ಕಾರ್ಯನಿರ್ವಾಹಕ ನಿರ್ದೇಶಕರು ​​​​​

ಶ್ರೀ ಭವೇಶ್ ಜವೇರಿ

ಶ್ರೀ ಭವೇಶ್ ಜವೇರಿ ಅವರು ಏಪ್ರಿಲ್ 19, 2023 ರಿಂದ ಅನ್ವಯವಾಗುವಂತೆ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ATM, ಕಾರ್ಯಾಚರಣೆಗಳು ಮತ್ತು ಆಡಳಿತ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ.

ಶ್ರೀ ಭವೇಶ್ ಜವೇರಿಯವರು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಕಾರ್ಯಾಚರಣೆಗಳು, ನಗದು ನಿರ್ವಹಣೆ, ATM ಪ್ರಾಡಕ್ಟ್ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತಾರೆ. ತಮ್ಮ ಪ್ರಸ್ತುತ ಪಾತ್ರದಲ್ಲಿ, ಅವರು ದೇಶಾದ್ಯಂತ ಬಿಸಿನೆಸ್ ಮತ್ತು ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿದ್ದಾರೆ ಮತ್ತು ಕಾರ್ಪೊರೇಟ್, MSME ಮತ್ತು ರಿಟೇಲ್ ವರ್ಟಿಕಲ್‌ಗಳಿಗೆ ಬ್ಯಾಂಕ್‌ನ ವೈವಿಧ್ಯಮಯ ಪ್ರಾಡಕ್ಟ್ ಸೂಟ್‌ನಲ್ಲಿ ದೋಷರಹಿತ ಕಾರ್ಯಾಚರಣೆಗಳ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ರಚಿಸಲು ಮತ್ತು ತಲುಪಿಸಲು ಜವಾಬ್ದಾರರಾಗಿದ್ದಾರೆ, ಇದರಲ್ಲಿ ಆಸ್ತಿ, ಹೊಣೆಗಾರಿಕೆಗಳು ಮತ್ತು ಪಾವತಿಗಳು ಮತ್ತು ನಗದು ನಿರ್ವಹಣೆ, ಟ್ರೇಡ್ ಫೈನಾನ್ಸ್ ಮತ್ತು ಟ್ರೆಜರಿ, ATM ಪ್ರಾಡಕ್ಟ್ ಮತ್ತು ಆಡಳಿತದ ಟ್ರಾನ್ಸಾಕ್ಷನ್ ಸರ್ವಿಸ್‌ಗಳು ಸೇರಿವೆ. ಅವರು 37 ವರ್ಷಗಳಿಗಿಂತ ಹೆಚ್ಚಿನ ಒಟ್ಟಾರೆ ಅನುಭವವನ್ನು ಹೊಂದಿದ್ದು, ಬ್ಯಾಂಕ್‌ನಲ್ಲಿ ಕಾರ್ಯಾಚರಣೆಗಳು, ನಗದು ನಿರ್ವಹಣೆ ಮತ್ತು ತಂತ್ರಜ್ಞಾನದ ನಿರ್ಣಾಯಕ ಕಾರ್ಯಗಳನ್ನು ಮುನ್ನಡೆಸಿದ್ದಾರೆ.

ಶ್ರೀ ಜವೇರಿಯವರು 1998 ರಲ್ಲಿ ಆಪರೇಶನ್ಸ್ ಕಾರ್ಯದಲ್ಲಿ ಬ್ಯಾಂಕ್‌ಗೆ ಸೇರಿಕೊಂಡರು. ಅವರು 2000 ರಲ್ಲಿ ಹೋಲ್‌ಸೇಲ್ ಬ್ಯಾಂಕಿಂಗ್ ಆಪರೇಶನ್ಸ್ - ಬಿಸಿನೆಸ್ ಹೆಡ್ ಆಗಿದ್ದರು ಮತ್ತು 2009 ರಲ್ಲಿ ಆಪರೇಶನ್ಸ್ - ಗ್ರೂಪ್ ಹೆಡ್ ಆಗಿ ನೇಮಕಗೊಂಡರು. ಅವರು 2015 ರಲ್ಲಿ ಮಾಹಿತಿ ತಂತ್ರಜ್ಞಾನ ಕಾರ್ಯದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆದರು. ತನ್ನ ಹಿಂದಿನ ಹುದ್ದೆ IT - ಗ್ರೂಪ್ ಹೆಡ್ ಆಗಿ, ಬ್ಯಾಂಕ್‌ನ ವಿವಿಧ ಪ್ರಾಡಕ್ಟ್ ಕೊಡುಗೆಗಳಲ್ಲಿ ಸುಧಾರಿತ ಗ್ರಾಹಕ ಅನುಭವವನ್ನು ಉಂಟುಮಾಡುವುದಕ್ಕಾಗಿ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಬ್ಯಾಂಕ್‌ನ ಡಿಜಿಟಲ್ ಪರಿವರ್ತನೆಗೆ ಅವರು ಕೊಡುಗೆ ನೀಡಿದ್ದಾರೆ.

ಶ್ರೀ ಜವೇರಿಯವರು RBI ನ ಆಂತರಿಕ ಪಾವತಿ ಮಂಡಳಿ ಸಭೆಯಲ್ಲಿ ಕೂಡ ಭಾಗವಹಿಸಿದ್ದಾರೆ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಉಗಮಕ್ಕೆ ಕಾರಣವಾದ 2004 ರ ಅಂಬ್ರೆಲ್ಲಾ ಆರ್ಗನೈಸೇಶನ್ ಫಾರ್ ಪೇಮೆಂಟ್ಸ್ ಕಮಿಟಿಯ ಭಾಗವಾಗಿದ್ದರು. ಅವರು ಬ್ರಸೆಲ್ಸ್‌ನ SWIFT Scrl ಗ್ಲೋಬಲ್ ಬೋರ್ಡ್‌ಗೆ ಆಯ್ಕೆಯಾದ ಭಾರತದಿಂದ ಏಕಮಾತ್ರ ಚುನಾಯಿತ ಸದಸ್ಯರಾಗಿದ್ದಾರೆ. ಗ್ಲೋಬಲ್ ಟ್ರೇಡ್ ರಿವ್ಯೂ ನ "ಊಸ್ ಹು ಇನ್ ಟ್ರೆಜರಿ ಆಂಡ್ ಕ್ಯಾಶ್ ಮ್ಯಾನೇಜ್ಮೆಂಟ್" ನಲ್ಲಿ ಎರಡು ಬಾರಿ ಅವರು ಭಾಗವಹಿಸಿದ್ದಾರೆ. ಅವರು RBI ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘದಿಂದ ರಚಿಸಲಾದ ವಿವಿಧ ಸಮಿತಿಗಳ ಸದಸ್ಯರಾಗಿದ್ದಾರೆ. ಅವರು ಈ ಮೊದಲು SWIFT Scrl - ಬ್ರಸೆಲ್ಸ್, Swift India Domestic Services Private Limited, The Clearing Corporation of India Limited, National Payment Corporation of India Limited, Goods & Service Tax Network Limited, HDB Financial Services Limited ಮತ್ತು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಲಿಮಿಟೆಡ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಬ್ಯಾಂಕ್‌ಗೆ ಸೇರುವ ಮೊದಲು, ಶ್ರೀ ಜವೇರಿ ಒಮನ್ ಇಂಟರ್ನ್ಯಾಷನಲ್ ಬ್ಯಾಂಕ್ ಮತ್ತು ಬಾರ್ಕ್ಲೇಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿದರು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಮಾಸ್ಟರ್ಸ್ ಡಿಗ್ರಿಯನ್ನು ಪಡೆದಿದ್ದಾರೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್‌ನ ಪ್ರಮಾಣೀಕೃತ ಸಹಯೋಗಿಯಾಗಿದ್ದಾರೆ.