ನನ್ನ ಕಾರ್ ಲೋನ್ EMI ಕಡಿಮೆ ಮಾಡುವುದು ಹೇಗೆ?

ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಪಡೆಯುವುದು, ದೀರ್ಘ ಕಾಲಾವಧಿಗಳನ್ನು ಆಯ್ಕೆ ಮಾಡುವುದು, ದೊಡ್ಡ ಡೌನ್ ಪೇಮೆಂಟ್‌ಗಳನ್ನು ಮಾಡುವುದು, ಮುಂಪಾವತಿಗಳನ್ನು ಪರಿಗಣಿಸಿ ಮತ್ತು ಉತ್ತಮ ನಿಯಮಗಳಿಗಾಗಿ ಇನ್ನೊಂದು ಬ್ಯಾಂಕ್‌ಗೆ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವುದನ್ನು ಒಳಗೊಂಡಂತೆ ನಿಮ್ಮ ಕಾರ್ ಲೋನ್ EMI ಅನ್ನು ಕಡಿಮೆ ಮಾಡಲು ಬ್ಲಾಗ್ ಪ್ರಾಯೋಗಿಕ ವಿಧಾನಗಳನ್ನು ವಿವರಿಸುತ್ತದೆ.

ಸಾರಾಂಶ:

  • ಸ್ಪರ್ಧಾತ್ಮಕ ಬಡ್ಡಿ ದರಗಳು ಉತ್ತಮ ಕ್ರೆಡಿಟ್ ಸ್ಕೋರ್‌ನಿಂದ ಪ್ರಭಾವಿತವಾಗಿರುತ್ತವೆ, EMI ಕೈಗೆಟುಕುವಿಕೆಯನ್ನು ಸುಧಾರಿಸುತ್ತವೆ.

  • ದೀರ್ಘಾವಧಿಯ ಲೋನ್ ಅವಧಿಯನ್ನು ಆಯ್ಕೆ ಮಾಡುವುದರಿಂದ EMI ಮೊತ್ತಗಳನ್ನು ಕಡಿಮೆ ಮಾಡುತ್ತದೆ ಆದರೆ ಪಾವತಿಸಿದ ಒಟ್ಟು ಬಡ್ಡಿಯನ್ನು ಹೆಚ್ಚಿಸಬಹುದು.

  • ದೊಡ್ಡ ಡೌನ್ ಪೇಮೆಂಟ್ ಅಸಲು ಮೊತ್ತವನ್ನು ಕಡಿಮೆ ಮಾಡುತ್ತದೆ, ಇದು ಕಡಿಮೆ EMI ಗಳಿಗೆ ಕಾರಣವಾಗುತ್ತದೆ.

  • ಭಾಗಶಃ ಮುಂಪಾವತಿಗಳು ಬಾಕಿ ಅಸಲನ್ನು ಕಡಿಮೆ ಮಾಡುತ್ತವೆ, ಮಾಸಿಕ ಪಾವತಿಗಳನ್ನು ಕಡಿಮೆ ಮಾಡುತ್ತವೆ. 

  • ಪ್ರಸ್ತುತ ಲೋನ್ ಅನುಕೂಲಕರವಾಗಿದ್ದರೆ ಕಾರ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಉತ್ತಮ ನಿಯಮಗಳನ್ನು ನೀಡಬಹುದು.

ಮೇಲ್ನೋಟ

ನೀವು ಈಗಷ್ಟೇ ನಿಮ್ಮ ಕನಸಿನ ಕಾರನ್ನು ಖರೀದಿಸಿದ್ದೀರಿ, ಆದರೆ ತಿಂಗಳು ಕಳೆದಂತೆ, ನಿಮ್ಮ ಕಾರ್ ಲೋನ್ EMI ಹೊರೆಯು ಹೆಚ್ಚಾಗುತ್ತದೆ. ಹೆಚ್ಚಿನ ಮಾಸಿಕ ಪಾವತಿಗಳ ಒತ್ತಡವು ನಿಮ್ಮ ಹೊಸ ವಾಹನವನ್ನು ಚಾಲನೆ ಮಾಡುವ ರೋಮಾಂಚನವನ್ನು ಮರೆ ಮಾಚುತ್ತದೆ. ಆದರೆ ನಿಮ್ಮ ಜೀವನಶೈಲಿಯನ್ನು ತ್ಯಾಗ ಮಾಡದೆ ಈ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಮಾರ್ಗವಿದೆ ಎಂದರೆ ಏನಂತೀರಿ? ನಿಮ್ಮ ಕಾರ್ ಲೋನ್ EMI ಕಡಿಮೆ ಮಾಡುವುದರಿಂದ ನಿಮ್ಮ ಮಾಸಿಕ ಬಜೆಟ್ ಅನ್ನು ನೀವು ಯೋಚಿಸುವುದಕ್ಕಿಂತ ಹೆಚ್ಚು ಸುಲಭವಾಗಿ ನಿರ್ವಹಿಸಬಹುದು ಮತ್ತು ಸರಳವಾಗಿಸಬಹುದು. ಕೆಲವು ಸಾಮಾನ್ಯ ವಿಧಾನಗಳನ್ನು ಹೈಲೈಟ್ ಮಾಡೋಣ.

ನಿಮ್ಮ ಕಾರ್ ಲೋನ್ EMI ಕಡಿಮೆ ಮಾಡಲು ಉತ್ತಮ ಮಾರ್ಗಗಳು

ಸ್ಪರ್ಧಾತ್ಮಕ ದರಗಳು

ನಿಮ್ಮ ಲೋನ್ ಮೇಲೆ ನೀವು ಪಾವತಿಸುವ ಬಡ್ಡಿ ದರವು ನೀವು ಪಾವತಿಸುವ EMI ಮೊತ್ತವನ್ನು ಪ್ರಭಾವಿಸುವ ಅಂಶಗಳಲ್ಲಿ ಒಂದಾಗಿದೆ. ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ಪಡೆಯಲು, ನೀವು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿದ್ದೀರಿ ಎಂದು ಪರೀಕ್ಷಿಸಿ. ಲೋನನ್ನು ಅಂತಿಮಗೊಳಿಸುವ ಮೊದಲು ಸಿಬಿಲ್‌ನಂತಹ ರೇಟಿಂಗ್ ಏಜೆನ್ಸಿಯ ಮೂಲಕ ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ - 750 ಕ್ಕಿಂತ ಹೆಚ್ಚಿನದು - ನಿಮಗೆ ಉತ್ತಮ ಡೀಲ್ ನೀಡುತ್ತದೆ. 

ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರತಿ ಲಕ್ಷಕ್ಕೆ ₹ 1,234 ರಿಂದ ಆರಂಭವಾಗುವ EMI ಗಳೊಂದಿಗೆ ಹೆಚ್ಚು ಸ್ಪರ್ಧಾತ್ಮಕ ದರಗಳಲ್ಲಿ ಕಾರ್ ಲೋನ್‌ಗಳನ್ನು ಒದಗಿಸುತ್ತದೆ​​​​​​​

ದೀರ್ಘ ಕಾಲಾವಧಿಗಳು

ದೀರ್ಘಾವಧಿಯನ್ನು ಆಯ್ಕೆ ಮಾಡುವುದರಿಂದ ನಿಮ್ಮ EMI ಅನ್ನು ಆಟೋಮ್ಯಾಟಿಕ್ ಆಗಿ ಕಡಿಮೆ ಮಾಡಲಾಗುತ್ತದೆ. ಉದಾಹರಣೆಗೆ, ನೀವು 8% ಬಡ್ಡಿಯಲ್ಲಿ ₹1 ಲಕ್ಷದ 5-ವರ್ಷದ ಲೋನಿಗೆ ₹2028 EMI ಪಾವತಿಸುತ್ತೀರಿ. ಆದರೆ 7 ವರ್ಷಗಳವರೆಗೆ ಅವಧಿಯನ್ನು ವಿಸ್ತರಿಸುವುದರಿಂದ EMI ಅನ್ನು ಸುಮಾರು 25% ರಿಂದ ₹1559 ವರೆಗೆ ಕಡಿಮೆ ಮಾಡಬಹುದು.

ಎಚ್ ಡಿ ಎಫ್ ಸಿ ಬ್ಯಾಂಕ್ 7 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಗಳನ್ನು ಒದಗಿಸುತ್ತದೆ. ನಮ್ಮ ಕಾರ್ ಲೋನ್ EMI ಕ್ಯಾಲ್ಕುಲೇಟರ್ ಮೂಲಕ ನೀವು ಸುಲಭವಾಗಿ ನಿಮ್ಮ EMI ಅನ್ನು ಆನ್ಲೈನಿನಲ್ಲಿ ಲೆಕ್ಕ ಹಾಕಬಹುದು.

ದೊಡ್ಡ ಡೌನ್ ಪೇಮೆಂಟ್

ನೀವು ಬಡ್ಡಿ ದರ ಮತ್ತು ಕಾಲಾವಧಿ ವಿಷಯದಲ್ಲಿ ತೃಪ್ತರಾಗಿದ್ದೀರಿ ಮತ್ತು ಅದನ್ನು ಬದಲಾಯಿಸಲು ಬಯಸುವುದಿಲ್ಲ. ಹಾಗಿದ್ದಾಗ, ನಿಮಗೆ ಯಾವ ಆಯ್ಕೆಗಳಿವೆ? ನೀವು ಅದನ್ನು ಕೈಗೆಟಕುವಂತೆ ಮಾಡಿದರೆ, ನಿಮ್ಮ ಲೋನ್ ಮೇಲೆ ದೊಡ್ಡ ಡೌನ್‌ಪೇಮೆಂಟ್ ಮಾಡಿ. ಡೌನ್‌ಪೇಮೆಂಟ್ ಎಂಬುದು ಆಸ್ತಿಯನ್ನು ಖರೀದಿಸುವಾಗ ಮುಂಗಡವಾಗಿ ಮಾಡುವ ಆರಂಭಿಕ ಪಾವತಿಯಾಗಿದೆ. ಇದು ನಿಮ್ಮ ಲೋನ್ ಮೊತ್ತವನ್ನು ಕಡಿಮೆ ಮಾಡುತ್ತದೆ ಮತ್ತು ಆದ್ದರಿಂದ, ನಿಮ್ಮ EMI ಗಳು ಕೂಡಾ ಕಡಿಮೆಯಾಗುತ್ತವೆ. 

ಮುಂಪಾವತಿ

ಅಸ್ತಿತ್ವದಲ್ಲಿರುವ ಕಾರ್ ಲೋನ್ ಮೇಲೆ ನಿಮ್ಮ EMI ಗಳನ್ನು ಕಡಿಮೆ ಮಾಡಲು, ಫಂಡ್‌ಗಳು ಲಭ್ಯವಿದ್ದರೆ ಭಾಗಶಃ ಮುಂಪಾವತಿಯನ್ನು ಮಾಡುವುದನ್ನು ಪರಿಗಣಿಸಿ. ನಿಮ್ಮ ಲೋನ್‌ನ ಒಂದು ಭಾಗವನ್ನು ಮುಂಗಡ ಪಾವತಿಸುವುದರಿಂದ ನಿಮ್ಮ ಬಾಕಿ ಅಸಲನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ಪರಿಣಾಮವಾಗಿ, ನಿಮ್ಮ ಮಾಸಿಕ ಪಾವತಿಗಳು. ಮುಂದುವರೆಯುವ ಮೊದಲು, ಅನಿರೀಕ್ಷಿತ ಶುಲ್ಕಗಳನ್ನು ತಪ್ಪಿಸಲು ಮುಂಪಾವತಿ ಶುಲ್ಕಗಳ ಬಗ್ಗೆ ನಿಮ್ಮ ಬ್ಯಾಂಕ್‌ನೊಂದಿಗೆ ಪರೀಕ್ಷಿಸಿ.

ಮುಂಪಾವತಿಗಳನ್ನು ಮಾಡಲು ಪರಿಣಾಮಕಾರಿ ಮಾರ್ಗಗಳಲ್ಲಿ ಒಟ್ಟು ಮೊತ್ತದ ಪಾವತಿಗಳನ್ನು ಬಳಸುವುದು, ನಿಯಮಿತವಾಗಿ ಹೆಚ್ಚುವರಿ ಮೊತ್ತಗಳನ್ನು ಕೊಡುಗೆ ನೀಡುವುದು, ಲೋನ್‌ಗೆ ಬೋನಸ್‌ಗಳು ಅಥವಾ ಹೆಚ್ಚುವರಿ ಆದಾಯವನ್ನು ಅಪ್ಲೈ ಮಾಡುವುದು ಅಥವಾ ಉಳಿತಾಯ ಅಥವಾ ತೆರಿಗೆ ರಿಫಂಡ್‌ಗಳನ್ನು ಬಳಸಿಕೊಂಡು ವಾರ್ಷಿಕ ಮುಂಪಾವತಿಯನ್ನು ಮಾಡುವುದು ಸೇರಿವೆ.

ಬ್ಯಾಲೆನ್ಸ್ ಟ್ರಾನ್ಸ್‌ಫರ್

ಕಾರ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಕಡಿಮೆ ಬಡ್ಡಿ ದರಗಳು ಅಥವಾ ಹೆಚ್ಚು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳಂತಹ ಉತ್ತಮ ನಿಯಮಗಳನ್ನು ಒದಗಿಸುವ ಹೊಸ ಬ್ಯಾಂಕ್‌ಗೆ ವರ್ಗಾಯಿಸುವುದನ್ನು ಒಳಗೊಂಡಿರುತ್ತದೆ. ನಿಮ್ಮ ಪ್ರಸ್ತುತ ಲೋನ್ ಹೆಚ್ಚಿನ ಬಡ್ಡಿ ದರವನ್ನು ಹೊಂದಿದ್ದರೆ ಅಥವಾ ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳನ್ನು ಹೊಂದಿಲ್ಲದಿದ್ದರೆ ಬೇರೆ ಬ್ಯಾಂಕ್‌ಗೆ ಟ್ರಾನ್ಸ್‌ಫರ್ ಮಾಡುವುದು ಪ್ರಯೋಜನಕಾರಿಯಾಗಿರಬಹುದು. ಕಾರ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಫರ್‌ಗಳನ್ನು ಅನ್ವೇಷಿಸಲು, ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ.

ಈ ಆಯ್ಕೆಗಳನ್ನು ಅನ್ವೇಷಿಸುವ ಮೂಲಕ, ನಿಮ್ಮ ಪರಿಸ್ಥಿತಿಗೆ ನೀವು ಅತ್ಯುತ್ತಮ ವಿಧಾನವನ್ನು ಕಂಡುಕೊಳ್ಳಬಹುದು ಮತ್ತು ಹೆಚ್ಚು ಆರಾಮದಾಯಕ ಹಣಕಾಸಿನ ಪ್ರಯಾಣವನ್ನು ಆನಂದಿಸಬಹುದು. ನಿಮ್ಮ ಹಣಕಾಸಿನ ಗುರಿಗಳೊಂದಿಗೆ ಹೊಂದಿಕೊಳ್ಳುವ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಬಂಧಿತ ವೆಚ್ಚಗಳು ಮತ್ತು ಪ್ರಯೋಜನಗಳನ್ನು ಪರಿಗಣಿಸಿ.

ಕಾರ್ ಲೋನ್‌ಗೆ ಅಪ್ಲೈ ಮಾಡಲು ಬಯಸುತ್ತಿದ್ದೀರಾ? ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

* ನಿಯಮ & ಷರತ್ತುಗಳು ಅನ್ವಯ. ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಲೋನ್ ವಿತರಣೆ

ಆಗಾಗ ಕೇಳಲಾಗುವ ಪ್ರಶ್ನೆಗಳು

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

test

ಸಂಬಂಧಿತ ಕಂಟೆಂಟ್

ಉತ್ತಮ ನಿರ್ಧಾರಗಳು ಉತ್ತಮ ಹಣಕಾಸಿನ ಜ್ಞಾನದೊಂದಿಗೆ ಬರುತ್ತವೆ.