ನೀವು ತಿಳಿಯಬೇಕಾದ ಎಲ್ಲವೂ
E@Secure ಪಾಲಿಸಿಯು ವ್ಯಕ್ತಿಗಳು ಮತ್ತು ಅವರ ಕುಟುಂಬಕ್ಕೆ ಆನ್‌ಲೈನ್ ವಂಚನೆಗಳು ಮತ್ತು ಅಪರಾಧಗಳ ವಿರುದ್ಧ ಕವರ್ ಒದಗಿಸುತ್ತದೆ. ಇದು ಆನ್‌ಲೈನ್ ಖರೀದಿಗೆ ಸಂಬಂಧಿಸಿದ ವಂಚನೆಗಳು, ಇಮೇಲ್ ವಂಚನೆ, ಫಿಶಿಂಗ್, ಗೌರವಕ್ಕೆ ಧಕ್ಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಅಪರಾಧ ಸಂಭವಿಸಿದ 6 ತಿಂಗಳ ಒಳಗೆ ಇನ್ಶೂರ್ಡ್ ವ್ಯಕ್ತಿಯು ಕ್ಲೈಮ್ ನೋಂದಣಿ ಮಾಡಬೇಕು, ಅದಕ್ಕಿಂತ ತಡವಾದರೆ ಕ್ಲೈಮ್ ಪಾವತಿಸಲು ಸಾಧ್ಯವಿಲ್ಲ.
ಇನ್ಶೂರ್ಡ್ ವ್ಯಕ್ತಿಯ ಅವಲಂಬಿತ ಮಕ್ಕಳನ್ನು ಕವರ್ ಮಾಡಲು ಪಾಲಿಸಿಯನ್ನು ವಿಸ್ತರಿಸಬಹುದು. ಈ ಪಾಲಿಸಿಯು ಆನ್ಲೈನ್ನಲ್ಲಿ ಅವರ ಮಾನಹಾನಿ ಆಗದಂತೆ ತಡೆಯುತ್ತದೆ, ಸೈಬರ್ ಬೆದರಿಕೆ ಮತ್ತು ಕಿರುಕುಳ ಹಾಗೂ ಅದರಿಂದ ಉಂಟಾಗುವ ಮಾನಸಿಕ ತೊಂದರೆಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಈ ಪಾಲಿಸಿಯು ₹ 50,000 ರಿಂದ 1 ಕೋಟಿಯವರೆಗೆ ಹಲವಾರು ಮಿತಿಗಳ ನಷ್ಟಭರ್ತಿ ಆಯ್ಕೆಗಳನ್ನು ಒದಗಿಸುತ್ತದೆ. ಇನ್ಶೂರ್ಡ್ ವ್ಯಕ್ತಿಯು ಇದರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು ಹಾಗೂ ಫ್ಯಾಮಿಲಿ ಮತ್ತು ಮಾಲ್‌ವೇರ್ ಆ್ಯಡ್ ಆನ್ ಕವರ್ ಅನ್ನು ಸಹ ತೆಗೆದುಕೊಳ್ಳಬಹುದು. ಈ ಕವರ್ ಇನ್ಶೂರ್ಡ್ ವ್ಯಕ್ತಿಯ ಕ್ರೆಡಿಟ್ ಮಿತಿ, ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಮತ್ತು ಇಂಟರ್ನೆಟ್ ಮೂಲಕ ಮಾಡಿದ ಖರೀದಿಯ ಮೊತ್ತವನ್ನು ಅವಲಂಬಿಸಿರುತ್ತದೆ.
ಈ ನಡುವೆ, ಎಳೆ ಹುಡುಗರಿಂದ ಹಿಡಿದು ವಯಸ್ಸಾದವರು ಕೂಡಾ ಸೈಬರ್ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಅಂತಹ ಪ್ರತಿಯೊಬ್ಬ ವ್ಯಕ್ತಿಯು ಆನ್ಲೈನ್ ಅಪಾಯಗಳಿಗೆ ತುತ್ತಾಗಬಹುದು. ಆದ್ದರಿಂದ, ಸೈಬರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೂಲಕ ಆನ್ಲೈನ್ ವಂಚನೆಗಳಿಂದ ಪಾರಾಗಬಹುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಈ ಪಾಲಿಸಿಯನ್ನು ಖರೀದಿಸಬಹುದು ಹಾಗೂ ತಮಗಾಗಿ, ತಮ್ಮ ಸಂಗಾತಿ ಮತ್ತು ಇಬ್ಬರು ಅವಲಂಬಿತ ಮಕ್ಕಳಿಗಾಗಿ (ಯಾವುದೇ ವಯಸ್ಸಿನ ಮಿತಿಯಿಲ್ಲದೆ) ಪಾಲಿಸಿ ಖರೀದಿಸಬಹುದು.
ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುವ ಅಪಾಯಗಳು:
ಆ್ಯಡ್ ಆನ್ ಕವರ್
ಹೌದು, E@Secure ಪಾಲಿಸಿಯು ಗುರುತಿನ ಕಳ್ಳತನವನ್ನು ಕವರ್ ಮಾಡುತ್ತದೆ.
ಈ ಪಾಲಿಸಿಯು ಜಗತ್ತಿನ ಯಾವುದೇ ಮೂಲೆಯಲ್ಲಿ ಆನ್ಲೈನ್ ವಂಚನೆಗಳು ಮತ್ತು ಅಪರಾಧಗಳಿಂದ ಉಂಟಾದ ನಷ್ಟವನ್ನು ಕವರ್ ಮಾಡುತ್ತದೆ. ಆದಾಗ್ಯೂ, ಈ ಪಾಲಿಸಿ ಅಡಿಯಲ್ಲಿ ಯಾವುದೇ ಕಾನೂನು ಕ್ರಮಕ್ಕಾಗಿ ಅಧಿಕಾರ ವ್ಯಾಪ್ತಿಯು ಭಾರತವಾಗಿರುತ್ತದೆ.
ಸೈಬರ್ ಇನ್ಶೂರೆನ್ಸ್, ಸೈಬರ್ ವಂಚನೆಯಿಂದ ಆದ ನಷ್ಟಕ್ಕೆ ಕವರ್ ಒದಗಿಸುತ್ತದೆ. ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವುದರಿಂದ, ಸೈಬರ್ ಜಗತ್ತಿನ ಅಪಾಯಗಳು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಸೈಬರ್ ಇನ್ಶೂರೆನ್ಸ್ ಮೂಲಕ, ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಅನಧಿಕೃತ ಆನ್ಲೈನ್ ಟ್ರಾನ್ಸಾಕ್ಷನ್, ಫಿಶಿಂಗ್, ಇಮೇಲ್ ಮೋಸ, ಇ-ಮಾನ ಹಾನಿ, ಗುರುತಿನ ಕಳ್ಳತನ, ಸೈಬರ್ ಬೆದರಿಕೆ ಮತ್ತು ಇ-ಸುಲಿಗೆಯಿಂದ ಕಾಪಾಡಬಹುದು.
ಫಿಶಿಂಗ್ ಅನ್ನು ಪಾಲಿಸಿ ಮಿತಿಯ 15% ವರೆಗೆ ಮತ್ತು ಇಮೇಲ್ ಮೋಸವನ್ನು 25% ವರೆಗೆ ಕವರ್ ಮಾಡಲಾಗುತ್ತದೆ. ಸದರಿ ದಾಳಿಗಳಿಂದ ಉಂಟಾದ ಹಣಕಾಸು ನಷ್ಟಕ್ಕೆ ಈ ಪಾಲಿಸಿಯು ನಷ್ಟಭರ್ತಿ ಮಾಡುತ್ತದೆ.
₹50,000 ಮಿತಿಗೆ ಮೇಲ್ಪಟ್ಟ ವಿಮಾ ಮೊತ್ತಕ್ಕೆ ಪಾವತಿಸಬೇಕಾದ ಪ್ರೀಮಿಯಂ, ₹1,410 + GST.
ಫಿಶಿಂಗ್ ಎಂಬುದು ಕಾನೂನುಬದ್ಧ ವೆಬ್‌ಸೈಟ್ ಅನ್ನು ನಕಲಿಸುವ ಕ್ರಿಯೆಯಾಗಿದ್ದು, ನಕಲಿ ವೆಬ್‌ಸೈಟ್ ಅನ್ನು ಅಧಿಕೃತವಾಗಿ ಕಾಣುವಂತೆ ರಚಿಸಲಾಗುತ್ತದೆ ಮತ್ತು ಇದು ನಕಲಿ ವೆಬ್‌ಸೈಟ್‌ನಲ್ಲಿ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ಅಥವಾ ವಿವರಗಳನ್ನು ಹಂಚಿಕೊಳ್ಳಲು ಜನರನ್ನು ಪ್ರೇರೇಪಿಸಿ, ಗ್ರಾಹಕರಿಗೆ ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ. ಇಮೇಲ್ ಮೋಸ ಎಂಬುದು ಜನರಿಂದ ಬ್ಯಾಂಕ್ ಅಕೌಂಟ್ ವಿವರಗಳು, ಕಂಪ್ಯೂಟರ್ ಸಿಸ್ಟಮ್, ಪಾಸ್‌ವರ್ಡ್‌ಗಳು, ವೈಯಕ್ತಿಕ ಮಾಹಿತಿಯಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ನಕಲಿ ಮೇಲ್ ID ಯಿಂದ ಇಮೇಲ್‌ಗಳನ್ನು ಕಳುಹಿಸುವ ಕ್ರಿಯೆಯಾಗಿದೆ.
ಹೌದು, ಇನ್ಶೂರ್ಡ್ ವ್ಯಕ್ತಿಗಳು ತಮ್ಮ ಸ್ವಂತ ವಕೀಲರನ್ನು ನೇಮಿಸಬಹುದು. ಆದರೆ ಅದಕ್ಕೆ ಇನ್ಶೂರೆನ್ಸ್ ಕಂಪನಿಯಿಂದ ಒಪ್ಪಿಗೆ ಪಡೆಯಬೇಕು.
ಒಂದು ವೇಳೆ ನೀವು E@Secure ಪಾಲಿಸಿಯ ಅಡಿಯಲ್ಲಿ ಇನ್ಶೂರೆನ್ಸ್ ಪಡೆದಿದ್ದರೆ, ನಿಮ್ಮ ಅಕೌಂಟ್ ವಿವರಗಳ ಮೂಲಕ ಮಾಡಿದ ಆನ್‌ಲೈನ್ ಕಳ್ಳ ವ್ಯವಹಾರಗಳಿಂದ ನಿಮಗೆ ಉಂಟಾದ ಹಣಕಾಸು ನಷ್ಟವನ್ನು ಕವರ್ ಮಾಡಲಾಗುತ್ತದೆ. ಅಪರಾಧ ಸಂಭವಿಸಿದ 6 ತಿಂಗಳ ಒಳಗೆ ಇನ್ಶೂರ್ಡ್ ವ್ಯಕ್ತಿಯು ಕ್ಲೈಮ್ ನೋಂದಣಿ ಮಾಡಬೇಕು, ಅದಕ್ಕಿಂತ ತಡವಾದರೆ ಕ್ಲೈಮ್ ಪಾವತಿಸಲು ಸಾಧ್ಯವಿಲ್ಲ.
ಹೌದು. ಸೈಬರ್ ಇನ್ಶೂರೆನ್ಸ್ ನಿಮ್ಮ ಕ್ರೆಡಿಟ್ ಕಾರ್ಡ್, ಪರ್ಸನಲ್ ಬ್ಯಾಂಕ್ ಅಕೌಂಟ್, ಡೆಬಿಟ್ ಕಾರ್ಡ್ ಮತ್ತು ಇ-ವಾಲೆಟ್ ಬಳಸಿಕೊಂಡು ಆನ್ಲೈನಿನಲ್ಲಿ ಮಾಡಲಾದ ಅನಧಿಕೃತ ಆನ್ಲೈನ್ ಖರೀದಿಗಳನ್ನು ಕವರ್ ಮಾಡುತ್ತದೆ.
12 ತಿಂಗಳು.
ಕ್ರೆಡಿಟ್, ಲೋನ್, ಇತ್ಯಾದಿಗಳನ್ನು ಪಡೆಯಲು ಇನ್ನೊಬ್ಬ ವ್ಯಕ್ತಿಯ ಹೆಸರು ಮತ್ತು ವೈಯಕ್ತಿಕ ಮಾಹಿತಿಯ ದುರ್ಬಳಕೆ ಮಾಡುವುದನ್ನು ಗುರುತಿನ ಕಳ್ಳತನ ಎನ್ನುತ್ತಾರೆ.
ಒಂದುವೇಳೆ ಕ್ಲೈಮ್ ಸಮಯದಲ್ಲಿ, ಅನೇಕ ವಿಭಾಗಗಳನ್ನು ಪರಿಗಣಿಸಬೇಕಾದ ಸಂದರ್ಭ ಎದುರಾದರೆ, ಹೆಚ್ಚಿನ ಉಪ-ಮಿತಿ ಹೊಂದಿರುವ ಸೆಕ್ಷನ್ ಅಡಿಯಲ್ಲಿ ಪಾಲಿಸಿಯ ಕ್ಲೈಮ್‌ಗೆ ಅನುಮೋದನೆ ಸಿಗುತ್ತದೆ. ಉದಾಹರಣೆಗೆ: ಒಂದು ವೇಳೆ ನಷ್ಟವು ಇ-ಖ್ಯಾತಿಗೆ ಹಾನಿ (ಪಾಲಿಸಿ ಮಿತಿಯ 25% ವರೆಗೆ ಕವರ್ ಮಾಡಲಾಗುತ್ತದೆ) ಹಾಗೂ ಅನಧಿಕೃತ ಆನ್ಲೈನ್ ಟ್ರಾನ್ಸಾಕ್ಷನ್ (ಪಾಲಿಸಿ ಮಿತಿಯ 100% ವರೆಗೆ ಕವರ್ ಮಾಡಲಾಗುತ್ತದೆ) ಎರಡು ವಿಭಾಗಗಳ ವ್ಯಾಪ್ತಿಯಲ್ಲೂ ಬರುವಂತಿದ್ದರೆ, ಅನಧಿಕೃತ ಆನ್ಲೈನ್ ಟ್ರಾನ್ಸಾಕ್ಷನ್ ಅಡಿಯಲ್ಲಿ ಕ್ಲೈಮ್‌ಗೆ ಅನುಮೋದನೆ ಸಿಗುತ್ತದೆ.
ಹೌದು, ಮಾಲ್‌ವೇರ್‌ನಿಂದ ಡಿಜಿಟಲ್ ಸ್ವತ್ತುಗಳ ದುರ್ಬಲತೆ ಅಥವಾ ಹಾನಿಯಿಂದ ಇನ್ಶೂರ್ಡ್ ವ್ಯಕ್ತಿಗೆ ನಷ್ಟ ಉಂಟಾದರೆ, ಪಾಲಿಸಿಯು ಅದಕ್ಕೆ ರಕ್ಷಣೆ ಒದಗಿಸುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸಿದಾಗ, ಈ ಪಾಲಿಸಿಯು ಮಾಲ್‌ವೇರ್ ದಾಳಿಗೆ ತುತ್ತಾದ ಡಿಜಿಟಲ್ ಅಸೆಟ್‌ಗಳ ಬದಲಾವಣೆ, ಮರುಸ್ಥಾಪನೆ ಮತ್ತು ಮರು-ಸಂಗ್ರಹಣೆಗೆ ತಗಲುವ ವೆಚ್ಚವನ್ನು ಪಾವತಿಸುತ್ತದೆ.
ಇಲ್ಲ, ಇದನ್ನು ಪಾವತಿಸಲು ಆಗುವುದಿಲ್ಲ. ಇ-ಸುಲಿಗೆ, ಇ-ಖ್ಯಾತಿಗೆ ಹಾನಿ ಮತ್ತು ಮಾಲ್‌ವೇರ್ ದಾಳಿಗೆ ಮಾತ್ರ IT ವೆಚ್ಚಗಳನ್ನು ಮರುಪಾವತಿಸಲಾಗುತ್ತದೆ.
ಹೌದು, ಈ ಪಾಲಿಸಿಯು ಇ-ಖ್ಯಾತಿಗೆ ಹಾನಿ ಹಾಗೂ ಸೈಬರ್ ಬೆದರಿಕೆ ಮತ್ತು ಕಿರುಕುಳವನ್ನು ಕವರ್ ಮಾಡುತ್ತದೆ. ಇ-ಖ್ಯಾತಿಗೆ ಹಾನಿ ಉಂಟಾದ ಸಂದರ್ಭದಲ್ಲಿ, ಇಂಟರ್ನೆಟ್‌ನಲ್ಲಿರುವ ಹಾನಿಕಾರಕ ಕಂಟೆಂಟ್ ಅನ್ನು ತೆಗೆದುಹಾಕಲು IT ಸ್ಪೆಷಲಿಸ್ಟ್ ಅನ್ನು ನೇಮಿಸುವ ವೆಚ್ಚವನ್ನು ಪಾಲಿಸಿಯು ಮರುಪಾವತಿಸುತ್ತದೆ. ಈ ಘಟನೆಯಿಂದ ಆದ ಮಾನಸಿಕ ಒತ್ತಡದ ನಿವಾರಣೆಗೆ ಪಾಲಿಸಿದಾರರು ಮನಶಾಸ್ತ್ರಜ್ಞರ ಬಳಿ ಆಪ್ತಸಮಾಲೋಚನೆಗೆ ಹೋದರೆ, ಅದರ ವೆಚ್ಚಗಳನ್ನೂ ಮರುಪಾವತಿಸುವಂತೆ ಕೋರಬಹುದು. ಸೈಬರ್ ಬೆದರಿಕೆ ಮತ್ತು ಕಿರುಕುಳದ ಸಂದರ್ಭದಲ್ಲಿ, ಆ ಘಟನೆಯಿಂದಾದ ಒತ್ತಡದ ನಿವಾರಣೆಗೆ ಮನಶಾಸ್ತ್ರಜ್ಞರ ಬಳಿ ಆಪ್ತಸಮಾಲೋಚನೆಗೆ ತಗುಲುವ ವೆಚ್ಚವನ್ನು ಪಾಲಿಸಿಯು ಮರುಪಾವತಿಸುತ್ತದೆ.
ಹೌದು, ಯಾವುದೇ ವಯಸ್ಸಿನ ಮಿತಿ ಮತ್ತು ಹೆಚ್ಚುವರಿ ಪ್ರೀಮಿಯಂ ಇಲ್ಲದೇ, ನಿಮ್ಮ ಸಂಗಾತಿ ಮತ್ತು 2 ಅವಲಂಬಿತ ಮಕ್ಕಳಿಗೆ ಪಾಲಿಸಿಯ ಕವರೇಜ್ ಅನ್ನು ವಿಸ್ತರಿಸಬಹುದು.
ಕ್ಲೈಮ್ ಸಂದರ್ಭದಲ್ಲಿ ಮತ್ತು ಒಂದು ನಿರ್ದಿಷ್ಟ ಘಟನೆ ನಡೆದಿರುವುದು ಗೊತ್ತಾದಾಗ ಕ್ಲೈಮ್ ಸಲ್ಲಿಸಲು, ಇನ್ಶೂರ್ಡ್ ವ್ಯಕ್ತಿಯು ಎಚ್ ಡಿ ಎಫ್ ಸಿ ಎರ್ಗೋಗೆ ಅಂತಹ ಕ್ಲೈಮ್ ಅನ್ನು ವರದಿ ಮಾಡಿದ 7 ದಿನಗಳ ಒಳಗೆ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಸಲ್ಲಿಸಬೇಕು ಹಾಗೂ ಲಿಖಿತ ನೋಟಿಸ್ ನೀಡಬೇಕು.
ಇನ್ಶೂರ್ಡ್ ವ್ಯಕ್ತಿಯ ಅಕೌಂಟ್ ಅಥವಾ ಕಾರ್ಡ್ ವಿವರಗಳನ್ನು ಮೋಸದಾಯಕ ಆನ್‌ಲೈನ್ ಖರೀದಿಗೆ ಬಳಸಿದ್ದರೆ, ಇನ್ಶೂರ್ಡ್ ವ್ಯಕ್ತಿಯು E@Secure ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಬಹುದು. ಈ ಪಾಲಿಸಿಯು ಬ್ಯಾಂಕ್ ಅಕೌಂಟ್‌ನಿಂದ ಮಾಡಿದ ನಗದು ವಿತ್‌ಡ್ರಾವಲ್ ಅನ್ನು ಕವರ್ ಮಾಡುವುದಿಲ್ಲ.