ನೀವು ಪರ್ಸನಲ್ ಲೋನ್ ಅನ್ನು ಎಷ್ಟು ಬೇಗ ಪಡೆಯಬಹುದು?

ಶೂನ್ಯ ಡಾಕ್ಯುಮೆಂಟೇಶನ್, ಯಾವುದೇ ಅಡಮಾನದ ಅಗತ್ಯವಿಲ್ಲ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನೀವು ಪರ್ಸನಲ್ ಲೋನ್ ಅನ್ನು ಎಷ್ಟು ತ್ವರಿತವಾಗಿ ಪಡೆಯಬಹುದು ಎಂಬುದನ್ನು ಬ್ಲಾಗ್ ಒತ್ತಿ ಹೇಳುತ್ತದೆ.

ಸಾರಾಂಶ:

  • ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಕೇವಲ 10 ಸೆಕೆಂಡುಗಳಲ್ಲಿ ಲಭ್ಯವಿರುವ ಮುಂಚಿತ-ಅನುಮೋದಿತ ಲೋನ್‌ಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದು ಮತ್ತು ವಿತರಿಸಬಹುದು.

  • ಈ ಅನ್‌ಸೆಕ್ಯೂರ್ಡ್ ಲೋನ್‌ಗಳಿಗೆ ಯಾವುದೇ ಅಡಮಾನದ ಅಗತ್ಯವಿಲ್ಲ ಮತ್ತು ಅನುಮೋದನೆಯು ಆದಾಯ, ನಗದು ಹರಿವು ಮತ್ತು ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ಇರುತ್ತದೆ.

  • ಅವರು ಇತರ ಲೋನ್ ಮೂಲಗಳಿಗಿಂತ ಕಡಿಮೆ ಬಡ್ಡಿ ದರಗಳನ್ನು ಒದಗಿಸುತ್ತಾರೆ, ವಿಶೇಷವಾಗಿ ಬಲವಾದ ಕ್ರೆಡಿಟ್ ಪ್ರೊಫೈಲ್‌ನೊಂದಿಗೆ.

  • ಮರುಪಾವತಿ ನಿಯಮಗಳು ಫ್ಲೆಕ್ಸಿಬಲ್ ಆಗಿವೆ 

  • ಆ್ಯಪ್ ಪ್ರಕ್ರಿಯೆಯು ಸರಳವಾಗಿದೆ, ವಿಶೇಷವಾಗಿ ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ, ಮತ್ತು ಆನ್ಲೈನಿನಲ್ಲಿ ಅಥವಾ ಬ್ರಾಂಚ್‌ನಲ್ಲಿ ಮಾಡಬಹುದು.

ಮೇಲ್ನೋಟ

ಇದು ನಮಗೆಲ್ಲರಿಗೂ ಆಗುತ್ತದೆ. ಕುಟುಂಬದ ತುರ್ತುಸ್ಥಿತಿ ಅಥವಾ ಕೆಲವು ಅನಿರೀಕ್ಷಿತ ಟ್ರಾವೆಲ್ ಪ್ಲಾನ್‌ನಿಂದಾಗಿ ನಿಮಗೆ ತ್ವರಿತ ಫಂಡ್‌ಗಳ ಅಗತ್ಯ ಎದುರಾಗುತ್ತದೆ.

ಉತ್ತಮ ಆಯ್ಕೆಯು ಬ್ಯಾಂಕ್‌ನಿಂದ ಪರ್ಸನಲ್ ಲೋನ್ ಆಗಿರಬಹುದು. ಏಕೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಪರ್ಸನಲ್ ಲೋನ್ ಏಕೆ ಪಡೆಯಬೇಕು?

  • ಇದು ತ್ವರಿತವಾಗಿದೆ
    ನೀವು ತ್ವರಿತವಾಗಿ ಪರ್ಸನಲ್ ಲೋನ್ ಪಡೆಯಬಹುದು, ಎಚ್ ಡಿ ಎಫ್ ಸಿ ಬ್ಯಾಂಕ್ 10 ಸೆಕೆಂಡುಗಳಲ್ಲಿ ಗ್ರಾಹಕರಿಗೆ ಮುಂಚಿತ-ಅನುಮೋದಿತ ಲೋನ್‌ಗಳನ್ನು ಒದಗಿಸುತ್ತದೆ*. ಎಚ್‌ ಡಿ ಎಫ್‌ ಸಿ ಬ್ಯಾಂಕ್‌ನ ಗ್ರಾಹಕರಲ್ಲದವರೂ ಕೂಡ ತ್ವರಿತವಾಗಿ ಲೋನ್‌ಗಳನ್ನು ಪಡೆಯಬಹುದು. ತ್ವರಿತ ಲೋನ್ ಪಡೆಯುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಇನ್ನು ಯೋಚನೆ ಬೇಡ.

  • ನಿಮಗೆ ಅಡಮಾನದ ಅಗತ್ಯವಿಲ್ಲ
    ಪರ್ಸನಲ್ ಲೋನ್‌ಗಳು ಅನ್‌ಸೆಕ್ಯೂರ್ಡ್ (ಅಡಮಾನ ಅಥವಾ ಭದ್ರತೆ ಇಲ್ಲದೆ) ಲೋನ್‌ಗಳಾಗಿರುವುದರಿಂದ, ನೀವು ಲೋನನ್ನು ಮರುಪಾವತಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ಗಳು ನಿಮ್ಮ ಆದಾಯ, ನಗದು ಹರಿವುಗಳು, ನಿಮ್ಮ ಬಿಸಿನೆಸ್ ಅಥವಾ ಉದ್ಯೋಗದ ಶಕ್ತಿ ಅಥವಾ ಸ್ಥಿರತೆಯನ್ನು ನೋಡುತ್ತವೆ. ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಯಾವುದೇ ಡಾಕ್ಯುಮೆಂಟೇಶನ್ ಇಲ್ಲದೆ ಪರ್ಸನಲ್ ಲೋನ್‌ಗಳನ್ನು ಪಡೆಯಬಹುದು.

  • ಕಡಿಮೆ ಬಡ್ಡಿದರಗಳು
    ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್‌ಗಳ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ನೀಡುತ್ತದೆ. ನೀವು ಉತ್ತಮ ಕ್ರೆಡಿಟ್ ಇತಿಹಾಸ, ಬಲವಾದ ಆದಾಯ ಪುರಾವೆ ಮತ್ತು ಬ್ಯಾಂಕ್‌ನೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದರೆ, ನೀವು ಉತ್ತಮ ನಿಯಮಗಳನ್ನು ಪಡೆಯಲು ಸಾಧ್ಯವಾಗುತ್ತದೆ.

  • ಸುಲಭ ಮರುಪಾವತಿ ನಿಯಮಗಳು
    ಫ್ಲೆಕ್ಸಿಬಲ್ ಮರುಪಾವತಿ ರಚನೆಯೊಂದಿಗೆ ಪರ್ಸನಲ್ ಲೋನ್‌ಗಳು ಅಲ್ಪಾವಧಿಯಿಂದ ಮಧ್ಯಮ-ಅವಧಿಯ (12 ರಿಂದ 60 ತಿಂಗಳು) ಲೋನ್‌ಗಳಾಗಿವೆ. ನೀವು ಸಾಮಾನ್ಯವಾಗಿ ಸಮನಾದ ಮಾಸಿಕ ಕಂತುಗಳಲ್ಲಿ (EMI ಗಳು) ಲೋನ್ ಮರುಪಾವತಿಸುತ್ತೀರಿ. ನಿಮ್ಮ EMI ಗಳನ್ನು ಪಾಕೆಟ್-ಸ್ನೇಹಿ ಮಾಡಲು ನೀವು ನಿಮ್ಮ ಮರುಪಾವತಿ ಅವಧಿಯನ್ನು ಸರಿಹೊಂದಿಸಬಹುದು. ಹೆಚ್ಚಿನ ವಿವರಗಳಿಗಾಗಿ ಪರ್ಸನಲ್ ಲೋನ್‌ EMI ಕ್ಯಾಲ್ಕುಲೇಟರ್ ನಿಮ್ಮ ಮರುಪಾವತಿಯನ್ನು ಉತ್ತಮವಾಗಿ ಯೋಜಿಸಲು.

  • ಇದು ಸುಲಭ
    ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ XPRESS ಪರ್ಸನಲ್ ಲೋನ್ ಪಡೆಯುವುದು ಸುಲಭ. ನೀವು ಮೊಬೈಲ್‌ಬ್ಯಾಂಕಿಂಗ್ ಮೂಲಕ ಲೋನ್‌ಗೆ ಅಪ್ಲೈ ಮಾಡಬಹುದು, ನೆಟ್‌ಬ್ಯಾಂಕಿಂಗ್, ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ, ATM ನಲ್ಲಿ, ಅಥವಾ ನಿಮ್ಮ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ.
     

XPRESS ಪರ್ಸನಲ್ ಲೋನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಪರಿಶೀಲಿಸಿ.

ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಬಯಸುತ್ತಿದ್ದೀರಾ? ಆರಂಭಿಸಲು ಇಲ್ಲಿ ಕ್ಲಿಕ್ ಮಾಡಿ.

* ನಿಯಮ ಮತ್ತು ಷರತ್ತುಗಳು ಅನ್ವಯ. ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಪರ್ಸನಲ್ ಲೋನ್ ವಿತರಣೆ.