ಕಾರ್ಯನಿರ್ವಾಹಕೇತರ (ಸ್ವತಂತ್ರೇತರ) ನಿರ್ದೇಶಕರು

ಶ್ರೀ ಕೇಕಿ M. ಮಿಸ್ತ್ರಿ

ಶ್ರೀ ಕೇಕಿ M. ಮಿಸ್ತ್ರಿ ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಮಂಡಳಿಯ ಕಾರ್ಯನಿರ್ವಾಹಕೇತರ (ಸ್ವತಂತ್ರೇತರ) ನಿರ್ದೇಶಕರಾಗಿದ್ದಾರೆ.

ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲದಿಂದ ವಿವಿಧ ಕೆಲಸದ ಅನುಭವ ಹೊಂದಿರುವ ಪ್ರಸಿದ್ಧ ವೃತ್ತಿಪರರಾಗಿದ್ದಾರೆ. ಅವರು ಪ್ರಸ್ತುತ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ರಚಿಸಿದ ಪ್ರಾಥಮಿಕ ಮಾರುಕಟ್ಟೆ ಸಲಹಾ ಸಮಿತಿಯ (PMAC) ಅಧ್ಯಕ್ಷರಾಗಿದ್ದಾರೆ.

ಪ್ರಸ್ತುತ ಶ್ರೀ ಮಿಸ್ತ್ರಿ ಅವರು ಬಿಸಿನೆಸ್ ಅನ್ನು ಸುಲಭಗೊಳಿಸಲು ಮತ್ತು SEBI (ಬಂಡವಾಳ ಇಶ್ಯೂ ಮತ್ತು ಪ್ರಕಟಣೆ ಅವಶ್ಯಕತೆಗಳು) ನಿಯಮಾವಳಿಗಳು, 2018 ಮತ್ತು LODR ನ ನಿಬಂಧನೆಗಳ ಸಮನ್ವಯಕ್ಕಾಗಿ SEBI ರಚಿಸಿದ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ತಜ್ಞರ ಸಮಿತಿಯ ವರ್ಕಿಂಗ್ ಗ್ರೂಪ್ 1 ಅಧ್ಯಕ್ಷರಾಗಿದ್ದಾರೆ. 

ಶ್ರೀ ಮಿಸ್ತ್ರಿ ಅವರು ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ [IFSCA] ರಚಿಸಿದ ಪ್ರಾಥಮಿಕ ಮಾರುಕಟ್ಟೆಗಳ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ.