ಗ್ರೂಪ್ ಹೆಡ್ - ರಿಟೇಲ್ ಅಸೆಟ್‌ಗಳು, ಎಚ್ ಡಿ ಎಫ್ ಸಿ ಬ್ಯಾಂಕ್

ಶ್ರೀ ಅರವಿಂದ್ ವೋಹ್ರಾ

ಶ್ರೀ ಅರವಿಂದ್ ವೋಹ್ರಾ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನ ರಿಟೇಲ್ ಅಸೆಟ್ಸ್ ಗ್ರೂಪ್ ಹೆಡ್ ಆಗಿದ್ದಾರೆ. ಹೆಚ್ಚುವರಿಯಾಗಿ, ಅವರು ಎಚ್‌ಡಿ‌ಎಫ್‌ಸಿ ಸೆಕ್ಯೂರಿಟೀಸ್ ಮಂಡಳಿಯಲ್ಲಿ ಕೂಡಾ ಸೇವೆ ಸಲ್ಲಿಸುತ್ತಾರೆ.

2018 ರಲ್ಲಿ ರಿಟೇಲ್ ಬ್ರಾಂಚ್ ಬ್ಯಾಂಕಿಂಗ್‌ನ ಗ್ರೂಪ್ ಹೆಡ್ ಆಗಿ ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಸೇರಿದ ಶ್ರೀ ವೋಹ್ರಾ ಅವರು ರಿಟೇಲ್ ಹೊಣೆಗಾರಿಕೆಗಳನ್ನು ಒಳಗೊಂಡ ಟ್ರೇಡ್ ಮತ್ತು ಫಾರೆಕ್ಸ್ ಬಿಸಿನೆಸ್ ಫ್ರ್ಯಾಂಚೈಸ್, ರಿಟೇಲ್ ಮತ್ತು ಬಿಸಿನೆಸ್ ಅಸೆಟ್ ಒರಿಜಿನೇಶನ್, ಗ್ರಾಹಕರನ್ನು ಸೆಳೆಯುವುದು, ಸಮಗ್ರ ಗ್ರಾಹಕ ಲೈಫ್ ಸೈಕಲ್ ಮ್ಯಾನೇಜ್ಮೆಂಟ್, ವಿಶ್ಲೇಷಣೆ ಆಧಾರಿತ ಒಳನೋಟವುಳ್ಳ ಗ್ರಾಹಕ ಸಂಭಾಷಣೆಗಳು ಮತ್ತು ಗ್ರಾಹಕ ಪ್ರಯಾಣದ ಮೂಲಕ ಗ್ರಾಹಕ ಅನುಭವ ಶ್ರೇಷ್ಠತೆ ಸರಳೀಕರಣ ಮತ್ತು ಡಿಜಿಟಲೀಕರಣದ ಮೇಲೆ ಗಮನಹರಿಸಿದರು.

ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಸೇರುವ ಮೊದಲು, ಎರಡು ದಶಕಗಳಿಗಿಂತ ಹೆಚ್ಚಿನ ಕಾಲದ ವೃತ್ತಿಜೀವನದಲ್ಲಿ, ಶ್ರೀ ವೋಹ್ರಾ ಅವರು ಬ್ಯಾಂಕಿಂಗ್, ಟೆಲಿಕಮ್ಯುನಿಕೇಶನ್ ಮತ್ತು ಕನ್ಸ್ಯೂಮರ್ ಸೆಕ್ಟರ್‌ಗಳಲ್ಲಿ ಗ್ರಾಹಕ ಕೇಂದ್ರಿತ ವರ್ಗಗಳೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ದೊಡ್ಡ ತಂಡಗಳನ್ನು ಮುನ್ನಡೆಸುವ ಮತ್ತು ಬಿಸಿನೆಸ್ ಅನ್ನು ಬೆಳೆಸುವ ಬಿಸಿನೆಸ್ ನಾಯಕತ್ವದ ಸ್ಥಾನಗಳಲ್ಲಿ Vodafone, Philips, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಎಂಜಿನಿಯರ್ ಪದವೀಧರರಾದ ಶ್ರೀ ವೋಹ್ರಾ ಅವರು 1995 ರಲ್ಲಿ ಭುವನೇಶ್ವರದ ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಿಂದ MBA ಪೂರ್ಣಗೊಳಿಸಿದರು ಮತ್ತು 2015 ರಲ್ಲಿ ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಸೀನಿಯರ್ ಲೀಡರ್‌ಶಿಪ್ ಪ್ರೋಗ್ರಾಮ್ ಅನ್ನು ಪೂರ್ಣಗೊಳಿಸಿದರು.