ಶ್ರೀ ವಿವೇಕ್ ಕಪೂರ್ ಅವರು ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಗ್ರೂಪ್ ಹೆಡ್ - ಫೈನಾನ್ಸ್ ಆಗಿದ್ದಾರೆ. ಪ್ರಸ್ತುತ ಹುದ್ದೆಯಲ್ಲಿ, ಅವರು ಭಾರತೀಯ GAAP ಮತ್ತು US GAAP ಮತ್ತು ಇತರ ಚೌಕಟ್ಟುಗಳ ಅಡಿಯಲ್ಲಿ ಬ್ಯಾಂಕ್‌ನ ಹಣಕಾಸು ವರದಿಯನ್ನು ನಿರ್ವಹಿಸುತ್ತಾರೆ ಮತ್ತು ಕಾರ್ಪೊರೇಟ್ ತೆರಿಗೆ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಾರೆ.
ಶ್ರೀ ಕಪೂರ್ 1998 ರಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹಣಕಾಸು ಇಲಾಖೆಗೆ ಸೇರಿದರು. ಅವರು ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕ್ಷೇತ್ರದಲ್ಲಿ 25 ವರ್ಷಗಳಿಗಿಂತ ಹೆಚ್ಚು ಅನುಭವವನ್ನು ಹೊಂದಿದ್ದಾರೆ ಮತ್ತು ಬಿಸಿನೆಸ್ MIS ಮತ್ತು ಪ್ಲಾನಿಂಗ್, ALM, ಬಂಡವಾಳ ಸಂಗ್ರಹಣೆ, ತೆರಿಗೆ ಮತ್ತು ಹಣಕಾಸು ವರದಿ ರಚನೆೆಯನ್ನು ಒಳಗೊಂಡಿರುವ ವಿವಿಧ ಹಣಕಾಸು ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಕಪೂರ್ ಅವರು ಉದಯೋನ್ಮುಖ ಅಕೌಂಟಿಂಗ್ ಮಾನದಂಡಗಳು ಮತ್ತು ಹಣಕಾಸು ವರದಿಗಳ ಕುರಿತಾಗಿ ICAI ಮತ್ತು RBI ರಚಿಸಿದ ಸಮಿತಿಗಳು ಮತ್ತು ಕಾರ್ಯಕಾರಿ ಗುಂಪುಗಳ ಸದಸ್ಯರಾಗಿದ್ದಾರೆ.
ಶ್ರೀ ಕಪೂರ್ ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಎಕನಾಮಿಕ್ಸ್‌ನಿಂದ ಪದವೀಧರರಾಗಿದ್ದಾರೆ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.
ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ಆಡಿದ ಕ್ರೀಡಾಭಿಮಾನಿಯಾಗಿದ್ದಾರೆ ಮತ್ತು ಸಂಗೀತ ಪ್ರೇಮಿ ಮತ್ತು ಪ್ರಕೃತಿ ಪ್ರೇಮಿ ಕೂಡಾ ಆಗಿದ್ದಾರೆ.