banner-logo

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಕ್ಯಾಶ್‌ಬ್ಯಾಕ್ ಪ್ರಯೋಜನಗಳು

  • PayZapp ಮತ್ತು SmartBuy ಮೂಲಕ ಮಾಡಿದ ಶಾಪಿಂಗ್ ಮೇಲೆ 5% ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು

ಬ್ಯಾಂಕಿಂಗ್ ಪ್ರಯೋಜನಗಳು

  • ATM ವಿತ್‌ಡ್ರಾವಲ್‌ಗಳು, ಶಾಪಿಂಗ್ ಮತ್ತು ಆನ್ಲೈನ್ ಖರೀದಿಗಳ ಮೇಲೆ ಹೆಚ್ಚಿನ ಮಿತಿಗಳು

ಇನ್ಶೂರೆನ್ಸ್ ಪ್ರಯೋಜನಗಳು

  • ₹10 ಲಕ್ಷಗಳವರೆಗಿನ ವೇಗವರ್ಧಿತ ಪರ್ಸನಲ್ ಆಕ್ಸಿಡೆಂಟ್ ಡೆತ್ ಕವರ್

Print

ಹೆಚ್ಚುವರಿ ಪ್ರಯೋಜನಗಳು

ಅಪ್ಲೈ ಮಾಡುವುದು ಹೇಗೆ

ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ನಿಮ್ಮ KYC ಯನ್ನು ಪೂರ್ಣಗೊಳಿಸಿ.

  • ಸಂಪೂರ್ಣ ಡಿಜಿಟಲ್ ಮತ್ತು ಶೂನ್ಯ ಪೇಪರ್‌ವರ್ಕ್ ಅಪ್ಲಿಕೇಶನ್ ಪ್ರಯಾಣಕ್ಕಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಎಕ್ಸ್‌ಪ್ರೆಸ್‌ವೇಗೆ ಭೇಟಿ ನೀಡಿ
  • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿ ಲಾಗಿನ್ ಮಾಡಿ
ವಿಡಿಯೋ ನೋಡಿ

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

ಸಿಂಗಲ್ ಇಂಟರ್ಫೇಸ್

  • ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್ 

ಖರ್ಚುಗಳ ಟ್ರ್ಯಾಕಿಂಗ್

  • ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್

ರಿವಾರ್ಡ್ ಪಾಯಿಂಟ್‌ಗಳು

  • ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Card Management & Controls

ಅರ್ಹತೆ ಮತ್ತು ಡಾಕ್ಯುಮೆಂಟೇಶನ್

ನಿವಾಸಿಗಳು ಮತ್ತು NRE ಗಳು Millennia ಡೆಬಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು

ನಿವಾಸಿ ಭಾರತೀಯರು ಈ ಕೆಳಗಿನ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್‌ಗಳಲ್ಲಿ ಒಂದನ್ನು ಹೊಂದಿರಬೇಕು:

  • ಸೇವಿಂಗ್ಸ್ ಅಕೌಂಟ್
  • ಕರೆಂಟ್ ಅಕೌಂಟ್
  • ಸೂಪರ್‌ಸೇವರ್ ಅಕೌಂಟ್
  • ಷೇರುಗಳ ಮೇಲಿನ ಲೋನ್ ಅಕೌಂಟ್ (LAS)
  • ಸ್ಯಾಲರಿ ಅಕೌಂಟ್
  • ವೈಯಕ್ತಿಕ ಅಕೌಂಟ್ ಹೋಲ್ಡರ್‌ಗಳು (ಸೇವಿಂಗ್ಸ್ ಅಕೌಂಟ್, ಕಾರ್ಪೊರೇಟ್ ಸ್ಯಾಲರಿ ಅಕೌಂಟ್‌ಗಳು ಮತ್ತು ಹಿರಿಯ ನಾಗರಿಕರು)

ನೀವು ಈಗಾಗಲೇ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ?
ನೀವು ಮಾಡಬೇಕಾಗಿರುವುದು ಕೇವಲ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ, ಅದನ್ನು ಪ್ರಿಂಟ್ ಮಾಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ನಂತರ ಅದನ್ನು ನಿಮ್ಮ ಸ್ಥಳೀಯ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಡ್ರಾಪ್ ಮಾಡಿ. ನಾವು ಉಳಿದ ಕಾಳಜಿಯನ್ನು ತೆಗೆದುಕೊಳ್ಳುತ್ತೇವೆ ಮತ್ತು ನಿಮ್ಮ ಮೇಲಿಂಗ್ ವಿಳಾಸಕ್ಕೆ ಕಾರ್ಡ್ ಕಳುಹಿಸುತ್ತೇವೆ.

ಬ್ರಾಂಚ್‌ನಿಂದ ಈ ವೇರಿಯಂಟ್‌ಗೆ ಇನ್ಸ್ಟಾ ಡೆಬಿಟ್ ಕಾರ್ಡ್ ಸಂಗ್ರಹಿಸುವ ಆಯ್ಕೆಯನ್ನು ಕೂಡ ನೀವು ಹೊಂದಿದ್ದೀರಿ. ಇನ್ಸ್ಟಾ ಡೆಬಿಟ್ ಕಾರ್ಡ್ ಮತ್ತು PIN ಅನ್ನು ಕೌಂಟರ್‌ನಲ್ಲಿ ಸಂಗ್ರಹಿಸಲು, ದಯವಿಟ್ಟು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಹೋಗಿ ಮತ್ತು ಮಾನ್ಯ id ಪುರಾವೆ ಮತ್ತು ರದ್ದುಗೊಂಡ ಚೆಕ್ ಲೀಫ್ ಅನ್ನು ಕೊಂಡೊಯ್ಯಿರಿ. ಕಾರ್ಡ್ 1 ಕೆಲಸದ ದಿನದೊಳಗೆ ಆ್ಯಕ್ಟಿವೇಟ್ ಆಗುತ್ತದೆ.
ಕಾರ್ಡ್ ನೀಡುವುದು ಬ್ಯಾಂಕ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ನಿರ್ದಿಷ್ಟ ಕಾರ್ಡ್ ಪ್ರಕಾರದ ಅವಶ್ಯಕತೆಗಳ ಸಂದರ್ಭದಲ್ಲಿ (ಅಂದರೆ. Visa/Master), ಗ್ರಾಹಕರು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬೇಕು.

ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಇಲ್ಲವೇ?
ಅಕೌಂಟ್ ತೆರೆಯುವ ಫಾರ್ಮ್ ಡೌನ್ಲೋಡ್ ಮಾಡಿ, ಅದನ್ನು ಪ್ರಿಂಟ್ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ನಮೂದಿಸಿ. ಈ ಫಾರ್ಮ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಒಳಗೊಂಡಿರುತ್ತದೆ - ಎರಡು ಫಾರ್ಮ್‌ಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಸಲ್ಲಿಕೆ ಮಾಡಿ ಮತ್ತು ನಾವು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ.

ಹೊಸ ಅಕೌಂಟ್ ಫಾರ್ಮ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Eligibility & Documentation

ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಮತ್ತು ರಿವಾರ್ಡ್‌ಗಳು

ಪಾಯಿಂಟ್‌ಗಳು:

  • PayZapp ಮತ್ತು SmartBuy ಮೂಲಕ ಮಾಡಿದ ಶಾಪಿಂಗ್ ಮೇಲೆ 5% ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು
  • ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ 2.5% ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು
  • ಎಲ್ಲಾ ಆಫ್‌ಲೈನ್ ಖರ್ಚುಗಳು ಮತ್ತು ವಾಲೆಟ್ ರೀಲೋಡ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು

ಕ್ಯಾಶ್‌ಬ್ಯಾಕ್ ಪಾಯಿಂಟ್ ಮಾನ್ಯತಾ ಅವಧಿ: ಗಳಿಸಿದ ದಿನಾಂಕದಿಂದ 1 ವರ್ಷ.

ರಿವಾರ್ಡ್‌ಗಳು:

  • ಪ್ರತಿ ವರ್ಷ ₹4,800 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ
  • ₹400 ಕ್ಕಿಂತ ಹೆಚ್ಚಿನ ಪ್ರತಿ ಟ್ರಾನ್ಸಾಕ್ಷನ್‌ಗೆ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸಬಹುದು
  • ಪ್ರತಿ ಅಕೌಂಟ್‌ಗೆ ಗರಿಷ್ಠ ಒಟ್ಟು ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು 400
  • 400 ರ ಗುಣಕಗಳಲ್ಲಿ ನೆಟ್‌ಬ್ಯಾಂಕಿಂಗ್ ಮೂಲಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬೇಕು
  • ಟ್ರಾನ್ಸಾಕ್ಷನ್ ತಿಂಗಳ ಕೊನೆಯಿಂದ 90 ದಿನಗಳಲ್ಲಿ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಕ್ರೆಡಿಟ್ ಮಾಡಲಾಗುತ್ತದೆ
  • ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಮುಂದಿನ 12 ತಿಂಗಳ ಒಳಗೆ ರಿಡೆಂಪ್ಶನ್‌ಗೆ ಮಾನ್ಯವಾಗಿರುತ್ತವೆ, ಆ ನಂತರ ನಿಮ್ಮ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಲ್ಯಾಪ್ಸ್ ಆಗುತ್ತವೆ.
  • ಲಭ್ಯತೆಗೆ ಒಳಪಟ್ಟು ರಿಡೆಂಪ್ಶನ್ ಮೇಲೆ ಯಾವುದೇ ಗರಿಷ್ಠ ಮಿತಿ ಇಲ್ಲ
  • SmartBuy C/B ಗೆ ನಿಯಮ ಮತ್ತು ಷರತ್ತುಗಳು:
    https://offers.smartbuy.hdfcbank.com/offer_details/smartbuy/15282/Zmilm2U%3D

ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಗಳಿಸಿದ ಎಲ್ಲಾ ಪ್ರಚಾರದ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು 3 ತಿಂಗಳ ಮಾನ್ಯತೆಯನ್ನು ಹೊಂದಿರುತ್ತವೆ, ಇದರ ನಂತರ ಸಂಗ್ರಹಿಸಿದ ಪಾಯಿಂಟ್‌ಗಳು ಫೆಬ್ರವರಿ, 2020 ರಿಂದ ಅನ್ವಯವಾಗುತ್ತವೆ.

ಕ್ರೆಡಿಟ್ ಕಾರ್ಡ್ ಪಾವತಿ, ಇನ್ಶೂರೆನ್ಸ್ ಪ್ರೀಮಿಯಂ ಪಾವತಿ ಮತ್ತು ಇತರ ಬಿಸಿನೆಸ್ ಸರ್ವಿಸ್‌ಗಳನ್ನು ಒಳಗೊಂಡಂತೆ ಫ್ಯೂಯಲ್, ಆಭರಣ ಮತ್ತು ಬಿಸಿನೆಸ್ ಸೇವೆಗಳ ಟ್ರಾನ್ಸಾಕ್ಷನ್‌ಗಳಿಗೆ ಯಾವುದೇ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳಿಲ್ಲ

  • ಅರ್ಹ ಮರ್ಚೆಂಟ್ ಕೆಟಗರಿ ಕೋಡ್‌ಗಳ (MCC) ಮೇಲೆ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸಲಾಗುತ್ತದೆ.
  • ಕಾರ್ಡ್ ನೆಟ್ವರ್ಕ್‌ಗಳಿಂದ (Visa/MasterCard/ RuPay) ಬಿಸಿನೆಸ್‌ನ ಸ್ವರೂಪದ ಆಧಾರದ ಮೇಲೆ MCC ಗಳನ್ನು ವರ್ಗೀಕರಿಸಲಾಗುತ್ತದೆ
  • ಡೆಬಿಟ್ ಕಾರ್ಡ್ ಮೂಲಕ ಮಾಡಲಾದ ಕ್ರೆಡಿಟ್ ಕಾರ್ಡ್ BillPay ಟ್ರಾನ್ಸಾಕ್ಷನ್‌ಗಳು ತಕ್ಷಣದ ಪರಿಣಾಮದೊಂದಿಗೆ ಯಾವುದೇ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸುವುದಿಲ್ಲ ಏಕೆಂದರೆ ಇದು ಅದಕ್ಕೆ ಅರ್ಹ ಕೆಟಗರಿಯಾಗಿಲ್ಲ.

ದಯವಿಟ್ಟು ಗಮನಿಸಿ:

ಒಂದು ವೇಳೆ ಅಕೌಂಟ್‌ನಲ್ಲಿ ಎರಡು ಗ್ರಾಹಕರು Millennia ಡೆಬಿಟ್ ಕಾರ್ಡ್ ಹೊಂದಿದ್ದರೆ (ಒಂದೇ ಅಕೌಂಟ್ ನಂಬರ್ ಅಡಿಯಲ್ಲಿ), ಎರಡೂ ಕಾರ್ಡ್‌ಗಳಲ್ಲಿ ಮಾಡಲಾದ ಎಲ್ಲಾ ಅರ್ಹ ಟ್ರಾನ್ಸಾಕ್ಷನ್‌ಗಳು ಅಕೌಂಟ್ ಮಟ್ಟದಲ್ಲಿ ತಿಂಗಳಿಗೆ ಗರಿಷ್ಠ 400 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಪಡೆಯಲು ಅರ್ಹವಾಗಿರುತ್ತವೆ.

ಉದಾಹರಣೆ: ಅಕೌಂಟ್ A ಎರಡು ಕಾರ್ಡ್‌ಹೋಲ್ಡರ್‌ಗಳನ್ನು ಹೊಂದಿದ್ದು 1 ಮತ್ತು 2 ಇಬ್ಬರೂ Millennia ಡೆಬಿಟ್ ಕಾರ್ಡ್ ಹೊಂದಿದ್ದಾರೆ. ಕಾರ್ಡ್ 1 ರಲ್ಲಿ ಮಾಡಲಾದ ಎಲ್ಲಾ ಅರ್ಹ ಟ್ರಾನ್ಸಾಕ್ಷನ್‌ಗಳಿಗೆ ತಿಂಗಳಿಗೆ 400 ಪಾಯಿಂಟ್‌ಗಳನ್ನು ಮಿತಿಗೊಳಿಸಲಾಗಿದೆ ಮತ್ತು ಕಾರ್ಡ್ 2 ಗೆ ತಿಂಗಳಿಗೆ 400 ಪಾಯಿಂಟ್‌ಗಳನ್ನು ಮಿತಿಗೊಳಿಸಲಾಗಿದೆ. ಅಕೌಂಟ್ ಮಟ್ಟದಲ್ಲಿ ಒಟ್ಟುಗೂಡಿಸಿದ ಕ್ಯಾಶ್‌ಬ್ಯಾಕ್ ಅನ್ನು ತಿಂಗಳಿಗೆ 400 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗುತ್ತದೆ.

ಪ್ರಾಡಕ್ಟ್ ಫೀಚರ್ ಕ್ಯಾಶ್‌ಬ್ಯಾಕ್ ಪ್ರಯೋಜನಗಳು ಅನ್ವಯವಾಗದ ಸ್ಟ್ಯಾಂಡರ್ಡ್ ಹೊರಗಿಡುವ MCC ಗಳ ಪಟ್ಟಿಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ?

ನೆಟ್‌ಬ್ಯಾಂಕಿಂಗ್ ಮೂಲಕ

ಲಾಗಿನ್ >> ಪಾವತಿ >> ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳ ಸಾರಾಂಶ >> ಕ್ರಮಗಳು >> ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.

CashBack Points & Rewards

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ Millennia ಡೆಬಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.

(ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹ 5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹ 5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Contactless Payment

ಹೆಚ್ಚುವರಿ ಖುಷಿ

ಶೂನ್ಯ ವೆಚ್ಚದ ಕಾರ್ಡ್ ಹೊಣೆಗಾರಿಕೆ

  • 24-ಗಂಟೆಗಳ ಎಚ್ ಡಿ ಎಫ್ ಸಿ ಬ್ಯಾಂಕ್ ಕಾಲ್ ಸೆಂಟರ್‌ಗೆ ತಕ್ಷಣ ರಿಪೋರ್ಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ.

ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಆಫರ್

  • ನಿಮ್ಮ ಸಾಹಸ ಪ್ರಯಾಣಗಳನ್ನು ಪೂರೈಸಲು, ಈ ಕಾರ್ಡ್ ಭಾರತದಾದ್ಯಂತ ಡೊಮೆಸ್ಟಿಕ್ ಏರ್‌ಪೋರ್ಟ್‌ಗಳಲ್ಲಿ ವಾರ್ಷಿಕವಾಗಿ (ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಒಮ್ಮೆ) 4 ಕಾಂಪ್ಲಿಮೆಂಟರಿ ಲೌಂಜ್‍ಗಳ ಅಕ್ಸೆಸ್ ಪಡೆಯುತ್ತದೆ. ಆಫರ್ ಮಾನ್ಯವಾಗಿರುವ ಲೌಂಜ್‍ಗಳ ಪಟ್ಟಿ ಮತ್ತು ಷರತ್ತುಗಳಿಗಾಗಿ.
  • 1 ಜನವರಿ 2024 ರಿಂದ ಅನ್ವಯವಾಗುವಂತೆ, ನೀವು ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹5,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿದ್ದರೆ ಮಾತ್ರ ನೀವು ಕಾಂಪ್ಲಿಮೆಂಟರಿ ಲೌಂಜ್ ಪ್ರಯೋಜನವನ್ನು ಪಡೆಯುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಯೂಯಲ್ ಮೇಲ್ತೆರಿಗೆ

  • 1ನೇ ಜನವರಿ 2018 ರಿಂದ ಅನ್ವಯವಾಗುವಂತೆ, ಎಚ್ ಡಿ ಎಫ್ ಸಿ ಬ್ಯಾಂಕ್ ಸ್ವೈಪ್ ಮಷೀನ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ ಫ್ಯೂಯಲ್ ಮೇಲ್ತೆರಿಗೆ ಅನ್ವಯವಾಗುವುದಿಲ್ಲ. 
Added Delights

ಡೆಬಿಟ್ ಕಾರ್ಡ್ ಮಿತಿಗಳು

ಹೆಚ್ಚಿನ ಡೆಬಿಟ್ ಕಾರ್ಡ್ ಮಿತಿಗಳು

ಪ್ರತಿದಿನ ಹೊಸದಾಗಿ ಏನನ್ನಾದರೂ ಅನ್‌ಫೋಲ್ಡ್ ಮಾಡಿ!

  • ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳ ಮೇಲೆ ಗರಿಷ್ಠ ₹2,000/ಟ್ರಾನ್ಸಾಕ್ಷನ್‌ನ ಗರಿಷ್ಠ ಮಿತಿಯೊಂದಿಗೆ ಮರ್ಚೆಂಟ್ ಸಂಸ್ಥೆಗಳಲ್ಲಿ ನಗದು ವಿತ್‌ಡ್ರಾವಲ್ ಸೌಲಭ್ಯವನ್ನು ಈಗ ಪಡೆಯಬಹುದು, ಗರಿಷ್ಠ
  • ಪ್ರತಿ ತಿಂಗಳಿಗೆ POS ಮಿತಿಯಲ್ಲಿ ನಗದು ₹10,000/-

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿಯನ್ನು* ಬದಲಾಯಿಸಲು ದಯವಿಟ್ಟು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ. ಮಿತಿಗಳನ್ನು ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಅನುಮತಿಸಬಹುದಾದ ಮಿತಿಗಳವರೆಗೆ ಹೆಚ್ಚಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

*ಭದ್ರತಾ ಕಾರಣಗಳಿಗಾಗಿ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ಅಕೌಂಟ್ ತೆರೆಯುವ ದಿನಾಂಕದಿಂದ ಮೊದಲ 6 ತಿಂಗಳಿಗೆ ದಿನಕ್ಕೆ ₹0.5 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. 6 ತಿಂಗಳಿಗಿಂತ ಹಳೆಯ ಅಕೌಂಟ್‌ಗಳಿಗೆ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹2 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಜಾರಿಗೆ ತರಲಾಗುತ್ತದೆ.

ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಅನ್ನು ATM ಮತ್ತು POS ಬಳಕೆಗೆ ಸಕ್ರಿಯಗೊಳಿಸಲಾಗಿದ್ದು, ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ FAQ ಗಳನ್ನು ನೋಡಿ.

Debit Card Limits

ಪ್ರಮುಖ ಟಿಪ್ಪಣಿ

  • ದಿನಾಂಕ 15 ಜನವರಿ 2020 ರ RBI ಮಾರ್ಗಸೂಚಿ RBI/2019-2020/142 DPSS.CO.PD ನಂ. 1343/02.14.003/2019-20 ಪ್ರಕಾರ, 1ನೇ ಅಕ್ಟೋಬರ್'2020 ರಿಂದ ಅನ್ವಯವಾಗುವಂತೆ ನೀಡಲಾದ ಎಲ್ಲಾ ಡೆಬಿಟ್ ಕಾರ್ಡ್‌ಗಳು, ಡೊಮೆಸ್ಟಿಕ್ (POS ಮತ್ತು ATM) ಬಳಕೆಗೆ ಮಾತ್ರ ಸಕ್ರಿಯಗೊಳಿಸಲಾಗುತ್ತದೆ ಮತ್ತು ಡೊಮೆಸ್ಟಿಕ್ (ಇ-ಕಾಮರ್ಸ್ ಮತ್ತು ಕಾಂಟಾಕ್ಟ್‌ಲೆಸ್) ಮತ್ತು ಇಂಟರ್ನ್ಯಾಷನಲ್ ಬಳಕೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ಬಳಕೆದಾರರ ಅನುಕೂಲವನ್ನು ಸುಧಾರಿಸಲು ಮತ್ತು ಕಾರ್ಡ್ ಟ್ರಾನ್ಸಾಕ್ಷನ್‌ಗಳ ಭದ್ರತೆಯನ್ನು ಹೆಚ್ಚಿಸಲು ಹೀಗೆ ಮಾಡಲಾಗಿದೆ.
  • ನೀವು ATM/POS/ಇ-ಕಾಮರ್ಸ್/ಕಾಂಟಾಕ್ಟ್‌ಲೆಸ್‌ನಲ್ಲಿ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಮಿತಿಗಳನ್ನು ಸಕ್ರಿಯಗೊಳಿಸಬಹುದು ಅಥವಾ ಮಾರ್ಪಾಡು ಮಾಡಬಹುದು ದಯವಿಟ್ಟು MyCards/PayZapp/ನೆಟ್‌ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್/WhatsApp ಬ್ಯಾಂಕಿಂಗ್-70-700-222-22 ಗೆ ಭೇಟಿ ನೀಡಿ/Eva ವನ್ನು ಕೇಳಿ/ಟೋಲ್-ಫ್ರೀ ನಂಬರ್ 1800 1600 / 1800 2600 ಗೆ ಕರೆ ಮಾಡಿ (8 am ನಿಂದ 8 pm ವರೆಗೆ) ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರು ನಮ್ಮನ್ನು 022-61606160 ನಲ್ಲಿ ಸಂಪರ್ಕಿಸಬಹುದು.
Important Note

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣ 

MyCards, ಎಲ್ಲಾ ಡೆಬಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆಗಿದ್ದು, ಎಲ್ಲಿಂದಲಾದರೂ ನಿಮ್ಮ Millennia ಡೆಬಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ. 

  • ಡೆಬಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ
  • ಆನ್‌ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಇತ್ಯಾದಿಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ.
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ / ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ 
  • ಕಾರ್ಡ್ ಬ್ಲಾಕ್ ಮಾಡುವುದು/ ಮರು-ವಿತರಣೆ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
Card Management & Control 

ಫೀಸ್ ಮತ್ತು ಶುಲ್ಕಗಳು

ಪ್ರತಿ ಕಾರ್ಡ್‌ಗೆ ವಾರ್ಷಿಕ ಫೀಸ್ ₹500 + ಅನ್ವಯವಾಗುವ ತೆರಿಗೆಗಳು

  • ಡೆಬಿಟ್ ಕಾರ್ಡ್‌ಗಳಿಗೆ ಬದಲಿ/ಮರುವಿತರಣೆ ಶುಲ್ಕಗಳು - ₹200 + ಅನ್ವಯವಾಗುವ ತೆರಿಗೆಗಳು
  • ಚಾರ್ಜ್ ಸ್ಲಿಪ್ ಮರುಪಡೆಯುವಿಕೆ ಕೋರಿಕೆ: 100*
  • ದಯವಿಟ್ಟು ಗಮನಿಸಿ:
    ಶಾಪಿಂಗ್‌ಗಾಗಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ATM ಗಳಲ್ಲಿ ಮರ್ಚೆಂಟ್ ಲೊಕೇಶನ್‌ಗಳಲ್ಲಿ ಡೆಬಿಟ್ ಕಾರ್ಡ್ ಬಳಸಲು ಯಾವುದೇ ಶುಲ್ಕಗಳಿಲ್ಲ. ಆದಾಗ್ಯೂ, ರೈಲ್ವೆ ಸ್ಟೇಷನ್‌ಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ, ಉದ್ಯಮದ ಅಭ್ಯಾಸಗಳ ಪ್ರಕಾರ ಟ್ರಾನ್ಸಾಕ್ಷನ್ ಶುಲ್ಕಗಳು ಅನ್ವಯವಾಗುತ್ತವೆ.

ಡೆಬಿಟ್ ಕಾರ್ಡ್ ಮೇಲಿನ ಇತರ ಶುಲ್ಕಗಳ ಮತ್ತು ಶುಲ್ಕಗಳನ್ನು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ

Fees and Charges

(ಪ್ರಮುಖ ನಿಯಮ ಮತ್ತು ಷರತ್ತುಗಳು)*

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Most Important Terms and Conditions*

ಆಗಾಗ್ಗೆ ಕೇಳುವ ಪ್ರಶ್ನೆಗಳು

ಆರ್‌ಬಿಐನ ಆದೇಶದ ಪ್ರಕಾರ, ಎಲ್ಲಾ ಆನ್ಲೈನ್ ಕಾರ್ಡ್ ಟ್ರಾನ್ಸಾಕ್ಷನ್‌ಗಳು, ಟ್ರಾನ್ಸಾಕ್ಷನ್ ಮಾಡಿದಾಗ ಎರಡನೇ ಮಟ್ಟದ ದೃಢೀಕರಣವನ್ನು ಹೊಂದಿರಬೇಕು. ಆದ್ದರಿಂದ ಆನ್ಲೈನ್ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು Visa (VBV) ಅಥವಾ MasterCard ಸೆಕ್ಯೂರ್ ಕೋಡ್‌ನಿಂದ ಪರಿಶೀಲಿಸಲಾದ ಕಾರ್ಡ್‌ಗಳನ್ನು ನೋಂದಾಯಿಸಬೇಕು. Visa ಅಥವಾ MasterCard ಸೆಕ್ಯೂರ್ ಕೋಡ್ ಸಕ್ರಿಯಗೊಳಿಸಿದ ವೆಬ್‌ಸೈಟ್‌ಗಳಲ್ಲಿ ಮಾತ್ರ ಟ್ರಾನ್ಸಾಕ್ಷನ್ ನಡೆಸಬಹುದು. 
 
ಇನ್ನಷ್ಟು ಪ್ರಶ್ನೆಗಳಿವೆಯೇ? ಪರೀಕ್ಷಿಸಿ ನಮ್ಮ FAQ ಗಳು ಸೆಕ್ಷನ್

Millennia ಡೆಬಿಟ್ ಕಾರ್ಡ್ PayZapp, SmartBuy ಆಯ್ಕೆಗಳು ಮತ್ತು ವಿವಿಧ ಟ್ರಾನ್ಸಾಕ್ಷನ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಇದು ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್, ಹೆಚ್ಚಿನ ವಿತ್‌ಡ್ರಾವಲ್ ಮತ್ತು ಶಾಪಿಂಗ್ ಮಿತಿಗಳು ಮತ್ತು ಹೆಚ್ಚುವರಿ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಅದರ ಬಳಕೆದಾರ-ಸ್ನೇಹಿ ಫೀಚರ್‌ಗಳೊಂದಿಗೆ, ಇದು ಲಾಭದಾಯಕ ಮತ್ತು ಸುರಕ್ಷಿತ ಖರ್ಚಿನ ಅನುಭವವನ್ನು ಒದಗಿಸುತ್ತದೆ.

ನಿಮ್ಮ ಅಕೌಂಟ್‌ನ ಬ್ಯಾಲೆನ್ಸ್ ಆಧಾರದ ಮೇಲೆ, ಪ್ರತಿದಿನ ATM ನಲ್ಲಿ ₹ 50,000 ವರೆಗೆ ನಗದು ವಿತ್‌ಡ್ರಾ ಮಾಡಲು ಮತ್ತು ಶಾಪಿಂಗ್‌ನಲ್ಲಿ ಪ್ರತಿದಿನ ₹ 3.50 ಲಕ್ಷ ಖರ್ಚು ಮಾಡಲು ಸಾಧ್ಯವಿದೆ. ಈ ಮಿತಿಗಳನ್ನು ನಿಮ್ಮ ಕಾರ್ಡ್ ಭದ್ರತೆಗಾಗಿ ಸೆಟ್ ಮಾಡಲಾಗಿದೆ. 

Millennia ಡೆಬಿಟ್ ಕಾರ್ಡ್ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುವ ಬಹುಮುಖ ಕಾರ್ಡ್ ಆಗಿದೆ, ಇದು ಬಳಕೆದಾರರಿಗೆ ಹಲವಾರು ಪ್ರಯೋಜನಗಳು ಮತ್ತು ಫೀಚರ್‌ಗಳನ್ನು ಒದಗಿಸುತ್ತದೆ. ಇದು ಆನ್ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ತಡೆರಹಿತ ಟ್ರಾನ್ಸಾಕ್ಷನ್‌ಗಳಿಗೆ ಅನುಮತಿ ನೀಡುತ್ತದೆ, ಇದು ಅನುಕೂಲಕರ ಮತ್ತು ಸೆಕ್ಯೂರ್ಡ್ ಪಾವತಿ ಆಯ್ಕೆಯಾಗಿದೆ.

ಉಚಿತವಾಗಿ Millennia ಡೆಬಿಟ್ ಕಾರ್ಡ್ ಪಡೆಯಲು, ವ್ಯಕ್ತಿಗಳು ವಿವಿಧ ಚಾನೆಲ್‌ಗಳ ಮೂಲಕ ಅದಕ್ಕಾಗಿ ಅಪ್ಲೈ ಮಾಡಬಹುದು. ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಆಗಬಹುದು, ಕಾರ್ಡ್‌ಗಳ ವಿಭಾಗಕ್ಕೆ ನ್ಯಾವಿಗೇಟ್ ಮಾಡಬಹುದು ಮತ್ತು Millennia ಡೆಬಿಟ್ ಕಾರ್ಡ್‌ಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು. ನಾನ್ - ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬಹುದು, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬಹುದು ಮತ್ತು ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಲು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು.

ಹೌದು, Millennia ಡೆಬಿಟ್ ಕಾರ್ಡ್ ಅದರ ಪ್ರಯೋಜನಗಳಲ್ಲಿ ಒಂದಾಗಿ ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್ ಒದಗಿಸುತ್ತದೆ. ಕಾರ್ಡ್‌ಹೋಲ್ಡರ್‌ಗಳು ಭಾರತದಾದ್ಯಂತ ಡೊಮೆಸ್ಟಿಕ್ ಏರ್‌ಪೋರ್ಟ್‌ಗಳಲ್ಲಿ ಈ ಪ್ರಯೋಜನವನ್ನು ಆನಂದಿಸಬಹುದು. ಜನವರಿ 1, 2024 ರಿಂದ ಅನ್ವಯವಾಗುವಂತೆ, ಕಾರ್ಡ್‌ಹೋಲ್ಡರ್ ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹5,000 ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿದ್ದರೆ ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್ ನೀಡಲಾಗುತ್ತದೆ.

ನಿಯಮ ಮತ್ತು ಷರತ್ತುಗಳು