ಶ್ರೀ ಸುಮಂತ್ ರಾಮ್‌ಪಾಲ್ ಅವರು 28 ಮಾರ್ಚ್ 2024 ರಿಂದ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಡಮಾನ ಬಿಸಿನೆಸ್‌ನ ಗ್ರೂಪ್ ಹೆಡ್ ಆಗಿದ್ದಾರೆ. ಅವರು ಬ್ಯಾಂಕ್‌ನ ಹೋಮ್ ಲೋನ್ ಪೋರ್ಟ್‌ಫೋಲಿಯೋ, ಆಸ್ತಿ ಮೇಲಿನ ಲೋನ್ (LAP) ಮತ್ತು ಎಚ್ ಡಿ ಎಫ್ ಸಿ ಸೇಲ್ಸ್ ಮುಖ್ಯಸ್ಥರಾಗಿದ್ದಾರೆ.
ಇದಕ್ಕಿಂತ ಮೊದಲು, ಶ್ರೀ ರಾಮ್‌ಪಾಲ್ ಅವರು ಬ್ಯಾಂಕ್‌ನಲ್ಲಿ ಬಿಸಿನೆಸ್ ಬ್ಯಾಂಕಿಂಗ್ ವರ್ಕಿಂಗ್ ಕ್ಯಾಪಿಟಲ್ (BBG), ರೂರಲ್ ಬ್ಯಾಂಕಿಂಗ್ ಗ್ರೂಪ್ (RBG) ಮತ್ತು ಸುಸ್ಥಿರ ಜೀವನೋಪಾಯದ ತೊಡಗುವಿಕೆ (SLI) ಗ್ರೂಪ್ ಹೆಡ್ ಆಗಿದ್ದರು.
BBG ವಿಭಾಗವು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುತ್ತದೆ; RBG ವಿಭಾಗವು ರೈತರು ಮತ್ತು ಸಂಪೂರ್ಣ ಕೃಷಿ ಪರಿಸರ ವ್ಯವಸ್ಥೆಯನ್ನು ಪೂರೈಸುತ್ತದೆ ಮತ್ತು SLI ವಿಭಾಗವು ಸ್ವಯಂ ಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಮತ್ತು ಮೈಕ್ರೋಫೈನಾನ್ಸ್ ಸಂಸ್ಥೆಗಳ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುತ್ತದೆ.
ಶ್ರೀ ರಾಮಪಾಲ್ ಅವರ ನಾಯಕತ್ವದ ಅಡಿಯಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ಹಣಕಾಸು ವರ್ಷ (FY) 2019-2020 ಗಾಗಿ SIDBI; FY 2021-22 ಗಾಗಿ Asiamoney; FY 2021-22 ಗಾಗಿ Euromoney ಮತ್ತು FY 2022-23 ಗಾಗಿ Asiamoney ಯಿಂದ ಅತ್ಯುತ್ತಮ SME ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಇಂದು MSME ಮತ್ತು ಕೃಷಿ ಹಣಕಾಸಿನ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇದು ECLGS, CGTMSE, AIF, PMFME, CGFMU, FPO ಮುಂತಾದ ಸರ್ಕಾರಿ ಯೋಜನೆಗಳ ಹಣಕಾಸಿನ ಅತಿದೊಡ್ಡ ಪೂರೈಕೆದಾರರಲ್ಲಿ ಒಂದಾಗಿದೆ.
ಶ್ರೀ ರಾಮ್‌ಪಾಲ್ ಅವರು ಬ್ಯಾಂಕ್‌ನೊಂದಿಗಿನ ತಮ್ಮ ಎರಡು ದಶಕದ ವೃತ್ತಿ ಜೀವನದುದ್ದಕ್ಕೂ ಕಾರ್ಪೊರೇಟ್ ಮತ್ತು ಹೋಲ್‌ಸೇಲ್ ಬ್ಯಾಂಕರ್ ಆಗಿದ್ದಾರೆ. ಅವರು 1999 ರಲ್ಲಿ ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗದ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿ ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಸೇರಿದರು ಮತ್ತು ಮಧ್ಯಮ ಮಾರುಕಟ್ಟೆ ಗುಂಪಿನ ಪಶ್ಚಿಮ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾಗುವ ಮೊದಲು ಕೆಲವು ಪ್ರಮುಖ ಭಾರತೀಯ ಮತ್ತು MNC ಕಾರ್ಪೊರೇಟ್‌ಗಳನ್ನು ನಿರ್ವಹಿಸಿದರು. ಅವರು ಮಧ್ಯಮ-ಮಾರುಕಟ್ಟೆ ಬಿಸಿನೆಸ್ ವಿಭಾಗವನ್ನು ನಿರ್ಮಿಸಲು ಗಮನಾರ್ಹವಾಗಿ ಕೊಡುಗೆ ನೀಡಿದರು ಮತ್ತು ಅದರ ಡಿಜಿಟೈಸೇಶನ್ ಪ್ರಕ್ರಿಯೆಯಲ್ಲಿ ಕೂಡ ತೊಡಗಿಸಿಕೊಂಡಿದ್ದರು.
ಅವರು ಪುಣೆಯ ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಬಿಸಿನೆಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ತಮ್ಮ ಬಿಡುವಿನ ಸಮಯದಲ್ಲಿ, ಶ್ರೀ ರಾಮ್‌ಪಾಲ್ ಅವರು ಕುಟುಂಬದೊಂದಿಗೆ ಸಮಯ ಕಳೆಯಲು, ಸಿನಿಮಾಗಳನ್ನು ನೋಡಲು ಮತ್ತು ಮಾನವ ನಡವಳಿಕೆಯ ಬಗ್ಗೆ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ.