Business Freedom Credit Card

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್
  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್ 
  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Card Management & Controls

ಫೀಸ್ ಮತ್ತು ಶುಲ್ಕಗಳು

ವಾರ್ಷಿಕ ಫೀಸ್

  • ಒಂದು ವರ್ಷದಲ್ಲಿ ₹20,000 ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಮೆಂಬರ್‌ಶಿಪ್‌ನ ಮನ್ನಾ ಪಡೆಯಿರಿ.

  • ನಾಮಮಾತ್ರದ ಶುಲ್ಕಗಳ ₹500 ಪಾವತಿಸುವ ಮೂಲಕ ವಾರ್ಷಿಕವಾಗಿ ನಿಮ್ಮ ಮೆಂಬರ್‌ಶಿಪ್ ಅನ್ನು ನವೀಕರಿಸಿ.

ನಗದು ಮುಂಗಡ ಫೀಸ್

  • ಕನಿಷ್ಠ ₹500 ನೊಂದಿಗೆ 2.5% ಫೀಸ್, ನಿಮ್ಮ ಕಾರ್ಡ್‌ನಲ್ಲಿ ಎಲ್ಲಾ ನಗದು ವಿತ್‌ಡ್ರಾವಲ್‌ಗಳ ಮೇಲೆ ಅನ್ವಯವಾಗುತ್ತದೆ.

ಬಡ್ಡಿ

  • ಖರೀದಿಯ ದಿನಾಂಕದಿಂದ 50 ದಿನಗಳವರೆಗಿನ ಬಡ್ಡಿ ರಹಿತ ಅವಧಿಯನ್ನು ಪಡೆಯಿರಿ.

  • ಬಿಲ್ ಗಡುವು ದಿನಾಂಕವನ್ನು ಮೀರಿದ ಯಾವುದೇ ಬಾಕಿ ಮೊತ್ತದ ಮೇಲೆ ತಿಂಗಳಿಗೆ 3.49% ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ.

ವಿವರವಾದ ಫೀಸ್ ಮತ್ತು ಶುಲ್ಕಗಳನ್ನು ಓದಿ

​Fees and Renewal

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ಈ (ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು) ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳಿಗೆ ಸಂಬಂಧಿಸಿದ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿವೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟ್‌ಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು. 
Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ Freedom ಕ್ರೆಡಿಟ್ ಕಾರ್ಡ್ ಉದ್ಯಮಿಗಳು ಮತ್ತು ವೃತ್ತಿಪರರಿಗೆ ವಿನ್ಯಾಸಗೊಳಿಸಲಾದ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಆಗಿದೆ. ಬಿಸಿನೆಸ್ ಖರ್ಚನ್ನು ಸರಳಗೊಳಿಸಲು ಇದು ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್, ಫ್ಯೂಯಲ್ ಮೇಲ್ತೆರಿಗೆ ಮನ್ನಾಗಳು ಮತ್ತು ವೆಚ್ಚ ನಿರ್ವಹಣಾ ಸಾಧನಗಳನ್ನು ಒದಗಿಸುತ್ತದೆ.

ವೈಯಕ್ತಿಕ ಮಿತಿಗಳನ್ನು ಅರ್ಥಮಾಡಿಕೊಳ್ಳಲು ನೀವು ಬಿಸಿನೆಸ್ Freedom ಕ್ರೆಡಿಟ್ ಕಾರ್ಡ್‌ನೊಂದಿಗೆ ಒದಗಿಸಲಾದ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಬೇಕು. ಅದೇ ಡಾಕ್ಯುಮೆಂಟ್‌ನಲ್ಲಿ ನೀವು ಖರೀದಿಗಳ ಮೇಲಿನ ಬಡ್ಡಿ ದರಗಳು ಮತ್ತು ಉಚಿತ ಕ್ರೆಡಿಟ್ ಅವಧಿಗಳ ಬಗ್ಗೆ ಕೂಡ ತಿಳಿದುಕೊಳ್ಳಬಹುದು. ಆದಾಗ್ಯೂ, ಕಾರ್ಡ್‌ನ ಗರಿಷ್ಠ ಮಿತಿಯು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಹಿಸ್ಟರಿ, ಬ್ಯಾಂಕಿನೊಂದಿಗಿನ ನಿಮ್ಮ ಅಕೌಂಟ್ ಹಿಸ್ಟರಿ ಮತ್ತು ಇತರ ಸಂಬಂಧಿತ ಅಂಶಗಳನ್ನು ಅವಲಂಬಿಸಿರುತ್ತದೆ.  

ನಾವು ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ Freedom ಕ್ರೆಡಿಟ್ ಕಾರ್ಡ್‌ಗೆ ಹೊಸ ಅಪ್ಲಿಕೇಶನ್‌ಗಳನ್ನು ಸ್ವೀಕರಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇತರ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯನ್ನು ನೀವು ಅನ್ವೇಷಿಸಬಹುದು. ನಮ್ಮ ಲಭ್ಯವಿರುವ ಆಯ್ಕೆಗಳನ್ನು ನೋಡಲು ಮತ್ತು ನಿಮಗಾಗಿ ಸರಿಯಾದ ಕಾರ್ಡ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.