ಗ್ರೂಪ್ ಹೆಡ್ - ವರ್ಚುವಲ್ ರಿಲೇಶನ್‌ಶಿಪ್, ವರ್ಚುವಲ್ ಕೇರ್, ವರ್ಚುವಲ್ ಸೇಲ್ಸ್ ಚಾನೆಲ್‌ಗಳು, ಬಿಇಯು ಮತ್ತು ಮೂಲಸೌಕರ್ಯ, ಎಚ್ ಡಿ ಎಫ್ ಸಿ ಬ್ಯಾಂಕ್

ಮಿಸ್ ಆಶಿಮಾ ಭಟ್

ಮಿಸ್ ಆಶಿಮಾ ಭಟ್ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ವರ್ಚುವಲ್ ರಿಲೇಶನ್‌ಶಿಪ್, ವರ್ಚುವಲ್ ಕೇರ್, ವರ್ಚುವಲ್ ಸೇಲ್ಸ್ ಚಾನೆಲ್‌ಗಳು, BEU ಮತ್ತು ಮೂಲಸೌಕರ್ಯ ಕಾರ್ಯಗಳ ವಿಭಾಗದ ಗ್ರೂಪ್ ಹೆಡ್ ಆಗಿದ್ದಾರೆ. ತಮ್ಮ ಪ್ರಸ್ತುತ ಹುದ್ದೆಯಲ್ಲಿ, ವರ್ಚುವಲ್ ವಿಧಾನಗಳ ಮೂಲಕ ವ್ಯಾಪಕ ಗ್ರಾಹಕ ನೆಲೆಗೆ ರಿಲೇಶನ್‌ಶಿಪ್ ಮ್ಯಾನೇಜ್‌ಮೆಂಟ್ ಸೇವೆಗಳನ್ನು ಒದಗಿಸುವ ಬ್ಯಾಂಕ್‌ನ ಸಾಮರ್ಥ್ಯವನ್ನು ಹೆಚ್ಚಿಸಲು ಅವರು ಜವಾಬ್ದಾರರಾಗಿರುತ್ತಾರೆ.

ಈ ಮೊದಲು ಮಿಸ್ ಭಟ್ ಅವರು ಬ್ಯಾಂಕ್‌ನ ಬಿಸಿನೆಸ್ ಫೈನಾನ್ಸ್ ಮತ್ತು ಸ್ಟ್ರಾಟಜಿ, ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ಮತ್ತು CSR (Corporate Social Responsibility), ಮೂಲಸೌಕರ್ಯ ಮತ್ತು ಆಡಳಿತ ಕಾರ್ಯವನ್ನು ಮುನ್ನಡೆಸಿದ್ದಾರೆ. ESG ತೊಡಗುವಿಕೆಗಳಿಗಾಗಿ ಬ್ಯಾಂಕ್‌ನ ಮಾರ್ಗಸೂಚಿಯನ್ನು ರಚಿಸುವ ಮತ್ತು ಅದರ ಅನುಷ್ಠಾನವನ್ನು ಚಾಲನೆ ಮಾಡುವ ತಂಡವನ್ನು ಅವರು ಮುನ್ನಡೆಸಿದ್ದಾರೆ. CSR ಮುಖ್ಯಸ್ಥರ ಪಾತ್ರದಲ್ಲಿ, ಬ್ಯಾಂಕ್‌ನ CSR ಕೆಲಸಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವಲ್ಲಿ ಅವರು ಪ್ರಮುಖರಾಗಿದ್ದರು. ಜೂನ್ 30, 2023 ರಂತೆ ಎಚ್ ಡಿ ಎಫ್ ಸಿ ಬ್ಯಾಂಕ್ ಇಲ್ಲಿಯವರೆಗೆ 99 ಮಿಲಿಯನ್‌ಗಿಂತ ಹೆಚ್ಚು ಭಾರತೀಯರ ಜೀವನದ ಮೇಲೆ ಪರಿಣಾಮ ಬೀರಿದೆ. ತನ್ನ CSR ಉಪಕ್ರಮ 'ಪರಿವರ್ತನ್' ಅಡಿಯಲ್ಲಿ, ಶಿಕ್ಷಣ, ನೈರ್ಮಲ್ಯ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸುವ ಕ್ಷೇತ್ರಗಳಲ್ಲಿ ಬ್ಯಾಂಕ್ ಭಾರತದಾದ್ಯಂತ ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳುತ್ತದೆ.

1994 ರಲ್ಲಿ ಬ್ಯಾಂಕ್ ಆರಂಭವಾದಾಗಿನಿಂದಲೂ ಆಶಿಮಾ ಅವರು ನಮ್ಮೊಂದಿಗೆ ಇದ್ದಾರೆ ಮತ್ತು ಬ್ಯಾಂಕ್‌‌ನ ಬೆಳವಣಿಗೆಯ ಕಥೆಯ ಅವಿಭಾಜ್ಯ ಭಾಗವಾಗಿದ್ದಾರೆ. ಬ್ಯಾಂಕ್‌ನೊಂದಿಗೆ ತಮ್ಮ 29 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ, ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ತಮ್ಮ ಹಿಂದಿನ ಹುದ್ದೆಗಳಲ್ಲಿ, ಅವರು ಉದಯೋನ್ಮುಖ ಕಾರ್ಪೊರೇಟ್‌ಗಳ ಗ್ರೂಪ್, ಮೂಲಸೌಕರ್ಯ ಫೈನಾನ್ಸ್ ಮತ್ತು ಹೆಲ್ತ್‌ಕೇರ್ ಮುಖ್ಯಸ್ಥರಾಗಿದ್ದರು. ಇದಕ್ಕಿಂತ ಮೊದಲು, ಅವರು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ - ಪಶ್ಚಿಮ ವಿಭಾಗವನ್ನು ಮುನ್ನಡೆಸಿದರು.