1. ನನ್ನ ಕಾರ್ಡ್ ಸೆಕ್ಯೂರ್/ಟೋಕನೈಸ್ ಎಂದರೇನು?
ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಸೇವ್ ಮಾಡಲು ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ಆಯ್ಕೆಗಳನ್ನು ಒದಗಿಸಿವೆ ಎಂದು ನೀವು ಗಮನಿಸಿದ್ದೀರಿ. ಇದು ಪಾವತಿಯನ್ನು ತ್ವರಿತ ಮತ್ತು ಸುಲಭಗೊಳಿಸಿದೆ. 1ನೇ ಅಕ್ಟೋಬರ್ 2022 ರಿಂದ ಅನ್ವಯವಾಗುವಂತೆ, ಮರ್ಚೆಂಟ್‌ಗಳು ಗ್ರಾಹಕರ ಕಾರ್ಡ್ ನಂಬರ್‌ಗಳು, CVV ಮತ್ತು ಗಡುವು ದಿನಾಂಕ ಹಾಗೂ ಇತರ ಯಾವುದೇ ಸೂಕ್ಷ್ಮ ಕಾರ್ಡ್ ಮಾಹಿತಿಯನ್ನು ಸೇವ್/ಸ್ಟೋರ್ ಮಾಡಲು ಸಾಧ್ಯವಿಲ್ಲ. ವರ್ಧಿತ ಕಾರ್ಡ್ ಭದ್ರತೆಯನ್ನು ಒದಗಿಸುವುದು RBI ನಿಯಮದ ಪ್ರಕಾರವಾಗಿದೆ. ನನ್ನ ಕಾರ್ಡ್ ಸೆಕ್ಯೂರ್/ಟೋಕನೈಸ್ ಎಂದರೆ ಆನ್‌ಲೈನ್ ವೆಬ್‌ಸೈಟ್‌ಗಳು/ಆ್ಯಪ್‌ಗಳಲ್ಲಿ "ಟೋಕನ್" ಎಂಬ ಪರ್ಯಾಯ ಕೋಡ್‌ನೊಂದಿಗೆ ನಿಜವಾದ ಅಥವಾ ಕ್ಲಿಯರ್ ಕಾರ್ಡ್ ನಂಬರ್ ಬದಲಿಯನ್ನು ಸೂಚಿಸುತ್ತದೆ.
2. ಈ ಸೇವೆಯನ್ನು ಪಡೆಯಲು ನಾನು ಪಾವತಿಸಬೇಕಾದ ಶುಲ್ಕಗಳು ಯಾವುವು?
ಈ ಸೇವೆಯನ್ನು ಪಡೆಯಲು ನೀವು ಯಾವುದೇ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.
3. ನಾನು ನನ್ನ ಕಾರ್ಡ್ ಅನ್ನು ಏಕೆ ಸೆಕ್ಯೂರ್/ಟೋಕನೈಸ್ ಮಾಡಬೇಕು?
ಟ್ರಾನ್ಸಾಕ್ಷನ್ ಮಾಡಲು ನಿಜವಾದ ಕಾರ್ಡ್ ವಿವರಗಳನ್ನು ಮರ್ಚೆಂಟ್‌ಗಳೊಂದಿಗೆ ಹಂಚಿಕೊಳ್ಳದ/ಸಂಗ್ರಹಿಸದ ಕಾರಣ ಸೆಕ್ಯೂರ್/ಟೋಕನೈಸ್ ಮಾಡಿದ ಕಾರ್ಡ್ ಟ್ರಾನ್ಸಾಕ್ಷನ್ ಸುರಕ್ಷಿತವಾಗಿದೆ. ಪ್ರತಿ ಬಾರಿ ನಿಮ್ಮ ಸಂಪೂರ್ಣ ಕಾರ್ಡ್ ವಿವರಗಳನ್ನು ನಮೂದಿಸುವ ತೊಂದರೆಯನ್ನು ಉಳಿಸಲು ಸೆಕ್ಯೂರಿಂಗ್/ಟೋಕನೈಸೇಶನ್ ನಿಮಗೆ ಸಹಾಯ ಮಾಡುತ್ತದೆ
4. ನನ್ನ ಕಾರ್ಡ್ ಅನ್ನು ನಾನು ಹೇಗೆ ಸೆಕ್ಯೂರ್/ಟೋಕನೈಸ್ ಮಾಡಬಹುದು?
- ಹಂತ 1 - ದಿನಸಿ ಖರೀದಿಸಲು, ಬಿಲ್‌ಗಳನ್ನು ಪಾವತಿಸಲು ಅಥವಾ ಆಹಾರವನ್ನು ಆರ್ಡರ್ ಮಾಡಲು ಮತ್ತು ಟ್ರಾನ್ಸಾಕ್ಷನ್ ಆರಂಭಿಸಲು ನಿಮ್ಮ ಮೆಚ್ಚಿನ ಆನ್‌ಲೈನ್ ಅಪ್ಲಿಕೇಶನ್/ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2 - ಚೆಕ್-ಔಟ್ ಪುಟದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಆಯ್ಕೆಮಾಡಿ ಮತ್ತು CVV ಒದಗಿಸಿ
ಹಂತ 3 - "ನಿಮ್ಮ ಕಾರ್ಡ್ ಸೆಕ್ಯೂರ್ ಮಾಡಿ" ಅಥವಾ "RBI ಮಾರ್ಗಸೂಚಿಗಳ ಪ್ರಕಾರ ಕಾರ್ಡ್ ಸೇವ್ ಮಾಡಿ" ಚೆಕ್ ಬಾಕ್ಸ್ ಮೇಲೆ ಟಿಕ್ ಮಾಡಿ
ಹಂತ 4 - ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ಪಡೆದ OTP ಯನ್ನು ನಮೂದಿಸಿ
ಹಂತ 5 - ಅಭಿನಂದನೆಗಳು!!! ನಿಮ್ಮ ಕಾರ್ಡ್ ವಿವರಗಳು ಈಗ ಸುರಕ್ಷಿತವಾಗಿವೆ.
5. 1ನೇ ಅಕ್ಟೋಬರ್ 2022 ಕ್ಕಿಂತ ಮೊದಲು ನಾನು ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡದಿದ್ದರೆ ಏನಾಗುತ್ತದೆ?
ನೀವು ಯಾವುದೇ ಮರ್ಚೆಂಟ್ ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಸೇವ್ ಮಾಡಿದ್ದರೆ, ಅದನ್ನು 1ನೇ ಅಕ್ಟೋಬರ್ 2022 ಕ್ಕಿಂತ ಮೊದಲು ಡಿಲೀಟ್ ಮಾಡಲಾಗುತ್ತದೆ. ಪ್ರತಿ ಬಾರಿ ಪಾವತಿಸಲು, ನೀವು ಪೂರ್ಣ ಕಾರ್ಡ್ ವಿವರಗಳನ್ನು ನಮೂದಿಸಬೇಕು.
6. ಒಮ್ಮೆ ಸೆಕ್ಯೂರ್ಡ್/ಟೋಕನೈಸ್ ಮಾಡಿದ ನಂತರ, ಮರ್ಚೆಂಟ್ ಪೇಜಿನಲ್ಲಿ ನನ್ನ ಕಾರ್ಡ್ ಅನ್ನು ನಾನು ಹೇಗೆ ಗುರುತಿಸುತ್ತೇನೆ?
ಮರ್ಚೆಂಟ್ ಪೇಜಿನಲ್ಲಿ ಕಾರ್ಡ್‌ನ ಕೊನೆಯ 4 ಅಂಕಿಗಳನ್ನು ಬಳಸಿಕೊಂಡು ನಿಮ್ಮ ಕಾರ್ಡ್ ಅನ್ನು ನೀವು ಗುರುತಿಸಲು ಸಾಧ್ಯವಾಗುತ್ತದೆ, ಇದು ಮರ್ಚೆಂಟ್‌ನಿಂದ ನಿರಂತರವಾಗಿ ಸಂಗ್ರಹಿಸಲಾಗುವ ವಿವರವಾಗಿದೆ.
7. ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡಿದ ನಂತರ ನನ್ನ ಕಾರ್ಡ್ ವಿವರಗಳು ಸುರಕ್ಷಿತವೇ?
ನಿಜವಾದ ಕಾರ್ಡ್ ಡೇಟಾ, ಟೋಕನ್ ಮತ್ತು ಇತರ ಸಂಬಂಧಿತ ವಿವರಗಳನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು/ಅಥವಾ ಅಧಿಕೃತ ಕಾರ್ಡ್ ನೆಟ್ವರ್ಕ್‌ಗಳಿಂದ ಸೆಕ್ಯೂರ್ ಎನ್‌ಕ್ರಿಪ್ಟ್ ಮಾಡಲಾದ ವಿಧಾನದಲ್ಲಿ ಸಂಗ್ರಹಿಸಲಾಗುತ್ತದೆ. ಮರ್ಚೆಂಟ್‌ಗಳು ಪೂರ್ಣ ಕಾರ್ಡ್ ನಂಬರ್ ಅಥವಾ ಇತರ ಯಾವುದೇ ಕಾರ್ಡ್ ವಿವರಗಳನ್ನು ಸ್ಟೋರ್ ಮಾಡುವುದಿಲ್ಲ.
8. ನನ್ನ ಸೆಕ್ಯೂರ್/ಟೋಕನೈಸ್ಡ್ ಕಾರ್ಡ್‌ಗಳನ್ನು ನಾನು ಹೇಗೆ ನಿರ್ವಹಿಸಬಹುದು?
ದಯವಿಟ್ಟು ಭೇಟಿ ನೀಡಿ hdfcbk.io/k/DUvfZJV5g5z ನಿಮ್ಮ ಕಾರ್ಡ್‌ನಲ್ಲಿ ರಚಿಸಲಾದ ಟೋಕನ್‌ಗಳನ್ನು ಸಸ್ಪೆಂಡ್ ಮಾಡಲು/ಪುನರಾರಂಭಿಸಲು.
- ಸಸ್ಪೆಂಡ್ ಫಂಕ್ಷನಾಲಿಟಿ ಯಾವುದೇ ದುರುಪಯೋಗವನ್ನು ತಪ್ಪಿಸಲು ನಿರ್ದಿಷ್ಟ ಮರ್ಚೆಂಟ್ ವೆಬ್‌ಸೈಟ್/ಆ್ಯಪ್‌ನಲ್ಲಿ ಟೋಕನ್ ಬ್ಲಾಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಒಮ್ಮೆ ಸಸ್ಪೆಂಡ್ ಮಾಡಿದ ನಂತರ, ನೀವು ಟ್ರಾನ್ಸಾಕ್ಷನ್ ಮಾಡಲು ಬಯಸುವ ಪ್ರತಿ ಬಾರಿ ಆಯಾ ಮರ್ಚೆಂಟ್ ವೆಬ್‌ಸೈಟ್/ಆ್ಯಪ್‌ನಲ್ಲಿ ಸಂಪೂರ್ಣ ಕಾರ್ಡ್ ವಿವರಗಳನ್ನು ನಮೂದಿಸಬೇಕು.
- ಮರುಆರಂಭಿಸಿ ಫಂಕ್ಷನಾಲಿಟಿಯು ನಿರ್ದಿಷ್ಟ ಮರ್ಚೆಂಟ್ ವೆಬ್‌ಸೈಟ್/ಆ್ಯಪ್‌ನಲ್ಲಿ ಸಸ್ಪೆಂಡ್ ಮಾಡಲಾದ ಟೋಕನ್ ಅನ್‌ಬ್ಲಾಕ್ ಮಾಡಲು ಮತ್ತು ಪ್ರತಿ ಬಾರಿ ನಿಮ್ಮ ಸಂಪೂರ್ಣ ಕಾರ್ಡ್ ವಿವರಗಳನ್ನು ನಮೂದಿಸುವ ತೊಂದರೆಯನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.
9. ಇಂಟರ್ನ್ಯಾಷನಲ್ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳಿಗಾಗಿ ನಾನು ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡಬೇಕೇ?
ಇಲ್ಲ. ಡೊಮೆಸ್ಟಿಕ್ ಟ್ರಾನ್ಸಾಕ್ಷನ್‌ಗಳಿಗೆ ಮಾತ್ರ ಟೋಕನೈಸೇಶನ್ ಅನ್ವಯವಾಗುತ್ತದೆ.
10. ಮರ್ಚೆಂಟ್ ಔಟ್ಲೆಟ್‌ಗಳಲ್ಲಿ ನಾನು ಮಾಡುವ POS ಟ್ರಾನ್ಸಾಕ್ಷನ್‌ಗಳಿಗೆ ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡಬೇಕೇ?
ಇಲ್ಲ. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳನ್ನು ನಡೆಸಲು ಮಾತ್ರ ಫೈಲ್ ಟೋಕನೈಸೇಶನ್ ಕಾರ್ಡ್ ಅಗತ್ಯವಿದೆ
11. ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡುವುದು ನನಗೆ ಕಡ್ಡಾಯವೇ?
ಇಲ್ಲ, ನಿಮ್ಮ ಕಾರ್ಡ್ ಟೋಕನೈಸ್ ಮಾಡದಿರಲು ನೀವು ಆಯ್ಕೆ ಮಾಡಬಹುದು. ಸೆಕ್ಯೂರ್ಡ್/ಟೋಕನೈಸ್ ಮಾಡದಿದ್ದರೆ, 1ನೇ ಅಕ್ಟೋಬರ್ 2022 ರಿಂದ ಆರಂಭಗೊಂಡು, ನಿಮ್ಮ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳನ್ನು ಪೂರ್ಣಗೊಳಿಸಲು ನೀವು ಪ್ರತಿ ಬಾರಿ ಪೂರ್ಣ ಕಾರ್ಡ್ ನಂಬರ್, CVV ಮತ್ತು ಗಡುವು ದಿನಾಂಕವನ್ನು ನಮೂದಿಸಬೇಕು.
12. ನನ್ನ ಸಮ್ಮತಿಯಿಲ್ಲದೆ ಮರ್ಚೆಂಟ್ ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡಬಹುದೇ?
ಇಲ್ಲ. ಟೋಕನೈಸೇಶನ್ ಕೋರಿಕೆಯ ನೋಂದಣಿಯನ್ನು ಹೆಚ್ಚುವರಿ ದೃಢೀಕರಣದ ಅಂಶ (AFA) ಮೂಲಕ ಸ್ಪಷ್ಟ ಗ್ರಾಹಕ ಸಮ್ಮತಿಯೊಂದಿಗೆ ಮಾತ್ರ ಮಾಡಲಾಗುತ್ತದೆ ಮತ್ತು ಚೆಕ್ ಬಾಕ್ಸ್, ರೇಡಿಯೋ ಬಟನ್ ಇತ್ಯಾದಿಗಳ ಬಲವಂತ/ಡೀಫಾಲ್ಟ್/ಆಟೋಮ್ಯಾಟಿಕ್ ಆಯ್ಕೆಯ ಮೂಲಕ ಅಲ್ಲ.
13. ನಾನು ಪ್ರತಿ ಮರ್ಚೆಂಟ್‌ನಲ್ಲಿ ನನ್ನ ಕಾರ್ಡ್ ಅನ್ನು ಸೆಕ್ಯೂರ್/ಟೋಕನೈಸ್ ಮಾಡಬೇಕೇ?
ಹೌದು. ನಿರ್ದಿಷ್ಟ ಮರ್ಚೆಂಟ್‌ನಲ್ಲಿ ಕಾರ್ಡ್‌ಗೆ ಟೋಕನ್ ವಿಶಿಷ್ಟವಾಗಿದೆ. ನೀವು ನಿಮ್ಮ ಕಾರ್ಡ್ ಅನ್ನು ಅನೇಕ ಮರ್ಚೆಂಟ್‌ಗಳಿಗೆ ಬಳಸಲು ಬಯಸಿದರೆ, ನೀವು ಎಲ್ಲಾ ಮರ್ಚೆಂಟ್‌ಗಳಲ್ಲಿ ನಿಮ್ಮ ಕಾರ್ಡ್ ಅನ್ನು ಸೆಕ್ಯೂರ್‌ಗೊಳಿಸಬೇಕು.
14. ನಾನು ಸೆಕ್ಯೂರ್/ಟೋಕನೈಸ್ ಮಾಡಬಹುದಾದ ಕಾರ್ಡ್‌ಗಳ ನಂಬರ್ ಮೇಲೆ ಯಾವುದೇ ಮಿತಿ ಇದೆಯೇ?
ಇಲ್ಲ, ಎಷ್ಟೇ ಸಂಖ್ಯೆಯ ಕಾರ್ಡ್‌ಗಳ ಟೋಕನೈಸೇಶನ್‌ಗಾಗಿ ನೀವು ಕೋರಿಕೆ ಸಲ್ಲಿಸಬಹುದು.
15. ನಾನು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎರಡನ್ನೂ ಹೊಂದಿದ್ದೇನೆ. ಪ್ರತಿ ಮರ್ಚೆಂಟ್‌ನಲ್ಲಿ ನಾನು 2 ವಿಭಿನ್ನ ಟೋಕನ್‌ಗಳನ್ನು ರಚಿಸಬೇಕೇ.
ಹೌದು.
16. ಒಂದು ವೇಳೆ ನಾನು ಒಂದಕ್ಕಿಂತ ಹೆಚ್ಚು ಕಾರ್ಡ್ ಟೋಕನೈಸ್ ಮಾಡಿದ್ದರೆ ಯಾವ ಕಾರ್ಡ್ ಬಳಸಬೇಕು ಎಂಬುದನ್ನು ನಾನು ಆಯ್ಕೆ ಮಾಡಬಹುದೇ?
ಯಾವುದೇ ಟ್ರಾನ್ಸಾಕ್ಷನ್ ಮಾಡಲು, ಕಾರ್ಡ್‌ನ ಕೊನೆಯ 4 ಅಂಕಿಗಳನ್ನು ಗುರುತಿಸುವ ಮೂಲಕ ನೀವು ಯಾವುದೇ ಕಾರ್ಡ್‌ಗಳನ್ನು ಬಳಸಲು ಸ್ವತಂತ್ರರಾಗಿದ್ದೀರಿ.
17. ನನ್ನ ಕಾರ್ಡ್ ಬದಲಾಯಿಸಿದರೆ ಅಥವಾ ನವೀಕರಿಸಿದರೆ ಅಥವಾ ಮರುವಿತರಿಸಿದರೆ ಅಥವಾ ಅಪ್ಗ್ರೇಡ್ ಆದರೆ ಟೋಕನ್‌ಗೆ ಏನಾಗುತ್ತದೆ?
ನೀವು ಮತ್ತೊಮ್ಮೆ ಮರ್ಚೆಂಟ್ ಪುಟಕ್ಕೆ ಭೇಟಿ ನೀಡಿ ಹೊಸ ಟೋಕನ್ ರಚಿಸಬೇಕು.