ಒಂದು ವೇಳೆ ಇನ್ಶೂರ್ಡ್ ವ್ಯಕ್ತಿಯು ಭಾರತದ ಹೊರಗಿನ ಎಲ್ಲಾ ಸ್ಥಳಗಳಲ್ಲಿ (ಅಂತರರಾಷ್ಟ್ರೀಯವಾಗಿ) ಪ್ರವಾಸದಲ್ಲಿದ್ದರೆ ಮತ್ತು ಅಥವಾ ರಜಾದಿನಗಳಲ್ಲಿ ಪ್ರಯಾಣಿಸುತ್ತಿದ್ದರೆ, ಪ್ರಯಾಣಿಸುವ ವಾಹನಕ್ಕೆ ಬೆಂಕಿ, ಕಳ್ಳತನ ಮತ್ತು ಅಪಘಾತದಿಂದಾಗಿ ಕಾರ್ಡ್ ಹೋಲ್ಡರ್‌ನ ವೈಯಕ್ತಿಕ ಸಾಮಾನುಗಳ ಆಂತರಿಕ ಮೌಲ್ಯದ ಮಟ್ಟಿಗೆ ಹಾನಿಯಾದರೆ ಇದು ಅನ್ವಯವಾಗುತ್ತದೆ.
ಚೆಕ್ಡ್ ಬ್ಯಾಗೇಜ್ ಇನ್ಶೂರೆನ್ಸ್ ನಷ್ಟದ ಅಡಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಅಂಗೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು, ಪ್ರೋಗ್ರಾಮ್ ದಿನಾಂಕಕ್ಕಿಂತ 3 ತಿಂಗಳ ಒಳಗೆ ಕಾರ್ಡ್ ಹೋಲ್ಡರ್ ಡೆಬಿಟ್ ಕಾರ್ಡ್ ಬಳಸಿ ಕನಿಷ್ಠ ಒಂದು ಖರೀದಿ ಟ್ರಾನ್ಸಾಕ್ಷನ್ ನಡೆಸಬೇಕಾಗುತ್ತದೆ.
ಬೆಂಕಿ ಮತ್ತು ದರೋಡೆ/ ಚೆಕ್ಡ್ ಬ್ಯಾಗೇಜ್ ಇನ್ಶೂರೆನ್ಸ್ ಕ್ಲೈಮ್ ಮಾಡಲು, ಕಾರ್ಡ್ ಹೋಲ್ಡರ್ ಯಾವುದೇ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಘಟನೆ ನಡೆದ ದಿನಾಂಕದಿಂದ 30 ದಿನಗಳ ಒಳಗೆ ಈ ಕೆಳಗೆ ನಮೂದಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಬ್ರಾಂಚ್ ಗ್ರಾಹಕರು ಅನುಸರಿಸಬೇಕಾದ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಮಾರ್ಗದರ್ಶನ ನೀಡುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಸ್ವೀಕರಿಸುವುದು ಹೊಣೆಗಾರಿಕೆಯ ಸ್ವೀಕೃತಿಯಲ್ಲ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಎಚ್ ಡಿ ಎಫ್ ಸಿ ಬ್ಯಾಂಕ್ ಪಡೆದ ಕ್ಲೈಮ್ ಅನ್ನು ಇನ್ಶೂರೆನ್ಸ್ ಕಂಪನಿಯಿಂದ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ತನಿಖೆ ಮಾಡಲಾಗುತ್ತದೆ ಮತ್ತು ಅವರ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ. ಇನ್ಶೂರೆನ್ಸ್ ಕಂಪನಿಯಿಂದ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಎಚ್ ಡಿ ಎಫ್ ಸಿ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ
*ಕಾರ್ಡ್ ಹೋಲ್ಡರ್ ಅಗ್ರೀಮೆಂಟ್ ಪ್ರಕಾರ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.