ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?
ಟ್ರೇಡರ್‌ಗಳಿಗೆ ಬಿಸಿನೆಸ್ ಲೋನಿಗೆ ಅರ್ಹತಾ ಮಾನದಂಡ
ಟ್ರೇಡರ್‌ಗಳಿಗೆ ಬಿಸಿನೆಸ್ ಲೋನಿಗೆ ಅರ್ಹತಾ ಮಾನದಂಡ
ಯಾವುದೇ ಬಿಸಿನೆಸ್ ಅಥವಾ ಸಪ್ಲೈ ಚೈನ್‌ನಲ್ಲಿ, ಟ್ರೇಡರ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಸುಗಮ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು, ಅವುಗಳಿಗೆ ಸಾಮಾನ್ಯವಾಗಿ ಹಣಕಾಸಿನ ನೆರವು ಬೇಕಾಗುತ್ತದೆ- ವರ್ಕಿಂಗ್ ಕ್ಯಾಪಿಟಲ್ ಅನ್ನು ನಿರ್ವಹಿಸುವುದು ಅಥವಾ ಮರುಮಾರಾಟಕ್ಕಾಗಿ ದಾಸ್ತಾನು ಖರೀದಿಸುವುದು. ಈ ವೈವಿಧ್ಯಮಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದರಿಂದ, ಎಚ್ ಡಿ ಎಫ್ ಸಿ ಬ್ಯಾಂಕ್ ಟ್ರೇಡರ್‌ಗಳಿಗೆ ಬಿಸಿನೆಸ್ ಬೆಳವಣಿಗೆಯ ಲೋನನ್ನು ಒದಗಿಸುತ್ತದೆ.
ಈ ಲೋನ್ ಭದ್ರತೆಯನ್ನು ವ್ಯವಸ್ಥೆ ಮಾಡುವ ಒತ್ತಡವಿಲ್ಲದೆ ಮರ್ಚೆಂಟ್‌ಗಳಿಗೆ ತಮ್ಮ ಬಿಸಿನೆಸ್ ಅನ್ನು ಬೆಳೆಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಅಡಮಾನ-ಮುಕ್ತ ಹಣಕಾಸು ಪರಿಹಾರವಾಗಿದೆ. ರಿಟೇಲ್ ಟ್ರೇಡರ್‌ಗಳಿಂದ ಸಣ್ಣ ಬಿಸಿನೆಸ್ ಮಾಲೀಕರಿಗೆ, ಕಿರು ಮತ್ತು ಸಣ್ಣ ಉದ್ಯಮಗಳು ಕೂಡ ತಮ್ಮ ದೈನಂದಿನ ನಗದು ಹರಿವಿನ ಅಗತ್ಯಗಳನ್ನು ಪೂರೈಸಲು ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುವ MSME ಟ್ರೇಡಿಂಗ್ ಲೋನ್‌ಗಳಿಂದ ಪ್ರಯೋಜನ ಪಡೆಯಬಹುದು.
ಫ್ಲೆಕ್ಸಿಬಲ್ ಕಾಲಾವಧಿ: 12-48 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ EMI ಗಳನ್ನು ಬಜೆಟ್-ಸ್ನೇಹಿಯಾಗಿಸಿ.
ಸುಲಭ ಅಪ್ಲಿಕೇಶನ್: ನಮ್ಮ ವೆಬ್‌ಸೈಟ್ ಮೂಲಕ ನಿಮ್ಮ ಮನೆಯಿಂದಲೇ ಆರಾಮದಿಂದ ಲೋನಿಗೆ ಅಪ್ಲೈ ಮಾಡಿ ಅಥವಾ ನೀವು ಬಯಸಿದರೆ ನಮ್ಮ ಬ್ರಾಂಚಿಗೆ ಭೇಟಿ ನೀಡಿ.
ಅಡಮಾನವಿಲ್ಲದ ಲೋನ್‌ಗಳು: ಭದ್ರತೆಯಾಗಿ ಇರಿಸಲು ಯಾವುದೇ ಬಿಸಿನೆಸ್ ಅಸೆಟ್‌ಗಲಿಲ್ಲವೇ? ಚಿಂತಿಸಬೇಡಿ, ನಮ್ಮೊಂದಿಗೆ ಭದ್ರತೆ ರಹಿತ ಫಂಡಿಂಗ್ ಪಡೆಯಿರಿ.
ಸುಲಭ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ: ನಿಮ್ಮ ಪ್ರಸ್ತುತ ಲೋನ್ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕೇ? ಕಡಿಮೆ ಬಡ್ಡಿ ದರದಲ್ಲಿ ನಿಮ್ಮ ಬಾಕಿ ಬ್ಯಾಲೆನ್ಸ್ ಅನ್ನು ನಮಗೆ ಟ್ರಾನ್ಸ್‌ಫರ್ ಮಾಡಿ ಮತ್ತು
ಓವರ್‌ಡ್ರಾಫ್ಟ್ ಸೌಲಭ್ಯ: ನಗದು ಕೊರತೆಯೇ? ಯಾವುದೇ ಅಡಮಾನವಿಲ್ಲದೆ ನಿಮ್ಮ ಅಕೌಂಟ್ ಬ್ಯಾಲೆನ್ಸ್‌ಗಿಂತ ಹೆಚ್ಚುವರಿ ಹಣವನ್ನು ವಿತ್‌ಡ್ರಾ ಮಾಡಿ.
ಹೆಚ್ಚಿನ ಲೋನ್ ಮೊತ್ತ: ₹ 40 ಲಕ್ಷದವರೆಗಿನ ನಮ್ಮ ಫಂಡಿಂಗ್ ಆಯ್ಕೆಗಳೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಸುಲಭವಾಗಿ ಬೆಳೆಸಿ (ಆಯ್ದ ಸ್ಥಳಗಳಲ್ಲಿ ₹ 50 ಲಕ್ಷ).
ವಿವಿಧ ಬಿಸಿನೆಸ್ ವೆಚ್ಚಗಳನ್ನು ಕವರ್ ಮಾಡಲು ನೀವು ಹಣವನ್ನು ಬಳಸಬಹುದು. ಉದಾಹರಣೆಗೆ, ನೀವು ಹೊಸ ಸ್ಥಳಗಳಲ್ಲಿ ಕಚೇರಿಗಳನ್ನು ಸ್ಥಾಪಿಸಬಹುದು, ಕೌಶಲ್ಯಯುತ ಕೆಲಸಗಾರರನ್ನು ನೇಮಿಸಬಹುದು ಅಥವಾ ಕಚ್ಚಾ ವಸ್ತುಗಳನ್ನು ಸಂಗ್ರಹಿಸಬಹುದು.
ನೀವು ಈ ಮೂಲಕ ಟ್ರೇಡರ್‌ಗಳಿಗಾಗಿನ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು:
4. ಶಾಖೆಗಳು
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:
ಹಂತ 1 - ನಿಮ್ಮ ಉದ್ಯೋಗವನ್ನು ಆಯ್ಕೆಮಾಡಿ
ಹಂತ 2 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
ಹಂತ 3- ಲೋನ್ ಮೊತ್ತವನ್ನು ಆಯ್ಕೆ ಮಾಡಿ
ಹಂತ 4- ಸಲ್ಲಿಸಿ ಮತ್ತು ಹಣವನ್ನು ಪಡೆಯಿರಿ*
*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.
ಹೌದು, ಟ್ರೇಡರ್‌ಗಳು, ಸ್ವಯಂ ಉದ್ಯೋಗಿ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು, ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಥವಾ ಮಾಲೀಕರು, ತಮ್ಮ ಬಿಸಿನೆಸ್ ಅಗತ್ಯಗಳನ್ನು ಪೂರೈಸಲು ಬಿಸಿನೆಸ್ ಲೋನನ್ನು ಪಡೆಯಬಹುದು.
ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಯಾವುದೇ ಟ್ರೇಡರ್ ಬಿಸಿನೆಸ್ ಲೋನನ್ನು ಪಡೆಯಬಹುದು:
ಸ್ವಯಂ ಉದ್ಯೋಗಿ:
ವಯಸ್ಸು: 21 ಮತ್ತು 65 ವರ್ಷಗಳ ನಡುವೆ
ಆದಾಯ: ಸತತ 2 ವರ್ಷಗಳ ಲಾಭದೊಂದಿಗೆ ಕನಿಷ್ಠ ವಾರ್ಷಿಕ ಆದಾಯ ₹1.5 ಲಕ್ಷ
ವಹಿವಾಟು: ಕನಿಷ್ಠ ಟ್ರಾನ್ಸಾಕ್ಷನ್ ₹40 ಲಕ್ಷ
ಪ್ರಸ್ತುತ ಬಿಸಿನೆಸ್‌ನಲ್ಲಿ ಕನಿಷ್ಠ 3 ವರ್ಷಗಳನ್ನು ಒಳಗೊಂಡಂತೆ ಕನಿಷ್ಠ 5 ವರ್ಷಗಳವರೆಗೆ ಬಿಸಿನೆಸ್ ಅನ್ನು ನಿರ್ವಹಿಸಿರಬೇಕು.
ಅರ್ಹ ಘಟಕಗಳು: ಸ್ವಯಂ ಉದ್ಯೋಗಿ ವೃತ್ತಿಪರರು ಮತ್ತು ವೃತ್ತಿಪರರಲ್ಲದವರು, ಪಾಲುದಾರಿಕೆ ಸಂಸ್ಥೆಗಳು, ಮಾಲೀಕರು ಮತ್ತು ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಟ್ರೇಡಿಂಗ್, ಉತ್ಪಾದನೆ ಮತ್ತು ಸರ್ವಿಸ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ನೀವು ಫಂಡಿಂಗ್‌ನಲ್ಲಿ ₹ 40 ಲಕ್ಷದವರೆಗೆ ಪಡೆಯಬಹುದು. ಆದಾಗ್ಯೂ, ಈ ಮೊತ್ತವು ಆಯ್ದ ಸ್ಥಳಗಳಿಗೆ ₹ 50 ಲಕ್ಷಕ್ಕೆ ಹೆಚ್ಚಾಗುತ್ತದೆ.
ಟ್ರೇಡಿಂಗ್ ಬಿಸಿನೆಸ್‌ಗಾಗಿ ಲೋನ್ ಅನ್ನು ನಿಮ್ಮ ಬಿಸಿನೆಸ್‌ನ ಬೆಳವಣಿಗೆಗಾಗಿ ವಿವಿಧ ವೆಚ್ಚಗಳನ್ನು ಕವರ್ ಮಾಡಲು ರಚಿಸಲಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ ಲೋನ್ ಯಾವುದೇ ಅಡಮಾನವನ್ನು ಅಡವಿಡದೆ ನಿಗದಿತ ಲೋನ್ ಮೊತ್ತವನ್ನು ನಿಮಗೆ ಒದಗಿಸುತ್ತದೆ.
ಟ್ರೇಡಿಂಗ್‌ಗಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಲೋನ್‌ನೊಂದಿಗೆ, ನೀವು ₹ 50 ಲಕ್ಷದವರೆಗಿನ ಹಣವನ್ನು ಪಡೆಯಬಹುದು (ಆಯ್ದ ಸ್ಥಳಗಳಲ್ಲಿ). ನೀವು ಕೆಲವು ಸರಳ ಹಂತಗಳಲ್ಲಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು. ನೀವು ಇದನ್ನು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ ಮಾಡಬಹುದು. ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ, ಮತ್ತು ಅಪ್ಲಿಕೇಶನ್ ಮತ್ತು ವಿತರಣೆ ಪ್ರಕ್ರಿಯೆಗಳು ತಡೆರಹಿತ ಮತ್ತು ತ್ವರಿತವಾಗಿವೆ.
ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ, ನಿಮ್ಮ ಬೆರಳತುದಿಯಲ್ಲಿ ನಾವು ನಿಮಗೆ ಅನುಕೂಲವನ್ನು ತರುತ್ತೇವೆ. ನಿಮ್ಮ ಬಿಸಿನೆಸ್ ಬೆಳವಣಿಗೆಯ ಲೋನ್ ಸ್ಟೇಟಸ್ ವೆರಿಫೈ ಮಾಡಲು ಇಲ್ಲಿ ಕ್ಲಿಕ್ ಮಾಡಿ. ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಹೆಸರು, ರೆಫರೆನ್ಸ್ ನಂಬರ್, ಹುಟ್ಟಿದ ದಿನಾಂಕ ಅಥವಾ ಮೊಬೈಲ್ ನಂಬರ್ ನಮೂದಿಸಿ. 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ, ಮತ್ತು ನಿಮ್ಮ ಲೋನ್ ಸ್ಟೇಟಸ್ ವಿವರಗಳನ್ನು ಸ್ಕ್ರೀನಿನಲ್ಲಿ ತೋರಿಸಲಾಗುತ್ತದೆ.
ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಉತ್ತೇಜನ ನೀಡಿ-ಎಕ್ಸ್‌ಪ್ರೆಸ್ ಬಿಸಿನೆಸ್ ಲೋನಿಗೆ ಈಗಲೇ ಅಪ್ಲೈ ಮಾಡಿ!