ಶ್ರೀ ರವೀಶ್ K. ಭಾಟಿಯಾ ಅವರು ಉದಯೋನ್ಮುಖ ಕಾರ್ಪೊರೇಟ್ಸ್ ಗ್ರೂಪ್ ಮತ್ತು ಹೆಲ್ತ್‌ಕೇರ್ ಫೈನಾನ್ಸ್ ಗ್ರೂಪ್ ಹೆಡ್ ಆಗಿದ್ದಾರೆ. ತಮ್ಮ ಪ್ರಸ್ತುತ ಹುದ್ದೆಯಲ್ಲಿ ಅವರು, ಮಿಡ್-ಮಾರ್ಕೆಟ್ ವಿಭಾಗ ಮತ್ತು ಹೆಲ್ತ್‌ಕೇರ್ ವಿಭಾಗಕ್ಕೆ ಬ್ಯಾಂಕ್‌ನ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ವ್ಯಾಪಕ ಶ್ರೇಣಿಯನ್ನು ವಿಸ್ತರಿಸಲು ಜವಾಬ್ದಾರರಾಗಿದ್ದಾರೆ. ಈಗಿನ ಹುದ್ದೆಗಿಂತ ಮೊದಲು, ಅವರು ಕಾರ್ಪೊರೇಟ್ ಬ್ಯಾಂಕಿಂಗ್ - ಉತ್ತರ ಮತ್ತು PSU ಕವರೇಜ್‌ನ ಗ್ರೂಪ್ ಹೆಡ್ ಆಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಭಾಟಿಯಾ ಅವರು 2009 ರಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಸೇರಿದರು ಮತ್ತು ಬ್ಯಾಂಕ್‌ನೊಂದಿಗೆ ತಮ್ಮ ಸೇವೆಯಲ್ಲಿ, ಅವರು PSU ಗಳು ಮತ್ತು ದೊಡ್ಡ ಕಾರ್ಪೊರೇಟ್‌ಗಳಲ್ಲಿ ಉತ್ತರ ವಿಭಾಗದ ಫ್ರ್ಯಾಂಚೈಸ್ ಅನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಅವರು ಭಾರತದಾದ್ಯಂತ ಮಿಡ್-ಮಾರ್ಕೆಟ್ ಬಿಸಿನೆಸ್‌ನಲ್ಲಿ ಬೆಳವಣಿಗೆಯನ್ನು ಮುನ್ನಡೆಸಿದ್ದಾರೆ.
ಅವರು ಮೂರು ದಶಕಗಳಿಗಿಂತ ಹೆಚ್ಚು ಕೆಲಸದ ಅನುಭವವನ್ನು ಹೊಂದಿದ್ದಾರೆ. ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಸೇರುವ ಮೊದಲು, ಅವರು ABN ಆಮ್ರೋ ಬ್ಯಾಂಕ್, BNP ಪರಿಬಾಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು SB Billimoria ದಲ್ಲಿ ಕನ್ಸಲ್ಟಿಂಗ್ ಸೇವೆ ನೀಡಿದ್ದಾರೆ.
ಶ್ರೀ ಭಾಟಿಯಾ ಅವರು IIM ಅಹಮದಾಬಾದ್‌ನಿಂದ MBA ಮಾಡಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಶ್ರೀ ಭಾಟಿಯಾ ಅವರು ಪುಸ್ತಕಗಳನ್ನು ಓದಲು, ಹಳೆಯ ಹಿಂದಿ ಹಾಡು, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕೇಳಲು ಮತ್ತು ಕ್ರೀಡೆಗಳನ್ನು ನೋಡಲು ಇಷ್ಟಪಡುತ್ತಾರೆ.