ಮುಖ್ಯ ಅಪಾಯ ಅಧಿಕಾರಿ, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಸನ್ಮಯ್ ಚಕ್ರವರ್ತಿ

ಶ್ರೀ ಸನ್ಮಯ್ ಚಕ್ರವರ್ತಿ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಮುಖ್ಯ ರಿಸ್ಕ್ ಆಫೀಸರ್ ಆಗಿದ್ದಾರೆ. ಈ ಹುದ್ದೆಯಲ್ಲಿ ಅವರು, ವಿವಿಧ ಬ್ಯಾಂಕಿಂಗ್ ವಿಭಾಗಗಳಲ್ಲಿ ಸಮಗ್ರ ಅಪಾಯದ ಸಾಮರ್ಥ್ಯವನ್ನು (ಕ್ರೆಡಿಟ್ ಅಪಾಯ, ಮಾರುಕಟ್ಟೆ ಅಪಾಯ, ಕಾರ್ಯಾಚರಣೆಯ ಅಪಾಯ, ಲಿಕ್ವಿಡಿಟಿ ಅಪಾಯ ಇತ್ಯಾದಿಗಳನ್ನು ಒಳಗೊಂಡಂತೆ) ನಿರ್ಧರಿಸಲು ಅವರು ಜವಾಬ್ದಾರರಾಗಿದ್ದಾರೆ.

ಹೆಚ್ಚುವರಿಯಾಗಿ, ಶ್ರೀ ಚಕ್ರವರ್ತಿ ಅವರು ಬ್ಯಾಂಕ್‌ನಲ್ಲಿ ಉದ್ಯಮ ರಿಸ್ಕ್ ಮ್ಯಾನೇಜ್‌ಮೆಂಟ್ ಚೌಕಟ್ಟನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ICAAP, ಒತ್ತಡ ಟೆಸ್ಟಿಂಗ್ ಕಾರ್ಯ ವಿಧಾನ ಮತ್ತು ಗ್ರೂಪ್ ರಿಸ್ಕ್ ಮ್ಯಾನೇಜ್ಮೆಂಟ್‌ಗಾಗಿ ನೀತಿಗಳು ಮತ್ತು ಕಾರ್ಯವಿಧಾನಗಳ ಸೂತ್ರೀಕರಣಗಳ ಕುರಿತಾಗಿ ಮಾರ್ಗದರ್ಶನ ನೀಡುತ್ತಾರೆ. ಬ್ಯಾಂಕ್‌ನ ಚಟುವಟಿಕೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಯಾವುದೇ ಉದಯೋನ್ಮುಖ ಅಪಾಯವನ್ನು ಗುರುತಿಸಲು ಮತ್ತು ನಿರ್ವಹಿಸಲು ಅವರು ಜವಾಬ್ದಾರರಾಗಿದ್ದಾರೆ.

ಶ್ರೀ ಚಕ್ರವರ್ತಿ ಅವರು 2010 ರಲ್ಲಿ ಬ್ಯಾಂಕ್‌ಗೆ ಸೇರಿದರು ಮತ್ತು ಮುಖ್ಯ ರಿಸ್ಕ್ ಆಫೀಸರ್ ಆಗುವ ಮೊದಲು ವಿವಿಧ ಉನ್ನತ ಅಪಾಯ ನಿರ್ವಹಣಾ ಸ್ಥಾನಗಳಲ್ಲಿ ಕೆಲಸ ಮಾಡಿದ್ದರು.

ಎಚ್ ಡಿ ಎಫ್ ಸಿ ಬ್ಯಾಂಕ್‌ಗಿಂತ ಮೊದಲು ಶ್ರೀ ಚಕ್ರವರ್ತಿ ಅವರು ಭಾರತದಲ್ಲಿ ICICI ಬ್ಯಾಂಕ್‌; ಭಾರತ, ಬಾಂಗ್ಲಾದೇಶ, ಹಾಂಗ್ ಕಾಂಗ್, ಚೀನಾದಲ್ಲಿ ಸಿಟಿ ಬ್ಯಾಂಕ್; ಮತ್ತು ಇಂಡೋನೇಷ್ಯಾದಲ್ಲಿ ಬ್ಯಾಂಕ್ ಡ್ಯಾನಮಾನ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ, ಅವರು ALM ರಿಸ್ಕ್ ಮಾಡೆಲಿಂಗ್, ಬ್ಯಾಂಕ್‌ನಾದ್ಯಂತ ಲಿಕ್ವಿಡಿಟಿ ಒತ್ತಡ ಟೆಸ್ಟಿಂಗ್, ಕ್ರೆಡಿಟ್ ವಿಶ್ಲೇಷಣೆ ಹಾಗೂ ವಿಲೀನ ಮತ್ತು ಸ್ವಾಧೀನ ಸಂಬಂಧಿತ ಚಟುವಟಿಕೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದರು.

ಶ್ರೀ ಚಕ್ರವರ್ತಿ ಅವರು ಭಾರತೀಯ ಬ್ಯಾಂಕ್‌ಗಳ ಸಂಘದ (IBA) ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಬಾಸೆಲ್ ಅನುಷ್ಠಾನದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. 

ಶ್ರೀ ಚಕ್ರವರ್ತಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಕ್ವಾಂಟಿಟೇಟಿವ್ ಎಕನಾಮಿಕ್ಸ್‌ನಲ್ಲಿ M.S. ಪದವಿ ಹೊಂದಿದ್ದಾರೆ.