ಗ್ರೂಪ್ ಹೆಡ್ - ಕಾರ್ಪೊರೇಟ್ ಬ್ಯಾಂಕಿಂಗ್, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ನೀರವ್ ಶಾ

52 ವರ್ಷ ವಯಸ್ಸಿನ ಶ್ರೀ ನೀರವ್ ಶಾ ಅವರು ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಕಾರ್ಪೊರೇಟ್ ಬ್ಯಾಂಕಿಂಗ್ ಗ್ರೂಪ್ ಹೆಡ್ ಆಗಿದ್ದಾರೆ. ತಮ್ಮ ಪ್ರಸ್ತುತ ಹುದ್ದೆಯಲ್ಲಿ, ಅವರು ದೊಡ್ಡ ಕಾರ್ಪೊರೇಟ್‌ಗಳು, ಸಾರ್ವಜನಿಕ ವಲಯದ ಉದ್ಯಮ ಮತ್ತು ಬಹು-ರಾಷ್ಟ್ರೀಯ ಕಂಪನಿಗಳಿಗೆ ಬ್ಯಾಂಕ್‌ನ ವ್ಯಾಪಕ ಶ್ರೇಣಿಯ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ವಿಸ್ತರಿಸುವ ಉಸ್ತುವಾರಿಯನ್ನು ಹೊಂದಿದ್ದಾರೆ.

ಶ್ರೀ ಶಾ ಅವರು ಸುಮಾರು 28 ವರ್ಷಗಳ ಒಟ್ಟಾರೆ ಕೆಲಸದ ಅನುಭವವನ್ನು ಹೊಂದಿದ್ದು, ಅದರಲ್ಲಿ 24 ವರ್ಷಗಳ ಕಾಲ ಬ್ಯಾಂಕ್‌ನೊಂದಿಗೆ ಇದ್ದಾರೆ. ಶ್ರೀ ಶಾ ಅವರು 1999 ರಲ್ಲಿ ಕಾರ್ಪೊರೇಟ್ ಬ್ಯಾಂಕಿಂಗ್ ಗ್ರೂಪ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿ ಬ್ಯಾಂಕ್‌ಗೆ ಸೇರಿಕೊಂಡರು ಮತ್ತು ಕೇವಲ ಒಂದು ದಶಕದಲ್ಲಿ, ಅವರು 2020 ರಲ್ಲಿ ಪ್ರಸ್ತುತ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಉದಯೋನ್ಮುಖ ಕಾರ್ಪೊರೇಟ್‌ಗಳ ಗ್ರೂಪ್, ಮೂಲಸೌಕರ್ಯ ಫೈನಾನ್ಸ್ ಗ್ರೂಪ್, ಗ್ರಾಮೀಣ ಬ್ಯಾಂಕಿಂಗ್ ಗ್ರೂಪ್ ಮತ್ತು ಟ್ರಾನ್ಸ್‌ಪೋರ್ಟೇಶನ್ ಫೈನಾನ್ಸ್‌ನಂತಹ ಬಿಸಿನೆಸ್‌ಗಳ ಮುಖ್ಯಸ್ಥರಾಗಿದ್ದರು.

ಇದು ಕಾರ್ಪೊರೇಟ್ ಬ್ಯಾಂಕಿಂಗ್‌ನೊಂದಿಗೆ ಅವರ ಎರಡನೇ ಅವಧಿಯಾಗಿದೆ. 2011 ರಲ್ಲಿ ತಮ್ಮ ಹಿಂದಿನ ಹುದ್ದೆಯಲ್ಲಿ, ಅವರು ಪಶ್ಚಿಮ ಪ್ರದೇಶದ ಮುಖ್ಯಸ್ಥರಾಗಿದ್ದರು, ಈ ಸಮಯದಲ್ಲಿ ಅವರು ಹಲವಾರು ದೊಡ್ಡ ಕಾರ್ಪೊರೇಟ್ ಸಂಬಂಧಗಳನ್ನು ವಹಿಸಿಕೊಳ್ಳುವುದು ಮತ್ತು ಅಭಿವೃದ್ಧಿಪಡಿಸುವುದರ ಜವಾಬ್ದಾರಿ ಹೊಂದಿದ್ದರು.

ಶ್ರೀ ಶಾ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಕಾಮರ್ಸ್‌ ಬ್ಯಾಚುಲರ್ಸ್ ಡಿಗ್ರಿ ಮತ್ತು ಫೈನಾನ್ಸ್‌ನಲ್ಲಿ ಮಾಸ್ಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (MMS) ಮಾಡಿದ್ದಾರೆ.

ತಮ್ಮ ಬಿಡುವಿನ ಸಮಯದಲ್ಲಿ, ಅವರು ವಿಶ್ವದಾದ್ಯಂತ ಪ್ರಯಾಣಿಸುವ ಮೂಲಕ ಜಗತ್ತನ್ನು ಅರಿತುಕೊಳ್ಳಲು ಬಯಸುತ್ತಾರೆ ಮತ್ತು ಕ್ರೀಡೆಗಳ ಆಸಕ್ತ ಅನುಯಾಯಿಯಾಗಿದ್ದಾರೆ.