ಶ್ರೀ ಸುಕೇತು ಕಪಾಡಿಯಾ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಇಂಟರ್ನಲ್ ಆಡಿಟ್‌ನ ಗ್ರೂಪ್ ಹೆಡ್ ಆಗಿದ್ದಾರೆ.
ಶ್ರೀ ಕಪಾಡಿಯಾ ಅವರು ನಮ್ಮ ಬ್ಯಾಂಕ್‌ಗೆ ಸೇರುವ ಮುನ್ನ IDFC ಫಸ್ಟ್ ಬ್ಯಾಂಕ್‌ನಲ್ಲಿ ಮುಖ್ಯ ಇಂಟರ್ನಲ್ ಆಡಿಟರ್ ಆಗಿ ಸುಮಾರು ಎಂಟು ವರ್ಷ ಕಾರ್ಯ ನಿರ್ವಹಿಸಿದ್ದು, ಆಂತರಿಕ ಆಡಿಟ್ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಕ್ಕೂ ಮೊದಲು, ಅವರು ICICI ಬ್ಯಾಂಕ್‌ನಲ್ಲಿ ಸುಮಾರು ಒಂದು ದಶಕ ಕೆಲಸ ಮಾಡಿದ್ದು, ಬ್ಯಾಂಕ್ ಮತ್ತು ಅದರ ಅಂಗಸಂಸ್ಥೆಗಳ ವೈವಿಧ್ಯಮಯ ಬಿಸಿನೆಸ್ ವಿಭಾಗಗಳಲ್ಲಿ ವಿವಿಧ ಆಂತರಿಕ ಆಡಿಟ್ ಕಾರ್ಯಗಳು ಮತ್ತು ಸಂಬಂಧಿತ ಚಟುವಟಿಕೆಗಳನ್ನು ಮುನ್ನಡೆಸಿದರು.
ಶ್ರೀ ಕಪಾಡಿಯಾ ಅವರು ಅಶ್ಯೂರೆನ್ಸ್, ಅಪಾಯ ನಿರ್ವಹಣೆ, ಹಣಕಾಸು ಮತ್ತು ಸಮಾಲೋಚನೆಯಲ್ಲಿ 28 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಆಡಿಟ್ ವೃತ್ತಿಪರರಾಗಿದ್ದಾರೆ. ಅವರು USA, ಆಸ್ಟ್ರೇಲಿಯಾ, UK, ಆಗ್ನೇಯ ಏಷ್ಯಾ ಮತ್ತು UAE ಗಳಲ್ಲಿ ಅಸೈನ್‌ಮೆಂಟ್‌ಗಳಲ್ಲಿ ಕೆಲಸ ಮಾಡಿದ ಅಂತರರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ. ಅವರು ಆಡಿಟ್ ಸಮಿತಿಗಳು, ಮಂಡಳಿಗಳು ಮತ್ತು ಇತರ ಹಿರಿಯ ಪಾಲುದಾರರೊಂದಿಗೆ ಕೆಲಸ ಮಾಡಿದ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ಶ್ರೀ ಕಪಾಡಿಯಾ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದಿರುವ ಅವರು, ಸರ್ಟಿಫೈಡ್ ಇನ್ಫರ್ಮೇಶನ್ ಸಿಸ್ಟಮ್ಸ್ ಆಡಿಟರ್ ಕೂಡಾ ಆಗಿದ್ದಾರೆ
ಶ್ರೀ ಕಪಾಡಿಯಾ ಅವರು ಪುಸ್ತಕ ಓದುವುದು, ಸಂಗೀತ, ಪ್ರಯಾಣ ಮತ್ತು ಸ್ಕೂಬಾ ಡೈವಿಂಗ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ವಿವಾಹಿತರಾಗಿದ್ದು, ಅವರಿಗೆ ಒಬ್ಬ ಮಗಳಿದ್ದಾರೆ.