ಶ್ರೀ ಸುಂದರೇಶನ್ M ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ರಿಟೇಲ್ ಕ್ರೆಡಿಟ್ ಸ್ಟ್ರಾಟಜಿ ಮತ್ತು ಕಂಟ್ರೋಲ್ ವರ್ಟಿಕಲ್ ಗ್ರೂಪ್ ಮುಖ್ಯಸ್ಥರಾಗಿದ್ದಾರೆ. ಈ ಸ್ಥಾನದಲ್ಲಿ, ಅವರು ಸಂಪೂರ್ಣ ರಿಟೇಲ್ ಲೆಂಡಿಂಗ್ ಮತ್ತು ಪಾವತಿ ಬಿಸಿನೆಸ್‌ಗಾಗಿ ಕ್ರೆಡಿಟ್ ಕಾರ್ಯತಂತ್ರ, ಅಪಾಯ ವಿಶ್ಲೇಷಣೆ ಮತ್ತು ನಾವೀನ್ಯತೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ, ಕ್ರೆಡಿಟ್ ಬ್ಯೂರೋ ಸಂಬಂಧಗಳನ್ನು ನಿರ್ವಹಿಸುತ್ತಾರೆ ಮತ್ತು ಕಮರ್ಷಿಯಲ್ ವೆಹಿಕಲ್‌ಗಳು, ಮೂಲಸೌಕರ್ಯ, ಆರೋಗ್ಯ ರಕ್ಷಣೆ ಮತ್ತು ಆಟೋಮೊಬೈಲ್ ಡೀಲರ್ ಫೈನಾನ್ಸ್‌ನ SME ವರ್ಟಿಕಲ್‌ಗಳ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ.
ಶ್ರೀ ಸುಂದರೇಶನ್ ಅವರು 2002 ರಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡುವ ಪ್ರಮುಖ ತಂಡದ ಭಾಗವಾಗಿ ಬ್ಯಾಂಕ್‌ಗೆ ಸೇರಿದರು ಹಾಗೂ ಬ್ಯಾಂಕ್‌ನ ರಿಟೇಲ್ ಅಸೆಟ್‌ಗಳು ಮತ್ತು ಪಾವತಿಗಳ ಬಿಸಿನೆಸ್‌ನ ಬೆಳವಣಿಗೆ ಮತ್ತು ಅತ್ಯುತ್ತಮ ಪೋರ್ಟ್‌ಫೋಲಿಯೋ ಗುಣಮಟ್ಟದ ಅವಿಭಾಜ್ಯ ಅಂಗವಾಗಿದ್ದಾರೆ. ಈ ದೀರ್ಘಾವಧಿಯಲ್ಲಿ, ರಿಟೇಲ್ ಪ್ರಾಡಕ್ಟ್‌ಗಳಿಗೆ ಪಾಲಿಸಿ, ಅಂಡರ್‌ರೈಟಿಂಗ್, ಪ್ರಕ್ರಿಯೆ ಕಾರ್ಯತಂತ್ರ ಮತ್ತು ಲೋನ್ ನಿರ್ವಹಣೆಯನ್ನು ಒಳಗೊಂಡು ರಿಟೇಲ್ ರಿಸ್ಕ್ ಮ್ಯಾನೇಜ್ಮೆಂಟ್‌ನಲ್ಲಿ ಅವರು ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಶ್ರೀ ಸುಂದರೇಶನ್ ಅವರು ರಿಟೇಲ್ ಫೈನಾನ್ಶಿಯಲ್ ಸರ್ವಿಸ್‌ಗಳ ಉದ್ಯಮದಲ್ಲಿ 28 ವರ್ಷಗಳ ಒಟ್ಟಾರೆ ಅನುಭವವನ್ನು ಹೊಂದಿದ್ದಾರೆ. ಬ್ಯಾಂಕ್‌ಗೆ ಸೇರುವ ಮೊದಲು, ಅವರು 7 ವರ್ಷಗಳವರೆಗೆ ಭಾರತದಲ್ಲಿ GE Capital ನ ರಿಟೇಲ್ ಬಿಸಿನೆಸ್‌ನಲ್ಲಿ ಕೆಲಸ ಮಾಡಿದರು ಮತ್ತು ತಮ್ಮ ಕೊನೆಯ ಹುದ್ದೆಯಲ್ಲಿ ಬೆಂಗಳೂರಿನ GE Countrywide ನ ಬ್ರಾಂಚ್ ಆಪರೇಷನ್ಸ್ ಮ್ಯಾನೇಜರ್ ಆಗಿದ್ದರು.
ಶ್ರೀ ಸುಂದರೇಶನ್ ಕೊಯಂಬತ್ತೂರಿನ PSG ಟೆಕ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿದ್ದಾರೆ ಮತ್ತು IIM-ಲಕ್ನೋದಿಂದ ತಮ್ಮ ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಸೀನಿಯರ್ ಎಕ್ಸಿಕ್ಯೂಟಿವ್ ಲೀಡರ್‌ಶಿಪ್ ಪ್ರೋಗ್ರಾಮ್ ಅನ್ನು ಪೂರ್ಣಗೊಳಿಸಿದ್ದಾರೆ.
ಅವರು ಉತ್ಸಾಹಿ ಮನೋಭಾವ ಹೊಂದಿದ್ದಾರೆ ಮತ್ತು ಮುಂಬೈ ಮ್ಯಾರಥಾನ್‌ನಲ್ಲಿ ಯಾವಾಗಲೂ ಪಾಲ್ಗೊಳ್ಳುತ್ತಾರೆ. ಅವರು ಮೌಂಟ್ ಕಿಲಿಮಂಜಾರೋ ಶಿಖರಾರೋಹಣ ಸೇರಿದಂತೆ ಹಲವಾರು ಎತ್ತರದ ಚಾರಣಗಳನ್ನು ಮಾಡಿದ್ದಾರೆ.