ಸ್ವತಂತ್ರ ನಿರ್ದೇಶಕರು

ಡಾ. (ಶ್ರೀಮತಿ) ಸುನೀತಾ ಮಹೇಶ್ವರಿ

ಡಾ. (ಶ್ರೀಮತಿ) ಸುನೀತಾ ಮಹೇಶ್ವರಿ ಬ್ಯಾಂಕ್ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿದ್ದಾರೆ. 

ಡಾ. (ಶ್ರೀಮತಿ) ಸುನೀತಾ ಮಹೇಶ್ವರಿ ಅವರು US ಮಂಡಳಿ ಪ್ರಮಾಣಿತ ಮಕ್ಕಳ ಹೃದ್ರೋಗ ತಜ್ಞರಾಗಿದ್ದು, ಉಸ್ಮಾನಿಯಾ ವೈದ್ಯಕೀಯ ಕಾಲೇಜ್‌ನಲ್ಲಿ MBBS ಪದವಿ ಮತ್ತು ನಂತರ ದೆಹಲಿಯ AIIMS ಮತ್ತು US ನ ಯೇಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಮೂವತ್ತು (30) ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಅವರು US ಮತ್ತು ಭಾರತದಲ್ಲಿ ಕೆಲಸ ಮಾಡಿದ ಮತ್ತು ನೆಲೆಸಿದ ಅನುಭವ ಹೊಂದಿದ್ದಾರೆ. ವೈದ್ಯೆಯಾಗಿರುವುದರ ಜೊತೆಗೆ, ಡಾ. (ಶ್ರೀಮತಿ) ಮಹೇಶ್ವರಿ ಅವರು ವೈದ್ಯಕೀಯ ಉದ್ಯಮಿ ಮತ್ತು Telerad Group ನ ಸಹ-ಸಂಸ್ಥಾಪಕಿಯಾಗಿದ್ದು ಅದು ಇವುಗಳನ್ನು ಒಳಗೊಂಡಿವೆ:

a) Teleradiology Solutions Private Limited (ಭಾರತದ ಮೊದಲ ಮತ್ತು ಅತಿದೊಡ್ಡ ಟೆಲರೇಡಿಯಾಲಜಿ ಕಂಪನಿ, ಇದು ಜಾಗತಿಕವಾಗಿ ರೋಗಿಗಳು ಮತ್ತು ಆಸ್ಪತ್ರೆಗಳಿಗೆ 8 ಮಿಲಿಯನ್‌ಗಿಂತ ಹೆಚ್ಚು ಡಯಾಗ್ನಸ್ಟಿಕ್ ವರದಿಗಳನ್ನು ಒದಗಿಸಿದೆ 
(b) Telrad Tech Private Limited ಇದು ಎಐ ಸಕ್ರಿಯಗೊಳಿಸಿದ ಟೆಲಿ ಹೆಲ್ತ್ ಸಾಫ್ಟ್‌ವೇರ್ ಅನ್ನು ರಚಿಸಿದೆ 
​​​​​​​(c) RXDX Healthcare - ಬೆಂಗಳೂರು ಮತ್ತು ಗ್ರಾಮೀಣ ಭಾರತದಲ್ಲಿ ಮಲ್ಟಿ-ಸ್ಪೆಷಾಲಿಟಿ ನೆಯ್ಬರ್‌ಹುಡ್ ಫಿಜಿಟಲ್ ಕ್ಲಿನಿಕ್ಸ್ ಚೈನ್.

ಅವರು ಟೆಲಿಹೆಲ್ತ್ ಕ್ಷೇತ್ರದಲ್ಲಿ Healtheminds - ಟೆಲಿ ಕೌನ್ಸೆಲಿಂಗ್ ವೇದಿಕೆಯಂತಹ ಇತರ ಸ್ಟಾರ್ಟಪ್ ಕಂಪನಿಗಳನ್ನು ಕೂಡ ಸ್ಥಾಪಿಸಿದ್ದಾರೆ. ಅವರು ಭಾರತದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಅಲ್ಲಿ ಅವರು 2 ಟ್ರಸ್ಟ್ ಫಂಡ್‌ಗಳನ್ನು ನಡೆಸುತ್ತಾರೆ. 'People4people' ಇದು ಸರ್ಕಾರಿ ಶಾಲೆಗಳಲ್ಲಿ 650 ಕ್ಕೂ ಹೆಚ್ಚು ಆಟದ ಮೈದಾನಗಳನ್ನು ನಿರ್ಮಿಸಿದೆ ಮತ್ತು Telrad Foundation ಇದು ಉತ್ತಮ ಗುಣಮಟ್ಟದ ವೈದ್ಯಕೀಯ ಆರೈಕೆ ಲಭ್ಯವಿಲ್ಲದ ಏಷ್ಯಾದ ಹಿಂದುಳಿದ ಪ್ರದೇಶಗಳಿಗೆ ಟೆಲಿರೇಡಿಯಾಲಜಿ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನು ಒದಗಿಸುತ್ತದೆ. ಅವರ ಇತರ ಆಸಕ್ತಿಗಳಲ್ಲಿ ಬೋಧನೆಯೂ ಒಂದಾಗಿದ್ದು- ಅವರು ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ ಮಕ್ಕಳ ಹೃದ್ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಿಗಾಗಿ ಭಾರತದಲ್ಲಿ ಇ-ಬೋಧನಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಅವರು Yale Institute for Global Health ನಲ್ಲಿ ಸುಸ್ಥಿರ ಆರೋಗ್ಯ ಉಪಕ್ರಮದ ಮಾರ್ಗದರ್ಶಿಯಾಗಿದ್ದು, ಅಲ್ಲಿ ಅವರು ಮತ್ತು ಅವರ ಪತಿ ಜಾಗತಿಕ ಆರೋಗ್ಯ ನಾವೀನ್ಯತೆಗಾಗಿ ಕಲ್ಯಾಣಪುರ-ಮಹೇಶ್ವರಿ ದತ್ತಿಯನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ ಅವರು Pediatric Cardiac Society of India ದ ಅಧ್ಯಕ್ಷರಾಗಿದ್ದಾರೆ.

ಅವರು 200 ಕ್ಕೂ ಹೆಚ್ಚು ಶೈಕ್ಷಣಿಕ ಪ್ರಸ್ತುತಿಗಳು ಮತ್ತು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಹಲವಾರು TEDx ಉಪನ್ಯಾಸಗಳು ಸೇರಿದಂತೆ 200 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುವ ಸ್ಪೂರ್ತಿದಾಯಕ ಭಾಷಣಕಾರರಾಗಿದ್ದಾರೆ. ಡಾ. (ಶ್ರೀಮತಿ) ಮಹೇಶ್ವರಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ, ಅವುಗಳು ಹೀಗಿವೆ: ET ಇಂಡಿಯನ್ ಕಾರ್ಡಿಯಾಕ್ ಕೇರ್ ಇನ್ನೋವೇಶನ್ ಶೃಂಗಸಭೆ 2024 ರಲ್ಲಿ Trailblazing Indian Cardiac Leader; Business world ನ 20 most influential women in healthcare 2022; WOW (Woman of Worth) 2019 ಪ್ರಶಸ್ತಿ; Amazing Indian ಪ್ರಶಸ್ತಿ- Times Now 2014; Top 20 women Health care achievers in India, Modern Medicare 2009; Yale University- Outstanding Fellow Teacher of the Year ಪ್ರಶಸ್ತಿ, 1995, ಮುಂತಾದವುಗಳು ಸೇರಿವೆ.

ಡಾ. (ಶ್ರೀಮತಿ) ಮಹೇಶ್ವರಿ ಅವರು A-KAL Televerse Private Limited, GlaxoSmithKline Pharmaceuticals Limited, Telerad Tech Private Limited, Image Core Lab Private Limited, Healtheminds Solutions Private Limited ಮತ್ತು Telerad Rx Dx Healthcare Private Limited ನ ಮಂಡಳಿಯ ನಿರ್ದೇಶಕರಾಗಿದ್ದಾರೆ.