ಸ್ವತಂತ್ರ ನಿರ್ದೇಶಕರು

ಶ್ರೀ ಸಂದೀಪ್ ಪರೇಖ್

ಶ್ರೀ ಸಂದೀಪ್ ಪರೇಖ್ ಬ್ಯಾಂಕ್ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಶ್ರೀ ಸಂದೀಪ್ ಪರೇಖ್ ಅವರು ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ LL.M. (ಸೆಕ್ಯೂರಿಟಿಗಳು ಮತ್ತು ಹಣಕಾಸು ನಿಯಮಾವಳಿಗಳು) ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ LL.B. ಪದವಿ ಪಡೆದಿದ್ದಾರೆ. ಅವರು ಮುಂಬೈ ಮೂಲದ ಹಣಕಾಸು ವಲಯದ ಕಾನೂನು ಸಂಸ್ಥೆಯಾದ Finsec Law Advisors ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಅವರು 2006-08 ರ ಅವಧಿಯಲ್ಲಿ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್‌ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಜಾರಿ ಮತ್ತು ಕಾನೂನು ವ್ಯವಹಾರಗಳ ಇಲಾಖೆಗಳ ಮುಖ್ಯಸ್ಥರಾಗಿದ್ದರು. ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಂದರ್ಶಕ ಅಧ್ಯಾಪಕರಾಗಿದ್ದಾರೆ. ಅವರು ದೆಹಲಿ, ಮುಂಬೈ ಮತ್ತು ವಾಷಿಂಗ್ಟನ್, ಡಿ.ಸಿ.ಯಲ್ಲಿ ಕಾನೂನು ಸಂಸ್ಥೆಗಳಿಗೆ ಕೆಲಸ ಮಾಡಿದ್ದಾರೆ. ಶ್ರೀ ಪರೇಖ್ ಸೆಕ್ಯೂರಿಟಿಗಳ ನಿಯಮಾವಳಿಗಳು, ಹೂಡಿಕೆ ನಿಯಮಾವಳಿಗಳು, ಖಾಸಗಿ ಇಕ್ವಿಟಿ, ಕಾರ್ಪೊರೇಟ್ ಆಡಳಿತ ಮತ್ತು ಹಣಕಾಸಿನ ನಿಯಮಾವಳಿಗಳ ಕುರಿತಾಗಿ ಗಮನ ಹರಿಸುತ್ತಾರೆ. ಅವರು ನ್ಯೂಯಾರ್ಕ್‌ನಲ್ಲಿ ಕಾನೂನು ಅಭ್ಯಾಸಕ್ಕೆ ದಾಖಲಾಗಿದ್ದರು.

ವಿಶ್ವ ಆರ್ಥಿಕ ವೇದಿಕೆಯು ಅವರನ್ನು 2008 ರಲ್ಲಿ "ಯಂಗ್ ಗ್ಲೋಬಲ್ ಲೀಡರ್" ಎಂದು ಗುರುತಿಸಿತು. ಅವರು SEBI ಮತ್ತು RBI ಯ ವಿವಿಧ ಸಮಿತಿಗಳು ಮತ್ತು ಉಪ-ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರಾಗಿದ್ದರು. ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯೂರಿಟಿಸ್ ಮಾರ್ಕೆಟ್ಸ್ (NISM) ನ ನಿಯಂತ್ರಕ ಅಧ್ಯಯನಗಳು ಮತ್ತು ಮೇಲ್ವಿಚಾರಣೆ (SRSS) ಸ್ಕೂಲ್ ಸಲಹಾ ಸಮಿತಿಯಲ್ಲಿದ್ದಾರೆ. ಅವರು Financial Times ಮತ್ತು Economic Times ನಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.