ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ವಿನಯ್ ರಾಝ್‌ದಾನ್

ಶ್ರೀ ವಿನಯ್ ರಾಝ್‌ದಾನ್ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಆಗಿದ್ದಾರೆ. ಶ್ರೀ ರಾಝ್‌ದಾನ್ ಸೆಪ್ಟೆಂಬರ್ 2018 ರಲ್ಲಿ ಬ್ಯಾಂಕ್‌ಗೆ ಸೇರಿದರು ಮತ್ತು ಬ್ಯಾಂಕ್‌ನಲ್ಲಿ ಸಂಪೂರ್ಣ ಮಾನವ ಸಂಪನ್ಮೂಲ ಕಾರ್ಯಕ್ಷಮತೆಗೆ ಜವಾಬ್ದಾರರಾಗಿದ್ದಾರೆ.

ಶ್ರೀ ರಾಝ್‌ದಾನ್ ಅವರು Idea Cellular Ltd ನಿಂದ ನಮ್ಮ ಬ್ಯಾಂಕ್‌ಗೆ ಸೇರಿದರು. ಅಲ್ಲಿ ಅವರು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಆಗಿದ್ದರು. ಅವರು 2006 ರಲ್ಲಿ Idea ಗೆ ಸೇರಿದರು ಮತ್ತು ಅಲ್ಲಿ ಹಲವಾರು ಪರಿವರ್ತನಾತ್ಮಕ ತೊಡಗುವಿಕೆಗಳನ್ನು ಮುನ್ನಡೆಸಿದರು.

30 ವರ್ಷಗಳ ಕಾಲ HR ಕ್ಷೇತ್ರದಲ್ಲಿ ಕೆಲಸ ಮಾಡಿರುವ ಶ್ರೀ ರಾಝ್‌ದಾನ್ ಅವರು FMCG, IT ಸರ್ವೀಸ್‌ಗಳು ಮತ್ತು ಟೆಲಿಕಮ್ಯುನಿಕೇಶನ್ಸ್ ವಲಯಗಳಲ್ಲಿ ಅಪಾರ, ವಿಶಾಲ ಮತ್ತು ವೈವಿಧ್ಯಮಯ ಅನುಭವವನ್ನು ಹೊಂದಿದ್ದಾರೆ. ಅವರು ITC Ltd, HCL Technologies ಮತ್ತು Idea Cellular Ltd ನಂತಹ ದೊಡ್ಡ ಸಂಸ್ಥೆಗಳಲ್ಲಿ ನಾಯಕತ್ವದ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಶ್ರೀ ರಾಝ್‌ದಾನ್ ಅವರ ನಾಯಕತ್ವದ ಅಡಿಯಲ್ಲಿ, ಈ ಕೆಲವು ಸಂಸ್ಥೆಗಳು ಅತ್ಯುತ್ತಮ ಕೆಲಸದ ಸ್ಥಳಗಳೆಂದು ಗುರುತಿಸಲ್ಪಟ್ಟಿವೆ.

ಶ್ರೀ ರಾಝ್‌ದಾನ್ ದೆಹಲಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ ಮತ್ತು XLRI, ಜೇಮ್‌ಶೆಡ್‌ಪುರದಿಂದ ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶ್ರೀ ರಾಝ್‌ದಾನ್ ಅವರು ಜಾಗೃತಿ ಎಂಬವರನ್ನು ವಿವಾಹವಾಗಿದ್ದಾರೆ ಮತ್ತು ವಿವಿಧ ಚಾರಿಟೆಬಲ್ ಕಾರ್ಯಗಳಲ್ಲಿ ತೊಡಗಿದ್ದಾರೆ. ಅವರು ತಮ್ಮ ಮಕ್ಕಳಾದ ತನಿಶಾ ಮತ್ತು ಶಿವ್ ಆಶಿಶ್ ಮತ್ತು ಅವರ ಲ್ಯಾಬ್ರಡಾರ್ ಫ್ರೆಡ್ಡಿ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅವರು ಫುಟ್‌ಬಾಲ್ ಅಭಿಮಾನಿಯಾಗಿದ್ದಾರೆ ಮತ್ತು ಕ್ರಿಕೆಟ್ ಮತ್ತು ಟೇಬಲ್ ಟೆನ್ನಿಸ್ ಆಡುವುದನ್ನು ಕೂಡ ಆನಂದಿಸುತ್ತಾರೆ. ಓದು ಮತ್ತು ಪ್ರವಾಸ ಅವರ ಇತರ ಆಸಕ್ತಿಗಳಾಗಿವೆ.