ಗ್ರೂಪ್ ಹೆಡ್ - ರಿಯಲ್ಟಿ ಬಿಸಿನೆಸ್ ಫೈನಾನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ವಿನಾಯಕ್ R ಮಾವಿನಕುರ್ವೆ

ಶ್ರೀ ವಿನಾಯಕ್ ಮಾವಿನಕುರ್ವೆ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ರಿಯಲ್ಟಿ ಬಿಸಿನೆಸ್ ಫೈನಾನ್ಸ್ ಗ್ರೂಪ್ ಹೆಡ್ ಆಗಿದ್ದಾರೆ.

ಬ್ಯಾಂಕ್‌ಗೆ ಸೇರುವ ಮೊದಲು, ಶ್ರೀ ಮಾವಿನಕುರ್ವೆ ಅವರು ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ವಹಣಾ (MoEM) ಸದಸ್ಯರಾಗಿದ್ದರು, ರಿಯಲ್ ಎಸ್ಟೇಟ್ ಲೆಂಡಿಂಗ್, ಕಾರ್ಪೊರೇಟ್ ಲೆಂಡಿಂಗ್ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಸ್ಟ್ರೆಸ್ಡ್ ಅಸೆಟ್ ಬುಕ್ ಹಾಗೂ ಕಂಪನಿಯ ಸ್ವಾಮ್ಯದ ಇನ್ವೆಸ್ಟ್‌ಮೆಂಟ್ ಬುಕ್‌ನ ಜವಾಬ್ದಾರಿ ವಹಿಸಿಕೊಂಡಿದ್ದರು.

ಕ್ರೆಡಿಟ್ ಫೋರಂ ಸದಸ್ಯರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ, ಅವರು ಹೊಸ ಲೋನ್ ಅನುಮೋದನೆಗಳನ್ನು ಸಕ್ರಿಯಗೊಳಿಸಲು, ಬಿಸಿನೆಸ್ ಗುರಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನಿಯಂತ್ರಣದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಣಕ್ಕೆ ಪರಿವರ್ತನೆಗೊಳ್ಳಲು ಸಹಾಯ ಮಾಡಲು ಬ್ರಾಂಚ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಹೌಸಿಂಗ್ ಫೈನಾನ್ಸ್ ಕಂಪನಿ ನಿಯಂತ್ರಣ ಜಾರಿಯಾದ ಸಮಯದಲ್ಲಿ ಅವರು RBI ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶ್ರೀ ಮಾವಿನಕುರ್ವೆ ಅವರು 1994 ರಲ್ಲಿ ಕೈಗಾರಿಕಾ ಹಣಕಾಸು ಅಧಿಕಾರಿಯಾಗಿ IFCI Limited ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಅವರು 1998 ರಲ್ಲಿ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಆಗಿ IDFC ಲಿಮಿಟೆಡ್‌ಗೆ ಸೇರಿದರು ಮತ್ತು 2015 ವರೆಗೆ ಅಲ್ಲಿ ಕೆಲಸ ಮಾಡಿದರು, ಅಲ್ಲಿ ಅವರು ಕೊನೆಯದಾಗಿ ಪ್ರಾಜೆಕ್ಟ್ ಫೈನಾನ್ಸ್‌ನ ಗ್ರೂಪ್ ಮುಖ್ಯಸ್ಥ ಹುದ್ದೆಯನ್ನು ನಿರ್ವಹಿಸಿದರು. ಮೇ 2017 ರಲ್ಲಿ, ಅವರು IDFC ಬ್ಯಾಂಕ್ ಲಿಮಿಟೆಡ್‌ಗೆ ವರ್ಗಾವಣೆಗೊಂಡರು ಮತ್ತು ಡಿಸೆಂಬರ್ 2018 ವರೆಗೆ ಕ್ಲೈಂಟ್ ಕವರೇಜ್‌ನ ಸಹ-ಮುಖ್ಯಸ್ಥರಾಗಿದ್ದರು.

ಶ್ರೀ ಮಾವಿನಕುರ್ವೆ ಅವರು ಮುಂಬೈನ VJTI (1991 ಬ್ಯಾಚ್) ಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ (ಬ್ಯಾಚುಲರ್ ಆಫ್ ಟೆಕ್ನಾಲಜಿ) ಪದವಿ ಮತ್ತು ಮುಂಬೈನ NMIMS (1994 ಬ್ಯಾಚ್) ನಿಂದ MMS ಪದವಿಯನ್ನು ಪಡೆದಿದ್ದಾರೆ.

ಶ್ರೀ ಮಾವಿನಕುರ್ವೆ ಅವರು ಮಾಧವಿ ಎಂಬವರನ್ನು ವಿವಾಹವಾಗಿದ್ದು, ಅವರು ಗೃಹಿಣಿಯಾಗಿದ್ದಾರೆ. ಅವರ ಮಗ ರೋಹನ್, UK ಯ ಸೇಂಟ್ ಆ್ಯಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾರೆ. ಅವರು ಫುಟ್ಬಾಲ್, ಕ್ರಿಕೆಟ್ ಮತ್ತು ಟೆನ್ನಿಸ್ ಬಗ್ಗೆ ಆಸಕ್ತಿ ಹೊಂದಿರುವ ಕ್ರೀಡೋತ್ಸಾಹಿಯಾಗಿದ್ದಾರೆ.