ಮುಖ್ಯ ಹಣಕಾಸು ಅಧಿಕಾರಿ, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಶ್ರೀನಿವಾಸನ್ ವೈದ್ಯನಾಥನ್

ಶ್ರೀ ಶ್ರೀನಿವಾಸನ್ ವೈದ್ಯನಾಥನ್ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ. ಈ ಹುದ್ದೆಯಲ್ಲಿ, ಅವರು ಹಣಕಾಸು ಮತ್ತು ಸಂಬಂಧಿತ ಪ್ರಕ್ರಿಯೆಗಳಿಗೆ ಜವಾಬ್ದಾರರಾಗಿದ್ದಾರೆ. ಹೆಚ್ಚುವರಿಯಾಗಿ, ಬ್ಯಾಂಕ್‌ನಲ್ಲಿ ಕಾರ್ಪೊರೇಟ್ ಸಂವಹನ ಕಾರ್ಯಗಳಿಗೆ ಕೂಡಾ ಅವರು ಜವಾಬ್ದಾರರಾಗಿದ್ದಾರೆ.

ಶ್ರೀ ವೈದ್ಯನಾಥನ್ ಅವರು ಬ್ಯಾಂಕ್‌ಗೆ ಸೇರುವ ಮೊದಲು ನ್ಯೂಯಾರ್ಕ್‌ನ Citigroup ನಲ್ಲಿ ಸಾಂಸ್ಥಿಕ ಕ್ಲೈಂಟ್‌ಗಳ ಗುಂಪಿನ ಫೈನಾನ್ಸ್ ಮತ್ತು ಡೆಪ್ಯೂಟಿ ಟ್ರೆಜರಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ $1.3 ಟ್ರಿಲಿಯನ್‌ ಮೀರಿದ ಬ್ಯಾಲೆನ್ಸ್ ಶೀಟ್ ಅನ್ನು ನಿರ್ವಹಿಸುತ್ತಿದ್ದರು. ಇದಕ್ಕಿಂತ ಮೊದಲು, ಅವರು ನ್ಯೂಯಾರ್ಕ್‌ನ Citi Global Treasury ಯಲ್ಲಿ CFO ಆಗಿದ್ದರು. ಅವರು 1991 ರಲ್ಲಿ Citi ಗೆ ಸೇರಿದರು ಮತ್ತು ಸಿಂಗಾಪುರ, ಹಾಂಗ್ ಕಾಂಗ್ ಮತ್ತು ನ್ಯೂಯಾರ್ಕ್‌ನಂತಹ ವೈವಿಧ್ಯಮಯ ಪ್ರದೇಶಗಳಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ನಾಯಕತ್ವದ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ರಿಟೇಲ್, ಕಾರ್ಡ್‌ಗಳು ಮತ್ತು ಸಾಂಸ್ಥಿಕ ಬಿಸಿನೆಸ್‌ಗಳು ಮತ್ತು ಕಾರ್ಪೊರೇಟ್ ಕಾರ್ಯಗಳನ್ನು ಒಳಗೊಂಡು ಪ್ರಾಡಕ್ಟ್‌ಗಳು ಮತ್ತು ಪ್ರಕ್ರಿಯೆಗಳಲ್ಲಿ ಅವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದಾರೆ.

Citi ಯಲ್ಲಿ ತಮ್ಮ 27 ವರ್ಷಗಳ ಅವಧಿಯಲ್ಲಿ, ಅವರು ಹಣಕಾಸಿನ ನಿಯಂತ್ರಣ ಮತ್ತು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ, ಹಣಕಾಸು ಕಾರ್ಯವನ್ನು ನಿರ್ಮಿಸಿದ್ದಾರೆ ಮತ್ತು ಬಿಸಿನೆಸ್ ಫಲಿತಾಂಶಗಳನ್ನು ಮುನ್ನಡೆಸಿದ್ದಾರೆ. ಅವರು ಹಣಕಾಸಿನ ಯೋಜನೆ; MIS ಮತ್ತು ವಿಶ್ಲೇಷಣೆ; ಟ್ರೆಜರಿ; ಟ್ರೆಜರಿ ವರದಿ ಮತ್ತು ವಿಶ್ಲೇಷಣೆ; ಮತ್ತು ವೆಚ್ಚ ನಿಯಂತ್ರಣ ಮತ್ತು ನಿರ್ವಹಣೆಯನ್ನು ಮುನ್ನಡೆಸಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ, ಅವರಿಗೆ Citi Global Consumer Award for Excellence ಮತ್ತು Citi Chairman’s Award for Service Excellence ಪ್ರಶಸ್ತಿಯನ್ನು ನೀಡಲಾಗಿದೆ. ಅವರು ಜಾಗತಿಕ ಗ್ರಾಹಕ ಯೋಜನೆ ಗುಂಪಿನ ಭಾಗವಾಗಿದ್ದರು.

ಮದ್ರಾಸ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವೀಧರರಾದ ಶ್ರೀ ವೈದ್ಯನಾಥನ್ ಅವರು ವಿವಿಧ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಅವರು ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಆ್ಯಂಡ್ ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್ಸ್‌ನ ಸದಸ್ಯರಾಗಿದ್ದಾರೆ; UK ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಅಕೌಂಟೆಂಟ್ಸ್‌ನ ಸದಸ್ಯರಾಗಿದ್ದಾರೆ ಮತ್ತು CMA, USA ಯ ಸದಸ್ಯರಾಗಿದ್ದಾರೆ. ಅವರು MBA ಕೂಡ ಪಡೆದಿದ್ದಾರೆ. ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಮಧ್ಯಂತರ ಮತ್ತು ಅಂತಿಮ ಮಟ್ಟದ ಪರೀಕ್ಷೆಗಳಲ್ಲಿ ಆಲ್-ಇಂಡಿಯಾ ರ್‍ಯಾಂಕ್ ಗಳಿಸಿದ್ದಾರೆ.

ಶ್ರೀ ವೈದ್ಯನಾಥನ್ ಅವರು ಕ್ರಿಕೆಟ್ ಅಭಿಮಾನಿಯಾಗಿದ್ದಾರೆ ಮತ್ತು ಸಿಂಗಾಪುರ ಮತ್ತು ಚೆನ್ನೈನಲ್ಲಿ ವಿವಿಧ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ವ್ಯವಹಾರಗಳಲ್ಲಿ ತೊಡಗದೇ ಇದ್ದಾಗ, ಅವರು ಕರ್ನಾಟಿಕ್ ಸಂಗೀತ ಆಲಿಸುತ್ತಾರೆ ಅಥವಾ ಪ್ರಪಂಚ ಸುತ್ತುತ್ತಾರೆ ಅಥವಾ ಅವರ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ.