Vishesh Debit Card

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಟ್ರಾವೆಲ್ ಪ್ರಯೋಜನಗಳು

  • ಭಾರತದ ಏರ್‌ಪೋರ್ಟ್‌ಗಳಲ್ಲಿ ಐಷಾರಾಮಿ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಮಾಡುವ ಮೂಲಕ ಸುಲಭವಾಗಿ ಪ್ರಯಾಣ ಮಾಡಿ. *

ಬ್ಯಾಂಕಿಂಗ್ ಪ್ರಯೋಜನಗಳು

ಫ್ಯೂಯಲ್ ಪ್ರಯೋಜನಗಳು

  • ಸರ್ಕಾರಿ ಪೆಟ್ರೋಲ್ ಔಟ್ಲೆಟ್‌ಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಸ್ವೈಪ್ ಮಷೀನ್‌ಗಳ ಮೂಲಕ ಮಾಡಿದ ಟ್ರಾನ್ಸಾಕ್ಷನ್‌ಗಳ ಮೇಲೆ ಶೂನ್ಯ ಫ್ಯೂಯಲ್ ಮೇಲ್ತೆರಿಗೆ*

Print

ಹೆಚ್ಚುವರಿ ಪ್ರಯೋಜನಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ಶುಲ್ಕಗಳು

ವಾರ್ಷಿಕ ಫೀಸ್:

  • ₹850 + ತೆರಿಗೆಗಳ ವಾರ್ಷಿಕ/ರಿನ್ಯೂವಲ್ ಫೀಸ್ ಪಾವತಿಸಿ* (ಅನ್ವಯ. 1ನೇ Aug'24)
  • ಎಚ್ ಡಿ ಎಫ್ ಸಿ ಬ್ಯಾಂಕ್ ವಿಶೇಷ ಪ್ರೀಮಿಯಂ ಬ್ಯಾಂಕಿಂಗ್ ಪ್ರೋಗ್ರಾಮ್‌ಗೆ ಸೇರಿಕೊಳ್ಳುವ ಮೂಲಕ ವಾರ್ಷಿಕ ಫೀಸ್ ಮನ್ನಾಗಳನ್ನು ಆನಂದಿಸಿ

ವಿವರವಾದ ಫೀಸ್ ಮತ್ತು ಶುಲ್ಕಗಳನ್ನು ಓದಿ

ಕೀ ಫ್ಯಾಕ್ಟ್ ಶೀಟ್

ಈಗಲೇ ನೋಡಿ

Fees & Charges

ಅರ್ಹತೆ ಮತ್ತು ಡಾಕ್ಯುಮೆಂಟೇಶನ್

Vishesh ಡೆಬಿಟ್ ಕಾರ್ಡ್ ಅನ್ನು Vishesh ಗ್ರಾಹಕರಿಗೆ ಮಾತ್ರ ನೀಡಲಾಗುತ್ತದೆ. ನಿವಾಸಿಗಳು ಮತ್ತು NRE ಗಳು ಇಬ್ಬರೂ ಅಪ್ಲೈ ಮಾಡಬಹುದು.

ನಿವಾಸಿ ಭಾರತೀಯರು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರಬೇಕು:

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳಿಗೆ Vishesh ಡೆಬಿಟ್ ಕಾರ್ಡ್ ನೀಡಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ಕಾರ್ಡ್ ಅವಧಿ ಮುಗಿದಾಗ, ನೋಂದಾಯಿತ ವಿಳಾಸಕ್ಕೆ ಹೊಸ ಕಾರ್ಡ್ ಅನ್ನು ಆಟೋಮ್ಯಾಟಿಕ್ ಆಗಿ ಕಳುಹಿಸಲಾಗುತ್ತದೆ.

Eligibility & Documentation

ನೆಟ್‌ಬ್ಯಾಂಕಿಂಗ್ ಮೂಲಕ ಅಪ್‌ಗ್ರೇಡ್ ಮಾಡಿ

ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮಾತ್ರ:

  • ಅನ್ವಯವಾಗುವಂತೆ, ಹೊಸ ಡೆಬಿಟ್ ಕಾರ್ಡ್‌ಗೆ ವಾರ್ಷಿಕ ಫೀಸ್ (ಜೊತೆಗೆ ಅನ್ವಯವಾಗುವ ತೆರಿಗೆಗಳು) ವಿಧಿಸಲಾಗುತ್ತದೆ. Vishesh ಗ್ರಾಹಕರಿಗೆ ಇದನ್ನು ಮನ್ನಾ ಮಾಡಲಾಗುತ್ತದೆ.
  • ಒಂದು ವೇಳೆ ನಿಮ್ಮ ಪ್ಯಾನ್ ವಿವರಗಳನ್ನು ಬ್ಯಾಂಕ್‌ನೊಂದಿಗೆ ಅಪ್ಡೇಟ್ ಮಾಡದಿದ್ದರೆ, ನಿಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ನೀವು ಮೌಲ್ಯಮಾಪಕರಲ್ಲದಿದ್ದರೆ ಅಥವಾ ಪ್ಯಾನ್ ಹೊಂದಿಲ್ಲದಿದ್ದರೆ, ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಲು ನಿಮ್ಮನ್ನು ಕೋರಲಾಗಿದೆ.
  • ಅಕೌಂಟಿನಲ್ಲಿ ಕಾರ್ಯಾಚರಣೆಯ ವಿಧಾನವು ಏಕೈಕ / ಯಾರಾದರೂ ಒಬ್ಬರು ಅಥವಾ ಸರ್ವೈವರ್ ಇರುವ ಸೇವಿಂಗ್ಸ್ / ಸ್ಯಾಲರಿ ಅಕೌಂಟ್ ಹೋಲ್ಡರ್‌ಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ.
  • ಈ ಸೌಲಭ್ಯವು ಮೈನರ್ ಮತ್ತು NRO ಅಕೌಂಟ್‌ಗಳಿಗೆ ಲಭ್ಯವಿರುವುದಿಲ್ಲ.
  • ಡೆಬಿಟ್ ಕಾರ್ಡ್ ನೀಡುವ ಉದ್ದೇಶಕ್ಕಾಗಿ, KYC ನಿಯಮಗಳ ಅಡಿಯಲ್ಲಿ ಸರಿಯಾದ ಪರಿಶೀಲನಾ ಅವಶ್ಯಕತೆಗಳ ಜೊತೆಗೆ, ಬ್ಯಾಂಕ್ ಶಾಶ್ವತ ಅಕೌಂಟ್ ನಂಬರ್ (ಪ್ಯಾನ್) ಅಥವಾ ಆದಾಯ ತೆರಿಗೆ ಕಾಯ್ದೆ / ನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಫಾರ್ಮ್ ನಂಬರ್ 60 ಅಥವಾ 61 ರಲ್ಲಿ ಪರ್ಯಾಯವಾಗಿ ಘೋಷಣೆಯನ್ನು ಪಡೆಯಬೇಕು.
  • ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಕೋರಿಕೆಯ ಯಶಸ್ವಿ ಪ್ರಕ್ರಿಯೆಗೆ ಒಳಪಟ್ಟು ಹೊಸ ಅಪ್‌ಗ್ರೇಡ್ ಮಾಡಿದ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಅಪ್‌ಗ್ರೇಡ್ ಆದ ಡೆಬಿಟ್ ಕಾರ್ಡ್ ಅನ್ನು ಮುಂದಿನ 5 ಕೆಲಸದ ದಿನಗಳ ಒಳಗೆ ದಾಖಲೆಯಲ್ಲಿರುವ ಮೇಲಿಂಗ್ ವಿಳಾಸಕ್ಕೆ ಡೆಲಿವರಿ ಮಾಡಲಾಗುತ್ತದೆ (ಮೆಟ್ರೋ ಲೊಕೇಶನ್‌ಗಳಿಗೆ). ನಿಮ್ಮ ಲೊಕೇಶನ್ ನಿರ್ದಿಷ್ಟ ಡೆಲಿವರಿ ಸಮಯವನ್ನು ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
  • ನಿಮ್ಮ ಹೊಸ ಅಪ್‌ಗ್ರೇಡ್ ಆದ ಡೆಬಿಟ್ ಕಾರ್ಡ್ ಸ್ವೀಕರಿಸಿದ 3 ಕೆಲಸದ ದಿನಗಳ ಒಳಗೆ ನಿಮ್ಮ ಹಳೆಯ ಡೆಬಿಟ್ ಕಾರ್ಡ್ ಅನ್ನು ಡಿಆ್ಯಕ್ಟಿವೇಟ್ ಮಾಡಲಾಗುತ್ತದೆ. (ಒಂದು ವೇಳೆ ಬ್ರಾಂಚ್ ನಿಮ್ಮ ಹೊಸ ಡೆಬಿಟ್ ಕಾರ್ಡ್ ಅನ್ನು ಕಳುಹಿಸಿದ್ದರೆ, ಹೊಸ ಡೆಬಿಟ್ ಕಾರ್ಡ್ ರವಾನೆಯ ದಿನಾಂಕದಿಂದ 15 ದಿನಗಳ ನಂತರ ಹಳೆಯ ಡೆಬಿಟ್ ಕಾರ್ಡ್ ಅನ್ನು ಡಿ-ಆ್ಯಕ್ಟಿವೇಟ್ ಮಾಡಲಾಗುತ್ತದೆ)

ನೆಟ್‌ಬ್ಯಾಂಕಿಂಗ್ ಮೂಲಕ ಎಚ್ ಡಿ ಎಫ್ ಸಿ ಬ್ಯಾಂಕ್ ವಿಶೇಷ ಡೆಬಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Upgrade through NetBanking

ಹೆಚ್ಚುವರಿ ಖುಷಿ

ಹೆಚ್ಚಿನ ಡೆಬಿಟ್ ಕಾರ್ಡ್ ಮಿತಿಗಳು

  • ದೈನಂದಿನ ಡೊಮೆಸ್ಟಿಕ್ ಶಾಪಿಂಗ್ ಮಿತಿಗಳು: ₹5 ಲಕ್ಷ
  • ದೈನಂದಿನ ಡೊಮೆಸ್ಟಿಕ್ ATM ವಿತ್‌ಡ್ರಾವಲ್ ಮಿತಿಗಳು: ₹1 ಲಕ್ಷ
  • ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಲ್ಲಿ ಪ್ರತಿ ಟ್ರಾನ್ಸಾಕ್ಷನ್‌ಗೆ ಗರಿಷ್ಠ ₹2,000 ಮಿತಿಯೊಂದಿಗೆ ಮರ್ಚೆಂಟ್ ಸಂಸ್ಥೆಗಳಲ್ಲಿ ನಗದು ವಿತ್‌ಡ್ರಾವಲ್ ಸೌಲಭ್ಯವನ್ನು ಈಗ ಪಡೆಯಬಹುದು, ಪ್ರತಿ ತಿಂಗಳಿಗೆ POS ಮಿತಿಯಲ್ಲಿ ಗರಿಷ್ಠ ನಗದು ₹10,000/-
  • ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿಯನ್ನು ಬದಲಾಯಿಸಲು (ಹೆಚ್ಚು ಅಥವಾ ಕಡಿಮೆ ಮಾಡಲು) ದಯವಿಟ್ಟು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ. ಮಿತಿಗಳನ್ನು ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಅನುಮತಿಸಬಹುದಾದ ಮಿತಿಗಳವರೆಗೆ ಹೆಚ್ಚಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಭದ್ರತಾ ಕಾರಣಗಳಿಗಾಗಿ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ಅಕೌಂಟ್ ತೆರೆಯುವ ದಿನಾಂಕದಿಂದ ಮೊದಲ 6 ತಿಂಗಳಿಗೆ ದಿನಕ್ಕೆ ₹0.5 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. 6 ತಿಂಗಳಿಗಿಂತ ಹಳೆಯ ಅಕೌಂಟ್‌ಗಳಿಗೆ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹2 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಜಾರಿಗೆ ತರಲಾಗುತ್ತದೆ.

ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಅನ್ನು ATM ಮತ್ತು POS ಬಳಕೆಗೆ ಸಕ್ರಿಯಗೊಳಿಸಲಾಗಿದ್ದು, ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ FAQ ಗಳನ್ನು ನೋಡಿ.

Vishesh ಗ್ರಾಹಕರಿಗೆ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಆಫರ್

  • ಈ ಡೆಬಿಟ್ ಕಾರ್ಡ್ ಭಾರತದಾದ್ಯಂತ ಏರ್‌ಪೋರ್ಟ್‌ಗಳಲ್ಲಿ ನಿಮಗೆ ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್ ನೀಡುತ್ತದೆ
  • ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್ - ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ 2.
  • 1ನೇ ಜನವರಿ 2024 ರಿಂದ ಅನ್ವಯವಾಗುವಂತೆ, ನೀವು ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹5,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಮಾತ್ರ ಕಾಂಪ್ಲಿಮೆಂಟರಿ ಲೌಂಜ್ ಪ್ರಯೋಜನವನ್ನು ಪಡೆಯುತ್ತೀರಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೆಬಿಟ್ ಕಾರ್ಡ್ - EMI

  • ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಉಡುಪುಗಳು, ಸ್ಮಾರ್ಟ್ ಫೋನ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರಮುಖ ಬ್ರ್ಯಾಂಡ್‌ಗಳ ಮೇಲೆ ನೋ ಕಾಸ್ಟ್ EMI ಅನ್ನು ಆನಂದಿಸಿ
  • ₹5,000/- ಕ್ಕಿಂತ ಹೆಚ್ಚಿನ ಯಾವುದೇ ಖರೀದಿಗಳನ್ನು EMI ಆಗಿ ಪರಿವರ್ತಿಸಿ
  • ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಪೂರ್ವ-ಅನುಮೋದಿತ ಅರ್ಹ ಮೊತ್ತವನ್ನು ಪರಿಶೀಲಿಸಲು
  • ವಿವರವಾದ ಆಫರ್‌ಗಳಿಗಾಗಿ ನಿಮ್ಮ ಬ್ಯಾಂಕ್ ನೋಂದಾಯಿತ ಮೊಬೈಲ್ ನಂಬರ್‌ನಿಂದ 5676712 ಗೆ "MYHDFC" ಎಂದು SMS ಮಾಡಿ ಮತ್ತು ನಿಯಮ ಮತ್ತು ಷರತ್ತುಗಳಿಗಾಗಿ ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: hdfcbank.com/easyemi

ಮಾನ್ಯತೆ:

  • ರಿಡೀಮ್ ಮಾಡದ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಸಂಗ್ರಹವಾದ 12 ತಿಂಗಳ ನಂತರ ಗಡುವು ಮುಗಿಯುತ್ತವೆ/ ಲ್ಯಾಪ್ಸ್ ಆಗುತ್ತವೆ

SmartBuy ಮೂಲಕ ರಿವಾರ್ಡ್‌ಗಳನ್ನು ಗರಿಷ್ಠಗೊಳಿಸಿ

  • PayZapp ಮತ್ತು smartbuy ಮೂಲಕ ಟ್ರಾನ್ಸಾಕ್ಷನ್ ಮಾಡಿ ನಿಮ್ಮ ಡೆಬಿಟ್ ಕಾರ್ಡ್ ಮೇಲೆ 5% ವರೆಗೆ ಕ್ಯಾಶ್‌ಬ್ಯಾಕ್ ಗಳಿಸಿ : https://offers.smartbuy.hdfcbank.com/offer_details/15282

ರಿಡೀಮ್ ಮಾಡುವುದು ಹೇಗೆ?

1. ನೆಟ್‌ಬ್ಯಾಂಕಿಂಗ್ ಮೂಲಕ  
ಲಾಗಿನ್ >> ಪಾವತಿ >> ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳ ಸಾರಾಂಶ >> ಕ್ರಮಗಳು >> ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ

ಶೂನ್ಯ ವೆಚ್ಚದ ಹೊಣೆಗಾರಿಕೆ

  • ಕಾರ್ಡ್ ಕಳೆದಿರುವುದನ್ನು ವರದಿ ಮಾಡುವ 30 ದಿನಗಳ ಮೊದಲು ನಡೆಯುವ ಯಾವುದೇ ಮೋಸದ ಮಾರಾಟದ ಟ್ರಾನ್ಸಾಕ್ಷನ್‌ಗಳಿಗೆ ಶೂನ್ಯ ವೆಚ್ಚದ ಹೊಣೆಗಾರಿಕೆ.
Added Delights

MyCards ಮೂಲಕ ಕಾರ್ಡ್ ಕಂಟ್ರೋಲ್

MyCards, ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆಗಿದ್ದು, Vishesh ಡೆಬಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ. 

  • ಡೆಬಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ
  • ಆನ್‌ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಇತ್ಯಾದಿಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ. 
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ / ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ
  • ಕಾರ್ಡ್ ಬ್ಲಾಕ್ ಮಾಡುವುದು/ ಮರು-ವಿತರಣೆ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
Card Control via MyCards

ಕಾಂಟಾಕ್ಟ್‌ಲೆಸ್ ಪಾವತಿ 

ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗಾಗಿ ವಿಶೇಷ ಡೆಬಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.

(Note: In India, payment through contactless mode is allowed for a maximum of ₹5,000 for a single transaction where you are not asked to input your Credit Card PIN. However, if the amount is higher than or equal to ₹,5000, the Card holder must enter the Credit Card PIN for security reasons. You may check for the Contactless Network Symbol on your card.) 

Contactless Payment 

ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು

  • ಟೆಲಿಕಾಂ, ಯುಟಿಲಿಟಿಗಳಲ್ಲಿ ಖರ್ಚು ಮಾಡಿದ ಪ್ರತಿ ₹100 ಮೇಲೆ 1 ಕ್ಯಾಶ್‌ಬ್ಯಾಕ್ ಪಾಯಿಂಟ್ ಪಡೆಯಿರಿ.
  • ದಿನಸಿ, ಸೂಪರ್‌ಮಾರ್ಕೆಟ್, ರೆಸ್ಟೋರೆಂಟ್, ಉಡುಪುಗಳು ಮತ್ತು ಮನರಂಜನೆಗೆ ಖರ್ಚು ಮಾಡಿದ ಪ್ರತಿ ₹200 ಮೇಲೆ 1 ಕ್ಯಾಶ್‌ಬ್ಯಾಕ್ ಪಾಯಿಂಟ್ ಪಡೆಯಿರಿ
  • ಪ್ರತಿ ತಿಂಗಳಿಗೆ ಪ್ರತಿ ಅಕೌಂಟ್‌ಗೆ ಗರಿಷ್ಠ ಮಿತಿ ₹750
  • ಮೇಲಿನ ಒಂದನ್ನು ಹೊರತುಪಡಿಸಿ ಇತರ ಎಲ್ಲಾ ಕೆಟಗರಿಗಳಿಗೆ ಯಾವುದೇ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳಿಲ್ಲ.
  • ಗ್ರಾಹಕರು ಅರ್ಹ MCC (ಮರ್ಚೆಂಟ್ ಕೆಟಗರಿ ಕೋಡ್) ನಲ್ಲಿ ಮಾತ್ರ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
  • ಒಂದು ವೇಳೆ ಖರೀದಿ / ಟ್ರಾನ್ಸಾಕ್ಷನ್ ಅನ್ನು ರಿಟರ್ನ್/ ಕ್ಯಾನ್ಸಲ್ ಮಾಡಿದರೆ/ ಹಿಂದಿರುಗಿಸಿದ್ದರೆ, ಟ್ರಾನ್ಸಾಕ್ಷನ್‌ಗಳಿಗಾಗಿ ಪೋಸ್ಟ್ ಮಾಡಿದ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಹಿಂದಿರುಗಿಸಲಾಗುತ್ತದೆ.
  • ನೆಟ್‌ಬ್ಯಾಂಕಿಂಗ್ ಮೂಲಕ ಕನಿಷ್ಠ 250 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬೇಕು, ಲಭ್ಯತೆಗೆ ಒಳಪಟ್ಟು ರಿಡೆಂಪ್ಶನ್ ಮೇಲೆ ಗರಿಷ್ಠ ಕ್ಯಾಪಿಂಗ್ ಇಲ್ಲ.
  • ಟ್ರಾನ್ಸಾಕ್ಷನ್ ದಿನಾಂಕದಿಂದ 2 ಕೆಲಸದ ದಿನಗಳಲ್ಲಿ ಗ್ರಾಹಕರು ನೆಟ್‌ಬ್ಯಾಂಕಿಂಗ್‌ನಲ್ಲಿ ಪಾಯಿಂಟ್‌ಗಳನ್ನು ನೋಡಬಹುದು.
  • ಅರ್ಹ ಮರ್ಚೆಂಟ್ ಕೆಟಗರಿ ಕೋಡ್‌ಗಳ (MCC) ಮೇಲೆ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸಲಾಗುತ್ತದೆ.
  • ಬಿಸಿನೆಸ್ ಸ್ವರೂಪವನ್ನು ಆಧರಿಸಿ ಕಾರ್ಡ್ ನೆಟ್ವರ್ಕ್‌ಗಳಿಂದ (Visa/ MasterCard) MCC ಗಳನ್ನು ವರ್ಗೀಕರಿಸಲಾಗುತ್ತದೆ
  • ಡೆಬಿಟ್ ಕಾರ್ಡ್ ಮೂಲಕ ಮಾಡಲಾದ ಕ್ರೆಡಿಟ್ ಕಾರ್ಡ್ BillPay ಟ್ರಾನ್ಸಾಕ್ಷನ್‌ಗಳು ತಕ್ಷಣದ ಪರಿಣಾಮದೊಂದಿಗೆ ಯಾವುದೇ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸುವುದಿಲ್ಲ ಏಕೆಂದರೆ ಇದು ಅದಕ್ಕೆ ಅರ್ಹ ಕೆಟಗರಿಯಾಗಿಲ್ಲ.

ಉತ್ಪನ್ನದ ಫೀಚರ್ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಮುಂದಿನ 12 ತಿಂಗಳೊಳಗೆ ರಿಡೆಂಪ್ಶನ್‌ಗೆ ಮಾನ್ಯವಾಗಿರುತ್ತವೆ, ಆ ನಂತರ ನಿಮ್ಮ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಲ್ಯಾಪ್ಸ್ ಆಗುತ್ತವೆ. 

ಫೆಬ್ರವರಿ'2020 ರಿಂದ ಅನ್ವಯವಾಗುವಂತೆ ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಗಳಿಸಿದ ಎಲ್ಲಾ ಪ್ರಮೋಶನಲ್ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು 3 ತಿಂಗಳ ಮಾನ್ಯತೆಯನ್ನು ಹೊಂದಿರುತ್ತವೆ, ಇದರ ನಂತರ ಸಂಗ್ರಹಿಸಿದ ಪಾಯಿಂಟ್‌ಗಳು ಗಡುವು ಮುಗಿಯುತ್ತವೆ.

ಅಕೌಂಟ್ ಕ್ಲೋಸರ್ ನಂತರ ಗ್ರಾಹಕರು ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳ ರಿಡೆಂಪ್ಶನ್‌ಗೆ ಅರ್ಹರಾಗಿಲ್ಲ.

CashBack Points

ಪ್ರಮುಖ ಟಿಪ್ಪಣಿ

  • ದಿನಾಂಕ 15 ಜನವರಿ 2020 ರ RBI ಮಾರ್ಗಸೂಚಿ RBI/2019-2020/142 DPSS.CO.PD ನಂ. 1343/02.14.003/2019-20 ಪ್ರಕಾರ, 1ನೇ ಅಕ್ಟೋಬರ್'2020 ರಿಂದ ಅನ್ವಯವಾಗುವಂತೆ ನೀಡಲಾದ ಎಲ್ಲಾ ಡೆಬಿಟ್ ಕಾರ್ಡ್‌ಗಳು, ಡೊಮೆಸ್ಟಿಕ್ (POS ಮತ್ತು ATM) ಬಳಕೆಗೆ ಮಾತ್ರ ಸಕ್ರಿಯಗೊಳಿಸಲಾಗುತ್ತದೆ ಮತ್ತು ಡೊಮೆಸ್ಟಿಕ್ (ಇ-ಕಾಮರ್ಸ್ ಮತ್ತು ಕಾಂಟಾಕ್ಟ್‌ಲೆಸ್) ಮತ್ತು ಇಂಟರ್ನ್ಯಾಷನಲ್ ಬಳಕೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ಬಳಕೆದಾರರ ಅನುಕೂಲವನ್ನು ಸುಧಾರಿಸಲು ಮತ್ತು ಕಾರ್ಡ್ ಟ್ರಾನ್ಸಾಕ್ಷನ್‌ಗಳ ಭದ್ರತೆಯನ್ನು ಹೆಚ್ಚಿಸಲು ಹೀಗೆ ಮಾಡಲಾಗಿದೆ.
  • ನೀವು ATM/ POS/ ಇ-ಕಾಮರ್ಸ್/ ಕಾಂಟಾಕ್ಟ್‌ಲೆಸ್ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳ ಮಿತಿಗಳನ್ನು ಸಕ್ರಿಯಗೊಳಿಸಬಹುದು ಅಥವಾ ಮಾರ್ಪಾಡು ಮಾಡಬಹುದು ದಯವಿಟ್ಟು MyCards / ನೆಟ್‌ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್‌ಗೆ ಭೇಟಿ ನೀಡಿ/ WhatsApp ಬ್ಯಾಂಕಿಂಗ್ - 70-700-222-22/ Eva ಬಳಿ ಕೇಳಿ / ಟೋಲ್-ಫ್ರೀ ನಂಬರ್ 1800 1600 / 1800 2600 ಗೆ ಕರೆ ಮಾಡಿ (8 AM ನಿಂದ 8 PM ವರೆಗೆ) ವಿದೇಶದಲ್ಲಿ ಪ್ರಯಾಣಿಸುವ ಗ್ರಾಹಕರು ನಮ್ಮನ್ನು 022-61606160 ನಲ್ಲಿ ಸಂಪರ್ಕಿಸಬಹುದು.
Important Note

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ಈ (ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು) ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳಿಗೆ ಸಂಬಂಧಿಸಿದ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿವೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟ್‌ಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
  • ಪ್ರಮುಖ ಮಾಹಿತಿ: ನಿಮ್ಮ ಕಾರ್ಡ್ ಸದಸ್ಯರ ಅಗ್ರೀಮೆಂಟ್, ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ಮತ್ತು ನಿಮ್ಮ ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಇತರ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್ ಆಗಿ ಅಕ್ಸೆಸ್ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿ.
Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್‌ನ Vishesh ಡೆಬಿಟ್ ಕಾರ್ಡ್ ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್, ಡೈನಿಂಗ್ ಮೇಲೆ ರಿಯಾಯಿತಿಗಳು, ಫ್ಯೂಯಲ್ ಮೇಲ್ತೆರಿಗೆ ಮನ್ನಾಗಳು ಮತ್ತು ವರ್ಧಿತ ಭದ್ರತಾ ಫೀಚರ್‌ಗಳಂತಹ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ವಿಶೇಷ ಆಫರ್‌ಗಳು ಮತ್ತು ರಿವಾರ್ಡ್ ಕಾರ್ಯಕ್ರಮಗಳಿಗೆ ಅಕ್ಸೆಸ್ ಒದಗಿಸುತ್ತದೆ, ಇದು ಅನುಕೂಲಕರ ಮತ್ತು ಲಾಭದಾಯಕ ಟ್ರಾನ್ಸಾಕ್ಷನ್‌ಗಳಿಗೆ ಆದ್ಯತೆಯ ಆಯ್ಕೆಯಾಗಿದೆ. 

ಎಚ್ ಡಿ ಎಫ್ ಸಿ ಬ್ಯಾಂಕ್ Vishesh ಡೆಬಿಟ್ ಕಾರ್ಡ್ ವಾರ್ಷಿಕ/ರಿನ್ಯೂವಲ್ ಫೀಸ್ ₹750 + ಅನ್ವಯವಾಗುವ ತೆರಿಗೆಗಳು. ಆದಾಗ್ಯೂ, ಅರ್ಹ Vishesh ಗ್ರಾಹಕರಿಗೆ ಈ ಫೀಸ್ ಮನ್ನಾ ಮಾಡಲಾಗುತ್ತದೆ

ಎಚ್ ಡಿ ಎಫ್ ಸಿ ಬ್ಯಾಂಕ್ ವಿಶೇಷ ಡೆಬಿಟ್ ಕಾರ್ಡ್‌ನಲ್ಲಿ ದೈನಂದಿನ ಡೊಮೆಸ್ಟಿಕ್ ಶಾಪಿಂಗ್ ಮಿತಿ ₹5 ಲಕ್ಷ. ದೈನಂದಿನ ಡೊಮೆಸ್ಟಿಕ್ ATM ವಿತ್‌ಡ್ರಾವಲ್ ಮಿತಿ ₹1 ಲಕ್ಷ.

Vishesh ಡೆಬಿಟ್ ಕಾರ್ಡ್ ಎಚ್ ಡಿ ಎಫ್ ಸಿ ಬ್ಯಾಂಕ್‌ನ ವಿಶೇಷ ಕೊಡುಗೆಯಾಗಿದ್ದು, ಇದು ವರ್ಧಿತ ಸೆಕ್ಯೂರಿಟಿ ಫೀಚರ್‌ಗಳು, ಹೆಚ್ಚಿನ ಟ್ರಾನ್ಸಾಕ್ಷನ್ ಮಿತಿಗಳು ಮತ್ತು ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಒದಗಿಸುತ್ತದೆ.