Senior Citizens Account

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಶಾಪಿಂಗ್ ಪ್ರಯೋಜನಗಳು

  • ಪಾಲುದಾರ ಮರ್ಚೆಂಟ್‌ಗಳು, PayZapp, SmartBuy ಮತ್ತು ಇನ್ನೂ ಮುಂತಾದವುಗಳ ಮೂಲಕ ಆನ್ಲೈನ್ ಶಾಪಿಂಗ್‌ನಲ್ಲಿ 5% ಕ್ಯಾಶ್‌ಬ್ಯಾಕ್*

ಇನ್ಶೂರೆನ್ಸ್ ಪ್ರಯೋಜನಗಳು

  • ಮೊದಲ ಅರ್ಜಿದಾರರಿಗೆ ಪ್ರತಿ ವರ್ಷ ₹ 50,000 ಆಕ್ಸಿಡೆಂಟಲ್ ಆಸ್ಪತ್ರೆ ದಾಖಲಾತಿ ಮರುಪಾವತಿ ಕವರ್

ಬ್ಯಾಂಕಿಂಗ್ ಪ್ರಯೋಜನಗಳು

  • ಹಿರಿಯ ನಾಗರಿಕರಿಗೆ ನಗದು ಪಿಕಪ್, ನಗದು ಡೆಲಿವರಿ, ಇನ್‌ಸ್ಟ್ರುಮೆಂಟ್ ಪಿಕಪ್ ಸೇವೆಗಳು, ಕರೆಯಲ್ಲಿ ಲಭ್ಯವಿದೆ*

ಡೀಲ್‌ಗಳನ್ನು ಪರೀಕ್ಷಿಸಿ

  • ಡೆಬಿಟ್ ಕಾರ್ಡ್‌ನೊಂದಿಗೆ ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿಗಳು: PayZapp ಮತ್ತು SmartBuy ಮೂಲಕ ಶಾಪಿಂಗ್‌ನಲ್ಲಿ 5% ಕ್ಯಾಶ್‌ಬ್ಯಾಕ್.

  • SmartBuy ಆಫರ್: ಇಲ್ಲಿ ಕ್ಲಿಕ್ ಮಾಡಿ

  • PayZapp ಆಫರ್: ಇಲ್ಲಿ ಕ್ಲಿಕ್ ಮಾಡಿ

  • UPI ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ

  • ನೆಟ್‌ಬ್ಯಾಂಕಿಂಗ್ ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ

  • Billpay ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ

Senior Citizens Account

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ಅಕೌಂಟ್ ತೆರೆಯಬಹುದು:

  • 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವಾಸಿ ವ್ಯಕ್ತಿ
  • ಜಾಯಿಂಟ್ ಅಕೌಂಟ್‌ಗಳಿಗೆ, ಪ್ರೈಮರಿ ಅಕೌಂಟ್ ಹೋಲ್ಡರ್ ಹಿರಿಯ ನಾಗರಿಕರಾಗಿರಬೇಕು
Senior Citizens Account

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ID 
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಇತ್ತೀಚಿನ ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್ 
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಇತ್ತೀಚಿನ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ),
  • ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಉದ್ಯೋಗಿ)
  • ಫಾರ್ಮ್ 16
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

ಆಧಾರ್‌ನೊಂದಿಗೆ ಡಿಜಿಟಲ್ ಅಕೌಂಟ್ ತೆರೆಯಲು ಅಪ್ಲಿಕೇಶನ್ ಪ್ರಕ್ರಿಯೆ

ಕೇವಲ 4 ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ: 

  • ಹಂತ 1 - ನಿಮ್ಮ ಮೊಬೈಲ್ ನಂಬರನ್ನು ಮೌಲ್ಯೀಕರಿಸಿ
  • ಹಂತ 2- ನಿಮ್ಮ ಆಯ್ಕೆಯ 'ಅಕೌಂಟ್ ಪ್ರಕಾರ' ಆಯ್ಕೆಮಾಡಿ
  • ಹಂತ 3- ಆಧಾರ್ ನಂಬರ್ ಸೇರಿದಂತೆ ವೈಯಕ್ತಿಕ ವಿವರಗಳನ್ನು ಒದಗಿಸಿ
  • ಹಂತ 4- ವಿಡಿಯೋ KYC ಪೂರ್ಣಗೊಳಿಸಿ
no data
Senior Citizens Account

ವಿಡಿಯೋ ವೆರಿಫಿಕೇಶನ್ ಮೂಲಕ KYC ಯನ್ನು ಸರಳಗೊಳಿಸಿ

  • ಪೆನ್ (ಬ್ಲೂ/ಬ್ಲ್ಯಾಕ್ ಇಂಕ್) ಮತ್ತು ವೈಟ್ ಪೇಪರ್‌ನೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್-ಸಕ್ರಿಯಗೊಳಿಸಿದ ಫೋನ್ ಅನ್ನು ಸುಲಭವಾಗಿ ಇರಿಸಿಕೊಳ್ಳಿ.
  • ಆರಂಭದಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ ಮತ್ತು OTP ಬಳಸಿ ನಿಮ್ಮನ್ನು ವೆರಿಫೈ ಮಾಡಿ.
  • ಒಮ್ಮೆ ಮುಗಿದ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  • ನಂತರ ಬ್ಯಾಂಕ್ ಪ್ರತಿನಿಧಿ ಲೈವ್ ಸಹಿ, ಲೈವ್ ಫೋಟೋ ಮತ್ತು ಲೊಕೇಶನ್‌ನಂತಹ ನಿಮ್ಮ ವಿವರಗಳನ್ನು ವೆರಿಫೈ ಮಾಡುತ್ತಾರೆ.
  • ಒಮ್ಮೆ ವಿಡಿಯೋ ಕರೆ ಪೂರ್ಣಗೊಂಡ ನಂತರ, ನಿಮ್ಮ ವಿಡಿಯೋ KYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಬ್ಯಾಂಕ್ ಅಕೌಂಟ್ ತೆರೆಯಲು ಮಾರ್ಗಗಳು

ಹಿರಿಯ ನಾಗರಿಕರ ಅಕೌಂಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ಶುಲ್ಕಗಳು

  • ಅಕೌಂಟ್ ತೆರೆಯುವ ಶುಲ್ಕಗಳು: ಶೂನ್ಯ

  • ಡೆಪಾಸಿಟ್ ಶುಲ್ಕಗಳನ್ನು ಪರೀಕ್ಷಿಸಿ: ನಿಮ್ಮ ಅಕೌಂಟ್ ಇರುವ ನಗರವನ್ನು ಹೊರತುಪಡಿಸಿ ಬೇರೆ ನಗರದಲ್ಲಿ ನಿಮ್ಮ ಅಕೌಂಟ್‌ಗೆ ಚೆಕ್ ಡೆಪಾಸಿಟ್ ಮಾಡಿದರೆ ಶೂನ್ಯ ಶುಲ್ಕ

  • ಪಾರ್ ಚೆಕ್‌ಗಳಲ್ಲಿ ಪಾವತಿಸಬೇಕಾದ ಶುಲ್ಕಗಳು: ನಿಮ್ಮ ಅಕೌಂಟ್ ಹೊರಗಿನ ನಗರದಲ್ಲಿ ನೀಡಲಾದ ಚೆಕ್‌ಗಳಿಗೆ ಶೂನ್ಯ ಶುಲ್ಕಗಳು.

  • ನಕಲಿ/ಅಡ್‌ಹಾಕ್ ಆನ್ಲೈನ್ ಸ್ಟೇಟ್ಮೆಂಟ್ ವಿತರಣೆ: ನೋಂದಾಯಿತ ಇಮೇಲ್ ID ಯಲ್ಲಿ ನೆಟ್‌ಬ್ಯಾಂಕಿಂಗ್ ಅಥವಾ ಇ-ಸ್ಟೇಟ್ಮೆಂಟ್ ಮೂಲಕ ಕಳೆದ 5 ವರ್ಷಗಳ ಸ್ಟೇಟ್ಮೆಂಟ್‌ಗೆ ಯಾವುದೇ ಶುಲ್ಕವಿಲ್ಲ | 

  • ನಕಲಿ/ಆಡ್‌ಹಾಕ್ ಆಫ್‌ಲೈನ್ ಸ್ಟೇಟ್ಮೆಂಟ್ ವಿತರಣೆ (ಭೌತಿಕ ಪ್ರತಿ): ನಿಯಮಿತ ಅಕೌಂಟ್ ಹೋಲ್ಡರ್‌ಗಳಿಗೆ ₹100, ಹಿರಿಯ ನಾಗರಿಕರ ಅಕೌಂಟ್ ಹೋಲ್ಡರ್‌ಗಳಿಗೆ ₹50

ಒಟ್ಟುಗೂಡಿಸಿದ ಉಳಿತಾಯ ಫೀಸ್ ಮತ್ತು ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Stay Protected with Free Insurance Cover

ಇನ್ಶೂರೆನ್ಸ್ ಪ್ರಯೋಜನಗಳು

  • ವರ್ಷಕ್ಕೆ ₹ 50,000 ಆಕ್ಸಿಡೆಂಟಲ್ ಆಸ್ಪತ್ರೆ ದಾಖಲಾತಿ ಕವರ್. ಇದು ಮೊದಲ ಅರ್ಜಿದಾರರಿಗೆ ಮರುಪಾವತಿ ಕವರ್ ಆಗಿದೆ.

  • ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾದ ಪ್ರತಿ ದಿನಕ್ಕೆ ಗರಿಷ್ಠ 15 ದಿನಗಳಿಗೆ, ವರ್ಷಕ್ಕೆ ಒಮ್ಮೆ ₹500 ರಲ್ಲಿ ದೈನಂದಿನ ನಗದು ಭತ್ಯೆ.

  • ಆಸ್ಪತ್ರೆಗೆ ದಾಖಲಾದ ದಿನಾಂಕಕ್ಕಿಂತ ಕನಿಷ್ಠ 6 ತಿಂಗಳ ಮೊದಲು ಮರ್ಚೆಂಟ್ ಸಂಸ್ಥೆಯಲ್ಲಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿದ್ದರೆ ಮಾತ್ರ ನಿಮ್ಮ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

  • ಏರ್/ರೋಡ್/ರೈಲ್ ಡೆತ್ ಕವರ್ - ನಿಮ್ಮ Rewards ಡೆಬಿಟ್ ಕಾರ್ಡ್‌ನಲ್ಲಿ ₹5 ಲಕ್ಷದ ವಿಮಾ ಮೊತ್ತ (ಡೆಬಿಟ್ ಕಾರ್ಡ್‌ನಲ್ಲಿ ಉಚಿತ ಪರ್ಸನಲ್ ಡೆತ್ ಇನ್ಶೂರೆನ್ಸ್ ಕವರ್ ಅನ್ನು ಸಕ್ರಿಯವಾಗಿರಿಸಲು ತಮ್ಮ ಡೆಬಿಟ್ ಕಾರ್ಡ್ ರಿಟೇಲ್ ಅಥವಾ ಆನ್ಲೈನ್ ಮಳಿಗೆಗಳಲ್ಲಿ ಪ್ರತಿ 30 ದಿನಗಳಿಗೊಮ್ಮೆ ಸಕ್ರಿಯವಾಗಿಟ್ಟುಕೊಳ್ಳಬೇಕು) 

  • ನಿಮ್ಮ ಡೆಬಿಟ್ ಕಾರ್ಡ್ ಬಳಸಿ ಏರ್ ಟಿಕೆಟ್ ಖರೀದಿಸಿದರೆ ಫ್ಲಾಟ್ ₹25 ಲಕ್ಷದ ಹೆಚ್ಚುವರಿ ಇಂಟರ್ನ್ಯಾಷನಲ್ ಏರ್ ಕವರೇಜ್

  • ಡೆಬಿಟ್ ಕಾರ್ಡ್ ಅಡಿಯಲ್ಲಿ ಖರೀದಿಸಿದ ವಸ್ತುಗಳಿಗೆ ಬೆಂಕಿ ಮತ್ತು ದರೋಡೆ (90 ದಿನಗಳವರೆಗೆ) - ವಿಮಾ ಮೊತ್ತ ₹2,00,000

  • ಚೆಕ್ಡ್ ಬ್ಯಾಗೇಜ್ ನಷ್ಟ - ವಿಮಾ ಮೊತ್ತ ₹ 2,00,000 
    (ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್ ಅಡಿಯಲ್ಲಿ ಯಾವುದೇ ಕ್ಲೈಮ್‌ಗಳಿಗೆ/ಚೆಕ್ ಮಾಡಲಾದ ಬ್ಯಾಗೇಜ್ ಇನ್ಶೂರೆನ್ಸ್ ನಷ್ಟವನ್ನು ಅಂಗೀಕರಿಸಬೇಕು ಮತ್ತು ಪ್ರಕ್ರಿಯೆಗೊಳಿಸಬೇಕು, ಕಾರ್ಡ್‌ಹೋಲ್ಡರ್ ಈವೆಂಟ್ ದಿನಾಂಕಕ್ಕಿಂತ 3 ತಿಂಗಳ ಮೊದಲು ಡೆಬಿಟ್ ಕಾರ್ಡ್ ಬಳಸಿ ಕನಿಷ್ಠ 1 ಖರೀದಿ ಟ್ರಾನ್ಸಾಕ್ಷನ್ ನಡೆಸಿರಬೇಕು)

Easy Banking with Your Debit Card

ಸುಲಭ ಬ್ಯಾಂಕಿಂಗ್

  • ದಿನಕ್ಕೆ ₹50,000 ನಗದು ವಿತ್‌ಡ್ರಾವಲ್ ಮಿತಿ ಮತ್ತು ದಿನಕ್ಕೆ ₹3.5 ಲಕ್ಷದ ಶಾಪಿಂಗ್ ಮಿತಿಯೊಂದಿಗೆ ಮೊದಲ ಅರ್ಜಿದಾರರಿಗೆ ಉಚಿತ Rewards International ಡೆಬಿಟ್ ಕಾರ್ಡ್ ಉಚಿತ

  • ಪ್ರೈಮರಿ ಅಕೌಂಟ್ ಹೋಲ್ಡರ್‌ಗೆ ಉಚಿತ ಡೆಬಿಟ್ ಕಾರ್ಡ್

  • ಮೊದಲ ಅರ್ಜಿದಾರರು ಮಹಿಳೆಯಾಗಿದ್ದರೆ ಮತ್ತು ಬ್ಯಾಂಕ್‌ಗೆ ಹೊಸಬರಾಗಿದ್ದರೆ, ದಿನಕ್ಕೆ ₹25,000 ವರೆಗೆ ನಗದು ವಿತ್‌ಡ್ರಾವಲ್‌ಗಳೊಂದಿಗೆ ನಮ್ಮ ವಿಶೇಷ ಉಚಿತ ಮಹಿಳಾ ಅಡ್ವಾಂಟೇಜ್ ಡೆಬಿಟ್ ಕಾರ್ಡ್ ಮತ್ತು ದಿನಕ್ಕೆ ₹2.75 ಲಕ್ಷದ ಶಾಪಿಂಗ್ (POS) ಮಿತಿಯನ್ನು ಡೀಫಾಲ್ಟ್‌ನಿಂದ ನೀಡಲಾಗುತ್ತದೆ.

  • ಕ್ಯಾಶ್‌ಬ್ಯಾಕ್/ರಿವಾರ್ಡ್ಸ್ ಪಾಯಿಂಟ್ ಪ್ರೋಗ್ರಾಮ್

  • ಪಾಲುದಾರ ಮರ್ಚೆಂಟ್‌ಗಳಲ್ಲಿ 5% ಕ್ಯಾಶ್‌ಬ್ಯಾಕ್ (Smart Bazar, BPCL (ಎಚ್ ಡಿ ಎಫ್ ಸಿ ಬ್ಯಾಂಕ್ ಟರ್ಮಿನಲ್), Snapdeal, PayZapp, IRCTC, Apollo Pharmacy ಮತ್ತು Smart Buy)

  • ಗರಿಷ್ಠ ಕ್ಯಾಶ್‌ಬ್ಯಾಕ್/ರಿವಾರ್ಡ್ ಪಾಯಿಂಟ್‌ಗಳು

  • ತಿಂಗಳಿಗೆ ₹2,000

Transact with Ease

ಸುಲಭವಾಗಿ ಟ್ರಾನ್ಸಾಕ್ಟ್ ಮಾಡಿ

  • ಯಾವುದೇ ಬಳಕೆಯ ಶುಲ್ಕಗಳಿಲ್ಲದೆ ಉಚಿತ ಪೇಬಲ್-ಎಟ್-ಪಾರ್ ಚೆಕ್ ಬುಕ್. ಈ ಸೌಲಭ್ಯದೊಂದಿಗೆ, ನೀವು (ಕ್ಲಿಯರಿಂಗ್‌ಗಾಗಿ) ನೀಡಿದ ಔಟ್‌ಸ್ಟೇಷನ್ ಚೆಕ್‌ಗಳನ್ನು ಯಾವುದೇ ಎಚ್ ಡಿ ಎಫ್ ಸಿ ಬ್ಯಾಂಕ್ ಲೊಕೇಶನ್‌ನಲ್ಲಿ ಸ್ಥಳೀಯ ಚೆಕ್‌ಗಳಾಗಿ ಪರಿಗಣಿಸಲಾಗುತ್ತದೆ.

  • ಎಲ್ಲಾ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳಿಗೆ ಉಚಿತ ಜೀವಮಾನದ Billpay ಮತ್ತು ಇನ್‌ಸ್ಟಾಲರ್ಟ್‌ಗಳು

  • ಎಲ್ಲಾ ವೈಯಕ್ತಿಕ ಅಕೌಂಟ್ ಹೋಲ್ಡರ್‌ಗಳಿಗೆ ಉಚಿತ ಪಾಸ್‌ಬುಕ್ ಸೌಲಭ್ಯ

  • ಉಚಿತ ಇಮೇಲ್ ಸ್ಟೇಟ್ಮೆಂಟ್‌ಗಳು

  • ಉಚಿತ SMS ಅಲರ್ಟ್‌ಗಳು

  • ನೆಟ್‌ಬ್ಯಾಂಕಿಂಗ್, ಫೋನ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್‌ನಂತಹ ಸೌಲಭ್ಯಗಳೊಂದಿಗೆ ಸುಲಭ ಬ್ಯಾಂಕಿಂಗ್ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಲು ಮಾಡಲು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಅಥವಾ SMS ಮೂಲಕ ಚೆಕ್ ಪಾವತಿಗಳನ್ನು ನಿಲ್ಲಿಸಲು ನಿಮಗೆ ಅನುಮತಿ ನೀಡುತ್ತದೆ

  • ಉಚಿತ ಪ್ರಯಾಣಿಕರ ಚೆಕ್‌ಗಳು

  • ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (NEFT) ಸೌಲಭ್ಯ

  • ಮನೆಬಾಗಿಲಿನ ಬ್ಯಾಂಕಿಂಗ್ ಸೇವೆಗಳು ಅಂದರೆ, ಹಿರಿಯ ನಾಗರಿಕರಿಗೆ ಕರೆಯಲ್ಲಿ ನಗದು ಪಿಕಪ್/ಇನ್‌ಸ್ಟ್ರುಮೆಂಟ್ ಪಿಕಪ್ ಮತ್ತು ನಗದು ಡೆಲಿವರಿ ಲಭ್ಯವಿದೆ*. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ತಿಳಿದುಕೊಳ್ಳಲು ಆನ್ಲೈನಿನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಿರಿ.

Cross-Product Benefits

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.

Cross-Product Benefits

ಆಗಾಗ್ಗೆ ಕೇಳುವ ಪ್ರಶ್ನೆಗಳು

ಭಾರತದಲ್ಲಿ ಹಿರಿಯ ನಾಗರಿಕರ ಅಕೌಂಟ್ ಉಚಿತ ಇನ್ಶೂರೆನ್ಸ್ ಕವರ್, ಡೆಬಿಟ್ ಕಾರ್ಡ್‌ನೊಂದಿಗೆ ಸುಲಭ ಬ್ಯಾಂಕಿಂಗ್, ಆಕರ್ಷಕ ಮರ್ಚೆಂಟ್ ರಿಯಾಯಿತಿಗಳು, ರಿವಾರ್ಡ್ ಪಾಯಿಂಟ್‌ಗಳು, ಆದ್ಯತೆಯ ದರಗಳು ಮತ್ತು ಹೆಚ್ಚುವರಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ. 

ಹಿರಿಯ ನಾಗರಿಕರ ಅಕೌಂಟ್ ತೆರೆಯಲು ನೀವು ಗುರುತಿನ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್), ವಿಳಾಸದ ಪುರಾವೆ (ಇತ್ತೀಚಿನ ಯುಟಿಲಿಟಿ ಬಿಲ್, ಪಾಸ್‌ಪೋರ್ಟ್) ಮತ್ತು ಆದಾಯ ಪುರಾವೆ (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಆದಾಯ ತೆರಿಗೆ ರಿಟರ್ನ್‌ಗಳು) ಒದಗಿಸಬೇಕು.

ಎಚ್ ಡಿ ಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ಅಕೌಂಟ್ ಹಿರಿಯ ನಾಗರಿಕರಿಗೆ ಉಳಿತಾಯ, ವೈಯಕ್ತಿಕಗೊಳಿಸಿದ ಸೇವೆಗಳು ಮತ್ತು ಆದ್ಯತೆಯ ಬ್ಯಾಂಕಿಂಗ್ ಸೌಲಭ್ಯಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ಒಳಗೊಂಡಂತೆ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತದೆ. ಅಕೌಂಟ್ ಹೋಲ್ಡರ್‌ಗಳು ವೈದ್ಯಕೀಯ ವೆಚ್ಚಗಳು, ಪ್ರಯಾಣ ಮತ್ತು ಇನ್ನೂ ಮುಂತಾದವುಗಳ ಮೇಲೆ ರಿಯಾಯಿತಿಗಳನ್ನು ಕೂಡ ಆನಂದಿಸಬಹುದು. ಹೆಚ್ಚುವರಿಯಾಗಿ, ಹಿರಿಯ ನಾಗರಿಕರ ಅಗತ್ಯಗಳನ್ನು ಪೂರೈಸಲು ಬ್ಯಾಂಕಿಂಗ್ ಸೇವೆಗಳು ಮತ್ತು ವಿಶೇಷ ಹೂಡಿಕೆ ಆಯ್ಕೆಗಳಿಗೆ ಅಕೌಂಟ್ ಸುಲಭ ಅಕ್ಸೆಸ್ ಒದಗಿಸುತ್ತದೆ. 

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳು:   

  • ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ   

  • ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಸ್ಥಳೀಯ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಅದನ್ನು ಡ್ರಾಪ್ ಮಾಡಿ   

  • ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ ಮತ್ತು ನಿಮ್ಮ ಮೇಲಿಂಗ್ ವಿಳಾಸಕ್ಕೆ ಕಾರ್ಡ್ ಅನ್ನು ಕಳುಹಿಸುತ್ತೇವೆ   

ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲದ ಇತರೆ ಅಕೌಂಟ್ ಹೋಲ್ಡರ್‌ಗಳು:   

  • ಅಕೌಂಟ್ ತೆರೆಯುವ ಫಾರ್ಮ್ ಡೌನ್ಲೋಡ್ ಮಾಡಿ   

  • ಡೆಬಿಟ್ ಕಾರ್ಡ್ ಅಪ್ಲಿಕೇಶನ್ ಸೇರಿದಂತೆ ಅದನ್ನು ಭರ್ತಿ ಮಾಡಿ   

  • ಅದನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಸಲ್ಲಿಸಿ ಮತ್ತು ಉಳಿದದ್ದಕ್ಕೆ ನಾವು ಸಹಾಯ ಮಾಡುತ್ತೇವೆ

ಫ್ಲೆಕ್ಸಿಬಲ್, ಸೆಕ್ಯೂರ್ಡ್ ಮತ್ತು ಸುಲಭ ಬ್ಯಾಂಕಿಂಗ್‌ನೊಂದಿಗೆ ಇಂದೇ ನಿಮ್ಮ ಉಳಿತಾಯವನ್ನು ಬೆಳೆಸಿ.