ಒಟ್ಟು ಮೊತ್ತದ ಪಾವತಿಯೆಂದರೆ, ಕ್ಯಾನ್ಸರ್ ಪತ್ತೆಯಾದ (ಪಾಲಿಸಿ ನಿಯಮಾವಳಿಯಲ್ಲಿ ವ್ಯಾಖ್ಯಾನಿಸಿದ ಹಂತದ ಪ್ರಕಾರ) ನಂತರ ಇನ್ಶೂರ್ಡ್‌ಗೆ ನೀಡಲಾಗುವ ನಿಗದಿತ ನಗದು ಪ್ರಯೋಜನವಾಗಿದೆ . ಐಕ್ಯಾನ್‌ನೊಂದಿಗೆ ನೀವು ಈ ಕೆಳಗಿನಂತೆ ಒಟ್ಟು ಸ್ಥಿರ ನಗದು ಪ್ರಯೋಜನವನ್ನು ಪಡೆಯಬಹುದು:
18 ಮತ್ತು 65 ವರ್ಷಗಳ ನಡುವಿನ ಯಾರಾದರೂ ಈ ಪಾಲಿಸಿಯನ್ನು ಖರೀದಿಸಬಹುದು.
ಈ ಪ್ರಯೋಜನದ ಅಡಿಯಲ್ಲಿ, ನಮ್ಮ ಪಾಲಿಸಿಯಲ್ಲಿ ವ್ಯಾಖ್ಯಾನಿಸಿದಂತೆ ಇನ್ಶೂರ್ಡ್ ವ್ಯಕ್ತಿಯು ನಿರ್ದಿಷ್ಟ ತೀವ್ರತೆಯ ಕ್ಯಾನ್ಸರ್‌ಗೆ ತುತ್ತಾದರೆ, ಮೂಲ ವಿಮಾ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ 60% ಅನ್ನು ಫಿಕ್ಸೆಡ್ ನಗದಾಗಿ ನಾವು ಪಾವತಿಸುತ್ತೇವೆ.
ಐಕ್ಯಾನ್ ಪ್ಲಾನ್‌ನ ಪಾಲಿಸಿ ಪ್ರೀಮಿಯಂಗಳು ಅಪಾಯ/ಸಂಭಾವ್ಯತೆಯ ಲೆಕ್ಕಾಚಾರವನ್ನು ಅವಲಂಬಿಸಿವೆ. ತಜ್ಞರು ಮತ್ತು ವೈದ್ಯರನ್ನು ಒಳಗೊಂಡ ನಮ್ಮ ಅಂಡರ್‌ರೈಟಿಂಗ್ ತಂಡ ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಅಪಾಯವನ್ನು ಲೆಕ್ಕ ಹಾಕುತ್ತದೆ:
a. ವಯಸ್ಸು
b. ವಿಮಾ ಮೊತ್ತ
c. ನಗರ
d. ಜೀವನಶೈಲಿ ಹವ್ಯಾಸಗಳು
ಐಕ್ಯಾನ್ ಕ್ಯಾನ್ಸರ್ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ಒದಗಿಸುವ ಏಕೈಕ ಪ್ಲಾನ್ ಆಗಿದೆ. ನಿಮ್ಮ ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ ಕೇವಲ ನಿಮ್ಮ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಮಾತ್ರ ಕವರ್ ಮಾಡುತ್ತದೆ. ಆದರೆ ಐಕ್ಯಾನ್‌ನೊಂದಿಗೆ ನೀವು ಒಳ-ರೋಗಿ, ಹೊರ-ರೋಗಿ, ಮತ್ತು ಡೇಕೇರ್ ವೆಚ್ಚಗಳು ಮತ್ತು ಈ ಕೆಳಗಿನ ಪ್ರಯೋಜನಗಳನ್ನು ಒಳಗೊಂಡಂತೆ ಕ್ಯಾನ್ಸರ್ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ಪಡೆಯುತ್ತೀರಿ:
ಹೌದು, ಈ ಪ್ಲಾನ್‌ನಲ್ಲಿ ನೀವು ಕ್ಯಾನ್ಸರ್ ವಿರುದ್ಧ ಹೊರರೋಗಿ ಚಿಕಿತ್ಸೆಗಾಗಿ ಕ್ಲೈಮ್ ಮಾಡಬಹುದು. ಹೊರರೋಗಿ ಚಿಕಿತ್ಸೆ ಅಥವಾ OPD ವೆಚ್ಚದಲ್ಲಿ ಸಮಾಲೋಚನೆ, ಡಯಗ್ನಾಸಿಸ್‌ಗಾಗಿ ಕ್ಲಿನಿಕ್/ಆಸ್ಪತ್ರೆಗೆ ಭೇಟಿ ನೀಡುವ ಮತ್ತು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗದೆ ಪಡೆಯುವ ಚಿಕಿತ್ಸೆಯ ವೆಚ್ಚವೂ ಒಳಗೊಂಡಿರುತ್ತದೆ.
Cancer is spreading fast in our country with 2.25 million cases, according to Cancerindia.org. Also, India has the lowest survival rate for this disease, with about 7 lakh deaths in 2018 alone.
ಆದ್ದರಿಂದ ನಿಮ್ಮ ನಿಯಮಿತ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಸ್ಟ್ಯಾಂಡ್‌ಅಲೋನ್ ಕ್ಯಾನ್ಸರ್ ಪ್ಲಾನ್ ಖರೀದಿಸಲು ನೀವು ಪರಿಗಣಿಸಿದ್ದರೆ, ಅದು ಪ್ರಯೋಜನಕಾರಿಯಾಗಬಹುದು.
ಈ ಕೆಳಗಿನ ಸಂದರ್ಭಗಳಲ್ಲಿ ಕ್ಯಾನ್ಸರ್ ಹೆಲ್ತ್ ಇನ್ಶೂರೆನ್ಸ್ ಅಗತ್ಯವಿದೆ ಎಂದು ನಮ್ಮ ತಜ್ಞರು ಸೂಚಿಸುತ್ತಾರೆ:
ಪ್ರಪೋಸಲ್ ಫಾರ್ಮ್‌ನಲ್ಲಿ ಘೋಷಣೆಗಳು ಇನ್ಶೂರೆನ್ಸ್ ಕಂಪನಿಗಳು ಅಪಾಯವನ್ನು ಮೌಲ್ಯಮಾಪನ ಮಾಡುವ, ಪ್ರೀಮಿಯಂ ಲೆಕ್ಕ ಹಾಕುವ ಮತ್ತು ಕ್ಲೈಮ್‌ಗಳನ್ನು ದೃಢೀಕರಿಸುವ ಆಧಾರದ ಮೇಲೆ ಇರುತ್ತವೆ. ನಿಮಗೆ ಅಗತ್ಯವಿದ್ದಾಗ ನಿಮ್ಮ ಹೆಲ್ತ್ ಇನ್ಶೂರೆನ್ಸ್‌ನ ಪ್ರಯೋಜನಗಳು ಮತ್ತು ಫೀಚರ್‌ಗಳನ್ನು ಬಳಸಲು, ನೀವು ಸರಿಯಾದ ಮಾಹಿತಿಯನ್ನು ಒದಗಿಸಲು ಶಿಫಾರಸು ಮಾಡಲಾಗುತ್ತದೆ. ಹಾಗೆ ಮಾಡಲು ವಿಫಲವಾದರೆ, ಪಾಲಿಸಿ ನೀಡುವ ಸಮಯದಲ್ಲಿ ಅಥವಾ ಕ್ಲೈಮ್ ಮಾಡುವ ಸಮಯದಲ್ಲಿ ತಿರಸ್ಕಾರಗಳಿಗೆ ಕೂಡ ಕಾರಣವಾಗಬಹುದು.
ಐಕ್ಯಾನ್ ಪಾಲಿಸಿಯಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ಪಾಲಿಸಿ ನೀಡಿದ ದಿನಾಂಕದಿಂದ 120 ದಿನಗಳ ಆರಂಭಿಕ ಕಾಯುವ ಅವಧಿ ಇರುತ್ತದೆ. ಅದನ್ನು ಹೊರತುಪಡಿಸಿ, ಕಾಯುವ ಅವಧಿಗಳು ಇರುವುದಿಲ್ಲ.
ಒಳಗೊಂಡಿರುವ ಅಪಾಯಗಳ ಆಧಾರದ ಮೇಲೆ ಪಾಲಿಸಿ ಅಡಿಯಲ್ಲಿರುವ ಹೊರಗಿಡುವಿಕೆಗಳು ಅನೇಕ ಉದ್ದೇಶಗಳನ್ನು ಪೂರೈಸಬಹುದು. ಈ ಪ್ಲಾನ್‌ನ ಸಾಮಾನ್ಯ ಹೊರಗಿಡುವಿಕೆಗಳ ಪಟ್ಟಿ ಈ ಕೆಳಗಿನಂತಿದೆ:
ಐಕ್ಯಾನ್ ಪಾಲಿಸಿಗಾಗಿ ವೈದ್ಯಕೀಯ ತಪಾಸಣೆಯು ಕಡ್ಡಾಯವಾಗಿಲ್ಲ, ಆದರೆ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ನಾವು ಅದನ್ನು ಕೇಳಬಹುದು.
ಹೌದು, ನೀವು ಭಾರತದಾದ್ಯಂತ ನಮ್ಮ ಯಾವುದೇ 13,000+ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಸೌಲಭ್ಯವನ್ನು ಪಡೆಯಬಹುದು.. ಯಾವುದೇ ಯೋಜಿತ ಚಿಕಿತ್ಸೆ ಅಥವಾ ಆಸ್ಪತ್ರೆಗೆ ದಾಖಲಾಗುವ ಕನಿಷ್ಠ 48 ಗಂಟೆಗಳ ಮೊದಲು ಅಥವಾ ತುರ್ತುಸ್ಥಿತಿಯ ಸಂದರ್ಭದಲ್ಲಿ ಪ್ರಕ್ರಿಯೆ ಅಥವಾ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಸೂಚನೆ ನೀಡಲು ನೆನಪಿಡಿ.
"ನೋ ಎವಿಡೆನ್ಸ್ ಆಫ್ ಡಿಸೀಸ್ (NED)" ನೊಂದಿಗೆ ವೈದ್ಯರ ಶಿಫಾರಸಿನ ಆಧಾರದ ಮೇಲೆ ಕನಿಷ್ಠ ಆರು ತಿಂಗಳವರೆಗೆ ಕ್ಯಾನ್ಸರ್ ಚಿಕಿತ್ಸೆಯನ್ನು ನಿಲ್ಲಿಸಿದ ನಂತರ, ವರ್ಷಕ್ಕೆ ಎರಡು ಬಾರಿ ₹ 3000 ವರೆಗಿನ ವೈದ್ಯಕೀಯ ಪರೀಕ್ಷೆಯ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.
ಹೌದು, ನೀವು ನಿಮ್ಮ ಪ್ರೀಮಿಯಂ ಅನ್ನು ಫ್ರೀಲುಕ್ ಅವಧಿಯಲ್ಲಿ ಮರಳಿ ಪಡೆಯಬಹುದು. ಹೇಗೆ ಎಂಬುದು ಇಲ್ಲಿದೆ:
ನೀವು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಪಡೆದ ದಿನದಿಂದ, ಎಚ್‌ಡಿಎಫ್‌ಸಿ ಎರ್ಗೋ ನಿಮಗೆ 15 ದಿನಗಳ ಫ್ರೀಲುಕ್ ಅವಧಿಯನ್ನು ಒದಗಿಸುತ್ತದೆ. ಈ ಅವಧಿಯಲ್ಲಿ, ನೀವು ನಿಮ್ಮ ಮನಸ್ಸು ಬದಲಾಯಿಸಿದರೆ ಅಥವಾ ಪಾಲಿಸಿಯ ಯಾವುದೇ ನಿಯಮ ಮತ್ತು ಷರತ್ತುಗಳಲ್ಲಿ ತೃಪ್ತಿ ಇಲ್ಲದಿದ್ದರೆ, ನೀವು ನಿಮ್ಮ ಪಾಲಿಸಿ ರದ್ದುಗೊಳಿಸಲು ಆಯ್ಕೆ ಮಾಡಬಹುದು.
ಈ ಪ್ರಯೋಜನದ ಅಡಿಯಲ್ಲಿ, ವಿಮಾದಾರರಿಗೆ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಕಾಯಿಲೆ ಇರುವುದು ಪತ್ತೆಯಾದರೆ, ಯಾವುದು ಮೊದಲೋ ಅದರಂತೆ, ಮೂಲ ವಿಮಾ ಮೊತ್ತದ ಮೇಲೆ 100% ವಿಮಾ ಮೊತ್ತವನ್ನು ನಾವು ಸ್ಥಿರ ನಗದಾಗಿ ಪಾವತಿಸುತ್ತೇವೆ:
ಎನರ್ಜಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿವೆ:
1. ಸಾಂಪ್ರದಾಯಿಕ ಕ್ಯಾನ್ಸರ್ ಚಿಕಿತ್ಸೆಗಳ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವ ಸ್ಟ್ಯಾಂಡರ್ಡ್ ಪ್ಲಾನ್ - ಕೀಮೋ ಥೆರಪಿ, ರೇಡಿಯೋಥೆರಪಿ, ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಅಂಗ ಕಸಿ, ಕ್ಯಾನ್ಸರ್ ಟಿಶ್ಯೂಗಳನ್ನು ಹೊರತೆಗೆಯುವುದು ಅಥವಾ ಅಂಗಗಳು/ಟಿಶ್ಯೂಗಳನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗಳು (ಆಂಕೋ-ಸರ್ಜರಿ).
2. ಹೆಚ್ಚುವರಿ ಕವರೇಜ್‌ನೊಂದಿಗೆ ಸ್ಟ್ಯಾಂಡರ್ಡ್ ಪಾಲಿಸಿಯ ಪ್ರಯೋಜನಗಳನ್ನು ಒದಗಿಸುವ ಸುಧಾರಿತ ಪ್ಲಾನ್ - ಪ್ರೋಟಾನ್ ಚಿಕಿತ್ಸೆ, ಇಮ್ಯುನೋಲಜಿ ಏಜೆಂಟ್‌ಗಳನ್ನು ಒಳಗೊಂಡಂತೆ ಇಮ್ಯುನೊಥೆರಪಿ, ಪರ್ಸನಲೈಸ್ಡ್ ಮತ್ತು ಟಾರ್ಗೆಟೆಡ್ ಥೆರಪಿ, ಹಾರ್ಮೋನಲ್ ಥೆರಪಿ ಅಥವಾ ಎಂಡೋಕ್ರೈನ್ ಮ್ಯಾನಿಪ್ಯುಲೇಶನ್, ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್.