ಗ್ರೂಪ್ ಹೆಡ್ - ಎಮರ್ಜಿಂಗ್ ಎಂಟರ್‌ಪ್ರೈಸಸ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಸಂಜಯ್ ಡಿ'ಸೋಜ

ಶ್ರೀ ಸಂಜಯ್ ಡಿ'ಸೋಜ ಅವರು ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಉದಯೋನ್ಮುಖ ಉದ್ಯಮಗಳು ಮತ್ತು ಮೈಕ್ರೋ ಎಂಟರ್ಪ್ರೈಸಸ್ ಗ್ರೂಪ್‌ಗಳ ಗ್ರೂಪ್ ಹೆಡ್ ಆಗಿದ್ದಾರೆ. ಪ್ರಸ್ತುತ ಹುದ್ದೆಯಲ್ಲಿ ಅವರು, ಬ್ಯಾಂಕ್‌ನ ಅಪಾಯದ ಚೌಕಟ್ಟಿನೊಳಗೆ ಈ ಬಿಸಿನೆಸ್ ವಿಭಾಗಗಳಲ್ಲಿ ಬ್ಯಾಂಕ್‌ನ ಉಪಸ್ಥಿತಿಯನ್ನು ಮೂಡಿಸಲು ಜವಾಬ್ದಾರರಾಗಿದ್ದಾರೆ.

ಶ್ರೀ ಡಿ'ಸೋಜ ಅವರು 1999 ರಲ್ಲಿ ರಿಟೇಲ್ ಅಸೆಟ್‌ಗಳು - ಸೆಕ್ಯೂರಿಟಿಗಳ ಮೇಲಿನ ಲೋನ್ ಬಿಸಿನೆಸ್ ಸೆಕ್ಷನ್ ಬ್ಯಾಂಕ್‌ಗೆ ಸೇರಿದರು. ಅವರು ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ 33 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಅವರು ವಿವಿಧ ರಿಟೇಲ್ ಅಸೆಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಪಾವತಿ ಪ್ರಾಡಕ್ಟ್‌ಗಳ ಹೊರತಾಗಿ MSME ಕ್ಷೇತ್ರದಲ್ಲಿ ಪ್ರಮುಖವಾಗಿ ಕ್ರೆಡಿಟ್ ಮತ್ತು ಬಿಸಿನೆಸ್‌ನ ಡೊಮೇನ್‌ಗಳನ್ನು ಒಳಗೊಂಡಿರುವ ವಿವಿಧ ಸ್ಥಾನಗಳಲ್ಲಿ 25 ವರ್ಷಗಳಿಂದ ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಸಂಬಂಧ ಹೊಂದಿದ್ದಾರೆ.

ಆರಂಭಿಕ ವರ್ಷಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನೊಳಗೆ MSME ಬಿಸಿನೆಸ್ ಸ್ಥಾಪಿಸುವಲ್ಲಿ ಶ್ರೀ ಡಿ'ಸೋಜ ಪ್ರಮುಖ ಪಾತ್ರ ವಹಿಸಿದರು. ಈ ಕ್ಷೇತ್ರದಲ್ಲಿ ಅವರ ವಿಶಾಲ ಮತ್ತು ವೈವಿಧ್ಯಮಯ ಕ್ರೆಡಿಟ್ ಅನುಭವವು ಬಿಸಿನೆಸ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ಮಿಸಲು ಮಾತ್ರವಲ್ಲದೆ ಪೋರ್ಟ್‌ಫೋಲಿಯೋ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು. ಕನಿಷ್ಠ NPA ಸ್ಲಿಪ್ಪೇಜ್‌ಗಳೊಂದಿಗೆ MSME ಪೋರ್ಟ್‌ಫೋಲಿಯೊದ ರಿಸ್ಕ್ ಪ್ರೊಫೈಲ್ ಅನ್ನು ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಡಿಸೆಂಬರ್ 2023 ರಲ್ಲಿ, ಅವರು ಸ್ಟಾರ್ಟಪ್‌ ಅನ್ನು ಮೈಕ್ರೋ ಎಂಟರ್‌ಪ್ರೈಸಸ್ ಗ್ರೂಪ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಗ್ರಾಹಕರಿಂದ ಬ್ಯಾಂಕಿಂಗ್ ಮತ್ತು GST ಮಾಹಿತಿಯನ್ನು ಬಳಸಿಕೊಂಡು ರಿಟೇಲರ್‌ಗಳು ಮತ್ತು ಸಣ್ಣ ಬಿಸಿನೆಸ್‌ಗಳಿಗೆ ಹೆಚ್ಚಿನ ಲಾಭ ನೀಡುವ ಮೈಕ್ರೋ PSL ಲೋನ್‌ಗಳನ್ನು ನೀಡುವತ್ತ ಗಮನಹರಿಸಿದರು.

ಶ್ರೀ ಸಂಜಯ್ ಡಿ'ಸೋಜ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್‌ ಪದವಿ ಹೊಂದಿದ್ದಾರೆ ಮತ್ತು ಫೈನಾನ್ಸ್‌ನಲ್ಲಿ MMS ಮುಗಿಸಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಂಜಯ್ ಅವರು ಸೈಕ್ಲಿಂಗ್, ಟ್ರೆಕ್ಕಿಂಗ್ ಆನಂದಿಸುತ್ತಾರೆ, ಸ್ಟ್ರೆಂತ್ ಟ್ರೈನಿಂಗ್ ಮತ್ತು ಯೋಗ ಮಾಡುತ್ತಾರೆ.