ಮುಖ್ಯ ಕ್ರೆಡಿಟ್ ಅಧಿಕಾರಿ, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಜಿಮ್ಮಿ ಟಾಟಾ

ಶ್ರೀ ಜಿಮ್ಮಿ ಟಾಟಾ ಅವರು ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಿಂದ ಮಾಸ್ಟರ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಪಡೆದಿದ್ದಾರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ಕೂಡ ಆಗಿದ್ದಾರೆ. ಶ್ರೀ ಟಾಟಾ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ 35+ ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಶ್ರೀ ಟಾಟಾ ಅವರು 1987 ರಲ್ಲಿ Strategic Consultants Pvt Ltd ನಲ್ಲಿ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1989 ರಲ್ಲಿ ಅವರು Apple Industries Ltd ಗೆ ಸೇರಿದರು ಮತ್ತು ಅಲ್ಲಿ ಅವರ ಕೊನೆಯ ಹುದ್ದೆಯಲ್ಲಿ ಹೋಲ್‌ಸೇಲ್ ಲೀಸಿಂಗ್ ಮತ್ತು ಹೈರ್ ಪರ್ಚೇಸ್ ಡಿವಿಷನ್‌ನಲ್ಲಿ ಮುಖ್ಯಸ್ಥರಾಗಿದ್ದರು. ಶ್ರೀ ಟಾಟಾ ಅವರು 1994 ರಿಂದ ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿದ್ದಾರೆ. ಅವರು ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗದಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿ ಸೇರಿದರು ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾಗಿ ಪದೋನ್ನತಿ ಪಡೆದರು. ಜೂನ್ 2013 ರಲ್ಲಿ ಅವರನ್ನು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಮುಖ್ಯ ರಿಸ್ಕ್ ಆಫೀಸರ್ ಆಗಿ ನೇಮಿಸಲಾಯಿತು. ಈಗ ಶ್ರೀ ಟಾಟಾ ಅವರು, ಎಚ್ ಡಿ ಎಫ್ ಸಿ ಬ್ಯಾಂಕ್‌ನ ಮುಖ್ಯ ಕ್ರೆಡಿಟ್ ಆಫೀಸರ್ ಆಗಿದ್ದಾರೆ.

ಶ್ರೀ ಟಾಟಾ ಅವರು International Asset Reconstruction Co. Pvt. Ltd (IARC), HDB Financial Services Ltd ನಲ್ಲಿ ಮಂಡಳಿ ನಿರ್ದೇಶಕರು ಮತ್ತು HDB Employees Welfare Trust ನಲ್ಲಿ ಟ್ರಸ್ಟಿಯಾಗಿದ್ದಾರೆ.