ಅಕೌಂಟ್‌ಗಳು

ಹಣ ಉಳಿಸಿ - ನಿಮ್ಮ ದೈನಂದಿನ ಜೀವನದಲ್ಲಿ ಹಣವನ್ನು ಉಳಿಸಲು ಮಾರ್ಗಗಳು

ಲೇಖನ "ಹಣ ಉಳಿಸಿ - ನಿಮ್ಮ ದೈನಂದಿನ ಜೀವನದಲ್ಲಿ ಹಣವನ್ನು ಉಳಿಸಲು ಮಾರ್ಗಗಳು" ದೈನಂದಿನ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹಣಕಾಸಿನ ಹವ್ಯಾಸಗಳನ್ನು ಸುಧಾರಿಸಲು ಪ್ರಾಯೋಗಿಕ ಸಲಹೆಗಳು ಮತ್ತು ತಂತ್ರಗಳನ್ನು ಒದಗಿಸುತ್ತದೆ. ಜೀವನಶೈಲಿ ಹೊಂದಾಣಿಕೆಗಳು, ಉತ್ತಮ ಖರೀದಿ ನಿರ್ಧಾರಗಳು ಮತ್ತು ಉತ್ತಮ ಹಣಕಾಸು ನಿರ್ವಹಣೆಯ ಮೂಲಕ ಹಣವನ್ನು ಉಳಿಸಲು ಸರಳ, ಪರಿಣಾಮಕಾರಿ ಮಾರ್ಗಗಳನ್ನು ಇದು ಹೈಲೈಟ್ ಮಾಡುತ್ತದೆ.

ಸಾರಾಂಶ:

  • ಖರೀದಿಸಿದ ನಂತರ ವಿಷಾದಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ತಡೆಗಟ್ಟಲು ಪ್ರಚೋದನಾತ್ಮಕ ಖರೀದಿಗಳನ್ನು ತಪ್ಪಿಸಿ.
  • ಖರ್ಚಿನ ಹವ್ಯಾಸಗಳಲ್ಲಿ ಸಣ್ಣ ದೈನಂದಿನ ಬದಲಾವಣೆಗಳನ್ನು ಮಾಡುವ ಮೂಲಕ ಭವಿಷ್ಯಕ್ಕಾಗಿ ಉಳಿತಾಯ ಮಾಡಿ.
  • ವೆಚ್ಚಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು DIY ಪರಿಹಾರಗಳು ಮತ್ತು ಮನೆ ತಯಾರಿಸಿದ ಊಟಗಳನ್ನು ಆಯ್ಕೆ ಮಾಡಿ.
  • ಖರ್ಚುಗಳನ್ನು ಕಡಿಮೆ ಮಾಡಲು ಡೀಲ್‌ಗಳನ್ನು ಬಳಸಿ, ಗುಣಮಟ್ಟದ ವಸ್ತುಗಳನ್ನು ಖರೀದಿಸಿ ಮತ್ತು ಕೆಲಸಗಳನ್ನು ಪರಿಣಾಮಕಾರಿಯಾಗಿ ಯೋಜಿಸಿ.
  • ಫ್ಯೂಯಲ್ ಬಳಕೆ ಮತ್ತು ಹೂಡಿಕೆಗಳನ್ನು ಒಳಗೊಂಡಂತೆ ಹಣಕಾಸಿನ ಯೋಜನೆಗಳನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ಸರಿಹೊಂದಿಸಿ. 

ಮೇಲ್ನೋಟ

ನಾವು ತ್ವರಿತ ಗ್ರಾಟಿಫಿಕೇಶನ್ ಪ್ರಪಂಚದಲ್ಲಿ ವಾಸಿಸುತ್ತಿದ್ದೇವೆ. ಮತ್ತು ಅದು ಅನಿವಾರ್ಯವಾಗಿ ತ್ವರಿತ ವೆಚ್ಚಗಳಿಗೆ ಕರೆ ನೀಡುತ್ತದೆ. ಆದರೂ, ಖರೀದಿಯ ರೋಮಾಂಚಕತೆ ಮುಗಿದಾಗ, ನಿಮಗೆ ಸಾಮಾನ್ಯವಾಗಿ ವಿಷಾದ ಭಾವ ಎದುರಾಗುವುದಿಲ್ಲವೇ? 'ಓಹ್, ನಾನು ಆ ಕಾರ್ಡ್ ಅನ್ನು ಏಕೆ ಸ್ವೈಪ್ ಮಾಡಿದ್ದೇನೆ? ನಾನು ಆ 'ಈಗ ಪಾವತಿಸಿ' ಬಟನ್ ಮೇಲೆ ಏಕೆ ಕ್ಲಿಕ್ ಮಾಡಿದ್ದೇನೆ?'
ಅಲ್ಲದೆ, ಕೆಲವು ವರ್ಷಗಳ ಕಾಲ ಉಳಿತಾಯವನ್ನು ಮುಂದೂಡುವುದು ಒಳ್ಳೆಯದು ಎಂದು ಈಗ ತೋರುತ್ತದೆ, ಆದರೆ 'ಕೆಲವು ವರ್ಷಗಳ ನಂತರ' ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚು ವೇಗವಾಗಿ ಬರುತ್ತದೆ. ನಿಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಮೀಸಲಿಡಲು ಇಂದಿಗಿಂತ ಉತ್ತಮ ಸಮಯವಿಲ್ಲ. ಮತ್ತು ನೀವು ಮಾಡಬೇಕಾಗಿರುವುದು ಕೇವಲ ಜೀವನ ಮತ್ತು ವೆಚ್ಚಗಳ ಬಗೆಗಿನ ನಿಮ್ಮ ಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವುದು. ನಿಮಗೆ ತಿಳಿಯುವ ಮೊದಲೇ, ಉಳಿತಾಯ ಹೆಚ್ಚಾಗುವುದನ್ನು ನೀವು ನೋಡುತ್ತೀರಿ.
ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ಖರ್ಚು ಮಾಡದೇ ಇರುವುದು. ಆದಾಗ್ಯೂ, ಇದು ಅವಾಸ್ತವಿಕ ಮಾತ್ರವಲ್ಲದೆ ಅಸಾಧ್ಯವಾಗಿದೆ. ಮತ್ತು ಇಲ್ಲ, ನಾವು ನಿಮಗೆ ಜಿಪುಣತನದ ಜೀವನವನ್ನು ನಡೆಸಲು ಸಲಹೆ ನೀಡುತ್ತಿಲ್ಲ. ಬದಲಾಗಿ, ಈ 20 ಅಚ್ಚರಿಯ ಸರಳ ಮಾರ್ಗಗಳನ್ನು ಅನುಸರಿಸಿ ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ಹಣವನ್ನು ಉಳಿಸಿ. 

ಹಣ ಉಳಿಸಲು 20 ಉತ್ತಮ ಮಾರ್ಗಗಳು

1. DIY ದಿನಚರಿ

ನಿಯಮಿತ ಸಲೂನ್ ಭೇಟಿಗಳಿಗೆ ಹೋಲಿಸಿದರೆ ಮನೆಯಲ್ಲಿ ನಿಮಗೆ ನೀವೇ ಪೆಡಿಕ್ಯೂರ್ ಮಾಡುವುದರಿಂದ ಪ್ರತಿ ವರ್ಷ ನಿಮಗೆ ಗಮನಾರ್ಹ ಮೊತ್ತವನ್ನು ಉಳಿಸಬಹುದು. ನೀವು ಹಣವನ್ನು ಉಳಿಸುವುದಷ್ಟೇ ಅಲ್ಲದೆ ಸಲೂನ್ ಸಿಬ್ಬಂದಿಯಿಂದ ಸಂಭವನೀಯ ಎದುರುಗೊಳ್ಳುವ ಪ್ರಶ್ನೆಗಳಿಂದ ಕೂಡ ತಪ್ಪಿಸಿಕೊಳ್ಳುತ್ತೀರಿ. ಮನೆಯಲ್ಲಿಯೇ ಮಾಡಬಹುದಾದ ಸರಳವಾದ ಪೆಡಿಕ್ಯೂರ್ ಎಂದರೆ ನಿಮ್ಮ ಪಾದಗಳನ್ನು ನೆನೆಸಿ, ಉಗುರುಗಳನ್ನು ಕತ್ತರಿಸಿ, ಮೃದುಗೊಳಿಸಿ, ಮಾಯಿಶ್ಚರೈಸರ್ ಹಚ್ಚುವುದು.

2. ಮನೆಯಲ್ಲಿ ತಿನ್ನುವುದು

ಡೈನಿಂಗ್ ಔಟ್ ಮತ್ತು ಕಾಫಿ ಶಾಪ್ ಭೇಟಿಗಳ ಆವರ್ತನವನ್ನು ಕಡಿಮೆ ಮಾಡುವುದು ಗಣನೀಯ ಉಳಿತಾಯಕ್ಕೆ ಕಾರಣವಾಗಬಹುದು. ಮನೆಯಲ್ಲಿ ತಿನ್ನುವುದರಿಂದ ಆಹಾರದ ವೆಚ್ಚಗಳು, ರೆಸ್ಟೋರೆಂಟ್ ಬಿಲ್‌ಗಳ ಮೇಲೆ ತೆರಿಗೆಗಳು ಮತ್ತು ಹೆಚ್ಚುವರಿ ಕ್ಯಾಲೋರಿಗಳ ಮೇಲೆ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಊಟಗಳನ್ನು ನೀವಾಗಿಯೇ ಸಿದ್ಧಪಡಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಪದಾರ್ಥಗಳ ಮೇಲೆ ನಿಮಗೆ ನಿಯಂತ್ರಣವನ್ನು ನೀಡುತ್ತದೆ.

3. ಕಾಫಿ ವೆಚ್ಚಗಳು

ನೀವು ಕೆಫೆಯಿಂದ ನಿಮ್ಮ ದೈನಂದಿನ ಕಾಫಿ ಮಿಶ್ರಣವನ್ನು ಇಷ್ಟಪಟ್ಟರೆ, ಅದನ್ನು ಮನೆಯಲ್ಲಿಯೇ ತಯಾರಿಸಲು ನೋಡಿ. ಉತ್ತಮ ಕಾಫಿ ಮೇಕರ್‌ ಖರೀದಿಸುವುದು ದೀರ್ಘಾವಧಿಯಲ್ಲಿ ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿರಬಹುದು ಮತ್ತು ನಿಮ್ಮ ಅಭಿರುಚಿಗೆ ತಕ್ಕಂತೆ ಕಸ್ಟಮೈಜ್ ಮಾಡಿಕೊಳ್ಳಬಹುದು. ಕಾಫಿ ಶಾಪ್ ಭೇಟಿಗಳನ್ನು ಕಡಿತಗೊಳಿಸುವ ಮೂಲಕ, ನೀವು ಹಣವನ್ನು ಉಳಿಸುತ್ತೀರಿ ಮತ್ತು ನಿಮ್ಮ ದೈನಂದಿನ ಕೆಫೀನ್ ಸೇವನೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯುತ್ತೀರಿ. ನಿಮ್ಮ ದೈನಂದಿನ ಕಾಫಿ ವೆಚ್ಚಗಳ ಮೇಲೆ ನೀವು ಹೇಗೆ ಉಳಿತಾಯ ಮಾಡಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

4. ಎರಂಡ್ ಪ್ಲಾನಿಂಗ್

ಬಹು ಪ್ರಯಾಣ ಮಾಡುವ ಬದಲು ಒಂದೇ ಪ್ರವಾಸದಲ್ಲಿ ಎಲ್ಲವನ್ನೂ ಮುಗಿಸಲು ನಿಮ್ಮ ಕೆಲಸಗಳನ್ನು ಆಯೋಜಿಸಿ. ಇದು ಫ್ಯೂಯಲ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಪೆಟ್ರೋಲ್‌ನಲ್ಲಿ ಹಣವನ್ನು ಉಳಿಸುತ್ತದೆ. ನಿಮ್ಮ ಮಾರ್ಗವನ್ನು ಪರಿಣಾಮಕಾರಿಯಾಗಿ ಯೋಜಿಸುವುದರಿಂದ ನಿಮ್ಮ ಸಮಯವನ್ನು ಉಳಿಸಬಹುದು ಮತ್ತು ನಿಮ್ಮ ವಾಹನದ ಹಾನಿ ಮತ್ತು ದುರಸ್ತಿಯನ್ನು ಕಡಿಮೆ ಮಾಡಬಹುದು.

5. ಲೈಬ್ರರಿ ಮೆಂಬರ್‌ಶಿಪ್

ದುಬಾರಿ ಪುಸ್ತಕಗಳನ್ನು ಖರೀದಿಸುವ ಬದಲು, ಲೈಬ್ರರಿ ಜಾಯಿನ್ ಆಗುವುದನ್ನು ಪರಿಗಣಿಸಿ. ಲೈಬ್ರರಿ ಮೆಂಬರ್‌ಶಿಪ್ ಸಾಮಾನ್ಯವಾಗಿ ಹೊಸ ಪುಸ್ತಕಗಳನ್ನು ಖರೀದಿಸುವುದಕ್ಕಿಂತ ಅಗ್ಗವಾಗಿದೆ ಮತ್ತು ನೀವು ವ್ಯಾಪಕ ಶ್ರೇಣಿಯ ಓದುವ ಮೆಟೀರಿಯಲ್‌ಗಳನ್ನು ಅಕ್ಸೆಸ್ ಮಾಡಬಹುದು. ಜೊತೆಗೆ, ಲೈಬ್ರರಿಯ ಪುಸ್ತಕಗಳು ನಿಮ್ಮ ವಾಸಸ್ಥಳವನ್ನು ಅಸ್ತವ್ಯಸ್ತಗೊಳಿಸುವುದಿಲ್ಲ.

6. ಶಾಪಿಂಗ್ ತಪ್ಪಿಸಿ

ಮೂಡ್ ಬೂಸ್ಟರ್ ಆಗಿ ಶಾಪಿಂಗ್ ಮಾಡುವುದು ಅನಗತ್ಯ ವೆಚ್ಚಗಳು ಮತ್ತು ಹೆಚ್ಚಿನ ಬಿಲ್‌ಗಳಿಗೆ ಕಾರಣವಾಗಬಹುದು. ರಿಟೇಲ್ ಥೆರಪಿಗೆ ಬದಲಾಗಿ, ಬಜೆಟಿಂಗ್ ಮತ್ತು ಉಳಿತಾಯದ ಮೇಲೆ ಗಮನಹರಿಸಿ. ನಿಮಗೆ ಅಗತ್ಯವಿಲ್ಲದ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುವುದರಿಂದ ನಿಮ್ಮ ಹಣಕಾಸಿನ ಸ್ಥಿರತೆ ಮತ್ತು ಯೋಗಕ್ಷೇಮವನ್ನು ಕಡಿಮೆ ಮಾಡಬಹುದು.

7. ಪರ್ಸನಲ್ ಬಜೆಟ್

ನಿಮ್ಮನ್ನು ಇತರರೊಂದಿಗೆ, ವಿಶೇಷವಾಗಿ ಉನ್ನತ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುವ ಪ್ರಚೋದನೆಯನ್ನು ತಡೆದುಕೊಳ್ಳಿ. ನಿಮ್ಮ ಸ್ವಂತ ಹಣಕಾಸಿನ ಗುರಿಗಳ ಮೇಲೆ ಗಮನಹರಿಸಿ ಮತ್ತು ಅನಗತ್ಯ ದುಂದುವೆಚ್ಚಗಳನ್ನು ತಪ್ಪಿಸುವ ಮೂಲಕ ಹಣವನ್ನು ಉಳಿಸಿ. ಎಚ್ ಡಿ ಎಫ್ ಸಿ ಬ್ಯಾಂಕಿನ ಕನಸಿನ ಡೆಪಾಸಿಟ್ ಅಕೌಂಟ್ನಂತಹ ಸೇವಿಂಗ್ಸ್ ಅಕೌಂಟ್‌ಗೆ ಹೆಚ್ಚಿನದನ್ನು ಡೆಪಾಸಿಟ್ ಇಡುವುದರಿಂದ ನಿಮ್ಮ ಹಣಕಾಸಿನ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

8. ಡೆಟ್ ಮ್ಯಾನೇಜ್ಮೆಂಟ್

ಎಲ್ಲಾ ಲೋನ್‌ಗಳನ್ನು ಕ್ಲಿಯರ್ ಮಾಡುವುದು ಮತ್ತು ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಮುಖ್ಯವಾಗಿದೆ. ಹೆಚ್ಚಿನ ಬಡ್ಡಿ ಶುಲ್ಕಗಳನ್ನು ಪಡೆಯುವುದರಿಂದ ತಪ್ಪಿಸಿಕೊಳ್ಳಲು ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಪೂರ್ಣವಾಗಿ ಪಾವತಿಸುವ ಗುರಿಯನ್ನು ಹೊಂದಿರಿ. ಈ ಹವ್ಯಾಸವು ಹಣವನ್ನು ಉಳಿಸಲು ಮತ್ತು ಆರೋಗ್ಯಕರ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

9. ಬಲ್ಕ್ ಖರೀದಿ

ದೊಡ್ಡ ಪ್ರಮಾಣದಲ್ಲಿ ದಿನಸಿಗಳನ್ನು ಖರೀದಿಸುವುದು ಮತ್ತು ನಿಮ್ಮ ಊಟವನ್ನು ಶೆಡ್ಯೂಲ್ ಮಾಡುವುದು ಗಮನಾರ್ಹ ಉಳಿತಾಯಕ್ಕೆ ಕಾರಣವಾಗಬಹುದು. ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ತ್ಯಾಜ್ಯವನ್ನು ತಪ್ಪಿಸಲು ಹೋಲ್‌ಸೇಲ್ ಬೆಲೆಗಳಲ್ಲಿ ಐಟಂಗಳನ್ನು ಖರೀದಿಸಿ. ಮನೆಯಲ್ಲಿ ಊಟಗಳನ್ನು ತಯಾರಿಸುವುದು ಆರೋಗ್ಯಕರ ಜೀವನಶೈಲಿಗೆ ಕೊಡುಗೆ ನೀಡುತ್ತದೆ ಮತ್ತು ಆಹಾರದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.

10. ಸ್ಮಾರ್ಟ್ ಶಾಪಿಂಗ್

ದೊಡ್ಡ ಖರೀದಿ ಮಾಡುವ ಮೊದಲು, ಆನ್ಲೈನ್ ಡೀಲ್‌ಗಳನ್ನು ಸಂಶೋಧಿಸಿ ಮತ್ತು ಚೌಕಾಶಿಗಳಿಗಾಗಿ ಸೆಕೆಂಡ್-ಹ್ಯಾಂಡ್ ಸ್ಟೋರ್‌ಗಳನ್ನು ಪರೀಕ್ಷಿಸಿ. ವಿಶೇಷವಾಗಿ ಹಬ್ಬದ ಸೀಸನ್‌ಗಳ ಸುತ್ತಮುತ್ತಲಿನ ಸೇಲ್ಸ್ ಮತ್ತು ರಿಯಾಯಿತಿಗಳನ್ನು ನೋಡಿ. ಕೆಲವು ಪ್ರಯತ್ನದೊಂದಿಗೆ ಕಡಿಮೆ ಬೆಲೆಗಳಲ್ಲಿ ನೀವು ಸಾಮಾನ್ಯವಾಗಿ ಉನ್ನತ-ಗುಣಮಟ್ಟದ, ಬ್ರ್ಯಾಂಡೆಡ್ ಪ್ರಾಡಕ್ಟ್‌ಗಳನ್ನು ಹುಡುಕಬಹುದು.

11. ಇಂಪಲ್ಸ್ ಕಂಟ್ರೋಲ್

ಯಾವುದೇ ಪ್ರಚೋದನಾತ್ಮಕ ಖರೀದಿಗಳನ್ನು ಅಂತಿಮಗೊಳಿಸುವ ಮೊದಲು, ಮರುಪರಿಗಣಿಸಲು ಕೆಲವು ದಿನಗಳನ್ನು ತೆಗೆದುಕೊಳ್ಳಿ. ಈ ಕೂಲಿಂಗ್-ಆಫ್ ಅವಧಿಯು ಖರೀದಿ ಅಗತ್ಯವಿದೆಯೇ ಮತ್ತು ಡೀಲ್ ಮೌಲ್ಯಯುತವಾಗಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ನಿಮಗೆ ಐಟಂ ಅಗತ್ಯವಿಲ್ಲ ಎಂದು ನೀವು ಕಂಡುಕೊಳ್ಳುತ್ತೀರಿ.

12. ಉಡುಗೊರೆ ಪರ್ಯಾಯಗಳು

ದುಬಾರಿ ಉಡುಗೊರೆಗಳನ್ನು ಖರೀದಿಸುವ ಬದಲು, ನೀವೇ ತಯಾರಿಸಿ. ಪರ್ಸನಲೈಸ್ಡ್, ಹ್ಯಾಂಡ್‌ಮೇಡ್ ಗಿಫ್ಟ್‌ಗಳು ಸಾಮಾನ್ಯವಾಗಿ ಹೆಚ್ಚು ಭಾವನಾತ್ಮಕ ಮೌಲ್ಯವನ್ನು ಹೊಂದಿರುತ್ತವೆ ಮತ್ತು ಸ್ಟೋರ್‌ನಿಂದ-ಖರೀದಿಸಿದ ಐಟಂಗಳಿಗಿಂತ ಹೆಚ್ಚು ಸ್ಮರಣೀಯವಾಗಿರಬಹುದು. ಜೊತೆಗೆ, ಮನೆಯಲ್ಲಿ ಗಿಫ್ಟ್‌ಗಳನ್ನು ತಯಾರಿಸುವುದು ಹೆಚ್ಚು ಕೈಗೆಟಕುವ ಆಯ್ಕೆಯಾಗಿರಬಹುದು ಮತ್ತು ನಿಮ್ಮ ಪ್ರೆಸೆಂಟ್‌ಗಳಿಗೆ ವಿಶಿಷ್ಟ ಟಚ್ ಸೇರಿಸಬಹುದು.

13. ಸಾಮಾಜಿಕ ಉಳಿತಾಯಗಳು

ಪ್ರತಿ ವಾರಾಂತ್ಯದಲ್ಲಿ ಬೆಲೆಬಾಳುವ ರೆಸ್ಟೋರೆಂಟ್‌ಗಳಲ್ಲಿ ಡೈನಿಂಗ್ ಮಾಡುವ ಬದಲು, ಮನೆಯಲ್ಲಿ ಪಾಟ್‌ಲಾಕ್ ಸೇರುವಿಕೆಗಳನ್ನು ಆಯೋಜಿಸಿ. ಪ್ರತಿ ಅತಿಥಿಯು ಡಿಶ್ ಅನ್ನು ತರುತ್ತಾರೆ, ಇದು ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ಈವೆಂಟ್ ಅನ್ನು ಹೆಚ್ಚು ಆತ್ಮೀಯವಾಗಿಸುತ್ತದೆ. ಆಹಾರ ಮತ್ತು ಪಾನೀಯಗಳ ಮೇಲೆ ಹೆಚ್ಚು ಖರ್ಚು ಮಾಡದೆ ಬೆರೆಯಲು ಇದು ಉತ್ತಮ ಮಾರ್ಗವಾಗಿದೆ.

15. ರಜಾದಿನದ ಬಾಡಿಗೆಗಳು

ವಸತಿ ಆಯ್ಕೆಗಳಿಗಾಗಿ Airbnb ಅಥವಾ ಇತರ ರಜಾದಿನದ ಬಾಡಿಗೆ ಸೈಟ್‌ಗಳನ್ನು ನೋಡಿ. ಇಲ್ಲಿನ ಬಾಡಿಗೆಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಹೋಟೆಲ್‌ಗಳಿಗಿಂತ ಕಡಿಮೆ ವೆಚ್ಚವಾಗುತ್ತವೆ ಮತ್ತು ಹೆಚ್ಚು ಪರ್ಸನಲೈಸ್ಡ್ ಮತ್ತು ವಿಶಿಷ್ಟ ಅನುಭವವನ್ನು ನೀಡಬಹುದು. ಮನೆ ಅಥವಾ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆಯುವುದರಿಂದ ಹೆಚ್ಚುವರಿ ಆರಾಮ ಮತ್ತು ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು.

16. ಗುಣಮಟ್ಟದ ಫೋಕಸ್

ಅನೇಕ ಅಗ್ಗದ ಪ್ರಾಡಕ್ಟ್‌ಗಳನ್ನು ಖರೀದಿಸುವ ಬದಲು ಉನ್ನತ-ಗುಣಮಟ್ಟದ ಐಟಂಗಳನ್ನು ಆಯ್ಕೆ ಮಾಡಿ. ಅಗ್ಗದ ಸರಕುಗಳು ಉತ್ತಮ ಡೀಲ್‌ನಂತೆ ತೋರುತ್ತವೆ, ಅವುಗಳು ಸಾಮಾನ್ಯವಾಗಿ ತ್ವರಿತವಾಗಿ ಹಾನಿಗೀಡಾಗುತ್ತವೆ ಮತ್ತು ಆಗಾಗ್ಗೆ ಬದಲಿಸುವ ಅಗತ್ಯವಿರುತ್ತದೆ. ಕಡಿಮೆ ಆದರೆ ಉನ್ನತ-ಗುಣಮಟ್ಟದ ಐಟಂಗಳಲ್ಲಿ ಹೂಡಿಕೆ ಮಾಡುವುದರಿಂದ ನೀವು ದೀರ್ಘಾವಧಿಯಲ್ಲಿ ಹಣವನ್ನು ಉಳಿಸಬಹುದು ಮತ್ತು ಬಾಳಿಕೆ ಬರುವಿಕೆಯನ್ನು ಖಚಿತಪಡಿಸುತ್ತದೆ.

17. ಮನರಂಜನಾ ಆ್ಯಪ್‌ಗಳು

ನಿಮ್ಮ ಕೇಬಲ್ ಅಥವಾ ಸ್ಯಾಟಲೈಟ್ ಟಿವಿ ಪ್ಯಾಕೇಜ್ ಅನ್ನು ಮರುಮೌಲ್ಯಮಾಪನ ಮಾಡಿ. ಪಾಕೆಟ್-ಫ್ರೆಂಡ್ಲಿ ಸ್ಟ್ರೀಮಿಂಗ್ ಸರ್ವಿಸ್‌ಗಳು ಮತ್ತು ಮನರಂಜನಾ ಆ್ಯಪ್‌ಗಳ ಹೆಚ್ಚಳದೊಂದಿಗೆ, ಈ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಯಿಸುವ ಮೂಲಕ ನೀವು ವೆಚ್ಚಗಳನ್ನು ಕಡಿಮೆ ಮಾಡಬಹುದು ಎಂದು ನೀವು ಕಂಡುಕೊಳ್ಳಬಹುದು. ಅನೇಕರು ಸಾಂಪ್ರದಾಯಿಕ ಟಿವಿ ಪ್ಯಾಕೇಜ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ವ್ಯಾಪಕ ಶ್ರೇಣಿಯ ಕಂಟೆಂಟನ್ನು ಒದಗಿಸುತ್ತಾರೆ.

18. ಪ್ಲಾನ್ ಅಪ್ಡೇಟ್‌ಗಳು

ನೀವು ಅತ್ಯುತ್ತಮ ದರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ನಿಮ್ಮ ಮೊಬೈಲ್ ಫೋನ್ ಪ್ಲಾನ್ ರಿವ್ಯೂ ಮಾಡಿ. ಮೊಬೈಲ್ ಸರ್ವಿಸ್ ಪೂರೈಕೆದಾರರು ಆಗಾಗ್ಗೆ ತಮ್ಮ ಪ್ಲಾನ್‌ಗಳು ಮತ್ತು ದರಗಳನ್ನು ಅಪ್ಡೇಟ್ ಮಾಡುತ್ತಾರೆ, ಆದ್ದರಿಂದ ಹೊಸ ಡೀಲ್‌ಗಳ ಬಗ್ಗೆ ಗಮನಹರಿಸುವುದರಿಂದ ನಿಮ್ಮ ಅಗತ್ಯಗಳನ್ನು ಪೂರೈಸುವ ಹೆಚ್ಚು ವೆಚ್ಚ-ಪರಿಣಾಮಕಾರಿ ಆಯ್ಕೆಯನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತದೆ.

19. ಫ್ಯೂಯಲ್ ದಕ್ಷತೆ

ಅಪ್ಲಾಯನ್ಸ್‌ಗಳು ಬಳಕೆಯಲ್ಲಿಲ್ಲದಿದ್ದಾಗ ಅನ್‌ಪ್ಲಗ್ ಮಾಡಿ. ಅನೇಕ ಸಾಧನಗಳು ಆಫ್ ಆದಾಗಲೂ 'ಫ್ಯಾಂಟಮ್ ಎನರ್ಜಿ'ಯನ್ನು ಎಳೆದುಕೊಳ್ಳುವುದನ್ನು ಮುಂದುವರೆಸುತ್ತವೆ, ಇದು ಕಾಲಾನಂತರದಲ್ಲಿ ಹೆಚ್ಚಾಗಬಹುದು. ಬಳಸದ ಅಪ್ಲಾಯನ್ಸ್‌ಗಳನ್ನು ಡಿಸ್‌ಕನೆಕ್ಟ್ ಮಾಡುವ ಮೂಲಕ, ನೀವು ನಿಮ್ಮ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಯುಟಿಲಿಟಿ ಬಿಲ್‌ಗಳನ್ನು ಕಡಿಮೆ ಮಾಡಬಹುದು.

20. ಕಾರ್ ನಿರ್ವಹಣೆ

ನಿಮ್ಮ ಕಾರಿನ ನಿಯಮಿತ ಸರ್ವಿಸಿಂಗ್ ಹೆಚ್ಚುವರಿ ವೆಚ್ಚದಂತೆ ಕಾಣಬಹುದು, ಆದರೆ ದೀರ್ಘಾವಧಿಯ ಉಳಿತಾಯಕ್ಕೆ ಇದು ಮುಖ್ಯವಾಗಿದೆ. ಸರಿಯಾದ ನಿರ್ವಹಣೆಯು ದುಬಾರಿ ರಿಪೇರಿಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ವಾಹನವು ಸಮರ್ಥವಾಗಿ ನಡೆಯುವುದನ್ನು ಖಚಿತಪಡಿಸುತ್ತದೆ, ಅಂತಿಮವಾಗಿ ರಿಪೇರಿಗಳ ಮೇಲೆ ನಿಮ್ಮ ಹಣವನ್ನು ಉಳಿಸುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಬೋನಸ್ ಸಲಹೆಗಳು

  • ರಶೀದಿ ರೆಕಾರ್ಡ್‌ಗಳು: ನಿಮ್ಮ ಎಲ್ಲಾ ಖರೀದಿ ರಶೀದಿಗಳನ್ನು ತಿಂಗಳು ಅಥವಾ ಸ್ಟೋರ್ ಆಧಾರದ ಮೇಲೆ ಆಯೋಜಿಸಿ ಫೈಲ್ ಅನ್ನು ಇರಿಸಿ. ಇದು ವಾರಂಟಿ ಕ್ಲೈಮ್‌ಗಳು ಮತ್ತು ರಿಟರ್ನ್‌ಗಳಿಗೆ ಉಪಯುಕ್ತವಾಗಿದೆ. ಖರೀದಿಯ ಪುರಾವೆಯು ಹಾಳಾಗಬಹುದಾದ ಅಥವಾ ಸೇವೆಯ ಅಗತ್ಯವಿರುವ ಪ್ರಾಡಕ್ಟ್‌ಗಳೊಂದಿಗೆ ಯಾವುದೇ ಸಮಸ್ಯೆಗಳನ್ನು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.
  • ಸ್ಮಾರ್ಟ್ ಡೆಪಾಸಿಟ್‌ಗಳು: ಬೇಸಿಕ್ ಸೇವಿಂಗ್ಸ್ ಅಕೌಂಟ್‌ನಲ್ಲಿ ಉಳಿತಾಯ ಮಾಡಿದ ಹಣವನ್ನು ಬಿಡುವ ಬದಲು, ಅದನ್ನು ಫಿಕ್ಸೆಡ್ ಡೆಪಾಸಿಟ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವುದನ್ನು ಪರಿಗಣಿಸಿ. ಫಿಕ್ಸೆಡ್ ಡೆಪಾಸಿಟ್‌ಗಳು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ದರಗಳನ್ನು ಒದಗಿಸುತ್ತವೆ, ನಿಮ್ಮ ಉಳಿತಾಯದ ಹಣವನ್ನು ಕಾಲಾನಂತರದಲ್ಲಿ ಹೆಚ್ಚು ಗಳಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಉಳಿತಾಯವನ್ನು ಸಮರ್ಥವಾಗಿ ಬೆಳೆಸಲು ಇದು ಜಾಣ ಮಾರ್ಗವಾಗಿದೆ.

ಮುಕ್ತಾಯ

ನಿಮಗೆ ಉತ್ತಮವಾಗಿ ಕೆಲಸ ಮಾಡುವ ಉಳಿತಾಯದ ಮಾರ್ಗಗಳನ್ನು ಹುಡುಕಿ, ಮತ್ತು ಕ್ರಮೇಣ ಇವುಗಳನ್ನು ನಿಮ್ಮ ಜೀವನದಲ್ಲಿ ಸೇರಿಸಲು ಆರಂಭಿಸಿ. ಟ್ರ್ಯಾಕ್ ಮಾಡಲು, ನಿಮ್ಮ ಹಣಕಾಸನ್ನು ವೆರಿಫೈ ಮಾಡಲು ಮತ್ತು ನೀವು ನಿಮ್ಮ ಬಜೆಟ್ ಮತ್ತು ಪ್ಲಾನ್‌ಗೆ ಬದ್ಧರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ವಾರ ಕೆಲವು ಸಮಯವನ್ನು ಮೀಸಲಿಡಿ. ಸಂತೋಷವಾಗಿ ಕೆಲಸ ಮಾಡುವ ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಬಳಸಿ.

ನೆನಪಿಡಿ, ಹಣವನ್ನು ಉಳಿಸುವುದು ನಮ್ಮಲ್ಲಿ ಹೆಚ್ಚಿನವರಿಗೆ ಸುಲಭವಾಗುವುದಿಲ್ಲ. ಈ ಆಲೋಚನೆಗಳಲ್ಲಿ ಕಾಲು ಭಾಗವನ್ನು ನೀವು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದರೂ, ವರ್ಷದ ಅಂತ್ಯದ ವೇಳೆಗೆ ನೀವು ಉತ್ತಮ ಮೊತ್ತವನ್ನು ಪಡೆಯುವ ಹಾದಿಯಲ್ಲಿರುತ್ತೀರಿ, ನಂತರ ನೀವು ಕಾಯುತ್ತಿದ್ದ ಆ ದೊಡ್ಡ ಖರೀದಿಯ ಮೇಲೆ ಹಣವನ್ನು ಖರ್ಚು ಮಾಡಬಹುದು. ಕೇವಲ ಸೇವ್ ಮಾಡುವುದಲ್ಲ, #SaveToSpend!

ನಿಮ್ಮ ದೈನಂದಿನ ಜೀವನದಲ್ಲಿ ಉಳಿತಾಯ ಮಾಡಲು ಮಾರ್ಗಗಳನ್ನು ಹುಡುಕುತ್ತಿದ್ದೀರಾ? ಎಚ್ ಡಿ ಎಫ್ ಸಿ ಬ್ಯಾಂಕ್ ಇನ್ಸ್ಟಾ ಅಕೌಂಟ್‌ನೊಂದಿಗೆ ಕೆಲವು ಸರಳ ಹಂತಗಳಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ತಕ್ಷಣವೇ ತೆರೆಯಿರಿ. ಇದು ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್‌ನೊಂದಿಗೆ ಮುಂಚಿತ-ಸಕ್ರಿಯಗೊಳಿಸಲಾಗಿದೆ, ಮತ್ತು ನೀವು ಕಾರ್ಡ್‌ಲೆಸ್ ನಗದು ವಿತ್‌ಡ್ರಾವಲ್‌ಗಳನ್ನು ಆನಂದಿಸಬಹುದು. ನಮ್ಮ ಸೇವಿಂಗ್ಸ್ ಅಕೌಂಟ್ ವೇರಿಯಂಟ್‌ಗಳನ್ನು ವೆರಿಫೈ ಮಾಡಲು ಇಲ್ಲಿ ಕ್ಲಿಕ್ ಮಾಡಿ!

ಸೇವಿಂಗ್ಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ.

ಹಕ್ಕುತ್ಯಾಗ:

*ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯವಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದು ನಿಮ್ಮ ಸ್ವಂತ ಸಂದರ್ಭಗಳಲ್ಲಿ ನಿರ್ದಿಷ್ಟ ಸಲಹೆಗೆ ಪರ್ಯಾಯವಲ್ಲ. ನೀವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು/ಯಾವುದೇ ಕ್ರಮದಿಂದ ದೂರವಿಡುವ ಮೊದಲು ನಿರ್ದಿಷ್ಟ ವೃತ್ತಿಪರ ಸಲಹೆಯನ್ನು ಪಡೆಯಲು ನಿಮಗೆ ಶಿಫಾರಸು ಮಾಡಲಾಗುತ್ತದೆ. 

ಆಗಾಗ ಕೇಳಲಾಗುವ ಪ್ರಶ್ನೆಗಳು

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

test

ಸಂಬಂಧಿತ ಕಂಟೆಂಟ್

ಉತ್ತಮ ನಿರ್ಧಾರಗಳು ಉತ್ತಮ ಹಣಕಾಸಿನ ಜ್ಞಾನದೊಂದಿಗೆ ಬರುತ್ತವೆ.