ಶ್ರೀ ಅಭಿಜಿತ್ ಸಿಂಗ್ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಬ್ಯಾಂಕಿಂಗ್ ಆ್ಯಸ್ ಎ ಸರ್ವಿಸ್ (BaaS), ಡಿಜಿಟಲ್ ಎಕೋಸಿಸ್ಟಮ್ ಬ್ಯಾಂಕಿಂಗ್ ಮತ್ತು ಇಂಟರ್ನ್ಯಾಷನಲ್ ಬ್ಯಾಂಕಿಂಗ್‌ನ ಗ್ರೂಪ್ ಹೆಡ್ ಆಗಿದ್ದಾರೆ.
ಶ್ರೀ ಅಭಿಜಿತ್ ಸಿಂಗ್ ಎಚ್‌ಡಿಎಫ್‌ಸಿ ಲಿಮಿಟೆಡ್‌ನಿಂದ ಬ್ಯಾಂಕ್‌ಗೆ ಸೇರಿದ್ದು, ಅಲ್ಲಿ ಅವರು ಕಾರ್ಯನಿರ್ವಾಹಕ ನಿರ್ವಹಣಾ ಮಂಡಳಿಯ ಸದಸ್ಯರು, ಮುಖ್ಯ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಭಾರತದ ಮುಂಬೈನ ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ ಫೈನಾನ್ಸ್‌ನಲ್ಲಿ MBA ಹೊಂದಿದ್ದಾರೆ ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.
ಅವರು ಲಂಡನ್‌ನ ಓಕ್‌ನಾರ್ಥ್ ಬ್ಯಾಂಕ್‌ನಲ್ಲಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (COO) ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಆಗಿದ್ದರು. ಓಕ್‌ನಾರ್ಥ್‌ಗಿಂತ ಮೊದಲು, ಅವರು ICICI ಬ್ಯಾಂಕ್‌ನಲ್ಲಿ ಟೆಕ್ನಾಲಜಿ ಗ್ರೂಪ್‌ನ ಮುಖ್ಯಸ್ಥ ಸ್ಥಾನ ಸೇರಿದಂತೆ ವಿವಿಧ ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡಿದ್ದರು. ಅವರು RBS, ANZ ಮತ್ತು ABN ಆಮ್ರೋ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಅನುಭವವನ್ನು ಹೊಂದಿದ್ದಾರೆ.
ಶ್ರೀ ಸಿಂಗ್ ಅವರು ಪ್ರಾಡಕ್ಟ್ ಅಭಿವೃದ್ಧಿ, ದೊಡ್ಡ ಪ್ರಮಾಣದ ಡಿಜಿಟಲ್ ಪರಿವರ್ತನೆ, ಪ್ರಾಜೆಕ್ಟ್ ಕಾರ್ಯಗತಗೊಳಿಸುವಿಕೆ ಮತ್ತು ಡಿಜಿಟಲ್ ಬ್ಯಾಂಕ್‌ನ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿ ಬ್ಯಾಂಕಿಂಗ್ ತಂತ್ರಜ್ಞಾನದ ವ್ಯಾಪಕ ಹಿನ್ನೆಲೆಯೊಂದಿಗೆ , ಉದಯೋನ್ಮುಖ ತಂತ್ರಜ್ಞಾನ ಮತ್ತು ಫಿನ್‌ಟೆಕ್‌ನಲ್ಲಿ 25+ ವರ್ಷಗಳ ಅನುಭವ ಹೊಂದಿದ್ದಾರೆ. ಅನೇಕ ದೇಶಗಳಲ್ಲಿನ ತಮ್ಮ ವೃತ್ತಿ ಜೀವನದಲ್ಲಿ, ಅವರು ಯುರೋಪಿಯನ್ MNC ಬ್ಯಾಂಕ್‌ಗಳು, ದೊಡ್ಡ ಭಾರತೀಯ ಖಾಸಗಿ ವಲಯದ ಬ್ಯಾಂಕ್‌ಗಳು ಮತ್ತು UK ಚಾಲೆಂಜರ್ ಬ್ಯಾಂಕ್‌ನಲ್ಲಿ ವೈವಿಧ್ಯಮಯ ಆಂತರಿಕ ತಂಡಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಬ್ಲಾಕ್‌ಚೈನ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪ್ರವರ್ತಕ ಕೆಲಸ ಮಾಡಿದ್ದಾರೆ ಮತ್ತು ದೊಡ್ಡ ಸಂಸ್ಥೆಗಳ ಡಿಜಿಟಲ್ ಪರಿವರ್ತನೆಗೆ ಸಹಾಯ ಮಾಡಿದ್ದಾರೆ