Loan on Credit Card

ನಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಆಕರ್ಷಕ ದರಗಳು

ಫ್ಲೆಕ್ಸಿಬಲ್ ಕಂತುಗಳು

ತ್ವರಿತ ವಿತರಣೆಗಳು

ಸುಲಭ ಅಪ್ಲಿಕೇಶನ್

ನಿಮ್ಮ ಕನಸಿನ ಮನೆಯನ್ನು ಅನ್ಲಾಕ್ ಮಾಡಿ

ಇಂದೇ ನಿಮ್ಮ ಸೂಕ್ತ ಲೋನ್ ಪಡೆಯಿರಿ!

Loan on Credit Card

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ವಿಧಗಳು

Loan on Credit Card

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಪಡೆಯಿರಿ

ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಪಡೆಯಿರಿ
ಕೈಗೆಟುಕುವ ಬಡ್ಡಿ ದರಗಳು

ಆರಂಭಿಕ ಬೆಲೆ 11.04 %*

(*ನಿಯಮ ಮತ್ತು ಷರತ್ತುಗಳು ಅನ್ವಯ)

ಲೋನ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಲೋನ್ ಪ್ರಯೋಜನಗಳು

ಪ್ರಯೋಜನಗಳು 

  • ಯಾವುದೇ ಪೇಪರ್‌ವರ್ಕ್ ಇಲ್ಲ: ಯಾವುದೇ ಡಾಕ್ಯುಮೆಂಟ್ ಸಲ್ಲಿಕೆಯ ಅಗತ್ಯವಿಲ್ಲದ ಸರಳ ಪ್ರಕ್ರಿಯೆ.  
  • ಆನ್ಲೈನ್ ವಿತರಣೆ: ಅನುಕೂಲಕರ ಮೂರು-ಹಂತದ ಆನ್ಲೈನ್ ಪ್ರಕ್ರಿಯೆ.  
  • ತ್ವರಿತ ಲೋನ್: ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಲೋನ್ ಮೊತ್ತದ ತಕ್ಷಣದ ವಿತರಣೆ  

ಬಡ್ಡಿ ದರ 

  • ಸ್ಪರ್ಧಾತ್ಮಕ ಬಡ್ಡಿ ದರಗಳ ಪ್ರಯೋಜನ ಪಡೆಯಿರಿ, ಕನಿಷ್ಠ ದರದಲ್ಲಿ ಲಭ್ಯವಿದೆ. 
  • ನಿಮ್ಮ ಪರ್ಸನಲೈಸ್ಡ್ ಬಡ್ಡಿ ದರದ ಆಫರ್ ನೋಡಲು ಇಲ್ಲಿ ಕ್ಲಿಕ್ ಮಾಡಿ.  

ಹೊಂದಿಕೊಳ್ಳುವ EMI ಗಳು 

ಅವಧಿ

  • ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸುಲಭ ಮತ್ತು ಹೊಂದಿಕೊಳ್ಳುವ ಕಂತುಗಳಲ್ಲಿ ಲೋನ್‌ಗಳನ್ನು ಮರುಪಾವತಿಸಿ. 
  • ಪ್ರೊ ಟಿಪ್: ದೀರ್ಘ ಕಾಲಾವಧಿ = ಕಡಿಮೆ EMI ಗಳು.  

ಪ್ರಕ್ರಿಯೆ ಮತ್ತು ಅನುಮೋದನೆ 

  • ಮುಂಚಿತ-ಅನುಮೋದಿತ ಲೋನ್‌ನೊಂದಿಗೆ ತ್ವರಿತ ವಿತರಣೆಯನ್ನು ಆನಂದಿಸಿ. 
  • ಮೊತ್ತವನ್ನು ಸೆಕೆಂಡುಗಳಲ್ಲಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಸೇವಿಂಗ್ಸ್ ಅಕೌಂಟ್‌ಗೆ ಜಮಾ ಮಾಡಲಾಗುತ್ತದೆ.  

ಪ್ರಿ-ಕ್ಲೋಸರ್ 

  • ನಾಮಮಾತ್ರದ ಶುಲ್ಕಕ್ಕೆ ಪ್ರಿ-ಕ್ಲೋಸರ್/ಫೋರ್‌ಕ್ಲೋಸರ್ ಆಯ್ಕೆ ಲಭ್ಯವಿದೆ. 
  • ನಿಮ್ಮ ಅನುಕೂಲಕ್ಕೆ ತಕ್ಕಂತೆ ಲೋನನ್ನು ಮುಂಚಿತವಾಗಿ ಕ್ಲೋಸ್ ಮಾಡಲು ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಫೋನ್‌ಬ್ಯಾಂಕಿಂಗ್ ಅಥವಾ ನಿಮ್ಮ ರಿಲೇಶನ್‌ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸಬಹುದು. 

24/7. ಅಕ್ಸೆಸ್

  • ನೆಟ್‌ಬ್ಯಾಂಕಿಂಗ್- ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್ ಅಕ್ಸೆಸ್ ಮಾಡಿ ಮತ್ತು ಕಾರ್ಡ್‌ಗಳಿಗೆ ನ್ಯಾವಿಗೇಟ್ ಮಾಡಿ > ಕ್ರೆಡಿಟ್ ಕಾರ್ಡ್‌ಗಳು > ಟ್ರಾನ್ಸಾಕ್ಷನ್ > ಇನ್ಸ್ಟಾ ಲೋನ್.
  • ಫೋನ್‌ಬ್ಯಾಂಕಿಂಗ್- ಯಾವುದೇ ಸಮಯದಲ್ಲಿ, ದಿನ ಅಥವಾ ರಾತ್ರಿ ನಮ್ಮ ಫೋನ್‌ಬ್ಯಾಂಕಿಂಗ್ ಸರ್ವಿಸ್ ಅನ್ನು ಸಂಪರ್ಕಿಸಿ.
Loan Benefits

ಜಂಬೋ ಲೋನ್

  • ನಿಮ್ಮ ಕಾರ್ಡ್‌ನ ಖರ್ಚಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರದೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರಿದ ಲೋನ್ ಪಡೆಯಿರಿ. ನಿಮ್ಮ ಕ್ರೆಡಿಟ್ ಮಿತಿಯು ಬದಲಾಗದೇ ಇರುತ್ತದೆ, ಇದು ಸಾಮಾನ್ಯವಾಗಿ ಖರೀದಿಗಳನ್ನು ಮುಂದುವರೆಸಲು ನಿಮಗೆ ಅನುಮತಿ ನೀಡುತ್ತದೆ.
  • 1ನೇ ಜನವರಿ'25 ರಿಂದ 31ನೇ ಮಾರ್ಚ್'25 ಅವಧಿಯಲ್ಲಿ ಗ್ರಾಹಕರಿಗೆ ನೀಡಲಾಗುವ ದರ
IRR Q2 (2024-25)
ಕನಿಷ್ಠ IRR 11.04%
ಗರಿಷ್ಠ IRR 20.04%
ಸರಾಸರಿ IRR 14.37%
  • 1ನೇ ಜನವರಿ'25 ರಿಂದ 31ನೇ ಮಾರ್ಚ್'25 ಅವಧಿಯಲ್ಲಿ ಗ್ರಾಹಕರಿಗೆ ನೀಡಲಾಗುವ ವಾರ್ಷಿಕ ಶೇಕಡಾವಾರು ದರ
APR Q2 (2024-25)
APR 14.85%
Jumbo Loan

ಇನ್ಸ್ಟಾ ಲೋನ್

  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯೊಂದಿಗೆ ಲೋನನ್ನು ಸುರಕ್ಷಿತಗೊಳಿಸಿ. ನಿಮ್ಮ ಲಭ್ಯವಿರುವ ಕ್ರೆಡಿಟ್‌ನಿಂದ ಲೋನ್ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ, ಆದರೆ ಉಳಿದ ಮಿತಿಯವರೆಗೆ ಖರ್ಚು ಮಾಡಲು ನೀವು ಇನ್ನೂ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಬಹುದು.
  • 1ನೇ ಜನವರಿ'25 ರಿಂದ 31ನೇ ಮಾರ್ಚ್'25 ಅವಧಿಯಲ್ಲಿ ಗ್ರಾಹಕರಿಗೆ ನೀಡಲಾಗುವ ದರ
IRR Q2 (2024-25)
ಕನಿಷ್ಠ IRR 11.04%
ಗರಿಷ್ಠ IRR 20.64%
ಸರಾಸರಿ IRR 15.29%
  • 1ನೇ ಜನವರಿ'25 ರಿಂದ 31ನೇ ಮಾರ್ಚ್'25 ಅವಧಿಯಲ್ಲಿ ಗ್ರಾಹಕರಿಗೆ ನೀಡಲಾಗುವ ವಾರ್ಷಿಕ ಶೇಕಡಾವಾರು ದರ
APR Q2 (2024-25)
APR 16.85%
Insta Loan

ನಿಯಮ ಮತ್ತು ಷರತ್ತುಗಳು

ಕ್ರಮ ಸಂಖ್ಯೆ. ಕ್ರೆಡಿಟ್ ಕಾರ್ಡ್ ವಿತರಣೆಗಳ ಮೇಲಿನ ಲೋನ್ ಈ ಕೆಳಗಿನ ಷರತ್ತುಗಳ ಆಧಾರದ ಮೇಲೆ ಇರುತ್ತದೆ  
1 ನೀವು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನೀವು ನೇರವಾಗಿ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲೋನ್ ಪಡೆಯಬಹುದು. ಈಗಲೇ ಅಪ್ಲೈ ಮಾಡಿ
2 ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿಲ್ಲದಿದ್ದರೆ, ನೀವು ಮೊದಲು ನಮ್ಮೊಂದಿಗೆ ಹೊಸ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬೇಕು. ಅದರ ನಂತರ, ನೀವು ಅರ್ಹತೆಯನ್ನು ಪರಿಶೀಲಿಸಬಹುದು ಮತ್ತು ಕ್ರೆಡಿಟ್ ಕಾರ್ಡ್ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು. ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ

T&c ಲಿಂಕ್‌ಗಳು:

ಜಂಬೋ ಲೋನ್
ಇನ್ಸ್ಟಾ ಲೋನ್

Terms & Conditions

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಬಗ್ಗೆ ಇನ್ನಷ್ಟು

ನಗದು ಕೊರತೆಯನ್ನು ಎದುರಿಸುತ್ತಿದ್ದೀರಾ ಅಥವಾ ತುರ್ತು ಹಣದ ಅಗತ್ಯವಿದೆಯೇ? ಕ್ರೆಡಿಟ್ ಕಾರ್ಡ್ ಮೇಲಿನ ಎಚ್ ಡಿ ಎಫ್ ಸಿ ಬ್ಯಾಂಕ್ ಲೋನ್ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ತ್ವರಿತ ಮತ್ತು ಸುಲಭವಾಗಿ ಹಣವನ್ನು ಅಕ್ಸೆಸ್ ಮಾಡಲು ವೇಗವಾದ ಮತ್ತು ಅತ್ಯಂತ ಅನುಕೂಲಕರ ಮಾರ್ಗಗಳಲ್ಲಿ ಒಂದಾಗಿದೆ.
ಈ ಮುಂಚಿತ-ಅನುಮೋದಿತ, ತೊಂದರೆ ರಹಿತ ಲೋನ್ ಆಯ್ದ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳಿಗೆ ಲಭ್ಯವಿದೆ. ಕೆಲವೇ ಕ್ಲಿಕ್‌ಗಳೊಂದಿಗೆ, ನೀವು ಲೋನ್ ಪಡೆಯಬಹುದು ಮತ್ತು ಕೇವಲ 1 ಸೆಕೆಂಡ್-ನೋ ಪೇಪರ್‌ವರ್ಕ್‌ನಲ್ಲಿ ನೇರವಾಗಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಉಳಿತಾಯ ಅಕೌಂಟಿಗೆ ಮೊತ್ತವನ್ನು ಕ್ರೆಡಿಟ್ ಮಾಡಬಹುದು, ಕಾಯುವ ಅಗತ್ಯವಿಲ್ಲ, ನಿಮಗೆ ಅಗತ್ಯವಿರುವ ಫಂಡ್‌ಗಳಿಗೆ ತ್ವರಿತ ಅಕ್ಸೆಸ್.
ತುರ್ತು ವೆಚ್ಚ, ವೈದ್ಯಕೀಯ ಬಿಲ್‌ಗಳು ಅಥವಾ ಯಾವುದೇ ಅನಿರೀಕ್ಷಿತ ಹಣಕಾಸಿನ ಅವಶ್ಯಕತೆಗಾಗಿರಲಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಬೆರಳತುದಿಯಲ್ಲಿ ತ್ವರಿತ ಮತ್ತು ಸುಲಭ ಪರಿಹಾರವನ್ನು ಹೊಂದಿರುವುದನ್ನು ಖಚಿತಪಡಿಸುತ್ತದೆ.

ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗದೆ ನೀವು ಈ ಲೋನನ್ನು ಅಕ್ಸೆಸ್ ಮಾಡಬಹುದು. ಎಚ್ ಡಿ ಎಫ್ ಸಿ ಯಿಂದ ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಆಯ್ಕೆ ಮಾಡುವ ಮೂಲಕ, ನೀವು 20 ರಿಂದ 50 ದಿನಗಳವರೆಗಿನ ಬಡ್ಡಿ ರಹಿತ ಅವಧಿಯನ್ನು ಆನಂದಿಸಬಹುದು. ನಿಮ್ಮ ಲೋನಿಗೆ ಲಭ್ಯವಿರುವ ಗರಿಷ್ಠ ಮರುಪಾವತಿ ಅವಧಿ 60 ತಿಂಗಳು.

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಮೊದಲನೆಯದಾಗಿ, ಯಾವುದೇ ಪೇಪರ್‌ವರ್ಕ್ ಒಳಗೊಂಡಿಲ್ಲ, ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮತ್ತು ಡಾಕ್ಯುಮೆಂಟ್ ಸಲ್ಲಿಕೆಯ ಅಗತ್ಯವನ್ನು ನಿವಾರಿಸುವುದು. ಹೆಚ್ಚುವರಿಯಾಗಿ, ಹೆಚ್ಚುವರಿ ಅನುಕೂಲಕ್ಕಾಗಿ ಕೇವಲ ಮೂರು ಸರಳ ಹಂತಗಳನ್ನು ಒಳಗೊಂಡಿರುವ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಇದಲ್ಲದೆ, ಸಾಲಗಾರರು ತಮ್ಮ ಸೇವಿಂಗ್ಸ್ ಅಕೌಂಟ್‌ಗೆ ನೇರವಾಗಿ ಲೋನ್ ಮೊತ್ತದ ತಕ್ಷಣದ ವಿತರಣೆಯನ್ನು ನಿರೀಕ್ಷಿಸಬಹುದು, ಅಗತ್ಯವಿದ್ದಾಗ ಹಣಕ್ಕೆ ತ್ವರಿತ ಅಕ್ಸೆಸ್ ಖಚಿತಪಡಿಸುತ್ತದೆ.

ನೀವು ಈಗಾಗಲೇ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನಿಮ್ಮ ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ ಅಕೌಂಟ್ ಮೂಲಕ ನೀವು ನೇರವಾಗಿ ಲೋನನ್ನು ಅಕ್ಸೆಸ್ ಮಾಡಬಹುದು. ಆದಾಗ್ಯೂ, ನೀವು ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿಲ್ಲದಿದ್ದರೆ, ಆರಂಭಿಕ ಹಂತವು ನಮ್ಮೊಂದಿಗೆ ಹೊಸ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡುವುದನ್ನು ಒಳಗೊಂಡಿರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನುಮೋದಿಸಿದ ನಂತರ, ನೀವು ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು ಮತ್ತು ಕ್ರೆಡಿಟ್ ಕಾರ್ಡ್ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು.

ಕೇವಲ ಮೂರು ಕ್ಲಿಕ್‌ಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ಲೋನ್ ಪಡೆಯಿರಿ! 

ಡಿಜಿಟಲ್ ಪೋರ್ಟಲ್:

ನಿಮ್ಮ ಅರ್ಹತೆಯನ್ನು ವೆರಿಫೈ ಮಾಡಲು, ನಿಮ್ಮ ಅಪೇಕ್ಷಿತ ಲೋನ್ ಮೊತ್ತವನ್ನು ಆಯ್ಕೆಮಾಡಿ ಮತ್ತು ಖಚಿತಪಡಿಸಿ ಇಲ್ಲಿ ಕ್ಲಿಕ್ ಮಾಡಿ. 40 ಲಕ್ಷಕ್ಕೂ ಹೆಚ್ಚು ಗ್ರಾಹಕರು ನಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಮೂಲಕ ಯಶಸ್ವಿಯಾಗಿ ಲೋನ್ ಪಡೆದಿದ್ದಾರೆ.

ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ ನಾಲ್ಕು ಅಂಕಿಗಳು.

ಇದು ಆಯ್ದ ಗ್ರಾಹಕರಿಗೆ ಮುಂಚಿತ-ಅನುಮೋದಿತ ಲೋನ್ ಆಗಿರುವುದರಿಂದ, ಯಾವುದೇ ಪೇಪರ್‌ವರ್ಕ್ ಅಗತ್ಯವಿಲ್ಲ. ಲೋನ್ ವಿತರಣೆಗಾಗಿ OTP ವೆರಿಫಿಕೇಶನ್‌ಗಾಗಿ ನಿಮಗೆ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಂಬರ್ ಮತ್ತು ನೋಂದಾಯಿತ ಮೊಬೈಲ್ ನಂಬರ್ ಮಾತ್ರ ಬೇಕಾಗುತ್ತದೆ. 

*ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಮ್ಮ 80% ಗ್ರಾಹಕರು ನಮ್ಮ ಹೊಸ ಮತ್ತು ಸರಳ ಆನ್ಲೈನ್ ಪೋರ್ಟಲ್‌ನಲ್ಲಿ ತಮ್ಮ ಲೋನ್ ಮೊತ್ತವನ್ನು ವೆರಿಫೈ ಮಾಡಲು ಆದ್ಯತೆ ನೀಡುತ್ತಾರೆ. ನೀವು ಈಗಲೇ ನಿಮ್ಮ ಲೋನ್ ಮೊತ್ತವನ್ನು ಕೂಡ ಇಲ್ಲಿ ಪರಿಶೀಲಿಸಬಹುದು. 

ಕ್ರೆಡಿಟ್ ಕಾರ್ಡ್ ಮೇಲೆ 2 ವಿಧದ ಲೋನ್‌ಗಳು ಲಭ್ಯವಿವೆ:

  1. ಇನ್ಸ್ಟಾ ಲೋನ್: ಈ ಲೋನ್ ಮೊತ್ತವು ನಿಮ್ಮ ಲಭ್ಯವಿರುವ ಕ್ರೆಡಿಟ್ ಕಾರ್ಡ್ ಮಿತಿಯೊಳಗೆ ಇದೆ. ಉದಾ: ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ₹ 1,50,000/- ಆಗಿದ್ದರೆ, ನಿಮ್ಮ ಲೋನ್ ಮಿತಿ ₹ 1,20,000 ಆಗಿರಬಹುದು (ಮಿತಿ ವಿವಿಧ ಮಾನದಂಡಗಳನ್ನು ಅವಲಂಬಿಸಿರುತ್ತದೆ). ನೀವು ಈಗಾಗಲೇ ₹ 50,000 ಖರ್ಚು ಮಾಡಿದ್ದರೆ, ನೀವು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತ ₹ 1,00,000/- ಆಗಿರುತ್ತದೆ, ಇದನ್ನು ನಿಮ್ಮ ಉಳಿದ ಮಿತಿಯ ಮೇಲೆ ಬ್ಲಾಕ್ ಮಾಡಲಾಗುತ್ತದೆ.
  2. ಜಂಬೋ ಲೋನ್: ಈ ಲೋನ್ ಮೊತ್ತವು ನಿಮ್ಮ ಲಭ್ಯವಿರುವ ಕ್ರೆಡಿಟ್ ಕಾರ್ಡ್ ಮಿತಿಗಿಂತ ಹೆಚ್ಚಾಗಿದೆ. ಉದಾ: ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ₹ 4,00,000/- ಆಗಿದ್ದರೆ, ನಿಮ್ಮ ಲೋನ್ ಮಿತಿ ₹ 4,00,000/- ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಬ್ಲಾಕ್ ಮಾಡದೇ ಇರುವುದರಿಂದ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಕೂಡ ಖರ್ಚು ಮಾಡಬಹುದು.

ಕ್ರೆಡಿಟ್ ಕಾರ್ಡ್‌ನಲ್ಲಿ ಜಂಬೋ ಲೋನಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುವ ಮೂಲಕ ನೀವು ಹೆಚ್ಚಿನ ಲೋನ್ ಮೊತ್ತವನ್ನು ಆಯ್ಕೆ ಮಾಡಬಹುದು 

ಕ್ರೆಡಿಟ್ ಕಾರ್ಡ್ ಮೇಲಿನ ಲೋನಿಗೆ ನಾವು ಕಡಿಮೆ ಬಡ್ಡಿ ದರವನ್ನು ಒದಗಿಸುತ್ತೇವೆ ಮತ್ತು ನಮ್ಮ ಬಡ್ಡಿ ದರವು ಆನ್ಲೈನ್ ಪ್ರಕ್ರಿಯೆ ಅಥವಾ ಕರೆಯ ಮೂಲಕ ಒಂದೇ ಆಗಿದೆ.

12 ತಿಂಗಳಿಂದ 60 ತಿಂಗಳವರೆಗಿನ ಅವಧಿಯ ಆಧಾರದ ಮೇಲೆ ಬಡ್ಡಿ ದರವು ತಿಂಗಳಿಗೆ @1.25% ರಿಂದ ಆರಂಭವಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಒಮ್ಮೆ ನೀವು ಖಚಿತಪಡಿಸಿದ ನಂತರ, ನಮ್ಮ ಆನ್ಲೈನ್ ಲೋನ್ ಪ್ರಕ್ರಿಯೆಯ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಸೇವಿಂಗ್ಸ್ ಅಕೌಂಟ್‌ಗೆ ಕೇವಲ 1 ಸೆಕೆಂಡಿನಲ್ಲಿ ನೀವು ಹಣವನ್ನು ಪಡೆಯಬಹುದು. ಒಂದು ವೇಳೆ, ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಹೊಂದಿಲ್ಲದಿದ್ದರೆ, ನೀವು 7 ಕೆಲಸದ ದಿನಗಳ ಒಳಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹಣವನ್ನು ಪಡೆಯುತ್ತೀರಿ. 

ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಪಡೆಯಲು ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ. 

ಇದು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ಮುಂಚಿತ-ಅನುಮೋದಿತ ಲೋನ್ ಆಗಿದ್ದು, ಇದನ್ನು ನೀವು ಕೇವಲ 1 ಸೆಕೆಂಡಿನಲ್ಲಿ ನಿಮ್ಮ ಅಕೌಂಟ್‌ನಲ್ಲಿ ಪಡೆಯಬಹುದು. ನೀವು ಇಲ್ಲಿ ನಿಮ್ಮ ಲೋನ್ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಬಹುದು

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಎಂಬುದು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳಿಗೆ ವಿಶೇಷವಾಗಿ ಲಭ್ಯವಿರುವ ತೊಂದರೆ ರಹಿತ ಮತ್ತು ಮುಂಚಿತ-ಅನುಮೋದಿತ ಲೋನ್ ಆಗಿದೆ. ಫಂಡ್‌ಗಳು ಕೇವಲ ಒಂದು ಸೆಕೆಂಡಿನಲ್ಲಿ ನಿಮ್ಮ ಅಕೌಂಟಿಗೆ ಕ್ರೆಡಿಟ್ ಆಗುತ್ತವೆ!

ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ವೆರಿಫೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಕ್ರೆಡಿಟ್ ಮಿತಿಯ 30% ಮೀರುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಇಲ್ಲ. ನೀವು ಆನ್ಲೈನ್ ಪ್ರಕ್ರಿಯೆಯ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೇಲಿನ ಲೋನ್‌ಗೆ ಕರೆ ಮಾಡುವ ಮೂಲಕ ಅತ್ಯುತ್ತಮ ಮತ್ತು ಅದೇ ಬಡ್ಡಿ ದರವನ್ನು ಪಡೆಯುತ್ತೀರಿ. 

ಫಂಡ್‌ಗಳಿಗೆ ಸುಲಭ ಮತ್ತು ತ್ವರಿತ ಅಕ್ಸೆಸ್ ಪಡೆಯಿರಿ