಡಿ:
    https://www.hdfcbank.com/personal/pay/cards/credit-cards/personal-mitc

  • ಕ್ರೆಡಿಟ್ ಕಾರ್ಡ್‌ನ ಯಾವುದೇ ರೂಪಾಂತರವನ್ನು ಬಳಸುವ ಎಲ್ಲಾ ಕಾರ್ಡ್‌ಹೋಲ್ಡರ್‌ಗಳು ಈ ಸೌಲಭ್ಯವನ್ನು ಬಳಸಬಹುದು.

  • ಕ್ರೆಡಿಟ್ ಕಾರ್ಡ್‌ನಲ್ಲಿ ಎಲ್ಲಾ ಖರೀದಿಗಳಿಗೆ 50 ದಿನಗಳವರೆಗಿನ ವಿಸ್ತರಿತ ಕ್ರೆಡಿಟ್ ಫ್ರೀ ಅವಧಿಯನ್ನು ಕಾರ್ಡ್ ಹೋಲ್ಡರ್‌ಗೆ ನೀಡಲಾಗುತ್ತದೆ.

  • Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್‌ಗೆ, ನೀಡಿದ 90 ದಿನಗಳ ನಂತರ ಕಾರ್ಡ್ ಹೋಲ್ಡರ್‌ಗೆ ವಾರ್ಷಿಕ ಫೀಸ್ ₹1000 (ಜೊತೆಗೆ ಅನ್ವಯವಾಗುವ ತೆರಿಗೆಗಳು) ವಿಧಿಸಲಾಗುತ್ತದೆ.

ಪೂರೈಕೆದಾರರ ಪಾವತಿಗಾಗಿ ಫಲಾನುಭವಿಯನ್ನು ಸೇರಿಸಲು ಈ ಕೆಳಗಿನ ವಿವರಗಳು ಬೇಕಾಗುತ್ತವೆ:

  • ಫಲಾನುಭವಿ ಹೆಸರು
  • ಮೊಬೈಲ್ ನಂಬರ್
  • ಬೆನಿಫಿಶಿಯರಿ ಅಕೌಂಟ್ ನಂಬರ್
  • ಫಲಾನುಭವಿ ಬ್ಯಾಂಕ್ IFSC &
  • ಫಲಾನುಭವಿ GST ನಂಬರ್

  • ಕ್ರೆಡಿಟ್ ಕಾರ್ಡ್‌ನ ರಿವಾಲ್ವಿಂಗ್ ಬ್ಯಾಲೆನ್ಸ್ ಮೇಲೆ 3.6% ಬಡ್ಡಿ ದರವನ್ನು ವಿಧಿಸಲಾಗುತ್ತದೆ