ಗ್ರೂಪ್ ಹೆಡ್ ಟ್ರೆಜರಿ, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಅರುಪ್ ರಕ್ಷಿತ್

ಶ್ರೀ ಅರುಪ್ ರಕ್ಷಿತ್ ಅವರು ಟ್ರೆಜರಿ ವಿಭಾಗದ ಗ್ರೂಪ್ ಹೆಡ್ ಆಗಿದ್ದಾರೆ. ಅವರು ಬ್ಯಾಂಕ್‌ನ ಟ್ರೆಜರಿಯನ್ನು ಮುನ್ನಡೆಸುತ್ತಾರೆ ಮತ್ತು ಬ್ಯಾಂಕ್‌ನ ALM, FX ನ ಗ್ರಾಹಕರ ಬಿಸಿನೆಸ್ ಮತ್ತು ಬಡ್ಡಿ ದರಗಳು, ಬುಲಿಯನ್ ಬಿಸಿನೆಸ್, ಬಾಂಡ್ ಮಾರಾಟ ಮತ್ತು ವಿತರಣೆ, FX ಮತ್ತು ಬಡ್ಡಿ ದರದ ಟ್ರೇಡಿಂಗ್‌ನ ಜವಾಬ್ದಾರಿಯನ್ನು ಹೊಂದಿದ್ದಾರೆ. ಹೆಚ್ಚುವರಿಯಾಗಿ, ಅವರು GIFT ಸಿಟಿ ಬ್ರಾಂಚ್ ಜವಾಬ್ದಾರಿ ಕೂಡ ಹೊಂದಿದ್ದಾರೆ.

ಅವರು 2006 ರಲ್ಲಿ ಬ್ಯಾಂಕ್‌ಗೆ ಸೇರಿದರು ಮತ್ತು ಟ್ರೆಜರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವ ಮೊದಲು ಟ್ರೆಜರಿ ಸೇಲ್ಸ್‌ನಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಿದ್ದಾರೆ.

ಅವರು 29 ವರ್ಷಗಳಿಗಿಂತ ಹೆಚ್ಚಿನ ಅಪಾರ ಕೆಲಸದ ಅನುಭವವನ್ನು ಹೊಂದಿದ್ದಾರೆ. ಬ್ಯಾಂಕ್‌ಗೆ ಸೇರುವ ಮೊದಲು, ಅವರು ಡಾಯ್ಚ ಬ್ಯಾಂಕ್ ಮತ್ತು ABN ಆಮ್ರೋ ನಲ್ಲಿ ಕೆಲಸ ಮಾಡಿದ್ದು, ಅಲ್ಲಿ ಅವರು ಟ್ರೆಜರಿ ಸೇಲ್ಸ್‌ನ ಉಸ್ತುವಾರಿಯಾಗಿದ್ದರು.

ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಬಿಟೆಕ್ ಪದವಿಯನ್ನು ಪಡೆದಿದ್ದಾರೆ ಮತ್ತು IIM ಕೋಲ್ಕತ್ತಾದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು FEDAI (ಫಾರಿನ್ ಎಕ್ಸ್‌ಚೇಂಜ್ ಡೀಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಮತ್ತು ಇಂಡಿಯಾ ಫಾರೆಕ್ಸ್ ಕಮಿಟಿಯ (ಗ್ಲೋಬಲ್ ಫಾರೆಕ್ಸ್ ಕಮಿಟಿಯ ಭಾರತದ ವಿಭಾಗ) ಸಕ್ರಿಯ ಸದಸ್ಯರಾಗಿದ್ದಾರೆ.

ತಮ್ಮ ಬಿಡುವಿನ ಸಮಯದಲ್ಲಿ, ಶ್ರೀ ರಕ್ಷಿತ್ ಅವರು ಪ್ರಾಚೀನ ಭಾರತೀಯ ಸಾಹಿತ್ಯವನ್ನು ಓದಲು ಇಷ್ಟಪಡುತ್ತಾರೆ ಮತ್ತು ಕ್ರೀಡೆಗಳನ್ನು ನೋಡುವುದನ್ನು ಆನಂದಿಸುತ್ತಾರೆ