ಗ್ರೂಪ್ ಹೆಡ್ - ರಿಟೇಲ್ ಬ್ರಾಂಚ್ ಬ್ಯಾಂಕಿಂಗ್, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಸಂಪತ್ ಕುಮಾರ್

ಶ್ರೀ ಸಂಪತ್ ಕುಮಾರ್ ಅವರು ಬ್ಯಾಂಕ್‌ನ ಪಶ್ಚಿಮ ಮತ್ತು ದಕ್ಷಿಣ ಪ್ರದೇಶವನ್ನು ಒಳಗೊಂಡಿರುವ ರಿಟೇಲ್ ಬ್ರಾಂಚ್ ಬ್ಯಾಂಕಿಂಗ್ ಗ್ರೂಪ್ ಹೆಡ್ ಆಗಿದ್ದಾರೆ.

ತಮ್ಮ ಹಿಂದಿನ ಹುದ್ದೆಯಲ್ಲಿ, ಶ್ರೀ ಕುಮಾರ್ ಅವರು ರಿಟೇಲ್ ಹೊಣೆಗಾರಿಕೆ ಪೋರ್ಟ್‌ಫೋಲಿಯೋವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿದ್ದರು – ಕಡಲಾಚೆಯ ಮತ್ತು ಸಾಗರೋತ್ತರ ಬ್ರಾಂಚ್‌ಗಳಿಗೆ ಪ್ರಾಡಕ್ಟ್‌ಗಳು ಮತ್ತು ಪರಿಹಾರಗಳನ್ನು ಒದಗಿಸುವ, ಖಾಸಗಿ ಬ್ಯಾಂಕಿಂಗ್ ಗ್ರೂಪ್ ಪ್ರಾಡಕ್ಟ್ ಮತ್ತು ಸಂಶೋಧನೆ, ATM, ಡಿಮ್ಯಾಟ್, ವರ್ಚುವಲ್ ರಿಲೇಶನ್‌ಶಿಪ್ ಮ್ಯಾನೇಜರ್ ಮತ್ತು ಬಿಸಿನೆಸ್ ಬ್ಯಾಂಕಿಂಗ್ ಗ್ರೂಪ್ ಪ್ರಾಡಕ್ಟ್‌ಗಳನ್ನು ಬಲಪಡಿಸುವ ಹೊಣೆಗಾರಿಕೆಯನ್ನು ಮುನ್ನಡೆಸಿದರು.

ಆಗಸ್ಟ್ 2000 ರಲ್ಲಿ ಬ್ಯಾಂಕ್‌ಗೆ ಸೇರುವ ಮೊದಲು, ಶ್ರೀ ಕುಮಾರ್ Integrated Finance Company Ltd ನೊಂದಿಗೆ ಕೆಲಸ ಮಾಡಿದ್ದರು.

29 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ವೃತ್ತಿಪರರಾದ ಶ್ರೀ ಕುಮಾರ್ ಅವರು ಹಲವಾರು ವೃತ್ತಿ ಮೈಲಿಗಲ್ಲುಗಳನ್ನು ಸಾಧಿಸಿದ ಶ್ರೇಯ ಹೊಂದಿದ್ದಾರೆ; ಅವುಗಳಲ್ಲಿ 2008 ರಲ್ಲಿ ಭಾರತೀಯ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಡೀಲ್; 2014 ರಲ್ಲಿ FCNR (B) ಕಲೆಕ್ಷನ್‌ನಲ್ಲಿ ಬ್ಯಾಂಕ್ ಅನ್ನು ಕೇಂದ್ರ ಸ್ಥಾನದ ಕಡೆಗೆ ಕೊಂಡೊಯ್ಯುವುದು ಮತ್ತು ಬ್ಯಾಂಕ್‌ಗೆ ಯಶಸ್ವಿ ಬೆಳವಣಿಗೆಯ ಪಥವನ್ನು ರೂಪಿಸುವುದು ಮುಂತಾದವುಗಳು ಸೇರಿವೆ.

ಶ್ರೀ ಕುಮಾರ್ ಅವರು ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಅವರು ಗಾಲ್ಫ್ ಕ್ರೀಡೆಯನ್ನು ಆನಂದಿಸುತ್ತಾರೆ. ವಿಶಿಷ್ಟ ಚೇತನರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಗಳನ್ನು ಸೃಷ್ಟಿಸುವ ಬಗ್ಗೆಯೂ ಅವರು ಕೆಲಸ ಮಾಡುತ್ತಾರೆ.